ಮಳೆಗಾಲ (Monsoon) ಎಂಜಾಯ್ ಮಾಡೋಕೆ ಚೆನ್ನಾಗಿದ್ರೂ ಈ ಋತುವಿನಲ್ಲಿ ಸುಲಭವಾಗಿ ಆರೋಗ್ಯ (Health) ಹದಗೆಡುತ್ತದೆ. ಹೀಗಾಗಿ ತಿನ್ನೋ ಆಹಾರದ (Food) ಬಗ್ಗೆ ಹೆಚ್ಚಿನ ಕಾಳಜಿ (Care) ವಹಿಸಬೇಕು. ಮಾನ್ಸೂನ್‌ನಲ್ಲಿ ವ್ಯಾಪಕವಾಗಿ ಸಿಗೋ ಅಣಬೆ (Mushroom)ಯನ್ನು ತಿನ್ನೋದಾ ?
ಮಳೆಗಾಲ (Monsoon) ಬಂತೂಂದ್ರೆ ಸಾಕು ಜಿಟಿ ಜಿಟಿ ಸುರೀತಾ ಇರೋ ಮಳೆಗೆ ಕರುಂಕುರುಂ ಎಂದು ಏನಾದ್ರೂ ತಿನ್ತಾ ಇರ್ಬೇಕು ಅನ್ಸುತ್ತೆ. ಮಾತ್ರವಲ್ಲ ಮಳೆಗಾಲದಲ್ಲಿಯೇ ವಿಶೇಷವಾಗಿಯೇ ಬೆಳೆಯುವ ಕೆಲವೊಂದು ಪದಾರ್ಥಗಳಿವೆ. ಇವುಗಳನ್ನು ಹೆಚ್ಚಾಗಿ ಅಡುಗೆಯಲ್ಲಿ ಬಳಸಲಾಗುತ್ತದೆ. ಈ ರೀತಿ ಬಳಸೋ ತರಕಾರಿಗಳಲ್ಲೊಂದು ಅಣಬೆ (Mushroom). ಮಶ್ರೂಮ್‌ನಿಂದ ಬಿರಿಯಾನಿ, ಪಕೋಡಾ, ಕಬಾಬ್, ಕರಿ ಹೀಗೆ ಹಲವು ರೆಸಿಪಿಗಳನ್ನು ತಯಾರಿಸುತ್ತಾರೆ. ಎಲ್ಲಾ ಕಾಲದಲ್ಲಿ ಮಶ್ರೂಮ್ ತಿನ್ನೋಕೆ ಬಾಯಿಗೇನೋ ರುಚಿಯಾಗಿರುತ್ತೆ ನಿಜ. ಆದ್ರೆ ಮಳೆಗಾಲದಲ್ಲಿ ಅಣಬೆ ತಿನ್ನೋದು ಆರೋಗ್ಯ (Health)ಕ್ಕೆ ಒಳ್ಳೇದಾ ?
ಮಾನ್ಸೂನ್‌ನಲ್ಲಿ ಅಣಬೆ ತಿನ್ನೋದನ್ನು ಯಾಕೆ ತಪ್ಪಿಸಬೇಕು ?
ಮಾನ್ಸೂನ್‌ನಲ್ಲಿ ಅಣಬೆಗಳನ್ನು ತಿನ್ನುವುದು ಸುರಕ್ಷಿತವಲ್ಲ. ಯಾಕೆಂದರೆ ಮಾನ್ಸೂನ್ ಸಮಯದಲ್ಲಿ ಫಿಟ್ ಮತ್ತು ಆರೋಗ್ಯಕರವಾಗಿರಲು, ನೀವು ಪೌಷ್ಠಿಕಾಂಶದ ಆಹಾರಪದ್ಧತಿಯನ್ನು ಅನುಸರಿಸಬೇಕು. ಆದ್ರೆ ಮಶ್ರೂಮ್ ತುಂಬಾ ಒದ್ದೆಯಾದ ಮಣ್ಣಿನಲ್ಲಿ ಬೆಳೆಯುತ್ತವೆ ಮತ್ತು ಅದರಲ್ಲಿ ಬಹಳಷ್ಟು ಬ್ಯಾಕ್ಟೀರಿಯಾ (Bacteria)ಗಳಿರುತ್ತವೆ. ಮಳೆಗಾಲದಲ್ಲಿ ಅಣಬೆ ಸೇವನೆ ವ್ಯಕ್ತಿ ಸುಲಭವಾಗಿ ಅನಾರೋಗ್ಯಕ್ಕೀಡಾಗುವಂತೆ ಮಾಡುತ್ತದೆ. ಮಾನ್ಸೂನ್‌ನಲ್ಲಿ ನಾವು ಅಣಬೆಗಳನ್ನು ಬೇಡವೆಂದು ಹೇಳಲು ಮುಖ್ಯ ಕಾರಣವೆಂದರೆ ಮಳೆಗಾಲದಲ್ಲಿ ಅವು ಹೆಚ್ಚಿನ ಬೀಜಕಗಳನ್ನು ಉತ್ಪಾದಿಸುತ್ತವೆ ಮತ್ತು ಮಳೆಗಾಲದಲ್ಲಿ ಹೆಚ್ಚು ಸಂತಾನೋತ್ಪತ್ತಿ ಮಾಡಲು ಹೆಚ್ಚು ಮೋಲ್‌ಗಳನ್ನು ಸೃಷ್ಟಿಸುತ್ತವೆ. ಈ ಬೀಜಕಗಳು ಬಹಳಷ್ಟು ಜನರಿಗೆ ಅಲರ್ಜಿಗೆ ಕಾರಣವಾಗಬಹುದು.
ಖಿನ್ನತೆಯಿಂದ ಬಳಲ್ತಿದ್ದೀರಾ ? ಅಣಬೆ ನಿಮ್ಮ ಫುಡ್ ಲಿಸ್ಟ್‌ನಲ್ಲಿರಲಿ
ಆಹಾರದಲ್ಲಿ ಅಣಬೆ ಸೇರಿಸುವುದರಿಂದ ಏನು ಪ್ರಯೋಜನ ?
ಮಳೆಗಾಲವನ್ನು ಬಿಟ್ಟು ಉಳಿದ ಸಮಯದಲ್ಲಿ ಅಣಬೆ ಸೇವನೆ ಆರೋಗ್ಯ (Health)ಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಮಧ್ಯಮ ಉತ್ತಮ ಪ್ರಮಾಣದ ಪ್ರೋಟೀನ್ (Protein), ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ಅತ್ಯುತ್ತಮ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುವ ತರಕಾರಿ ಎಂದು ಪರಿಗಣಿಸಲಾಗಿದೆ. ಮಾತ್ರವಲ್ಲ ವಿಟಮಿನ್ ಬಿಯನ್ನು ಹೊಂದಿರುತ್ತದೆ, ಇದು ಪೌಷ್ಟಿಕಾಂಶದ ಉತ್ತಮ ಮೂಲವಾಗಿದೆ, ವಿಶೇಷವಾಗಿ ಮಳೆಗಾಲದಲ್ಲಿ, ಅನಾರೋಗ್ಯಕ್ಕೆ ನಮ್ಮ ಪ್ರತಿರೋಧವು ಕಡಿಮೆ ಇರುವಾಗ. ವಿಟಮಿನ್ ಬಿ ನಮ್ಮ ರೋಗನಿರೋಧಕ ವ್ಯವಸ್ಥೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಬಾಹ್ಯ ಸೋಂಕುಗಳು ಮತ್ತು ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಅಣಬೆಗಳು ರಕ್ತ ಪರಿಚಲನೆಯನ್ನು ಸಹ ಉತ್ತಮಗೊಳಿಸುತ್ತವೆ. ಇದರಿಂದ ನಿಮ್ಮ ದೇಹ ಮತ್ತು ಮೆದುಳು (Brain) ಸಾಕಷ್ಟು ಆಮ್ಲಜನಕ ಮತ್ತು ಕಬ್ಬಿಣದ ಪೂರೈಕೆಯಿಂದಾಗಿ ಸಕ್ರಿಯವಾಗಿರುತ್ತದೆ. ಆದರೆ, ವಿಶೇಷವಾಗಿ ಮಳೆಗಾಲದಲ್ಲಿ ಇದು ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಾಣು ಮುಕ್ತವಾಗಿದೆ ಎಂದು ತಜ್ಞರು ತಿಳಿಸುತ್ತಾರೆ.
ಪನೀರ್ VS ಮಶ್ರೂಮ್ : ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್?
ಮಾನ್ಸೂನ್ ಸಮಯದಲ್ಲಿ ತಪ್ಪಿಸಬೇಕಾದ ಇತರ ಆಹಾರಗಳು
ಮಳೆಗಾಲದಲ್ಲಿ ರಸ್ತೆ ಬದಿಯ ಆಹಾರ ಮತ್ತು ಜ್ಯೂಸ್‌ಗಳನ್ನು ತ್ಯಜಿಸಬೇಕು. ಏಕೆಂದರೆ ಅವುಗಳನ್ನು ತಯಾರಿಸಲು ಕಲುಷಿತ ನೀರನ್ನು ಬಳಸಿರಬಹುದು. ಹೀಗಾಗಿ ನಾವು ಸುಲಭವಾಗಿ ಸೋಂಕು (Virus)ಗಳಿಗೆ ಗುರಿಯಾಗುತ್ತೇವೆ. ಮಳೆ ಬರುತ್ತಿರುವಾಗ ಎಣ್ಣೆಯಲ್ಲಿ ಕರಿದ ಆಹಾರಗಳನ್ನು ತಿನ್ನಲು ಹೆಚ್ಚಿನವರು ಇಷ್ಟಪಡುತ್ತಾರಾದರೂ ಇದು ದೇಹದ (Body) ಜೀರ್ಣಕಾರಿ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಮಳೆಗಾಲದಲ್ಲಿ ಯಾವತ್ತೂ ಮನೆಯಲ್ಲಿ ಬೇಯಿಸಿದ ಊಟವನ್ನು ತಿನ್ನುವುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ಇದು ಸಂಪೂರ್ಣ ಸ್ವಚ್ಛತೆಯಲ್ಲಿ ತಯಾರಿಸಲಾಗಿದೆ ಎಂಬುದು ನಿಮಗೆ ತಿಳಿದಿರುತ್ತದೆ. ಇದರಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಾಡುವುದಿಲ್ಲ. ಮಳೆಗಾಲದಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವ ಮೊದಲು ಚೆನ್ನಾಗಿ ತೊಳೆಯಿರಿ.