ಆಹಾರ ಸಂಸ್ಕೃತಿ ಬಗ್ಗೆ sudhamurthy ಅವರಾಡಿದ ಮಾತು ವಿವಾದ ಸೃಷ್ಟಿಸಿದೆ. ಒಂದು ಗುಂಪು ಸುಧಾಮೂರ್ತಿಯವರ ಹೇಳಿಕೆಯನ್ನು ಸಮರ್ಥಿಸಿಕೊಂಡರೆ ಮತ್ತೊಂದು ಗುಂಪು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಟ್ರೋಲ್ ಮಾಡಲಾರಂಭಿಸಿದೆ. ಹಾಗಿದ್ದರೆ ಸುಧಾಮೂರ್ತಿ ಏನು ಹೇಳಿದ್ದಾದರೂ ಏನು ಇಲ್ಲಿದೆ ಡಿಟೇಲ್ಸ್
ಇನ್‌ಪೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿಯವರ ಸಂದರ್ಶನದ ತುಣುಕುಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ತಮ್ಮ ಸರಳತೆ ಕೊಡುಗೈ ದಾನದ ಕಾರಣಕ್ಕೆ ಅವರು ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ. ಆದರೆ ಈಗ ಅವರು ನೆಗೇಟಿವ್ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಆಹಾರ ಸಂಸ್ಕೃತಿ ಬಗ್ಗೆ ಅವರಾಡಿದ ಮಾತು ವಿವಾದ ಸೃಷ್ಟಿಸಿದೆ. ಒಂದು ಗುಂಪು ಸುಧಾಮೂರ್ತಿಯವರ ಹೇಳಿಕೆಯನ್ನು ಸಮರ್ಥಿಸಿಕೊಂಡರೆ ಮತ್ತೊಂದು ಗುಂಪು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಟ್ರೋಲ್ ಮಾಡಲಾರಂಭಿಸಿದೆ. ಹಾಗಿದ್ದರೆ ಸುಧಾಮೂರ್ತಿ ಏನು ಹೇಳಿದ್ದಾದರೂ ಏನು ಇಲ್ಲಿದೆ ಡಿಟೇಲ್ಸ್
ವಿವಾದ ಸೃಷ್ಟಿಸಿದ್ದೇನು?
ಸುಧಾಮೂರ್ತಿ ಇತ್ತೀಚೆಗೆ ಖ್ಯಾತ ಆಹಾರ ಬ್ಲಾಗರ್ ಕುನಾಲ್ ವಿಜಯಂಕರ್ ನಡೆಸಿಕೊಡುವ ಶೋ ' ಖಾನೆ ಮೇ ಕೌನ್ ಹೈ?' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಆಹಾರದ ಬಗ್ಗೆ ತಮ್ಮ ನಿಲುವು ಹಾಗೂ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ವಿದೇಶಗಳಲ್ಲಿ ಬಹುತೇಕ ಮಾಂಸಹಾರವೇ ಹೆಚ್ಚು ಎಲ್ಲೂ ಸಸ್ಯಹಾರಕ್ಕೆ ಅವಕಾಶ ಇಲ್ಲ, ಸಸ್ಯಾಹಾರದ ಆಯ್ಕೆಗಳು ವಿದೇಶದಲ್ಲಿ ತೀರಾ ಕಡಿಮೆ ಹೀಗಾಗಿ ಸುಧಾಮೂರ್ತಿಯವರಿಗೆ ವಿದೇಶಕ್ಕೆ ಭೇಟಿ ನೀಡಿದಾಗ ಆಹಾರದ ಶೈಲಿ ಯಾವ ರೀತಿಯದ್ದು ಎಂದು ಫುಡ್ ಬ್ಲಾಗರ್ ಕೇಳಿದ್ದಾರೆ., ಈ ವೇಳೆ ಪ್ರತಿಕ್ರಿಯಿಸಿದ ಸುಧಾಮೂರ್ತಿ ತಾನು ಶುದ್ಧ ಸಸ್ಯಾಹಾರಿಯಾಗಿರುವುದರಿಂದ ವಿದೇಶಕ್ಕೆ ತೆರಳುವಾಗ ನನ್ನದೇ ಆಹಾರದ ಚೀಲವನ್ನು ತೆಗೆದುಕೊಂಡು ಹೋಗುತ್ತೇನೆ. ನಾನು ಆಹಾರದ ವಿಷಯದಲ್ಲಿ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ, ಮಾಂಸಹಾರಕ್ಕೆ ಬಳಸಿದ ಸೌಟ್(Spoon) ಗಳನ್ನೇ ಸಸ್ಯಾಹಾರಿ ತಿನಿಸುಗಳ ತಯಾರಿಗೆ ಅಥವಾ ಬಡಿಸಲು ಬಳಸುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ ಇದೇ ಕಾರಣಕ್ಕೆ ತಾನು ಈ ವಿಚಾರದಲ್ಲಿ ಯಾವುದೇ ತೊಂದರೆ ತೆಗೆದುಕೊಳ್ಳಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಸುಧಾಮೂರ್ತಿಯವರ ಈ ಸ್ಪೂನ್ ಹೇಳಿಕೆ ಫುಲ್ ಟ್ರೋಲ್
ಮಾಂಸಹಾರಕ್ಕೆ ಬಳಸಿದ ಸೌಟನ್ನೇ ಸಸ್ಯಾಹಾರಕ್ಕೂ ಬಳಸಿರುವ ಸಾಧ್ಯತೆ ಇರುವುದರಿಂದ ತಾನು ತನ್ನದೇ ಆಹಾರವನ್ನು ತೆಗೆದುಕೊಂಡು ಹೋಗುತ್ತೇನೆ ಎಂದ ಸುಧಾಮೂರ್ತಿ ಹೇಳಿಕೆಗೆ ಅನೇಕರು ಸಿಡಿಮಿಡಿಗೊಂಡಿದ್ದಾರೆ. ಮತ್ತೆ ಕೆಲವರು ಸುಧಾಮೂರ್ತಿಯವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅವರಿಷ್ಟದ ಊಟ ಮಾಡುವ ಹಕ್ಕು ಎಲ್ಲರಿಗೂ ಬಹುತೇಕ ಭಾರತೀಯರು ವಿದೇಶಗಳಿಗೆ ಹೋಗುವಾಗ ಆಹಾರ ತೆಗೆದುಕೊಂಡೇ ಹೋಗುತ್ತಾರೆ. ಸುಧಾಮೂರ್ತಿ ಮಾಡಿದ್ದರಲ್ಲಿ ತಪ್ಪೇನು ಇಲ್ಲ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಆದರೆ ಮತ್ತೆ ಕೆಲವರು ಸುಧಾಮೂರ್ತಿ ಅಳಿಯ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಮಾಂಸಾಹಾರದ ಮುಂದಿರುವ ಫೋಟೋ ಹಾಕಿ ಅತ್ತೆ ವರ್ಸಸ್ ಅಳಿಮಯ್ಯ ಎಂದು ಟ್ರೋಲ್ ಮಾಡ್ತಿದ್ದಾರೆ.
ಮಾಂಸಾಹಾರಿ ಅಳಿಯನ ಮನೆಯ ಸ್ಪೂನ್ ಮುಟ್ಟದವರು ಅವರಿಗೆ ಹುಟ್ಟಿದ ಮಕ್ಕಳನ್ನು ಮುಟ್ಟಬಾರದು ಎಂದು ಕುಹಕವಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಒಬ್ಬರು, ಅಳಿಯನನ್ನು ಅವರು ಒಪ್ಪಿಕೊಂಡಿದ್ದಾರೆ. ಅವರ ಆಹಾರ ಪದ್ಧತಿಯನ್ನು ಸುಧಾಮೂರ್ತಿ ವಿರೋಧಿಸಿಲ್ಲ, ಅವರ ಧಾರ್ಮಿಕ ನಿಯಮಗಳಷ್ಟೇ ಸುಧಾಮೂರ್ತಿ ಪಾಲಿಸುತ್ತಿದ್ದು, ತಮ್ಮ ನಿಯಮಗಳನ್ನು ಅವರು ಬೇರೆಯವರ ಮೇಲೆ ಹೇರಿಲ್ಲ, ಹೀಗಿರುವಾಗ ಅವರ ನಿರ್ಧಾರ ಸರಿಯಾಗಿದೆ ಎಂದು ಸುಧಾಮೂರ್ತಿಯವರನ್ನು ಬೆಂಬಲಿಸಿದ್ದಾರೆ.
60 ವರ್ಷಗಳ ಹಿಂದೆ ಅಜ್ಜಿ ಕಾಲೆಳಿತಿದ್ದೆ ಈಗ ಆಕೆಯಂತೆ ನಾ ಆಡುವೆ: ಸುಧಾಮೂರ್ತಿ
ಮತ್ತೆ ಕೆಲವು ಮಾಂಸಾಹಾರದ ವಿರುದ್ಧ ಮಾತನಾಡೋರು ದೇವಿಯ ಜೊತೆಯಲ್ಲಿರುವ ಹುಲಿ, ಸಿಂಹಕ್ಕೆ ಪೂಜಿಸುತ್ತಾರೆ. ಅದು ಮಾಂಸಾಹಾರಿಯಲ್ಲವೇ? ಅಂಥದ್ರಲ್ಲಿ ಮಾಂಸಾಹಾರಕ್ಕೆ ಬಳಸುವ ಸ್ಪೂನಲ್ಲಿ ಸಸ್ಯಾಹಾರ ಬಡಿಸಿದರೆ ಎನ್ನು ಎಂದು ಹೇಳುತ್ತಿದ್ದು, ಸುಧಾಮೂರ್ತಿಯವರ ಸಣ್ಣ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಅದೇನೆ ಇರಲಿ ಊಟ ನಮ್ಮಿಷ್ಟ ನೋಟ ಪರರ ಇಷ್ಟ ಎಂಬ ಗಾದೆ ಮಾತಿನಂತೆ ನಮ್ಮ ಊಟ ನಮ್ಮ ಆಯ್ಕೆ, ಇಲ್ಲಿ ಸುಧಾಮೂರ್ತಿ ಮಾಂಸಹಾರಿಗಳನ್ನು ಎಲ್ಲೂ ವಿರೋಧಿಸಿಲ್ಲ, ತನ್ನ ಲೈಫ್‌ಸ್ಟೈಲ್ ಬಗ್ಗೆ ಆಹಾರ ಸಂಸ್ಕೃತಿ ಬಗ್ಗೆ ಹೇಳಿಕೊಂಡಿದ್ದಾರೆ ಅಷ್ಟೇ, ತನ್ನಂತೆ ಎಲ್ಲರೂ ಮಾಡಬೇಕು ಎಂದು ಅವರು ಎಲ್ಲೂ ಹೇರಿಕೆ ಮಾಡಿಲ್ಲ, ಆದರೂ ಅವರ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿರುವುದು ವಿಪರ್ಯಾಸವೇ ಸರಿ.
ತಿರುಪತಿ ದೇವಸ್ಥಾನಕ್ಕೆ ಚಿನ್ನದ ಶಂಖ, ಆಮೆ ಸೇರಿ 2 ಕೆಜಿ ಬಂಗಾರ ದಾನ ಮಾಡಿದ ನಾರಾಯಣ ಮೂರ್ತಿ - ಸುಧಾ ಮೂರ್ತಿ