
ಬೆಂಗಳೂರು (ಫೆ.25): ಕಾರ್ಪೊರೇಶನ್‌ನ ಇ-ಕ್ಯಾಟರಿಂಗ್ ಪೋರ್ಟಲ್ ಮೂಲಕ ಪ್ರಯಾಣಿಕರು ಕಾಯ್ದಿರಿಸಿದ ಮುಂಗಡ-ಆರ್ಡರ್ ಮಾಡಿದ ಊಟವನ್ನು ತಲುಪಿಸಲು ಅನುಕೂಲವಾಗುವಂತೆ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಜನಪ್ರಿಯ ಆಹಾರ ಅಪ್ಲಿಕೇಶನ್ ಸ್ವಿಗ್ಗಿ ಜೊತೆ ಪಾಲುದಾರಿಕೆ ಹೊಂದಿದೆ. ಆರಂಭದಲ್ಲಿ, ಬೆಂಗಳೂರು, ಭುವನೇಶ್ವರ, ವಿಜಯವಾಡ ಮತ್ತು ವಿಶಾಖಪಟ್ಟಣಂ ಎಂಬ ನಾಲ್ಕು ರೈಲು ನಿಲ್ದಾಣಗಳಲ್ಲಿ ಸ್ವಿಗ್ಗಿ ಸೇವೆಗಳು ಲಭ್ಯವಿರುತ್ತವೆ.
ಮೊದಲ ಹಂತದ ನಂತರ, ವಿಸ್ತರಣೆ ಯೋಜನೆಯ ಭಾಗವಾಗಿ ಹೆಚ್ಚುವರಿ ನಿಲ್ದಾಣಗಳಿಗೆ ಸೇವೆಗಳನ್ನು ವಿಸ್ತರಿಸಲಾಗುವುದು. ಗುರುವಾರ, IRCTC ಯ ಷೇರುಗಳು ಬಿಎಸ್‌ಇಯಲ್ಲಿ ಪ್ರತಿ ಈಕ್ವಿಟಿ ಷೇರಿಗೆ ₹935.95 ರಂತೆ 1.04 ರಷ್ಟು ಏರಿಕೆ ಕಂಡವು.
ರಾಜ್ಯಸಭಾ ಅಭ್ಯರ್ಥಿಗಳ ಸರಾಸರಿ ಆಸ್ತಿ 127 ಕೋಟಿ ಅಷ್ಟೇ! 21 ಮಂದಿ ವಿರುದ್ಧ ಕ್ರಿಮಿನಲ್ ಕೇಸ್, ಯಾವ್ಯಾವ ಪಕ್ಷದವರು?
ಆಹಾರ ಬುಕ್ ಮಾಡುವುದು ಹೇಗೆ?
ಪ್ರಯಾಣಿಕರು ಈ ಕೆಳಗಿನ ವೆಬ್‌ಸೈಟ್, ಆಪ್ ಮತ್ತು ಸಂಪರ್ಕ ಸಂಖ್ಯೆ ಮೂಲಕ ಸೇವೆಗಳನ್ನು ಪಡೆಯಬಹುದು.
ವೆಬ್ ಸೈಟ್: http://ecatering.irctc.co.in
ಇನ್ಸ್‌ಟ್ಟಾಲ್: FoodOnTrack app (ಫುಡ್ ಓನ್ ಟ್ರ್ಯಾಕ್ ಅಪ್)
ಕರೆ ಮಾಡಬೇಕಾದ ನಂಬರ್: 1323
ವಾಟ್ಸಾಪ್: +91-8750001323
ಲೋಕಸಭಾ ಚುನಾವಣೆಗೆ 4 ರಾಜ್ಯಗಳಲ್ಲಿ ಹೊಂದಾಣಿಕೆ ಸೀಟು ಅಂತಿಮಗೊಳಿಸಿದ ಕಾಂಗ್ರೆಸ್
ಭಾರತೀಯ ರೈಲ್ವೆಯ ಅಡುಗೆ ವಿಭಾಗವು ತನ್ನ ಸೇವೆಗಳನ್ನು ಹೆಚ್ಚಿನ ರೈಲು ನಿಲ್ದಾಣಗಳಲ್ಲಿ ವಿಸ್ತರಿಸಲು ಯೋಜನೆ ಹಾಕಿಕೊಂಡಿದ್ದು ಸಹಕಾರಿ ಉದ್ಯಮಗಳನ್ನು ಪ್ರಾರಂಭಿಸಲಿದೆ, ಪ್ರಯಾಣಿಕರಿಗೆ ವಿವಿಧ ಆಹಾರದ ಆಯ್ಕೆಗಳನ್ನು ವ್ಯಾಪಕ ಶ್ರೇಣಿಯನ್ನು ನೀಡುತ್ತದೆ. ಈ ಹಿಂದೆ, IRCTC ವಿವಿಧ ರೈಲ್ವೇ ನಿಲ್ದಾಣಗಳಲ್ಲಿ ಪೂರ್ವ-ಆರ್ಡರ್ ಮಾಡಿದ ಊಟದ ಪೂರೈಕೆ ಮತ್ತು ವಿತರಣೆಗಾಗಿ ಆಹಾರ ವಿತರಣಾ ಅಪ್ಲಿಕೇಶನ್ ಗಾಗಿ ಝೊಮಾಟೊದೊಂದಿಗೆ ಕೈಜೋಡಿಸಿತ್ತು. ಅಕ್ಟೋಬರ್‌ನಲ್ಲಿ ಘೋಷಿಸಲಾದ ಈ ಪಾಲುದಾರಿಕೆಯು ನವದೆಹಲಿ, ಪ್ರಯಾಗ್‌ರಾಜ್, ಕಾನ್ಪುರ್, ಲಕ್ನೋ ಮತ್ತು ವಾರಣಾಸಿ ಸೇರಿದಂತೆ ಆಯ್ದ ರೈಲು ನಿಲ್ದಾಣಗಳಲ್ಲಿ ಸೇವೆಗಳನ್ನು ಪಡೆಯಲು ರೈಲು ಪ್ರಯಾಣಿಕರಿಗೆ ಅವಕಾಶ ಮಾಡಿಕೊಟ್ಟಿತು.
ಇದೀಗ Swiggy ಮತ್ತು IRCTC ನಡುವಿನ ಸಹಯೋಗದಿಂದ ಆಹಾರ ವಿತರಣಾ ಅಪ್ಲಿಕೇಶನ್‌ನ ವ್ಯವಹಾರ ಹೆಚ್ಚಾಗುವುದನ್ನು ನಿರೀಕ್ಷಿಸಲಾಗಿದೆ, ದೇಶಾದ್ಯಂತ ಪ್ರಯಾಣಿಕರ ದಟ್ಟಣೆಯ ಗಣನೀಯ ಏರಿಕೆಯಾಗುವ ಬಗ್ಗೆಯೂ ಯೋಚಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.