Masala Tea… ಭಾರತದಲ್ಲಿ ಮಾತ್ರ ಅಲ್ಲ, ಪ್ರಪಂಚದಲ್ಲೇ ನಂ 1! ಟೇಸ್ಟಿ ಚಹಾ ರೆಸಿಪಿ ನಿಮಗಾಗಿ

Published : May 31, 2026, 05:50 PM IST
Masala Tea

ಸಾರಾಂಶ

Masala Tea: ನೀವು ಚಹಾ ಪ್ರಿಯರಾಗಿದ್ರೆ ನಿಮಗೊಂದು ಗುಡ್ ನ್ಯೂಸ್, ಭಾರತೀಯರು ಇಷ್ಟಪಟ್ಟು ಕುಡಿಯುವಂತಹ ಮಸಾಲ ಚಾಯ್ ಇದೀಗ ಪ್ರಪಂಚದಲ್ಲೇ ಬೆಸ್ಟ್ ಚಹಾ ಲಿಸ್ಟ್ ನಲ್ಲಿ ನಂ 1 ಸ್ಥಾನ ಪಡೆದಿದೆ. ನೀವು ಕೂಡ ಟೇಸ್ಟಿಯಾದ ಮಸಾಲ ಚಾಯ್ ಕುಡಿಯಲು ಬಯಸಿದ್ರೆ ಇಲ್ಲಿದೆ ರೆಸಿಪಿ. 

ವಿಶ್ವದಲ್ಲೇ ನಂ 1. ಆಗಿದೆ ಭಾರತದ ಮಸಾಲ ಟೀ

ಭಾರತದಲ್ಲಿ ಚಹಾ ಪ್ರಿಯರಿಗೆ ಕೊರತೆಯಿಲ್ಲ. ಬೆಳಗ್ಗೆ ಎದ್ದಾಗ ಚಹಾ ಬೇಕೇ ಬೇಕು. ಅದು ಬೇಸಿಗೆಯ ಬಿಸಿ ಇರಲಿ, ಚಳಿಗಾಲದ ಚಳಿ, ಬಿರುಸಾದ ಮಳೆ ಏನೇ ಇರಲಿ ಚಹಾ ಬೇಕೇ ಬೇಕು. ಒಂದು ಗುಟುಕು ಚಹಾ ಗಂಟಲಿಗೆ ಇಳಿದ ತಕ್ಷಣ, ದೇಹದ ಎಲ್ಲಾ ಆಯಾಸವು ತಕ್ಷಣವೇ ಮಾಯವಾದಂತೆ ಭಾಸವಾಗುತ್ತದೆ, ಅಷ್ಟೇ ಅಲ್ಲ ದೇಹ ಆಕ್ಟೀವ್ ಆಗೋದಕ್ಕೂ ಚಹಾ ಬೇಕು. ನೀವು ದೇಶವು ವಿವಿಧ ರೀತಿಯ ಚಹಾಗಳನ್ನು ಕುಡಿದಿರಬಹುದು. ಪ್ರತಿಯೊಂದೂ ತನ್ನದೇ ಆದ ವಿಶಿಷ್ಟ ಪರಿಮಳ ಮತ್ತು ರುಚಿಯನ್ನು ಹೊಂದಿದೆ. ಹಲವಾರು ರಾಜ್ಯಗಳ ಚಹಾಗಳು, ಭಾರತದಲ್ಲಿ ಜನಪ್ರಿಯತೆ ಪಡೆದಿವೆ. ಆದರೆ ನಿಮಗೆ ಗೊತ್ತಾ ಭಾರತದ ಚಹಾ ಒಂದು ಜಾಗತಿಕ ಮಟ್ಟದಲ್ಲಿ ಸ್ಥಾನ ಪಡೆದಿದೆ ಅನ್ನೋದು. ಹೌದು ಇತ್ತೀಚೆಗೆ, ಆಹಾರ ಮಾರ್ಗದರ್ಶಿ ಟೇಸ್ಟ್ ಅಟ್ಲಾಸ್ ವಿಶ್ವದ 100 ಅತ್ಯುತ್ತಮ ಚಹಾಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೇ ತಿಂಗಳಲ್ಲಿ ಹಲವಾರು ಭಾರತೀಯ ಚಹಾಗಳು ಈ ಲಿಸ್ಟ್ ಗಳಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿವೆ. ಅದರಲ್ಲೂ ಭಾರತದ ಮಸಾಲ ಚಹಾ ಈ ಲಿಸ್ಟಲ್ಲಿ ಮೊದಲ ಸ್ಥಾನದಲ್ಲಿದೆ.

ಯಾವ ಚಹಾಗಳು ಟಾಪ್ 100 ಲಿಸ್ಟ್ ನಲ್ಲಿ ಸ್ಥಾನ ಪಡೆದಿವೆ?

ಅತ್ಯಂತ ರುಚಿಕರವಾದ ಮತ್ತು ವ್ಯಾಪಕವಾಗಿ ಜನರು ಇಷ್ಟಪಡುವ ಚಹಾಗಳಲ್ಲಿ ಒಂದಾದ ಮಸಾಲಾ ಚಾಯ್ ಮೊದಲ ಸ್ಥಾನದಲ್ಲಿದೆ. ಅದರ ನಂತರ, ಡಾರ್ಜಿಲಿಂಗ್ ಚಹಾ ಆರನೇ ಸ್ಥಾನವನ್ನು, ಅಸ್ಸಾಂ ಚಹಾ 13 ನೇ ಸ್ಥಾನವನ್ನು, ಕೇರಳದ ಸುಲೈಮಾನಿ ಚಹಾ 39 ನೇ ಸ್ಥಾನವನ್ನು, ಹಿಮಾಚಲ ಪ್ರದೇಶದ ಪ್ರಸಿದ್ಧ ಕಾಂಗ್ರಾ ಚಹಾ 41 ನೇ ಸ್ಥಾನವನ್ನು ಮತ್ತು ಜಮ್ಮು ಮತ್ತು ಕಾಶ್ಮೀರದ ನೂನ್ ಚಾಯ್ 43 ನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಎಲ್ಲಾ ಚಹಾಗಳು ಆಯಾ ರಾಜ್ಯಗಳ ವಿಶಿಷ್ಟ ಗುರುತುಗಳಾಗಿ ಕಾರ್ಯನಿರ್ವಹಿಸುತ್ತವೆ; ಅವುಗಳ ರುಚಿಗಳು ಮತ್ತು ತಯಾರಿಕೆಯ ವಿಧಾನಗಳು ಭಿನ್ನವಾಗಿವೆ. ಎರಡನೇ ಸ್ಥಾನದಲ್ಲಿ ಜಪಾನ್‌ನ ಹೊಜಿಚಾ ಫ್ರೈಡ್ ಗ್ರೀನ್ ಟೀ, ಶ್ರೀಲಂಕಾದ ಸಿಲೋನ್ ಬ್ಲ್ಯಾಕ್ ಟೀ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ಮಸಾಲಾ ಚಾಯ್‌ನ ವಿಶಿಷ್ಟ ಗುಣಗಳು ಯಾವುವು?

ಮಸಾಲಾ ಚಾಯ್ ಭಾರತದಾದ್ಯಂತ ಜನ ಇಷ್ಟಪಟ್ಟು ಸೇವಿಸುವ ಚಹಾ. ಇದನ್ನು ಕೇವಲ ಪಾನೀಯವಾಗಿ ಮಾತ್ರವಲ್ಲ, ದೇಶದ ಸಂಸ್ಕೃತಿ ಮತ್ತು ಆತಿಥ್ಯದ ಮಹತ್ವದ ಭಾಗವೆಂದು ಪರಿಗಣಿಸಲಾಗುತ್ತದೆ. ವಿವಿಧ ಮಸಾಲೆಗಳ ಮಿಶ್ರಣವನ್ನು ಇದರ ತಯಾರಿಕೆಯಲ್ಲಿ ಸೇರಿಸಲಾಗುತ್ತದೆ. ಇದಲ್ಲದೆ, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯೂ ಹೌದು. ಸಾಮಾನ್ಯ ಚಹಾಕ್ಕಿಂತ ಭಿನ್ನವಾಗಿ, ಮಸಾಲಾ ಚಾಯ್ ಅದರ ರುಚಿ ಮತ್ತು ಸುವಾಸನೆಯಿಂದಾಗಿ ಜನಪ್ರಿಯತೆ ಪಡೆದಿದೆ.

ಮಸಾಲಾ ಚಾಯ್‌ಗೆ ಬೇಕಾಗುವ ಸಾಮಗ್ರಿಗಳು

  • 1 ಕಪ್ ಹಾಲು
  • 2 ಟೀ ಚಮಚ ಚಹಾ ಎಲೆಗಳು
  • 2 ಕಪ್ ನೀರು
  • 1 ಸಣ್ಣ ಶುಂಠಿ ತುಂಡು
  • 1 ಸಣ್ಣ ತುಂಡು ದಾಲ್ಚಿನ್ನಿ
  • 2–3 ಹಸಿರು ಏಲಕ್ಕಿ ಬೀಜಗಳು
  • 2 ಲವಂಗ
  • ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ

ಮಸಾಲಾ ಚಾಯ್ ತಯಾರಿಸುವ ವಿಧಾನ

ಮೊದಲು, ಒಂದು ಪಾತ್ರೆಗೆ ನೀರನ್ನು ಸೇರಿಸಿ ಕುದಿಸಿ. ಈಗ, ಶುಂಠಿ ಮತ್ತು ಇತರ ಎಲ್ಲಾ ಮಸಾಲೆಗಳನ್ನು ಸೇರಿಸಿ, 2 ರಿಂದ 3 ನಿಮಿಷ ಕುದಿಯಲು ಬಿಡಿ. ನಂತರ, ಚಹಾ ಎಲೆಗಳನ್ನು ಸೇರಿಸಿ ಮತ್ತೆ ಕುದಿಯಲು ಬಿಡಿ. ಕೊನೆಯಲ್ಲಿ ಹಾಲು ಮತ್ತು ಸಕ್ಕರೆ ಸೇರಿಸಿ. ಇನ್ನೊಂದು 2 ರಿಂದ 3 ನಿಮಿಷ ಕುದಿಸಿದ ನಂತರ, ಸೋಸಿ. ಈಗ ರುಚಿಯಾದ ಮಸಾಲಾ ಚಾಯ್ ಸವಿಯಲು ರೆಡಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Virat Kohli ತಿಂದಿದ್ದು ಚಿಪ್ಸ್‌ ಅಲ್ಲ, ಕುರ್‌ ಕುರೆಯೂ ಅಲ್ಲ, ದೇಶಿ ಫುಡ್‌ Birista; 2 ಸ್ಟೆಪ್‌ನಲ್ಲಿ ಮಾಡೋ ವಿಧಾನ
Ice Cream: ಫ್ರೀಜರ್‌ನಲ್ಲಿಟ್ಟ ಐಸ್ ಕ್ರೀಮ್ ಎಷ್ಟು ತಿಂಗಳು ಸೇಫ್ ಆಗಿರುತ್ತೆ? ಮೊದಲು ತಿಳ್ಕೊಳ್ಳಿ, ಇಲ್ಲಾಂದ್ರೆ ತುಂಬಾ ರಿಸ್ಕ್..!