Drinking Flavored Water: ಪರಿಮಳವಿದೆ ನಿಜ, ಆದ್ರೆ ಆರೋಗ್ಯಕ್ಕೆ ಒಳ್ಳೇದಾ ?

Suvarna News   | Asianet News
Published : Feb 26, 2022, 06:54 PM ISTUpdated : Feb 26, 2022, 06:56 PM IST
Drinking Flavored Water: ಪರಿಮಳವಿದೆ ನಿಜ, ಆದ್ರೆ ಆರೋಗ್ಯಕ್ಕೆ ಒಳ್ಳೇದಾ ?

ಸಾರಾಂಶ

ಈಗಂತೂ ಎಲ್ರೂ ಹೆಚ್ಚಾಗಿ ಬಾಯಾರಿಕೆ ಆದಾಗಲೆಲ್ಲಾ ನೀರು (Water) ಕುಡಿಯುವ ಬದಲು ಪ್ಯಾಕೆಟ್ ಜ್ಯೂಸ್, ಕೂಲ್ ಡ್ರಿಂಕ್ಸ್ ಕುಡಿಯೋದನ್ನು ರೂಢಿ ಮಾಡಿಕೊಂಡಿದ್ದಾರೆ. ಆದರೆ ಇದು ಆರೋಗ್ಯ (Health)ಕ್ಕೆ ಒಳ್ಳೇದಲ್ಲ ಅನ್ನೋದು ಎಲ್ರಿಗೂ ಗೊತ್ತಿರೋ ವಿಷ್ಯ. ಅದ್ರ ಬದಲು ಹೆಲ್ದೀ (Healthy)ಯಾಗಿ ಮತ್ತೇನು ಕುಡೀಬೋದು ನೋಡಿ. 

ಆರೋಗ್ಯ (Health)ವಾಗಿರಲು ದೇಹಕ್ಕೆ ಹೆಚ್ಚಿನ ಪ್ರಮಾಣದ ನೀರಿನ ಅಗತ್ಯವಿದೆ. ಕಡಿಮೆ ನೀರು (Water) ಕುಡಿಯುವುದರಿಂದ ನಿರ್ಜಲೀಕರಣದ ಸಮಸ್ಯೆ ಉಂಟಾಗುತ್ತದೆ. ತಲೆನೋವು, ತಲೆತಿರುಗುವಿಕೆ ಮೊದಲಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೆಚ್ಚು ನೀರು (Water) ಕುಡಿಯುವುದರಿಂದ ಮಲಬದ್ಧತೆ (Constipation), ಹೊಟ್ಟೆ ಉಬ್ಬುವಿಕೆ ಮೊದಲಾದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಹೆಚ್ಚು ನೀರು ಕುಡಿಯುವುದರಿಂದ ತ್ವಚೆ ಯಾವಾಗಲೂ ಆರೋಗ್ಯಕರವಾಗಿರುತ್ತದೆ. 

ಆದರೆ, ಇತ್ತೀಚಿಗಿನ ವರ್ಷಗಳಲ್ಲಿ ಅನೇಕ ಜನರು ಪ್ರತಿದಿನ ಕುಡಿಯುವ ನೀರನ್ನು ಬದಲಾಯಿಸಿಕೊಂಡಿದ್ದಾರೆ. ಸಾದಾ ತಣ್ಣೀರು ಅಥವಾ ಬಿಸಿ ನೀರು ಕುಡಿಯುವ ಬದಲು ಸುವಾಸನೆ ಭರಿತ ನೀರನ್ನು ಕುಡಿಯುತ್ತಿದ್ದಾರೆ. ಸುವಾಸನೆಯ ನೀರನ್ನು ಸರಳ ನೀರಿಗೆ ನೈಸರ್ಗಿಕ ಅಥವಾ ಕೃತಕ ಸೇರ್ಪಡೆಗಳನ್ನು ಸೇರಿಸುವ ಮೂಲಕ ತಯಾರಿಸಲಾಗುತ್ತದೆ. ಇದು ಮೂಗಿಗೆ, ಬಾಯಿಗೇನೋ ಉತ್ತಮ ರುಚಿಯನ್ನು ನೀಡುತ್ತದೆ. ಆದರೆ ಇಂಥಾ ಕೃತಕವಾಗಿ ತಯಾರಿಸಿದ ಸುವಾಸನೆಯ ನೀರು ಯಾವುದೇ ಆರೋಗ್ಯ ಪ್ರಯೋಜನಗಳನ್ನು ಹೊಂದಿಲ್ಲ ಮತ್ತು ದೇಹಕ್ಕೆ ಹಾನಿಕಾರಕವಾಗಿದೆ. 

Home Remedies: ಬೇಧಿ ನಿಲ್ಲಿಸಲು ಪರಿಣಾಮಕಾರಿ ಮನೆಮದ್ದುಗಳು ಇಲ್ಲಿವೆ ನೋಡಿ.

ಆದಾರೆ, ನೈಸರ್ಗಿಕವಾಗಿ ತಯಾರಿಸಲಾದ ಸುವಾಸನೆಯ ನೀರು ರೋಗನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದೇಹಕ್ಕೆ ವಿವಿಧ ಜೀವಸತ್ವಗಳು, ಪೋಷಕಾಂಶಗಳು ಮತ್ತು ಖನಿಜಗಳನ್ನು ಒದಗಿಸುತ್ತದೆ. ಡಯಟ್ ಮತ್ತು ನ್ಯೂಟ್ರಿಷನ್ ನಲ್ಲಿ ಪರಿಣತಿ ಹೊಂದಿರುವ ಡಾ.ರೋಹಿಣಿ ಪಾಟೀಲ್ ಅವರು ಸುವಾಸನೆಯ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ತಿಳಿಸಿದ್ದಾರೆ.

ನೈಸರ್ಗಿಕ ಸುವಾಸನೆಯ ನೀರು ತಯಾರಿಸುವುದು ಹೇಗೆ ? 
ಸುವಾಸನೆ ಭರಿತ ನೀರನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಕಿತ್ತಳೆ, ಕಲ್ಲಂಗಡಿ, ಸೌತೆಕಾಯಿ, ನಿಂಬೆ, ಚೆರ್ರಿಗಳು ಮತ್ತು ತುಳಸಿ, ಪುದೀನ, ಅಥವಾ ಶುಂಠಿಯಂತಹ ಗಿಡಮೂಲಿಕೆಗಳನ್ನು ಸಾದಾ ನೀರಿಗೆ ಸೇರಿಸುವುದರಿಂದ ನೈಸರ್ಗಿಕ ಸುವಾಸನೆಯ ನೀರನ್ನು ತಯಾರಿಸಬಹುದು. ನೀವು ಬಳಸುವ ಪದಾರ್ಥಗಳನ್ನು ಅವಲಂಬಿಸಿ, ನೈಸರ್ಗಿಕವಾಗಿ ಸುವಾಸನೆಯ ನೀರನ್ನು ಕುಡಿಯುವುದರಿಂದ ಪ್ರಯೋಜನಗಳು ಬದಲಾಗಬಹುದು. ಹೆಚ್ಚಿನ ಕ್ಯಾಲೋರಿ ಪಾನೀಯಗಳು ಮತ್ತು ಹೆಚ್ಚಿನ ಸಕ್ಕರೆ ಅಂಶವಿರುವ ಪಾನೀಯಗಳಿಗೆ ಸುವಾಸನೆಯ ನೀರನ್ನು ನೀವು ಆರಿಸಿದರೆ, ನೀವು ಆರೋಗ್ಯಕರ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಿ.

Health Tips: ವರ್ಕೌಟ್ ಮಾಡುವಾಗ ಎಷ್ಟು ನೀರು ಕುಡಿಯಬೇಕು ?

ಯಾವ ರೀತಿಯ ಬಾಟಲಿ (Bottle) ಬಳಸಿಕೊಳ್ಳಬೇಕು ?
ಆದರೆ, ಈ ರೀತಿ ಸುವಾಸನೆ ಭರಿತ ನೀರನ್ನು ತಯಾರಿಸಲು ನೀವು ಸ್ವಚ್ಛವಾದ ಬಾಟಲಿಯನ್ನು ಬಳಸಿಕೊಳ್ಳಬೇಕು. ಮರುಬಳಕೆ ಮಾಡಬಹುದಾದ ಬಾಟಲ್ ಅಥವಾ ಪಾರದರ್ಶಕ ಜಾಡಿಗಳನ್ನು ಬಳಸುವುದು ಉತ್ತಮ ಆಯ್ಕೆಯಾಗಿದೆ. ಸ್ವಚ್ಛವಾದ ಬಾಟಲಿಯನ್ನು ಬಳಸುವುದರಿಂದ ನೀವು ಪಾನೀಯದ ನೈಸರ್ಗಿಕ ಬಣ್ಣಗಳನ್ನು ನೋಡಬಹುದು ಮತ್ತು ಅದು ಸುಂದರವಾಗಿ ಕಾಣುತ್ತದೆ. ನೀರಿಗೆ ಸುವಾಸನೆ ನೀಡಲು ಯಾವ ಹಣ್ಣನ್ನು ಬಳಸಲಾಗಿದೆ ಎಂಬುದನ್ನು ನೀವು ನೋಡಲು ಸಾಧ್ಯವಾಗುತ್ತದೆ. ನೀರಿಗೆ ಯಾವುದೇ ಮಸಾಲೆ, ಹಣ್ಣುಗಳನ್ನು ಹಾಕಿದ ಬಾಟಲಿಯಲ್ಲಿ ಅದರ ವಾಸನೆ ಹಾಗೆಯೇ ಉಳಿದುಕೊಳ್ಳುತ್ತದೆ. ಹೀಗಾಗಿ ಬಾಟಲಿ ಅಗಲ ಬಾಯಿಯನ್ನು ಹೊಂದಿದ್ದು, ಆಗಾಗ ಕ್ಲೀನ್ ಮಾಡುವಂತಿರಲಿ.

ಸುವಾಸನೆ ನೀರು ಮಾಡಲು ಏನೆಲ್ಲಾ ಸೇರಿಸಹುದು ?
ನೀರಿಗೆ ನೈಸರ್ಗಿಕ ರುಚಿ (Taste)ಯನ್ನು ನೀಡಲು ಕಾಲೋಚಿತ ಹಣ್ಣುಗಳು ಮತ್ತು ಗಿಡಮೂಲಿಕೆಗಳನ್ನು ಬಳಸಬಹುದು. ಆರೋಗ್ಯಕ್ಕೆ ಉತ್ತಮವಾದ ತುಳಸಿ, ಪುದೀನಾ, ದಾಲ್ಚಿನ್ನಿಯನ್ನು ಸೇರಿಸಬಹುದು. ತುಳಸಿ ಎಲೆಗಳು ದೇಹಕ್ಕೆ ಸಾಕಷ್ಟು ಕಬ್ಬಿಣವಾಂಶವನ್ನು ಒದಗಿಸುತ್ತದೆ. ದಾಲ್ಚಿನ್ನಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಕಿತ್ತಳೆ ಮತ್ತು ವೆನಿಲ್ಲಾ ಸಾರವು ನೈಸರ್ಗಿಕವಾಗಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿಯಲ್ಲಿ ಅಧಿಕವಾಗಿರುತ್ತದೆ. ಆದ್ದರಿಂದ ಅವುಗಳನ್ನು ನೀರಿಗೆ ಸೇರಿಸಿ ಕುಡಿಯಬಹುದ. ಸ್ಟ್ರಾಬೆರಿಯನ್ನು ನೀರಿಗೆ ಸೇರಿಸಿ ಕುಡಿಯುವುದರಿಂದ ದೇಹಕ್ಕೆ ವಿಟಮಿನ್ ಸಿ ಲಭಿಸುತ್ತದೆ. ಒಂದು ಲೋಟ ನೀರಿನಲ್ಲಿ, ನಿಂಬೆ, ಶುಂಠಿ, ಸೌತೆಕಾಯಿ ಮತ್ತು ಪುದೀನವನ್ನು ಸೇರಿಸಿ ಕುಡಿಯವುದು ದೇಹದಿಂದ ಕೊಬ್ಬನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫ್ರಿಡ್ಜ್ ಎಷ್ಟು ವರ್ಷ ಬಾಳಿಕೆ ಬರುತ್ತೆ?, ನಿಮ್ಗೆ ಈ ವಿಚಾರ ಗೊತ್ತಿಲ್ಲವೆಂದ್ರೆ ಕರೆಂಟ್ ಬಿಲ್ ಜಾಸ್ತಿ ಬರುತ್ತೆ
ಭಾರತದ ನಗರ ಪೈಕಿ ಬೆಂಗಳೂರು ಬೆಸ್ಟ್ ಫುಡ್ ಸಿಟಿ, ಸ್ಕಾಟಿಶ್ ಪ್ರವಾಸಿಗನ ಮನತಣಿಸಿದ ಬ್ರೇಕ್‌ಪಾಸ್ಟ್