
ಬೆಂಗಳೂರು (ಜೂ.2): ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಮೈದಾನದಲ್ಲಿ ಸಿಕ್ಸರ್‌ಗಳು, ಕೊನೆಯ ಓವರ್‌ಗಳ ಥ್ರಿಲ್ಲರ್ ಮತ್ತು ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದ್ದ ಸ್ಟೇಡಿಯಂಗಳು ಧೂಳೆಬ್ಬಿಸುತ್ತಿದ್ದರೆ, ಇತ್ತ ಮೈದಾನದಿಂದ ಆಚೆ ಮತ್ತೊಂದು ರೋಚಕ ಸ್ಪರ್ಧೆ ನಡೆಯುತ್ತಿತ್ತು. ದೇಶಾದ್ಯಂತ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಪಂದ್ಯದ ರಾತ್ರಿಗಳನ್ನು ಅಕ್ಷರಶಃ 'ಫುಡ್ ಫೆಸ್ಟಿವಲ್' ಆಗಿ ಮಾರ್ಪಡಿಸಿದ್ದರು. ಇದರ ಪರಿಣಾಮವಾಗಿ ಐಪಿಎಲ್ 2026ರ ಅವಧಿಯಲ್ಲಿ ಆನ್‌ಲೈನ್ ಫುಡ್ ಡೆಲಿವರಿ ಮತ್ತು ರೆಸ್ಟೋರೆಂಟ್ ಬುಕಿಂಗ್‌ಗಳು ಸಾರ್ವಕಾಲಿಕ ದಾಖಲೆ ಪ್ರಮಾಣಕ್ಕೆ ಏರಿದೆ.
ಸ್ವಿಗ್ಗಿ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಐಪಿಎಲ್ 2025ಕ್ಕೆ ಹೋಲಿಸಿದರೆ ಈ ಬಾರಿಯ ಐಪಿಎಲ್ 2026ರಲ್ಲಿ ಒಟ್ಟಾರೆ ಫುಡ್ ಆರ್ಡರ್ ಪ್ರಮಾಣ ಬರೋಬ್ಬರಿ ಶೇಕಡಾ 32.31 ರಷ್ಟು ಭಾರಿ ಏರಿಕೆ ಕಂಡಿದೆ. ಇದೇ ವೇಳೆ, ರೆಸ್ಟೋರೆಂಟ್‌ಗಳಿಗೆ ಹೋಗಿ ಪಂದ್ಯ ವೀಕ್ಷಿಸುವವರ ಸಂಖ್ಯೆಯೂ ಹೆಚ್ಚಾಗಿದ್ದು, 'ಸ್ವಿಗ್ಗಿ ಡೈನ್‌ಔಟ್' (Swiggy Dineout) ಮೂಲಕ ನಡೆದ ಟೇಬಲ್ ಬುಕಿಂಗ್‌ಗಳು ವಾರ್ಷಿಕವಾಗಿ ಶೇಕಡಾ 41 ರಷ್ಟು ದಾಖಲೆಯ ಪ್ರಗತಿ ದಾಖಲಿಸಿವೆ.
ಟೂರ್ನಿಯ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ನಡೆದ ಮೇ 29 ಮತ್ತು ಮೇ 31 ರಂದು ದೇಶದಲ್ಲೇ ಅತಿ ಹೆಚ್ಚು ಫುಡ್ ಆರ್ಡರ್ ಮಾಡಿದ ನಗರಗಳಾಗಿ ಬೆಂಗಳೂರು, ಮುಂಬೈ ಮತ್ತು ಹೈದರಾಬಾದ್ ಮುಂಚೂಣಿಗೆ ಬಂದಿವೆ. ಇವುಗಳೊಂದಿಗೆ ಸೂರತ್, ತಿರುವನಂತಪುರಂ ಮತ್ತು ವಡೋದರಾದಂತಹ ಸಣ್ಣ ಹಾಗೂ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲೂ ಆಹಾರದ ಬೇಡಿಕೆ ಗಗನಕ್ಕೇರಿತ್ತು.
ಮೇ 29 ರಂದು ನಡೆದ ಕ್ವಾಲಿಫೈಯರ್ 2 ಪಂದ್ಯದ ವೇಳೆ ರಾತ್ರಿ 8:12 ರ ಸುಮಾರಿಗೆ ಸ್ವಿಗ್ಗಿಯಲ್ಲಿ ಒಂದೇ ಒಂದು ನಿಮಿಷದಲ್ಲಿ ಬರೋಬ್ಬರಿ 5,200 ಕ್ಕೂ ಹೆಚ್ಚು ಆರ್ಡರ್‌ಗಳು ಬಂದಿದ್ದವು! ಇದೇ ಪಂದ್ಯದ ವೇಳೆ ಗುರುಗ್ರಾಮದ ಗ್ರಾಹಕರೊಬ್ಬರು ಬರೋಬ್ಬರಿ ₹20,205 ಮೌಲ್ಯದ 45 ಸ್ಪೆಷಲ್ ವೆಜ್ ಥಾಲಿಗಳನ್ನು ಒಂದೇ ಬಾರಿ ಆರ್ಡರ್ ಮಾಡಿ ಇತಿಹಾಸ ಬರೆದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ನಡುವೆ ಮೇ 31ರ ಮಹಾ ಫೈನಲ್ ಪಂದ್ಯದ ದಿನ ಫುಡ್ ಬೇಡಿಕೆ ಮತ್ತಷ್ಟು ಹೆಚ್ಚಾಗಿತ್ತು. ಕ್ವಾಲಿಫೈಯರ್ ಪಂದ್ಯಕ್ಕೆ ಹೋಲಿಸಿದರೆ ಫೈನಲ್ ದಿನ ಆರ್ಡರ್‌ಗಳು ಶೇ. 30 ರಷ್ಟು ಹೆಚ್ಚಾಗಿದ್ದು, ಪ್ರತಿ ನಿಮಿಷಕ್ಕೆ ಸರಾಸರಿ 1,300 ಕ್ಕೂ ಹೆಚ್ಚು ಆರ್ಡರ್‌ಗಳು ದಾಖಲಾಗುತ್ತಿದ್ದವು. ಈ ಕ್ರೇಜ್ ರಾತ್ರಿ 7:56 ಕ್ಕೆ ಪರಾಕಾಷ್ಠೆ ತಲುಪಿದ್ದು, ಒಂದೇ ಒಂದು ನಿಮಿಷದಲ್ಲಿ 6,200 ಕ್ಕೂ ಹೆಚ್ಚು ಆಹಾರದ ಆರ್ಡರ್‌ಗಳನ್ನು ಲಾಗ್ ಮಾಡಲಾಗಿತ್ತು.
ಧರ್ಮಶಾಲಾದ ಗ್ರಾಹಕರೊಬ್ಬರು ಫೈನಲ್ ಪಂದ್ಯದ ವೇಳೆ 'ಫಿಶ್ ಇನ್ ಲೆಮನ್ ಬಟರ್ ಸಾಸ್', 'ಗ್ರಿಲ್ಡ್ ಚಿಕನ್ ಪೆರಿ-ಪೆರಿ' ಮತ್ತು 'ಚಿಕನ್ 65' ನಂತಹ ಭರ್ಜರಿ ಆಹಾರದ ಮೆನುವನ್ನು ಆರ್ಡರ್ ಮಾಡಿ ಪಂದ್ಯದ ಮಜಾ ಸವಿದಿದ್ದಾರೆ.
ಕ್ರಿಕೆಟ್ ಪಂದ್ಯದಷ್ಟೇ ರೋಚಕವಾಗಿ ದೇಶಾದ್ಯಂತ ಮೆನು ಚಾರ್ಟ್‌ನಲ್ಲಿ ಆಹಾರಗಳು ರನ್ ಗಳಿಸಿವೆ. ಸಿಹಿ ತಿಂಡಿಗಳ (Desserts) ವಿಭಾಗದಲ್ಲಿ 'ಚೋಕೋ ಲಾವಾ ಕೇಕ್', 'ಟೆಂಡರ್ ಕೋಕನಟ್ ಐಸ್‌ಕ್ರೀಮ್' (ಎಳನೀರು ಐಸ್‌ಕ್ರೀಮ್) ಮತ್ತು 'ರಸಮಲೈ' ಅಗ್ರಸ್ಥಾನ ಪಡೆದುಕೊಂಡಿವೆ. ಇನ್ನು ಮುಖ್ಯ ಆಹಾರಗಳ ವಿಭಾಗದಲ್ಲಿ ಎಂದಿನಂತೆ ಚಿಕನ್ ಬಿರಿಯಾನಿ, ಚಿಕನ್ ಫ್ರೈಡ್ ರೈಸ್ ಮತ್ತು ವೆಜ್ ಬರ್ಗರ್‌ಗಳು ಮಾರುಕಟ್ಟೆಯನ್ನು ಆಳಿದ್ದರೆ, ಸ್ನ್ಯಾಕ್ಸ್ ವಿಭಾಗದಲ್ಲಿ 'ಪಾವ್ ಭಾಜಿ' ಮತ್ತು 'ಚಿಕನ್ ಪಾಪ್‌ಕಾರ್ನ್' ಅಭಿಮಾನಿಗಳ ನೆಚ್ಚಿನ ಆಯ್ಕೆಯಾಗಿದ್ದವು.
ಮನೆಯಲ್ಲಿ ಕೂತು ಮ್ಯಾಚ್ ನೋಡುವವರಷ್ಟೇ ಅಲ್ಲದೇ, ರೆಸ್ಟೋರೆಂಟ್ ಮತ್ತು ಕೆಫೆಗಳಿಗೆ ತೆರಳಿ ಗ್ರೂಪ್ ಆಗಿ ಪಂದ್ಯ ವೀಕ್ಷಿಸುವವರ ಸಂಖ್ಯೆಯೂ ಶೇ. 41 ರಷ್ಟು ಹೆಚ್ಚಾಗಿದೆ. ಬೆಂಗಳೂರು, ದೆಹಲಿ, ಹೈದರಾಬಾದ್, ಮುಂಬೈ ಮತ್ತು ಪುಣೆ ನಗರಗಳು ಪಂದ್ಯದ ಅವಧಿಯಲ್ಲಿ ಅತಿ ಹೆಚ್ಚು 'ಡೈನ್‌ಔಟ್' ಬುಕಿಂಗ್ ದಾಖಲಿಸಿವೆ. ಹೊಸ ನಗರಗಳ ಪೈಕಿ ಅಹಮದಾಬಾದ್, ಜೈಪುರ, ಚಂಡೀಗಢ ಮತ್ತು ಲಕ್ನೋ ಮುಂಚೂಣಿಯಲ್ಲಿವೆ. ಈ ನಡುವೆ, ಮೇ 29 ರ ಕ್ವಾಲಿಫೈಯರ್ ಪಂದ್ಯದ ವೇಳೆ ಬೆಂಗಳೂರಿನಲ್ಲಿ 20 ಜನರ ಸ್ನೇಹಿತರ ಗುಂಪೊಂದು ಹೋಟೆಲ್‌ನಲ್ಲಿ ಕುಳಿತು ಮ್ಯಾಚ್ ನೋಡುತ್ತಾ ಬರೋಬ್ಬರಿ ₹2,14,061 ರೂಪಾಯಿಗಳ ಒಂದೇ ಬಿಲ್ ಮಾಡಿ ಇಡೀ ಸೀಸನ್‌ನಲ್ಲೇ ಅತಿ ದೊಡ್ಡ ರೆಸ್ಟೋರೆಂಟ್ ವೆಚ್ಚದ ದಾಖಲೆ ಬರೆದಿದೆ!
ಮೇ 31 ರಂದು ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಪ್ರಶಸ್ತಿಗಾಗಿ ಕದನ ನಡೆದಾಗ, ಇಡೀ ದೇಶದಲ್ಲೇ ಬೆಂಗಳೂರು ನಗರವು ಅತಿ ಹೆಚ್ಚು 'ಸ್ವಿಗ್ಗಿ ಡೈನ್‌ಔಟ್' ಬುಕಿಂಗ್‌ಗಳನ್ನು ದಾಖಲಿಸಿದೆ. ಮೇ 17 ರ ಸಾಮಾನ್ಯ ದಿನಕ್ಕೆ ಹೋಲಿಸಿದರೆ ಫೈನಲ್ ದಿನ ಬೆಂಗಳೂರಿನಲ್ಲಿ ಬುಕಿಂಗ್ ಪ್ರಮಾಣ ಶೇ. 32 ರಷ್ಟು ಹೆಚ್ಚಾಗಿತ್ತು. ಅದರಲ್ಲೂ ಪಂದ್ಯದ ಪ್ರೈಮ್ ಟೈಮ್ ಆದ ರಾತ್ರಿ 7:30 ರಿಂದ 11:30 ರ ಅವಧಿಯಲ್ಲಿ ಪ್ರೀಮಿಯಂ ಡೈನಿಂಗ್ ರಿಸರ್ವೇಶನ್‌ನಲ್ಲಿ ಸಿಲಿಕಾನ್ ಸಿಟಿ ಇಡೀ ದೇಶಕ್ಕೆ ಪ್ರಥಮ ಸ್ಥಾನದಲ್ಲಿದೆ.
ವಿಶೇಷವೆಂದರೆ, ಫೈನಲ್ ವೀಕೆಂಡ್‌ನ ಈ ಆಫರ್‌ಗಳ ದಿನಗಳಲ್ಲಿ (ಮೇ 29 ಮತ್ತು 31) ರಾತ್ರಿ 7:30 ರಿಂದ 11:30 ರ ನಡುವೆ ಸ್ವಿಗ್ಗಿ ಡೈನ್‌ಔಟ್ ಬಳಸಿದ ಗ್ರಾಹಕರು ಒಟ್ಟಾರೆಯಾಗಿ ಬರೋಬ್ಬರಿ ₹3.5 ಕೋಟಿಗೂ ಅಧಿಕ ಹಣವನ್ನು ಆಫರ್‌ಗಳ ಮೂಲಕ ಉಳಿತಾಯ ಮಾಡಿದ್ದಾರೆ. ಇತ್ತ ಗುಜರಾತ್‌ನ ಕ್ರಿಕೆಟ್ ಪ್ರೇಮಿಗಳೂ ಹಿಂದೆ ಬಿದ್ದಿಲ್ಲ, ಅಹಮದಾಬಾದ್ ರಾಜ್ಯದಲ್ಲೇ ಅತಿ ಹೆಚ್ಚು ಬುಕಿಂಗ್ ಕಂಡರೆ, ಸೂರತ್ ಮತ್ತು ವಡೋದರಾದಲ್ಲಿ ತಲಾ 30 ಜನರ ದೊಡ್ಡ ದೊಡ್ಡ ಗುಂಪುಗಳು ಒಟ್ಟಿಗೆ ಸೇರಿ ಪಂದ್ಯ ವೀಕ್ಷಿಸುತ್ತಾ ಭರ್ಜರಿ ಔತಣಕೂಟ ನಡೆಸಿವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.