ಈಗಿನ ದಿನಗಳಲ್ಲಿ ಜನರು ಏನೇನೋ ಮಾಡ್ತಾರೆ. ಯಾವ್ದಕ್ಕೋ ಇನ್ಯಾವುದೋ ಆಹಾರ ಸೇರಿಸಿ ಪ್ರಯೋಗ ಮಾಡ್ತಾರೆ. ಈಗ ಮತ್ತೊಂದು ಇಂಥ ವಿಡಿಯೋ ಸುದ್ದಿ ಮಾಡಿದೆ. ಅದೇ ಗುಟ್ಕಾ ಐಸ್ ಕ್ರೀಂ
ಅಡುಗೆಯಲ್ಲಿ ಜುಗಾಡ್ ಮಾಡೋದು ಈಗಿನ ದಿನಗಳಲ್ಲಿ ಮಾಮೂಲು. ನೀವು ಊಹಿಸಲೂ ಸಾಧ್ಯವಾಗದ ವಸ್ತುವನ್ನು ಬೆರೆಸಿ ಅಡುಗೆ ತಯಾರಿಸಲಾಗುತ್ತೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಈ ರೆಸಿಪಿಗಳನ್ನು ಕೆಲವರು ಇಷ್ಟಪಟ್ಟರೆ ಮತ್ತೆ ಕೆಲವರು ಕೋಪ ವ್ಯಕ್ತಪಡಿಸುತ್ತಾರೆ. ಚಾಕೊಲೇಟ್ ಕವರ್ಡ್ ಸ್ಟ್ರಾಬೆರಿ ಕರ್ಡ್ ಕ್ಲಸ್ಟರ್, ಫ್ರೂಟ್ ರೋಲ್ ಅಪ್ ಐಸ್ ಕ್ರೀಮ್, ನಿಂಬೆ ಪಾಪ್ಕಾರ್ನ್ ಹೀಗೆ ಚಿತ್ರವಿಚಿತ್ರ ಪ್ರಯೋಗಗಳು ಆಹಾರದ ಮೇಲೆ ನಡೆಯುತ್ತಿವೆ. ಬೀದಿ ಬದಿ ಸ್ಟಾಲ್ ಗಳಲ್ಲಿ ಈ ಪ್ರಯೋಗ ಹೆಚ್ಚು. ಈಗ ಮತ್ತೊಂದು ಇಂಥ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ಜನರು ಯಪ್ಪಾ, ಐಸ್ ಕ್ರೀಂ ಕೊಲೆಯಾಗ್ತಿದೆ ಎಂದಿದ್ದಾರೆ.
ಐಸ್ ಕ್ರೀಂ (Ice Cream) ನಲ್ಲಿ ನೀವು ಸಾಕಷ್ಟು ವೆರೈಟಿಯನ್ನು ನೋಡ್ಬಹುದು. ಚಾಕೋಲೇಟ್ (Chocolate), ಸ್ಟ್ರಾಬೆರ್ರಿ, ವೆನ್ನಿಲ್ಲಾ, ಡೇಟ್ಸ್ ಆಂಡ್ ನಟ್ಸ್ ಹೀಗೆ ಸಾಕಷ್ಟು ಐಸ್ ಕ್ರೀಂ ಪ್ಲೇವರ್ ಬಂದಿದೆ. ಪಾನ್ ಪ್ಲೇವರ್ ಐಸ್ ಕ್ರೀಂ ಹಾಗೂ ಕುಲ್ಫಿಯನ್ನೂ ಜನರು ಇಷ್ಟಪಟ್ಟು ತಿನ್ನುತ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಗುಟ್ಕಾ ಐಸ್ ಕ್ರೀಂ ತಯಾರಿಸಿದ್ದಾನೆ. ಆತ ಗುಟ್ಕಾಂ ಐಸ್ ಕ್ರೀಂ ತಯಾರಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಜನರು ತರಹೇವಾರು ಕಮೆಂಟ್ ಮಾಡ್ತಿದ್ದಾರೆ.
ಇನ್ಸ್ಟಾಗ್ರಾಮ್ ನ younickviralvlogs ಖಾತೆಯಲ್ಲಿ ಈ ಗುಟ್ಕಾ ಐಸ್ ಕ್ರೀಂ ವಿಡಿಯೋ ಹಂಚಿಕೊಳ್ಳಲಾಗಿದೆ. ಭಾರತದಲ್ಲಿ ಗುಟ್ಕಾ ಪ್ರೇಮಿಗಳ ಸಂಖ್ಯೆ ಸಾಕಷ್ಟಿದೆ. ಅಂಥವರು ಇದನ್ನು ಇಷ್ಟಪಡಬಹುದೇನೋ.
Bengaluru : ಫ್ರೀ ಐಸ್ ಕ್ರೀಮ್‌ಗಾಗಿ ಭರ್ಜರಿ ಡ್ಯಾನ್ಸ್, ನೀವು ಫಿದಾ ಆಗೋದು ಗ್ಯಾರಂಟಿ
ಹೀಗೆ ತಯಾರಾಗುತ್ತೆ ಗುಟ್ಕಾ ಐಸ್ ಕ್ರೀಂ ? : ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿರುವ ಕ್ಲಿಪ್‌ನಲ್ಲಿ ವ್ಯಕ್ತಿ ಮೊದಲು ರಜನಿಗಂಧ ಪಾನ್ ಮಸಾಲಾ ಪ್ಯಾಕೆಟ್ ಅನ್ನು ಒಡೆದು, ಐಸ್ ಕ್ರೀಮ್ ಮೇಕರ್ ಪ್ಲೇಟ್‌ನಲ್ಲಿ ಸುರಿಯುವುದನ್ನು ಕಾಣಬಹುದು. ಇದರ ನಂತರ ಪಾಸ್ ಪಾಸ್ ಬ್ರಾಂಡ್ ನ ಮೌತ್ ಫ್ರೆಶ್ನರ್ ಅನ್ನು ರಜನಿಗಂಧ ಪಾನ್ ಮಸಾಲಾ ಮೇಲೆ ಹಾಕಿ ಚೆನ್ನಾಗಿ ಬೆರೆಸುತ್ತಾರೆ. ನಂತರ ಕೊನೆಯಲ್ಲಿ ಒಂದು ಕಪ್ ಹಾಲು ಸೇರಿಸುತ್ತಾನೆ. ಇದನ್ನು ಐಸ್ ಕ್ರೀಂನಂತೆ ಘನೀಕರಿಸುವವರೆಗೆ ಎಲ್ಲಾ ಮೂರು ವಸ್ತುಗಳನ್ನು ಮಿಶ್ರಣ ಮಾಡುತ್ತಾನೆ. ಹೀಗೆ ಗುಟ್ಕಾ ಐಸ್ ಕ್ರೀಮ್ ಸಿದ್ಧವಾಗುತ್ತದೆ. ಅದನ್ನು ಬೌಲ್ ಗೆ ಹಾಕಿ, ಈ ಗುಟ್ಕಾ ಐಸ್ ಕ್ರೀಂ ಮೇಲೆ ಕ್ಯಾರಮೆಲ್ ಅನ್ನು ಹಾಕಿ ಸರ್ವ್ ಮಾಡ್ತಾನೆ. ಈ ಒಂದು ಐಸ್ ಕ್ರೀಂ ಬೆಲೆ 120 ರೂಪಾಯಿ.
ಮಳೆಗಾಲದಲ್ಲಿ ಬಿಸಿ ಬಿಸಿ ಟೀ ಕುಡಿಯೋದನ್ನು ಮಿಸ್ ಮಾಡ್ಲೇಬೇಡಿ
ವೈರಲ್ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ : ಈ ವೀಡಿಯೊ ಪೋಸ್ಟ್ ಮಾಡಿದ ವ್ಯಕ್ತಿ ಜಗತ್ತು ಅಂತ್ಯದಲ್ಲಿದೆ, ಗುಟ್ಕಾ ಐಸ್ ಕ್ರೀಂ ಎಂದು ಶೀರ್ಷಿಕೆ ಹಾಕಿದ್ದಾನೆ. ಈ ವೀಡಿಯೊವನ್ನು ಈವರೆಗೆ 11.2 ಮಿಲಿಯನ್ ಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. 2 ಲಕ್ಷ 47 ಸಾವಿರ ಲೈಕ್ ಬಂದಿದೆ. ಎಂಟು ಸಾವಿರಕ್ಕೂ ಹೆಚ್ಚು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಈ ವಿಚಿತ್ರ ಕಾಂಬಿನೇಷನ್ ನೋಡಿದ ಜನರ ಮೊದಲ ಪ್ರಶ್ನೆ, ಗುಟ್ಕಾ ಐಸ್ ಕ್ರೀಂ ಉಗಿಯಬೇಕೋ ನುಂಗಬೇಕೋ ಎಂದು. ಕೆಲವು ಬಳಕೆದಾರರು ಅಜಯ್ ದೇವಗನ್, ಸಹೋದರನ ಸ್ಥಳವನ್ನು ಕೇಳುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಗುಟ್ಕಾ ಐಸ್ ಕ್ರೀಂಗೆ ಸ್ವಲ್ಪ ತಂಬಾಕು ಹಾಕಿದ್ದರೆ ಖುಷಿಯಾಗುತ್ತಿತ್ತು ಎಂದು ಇನ್ನೊಬ್ಬರು ಬರೆದಿದ್ದಾರೆ. ಕ್ಯಾರಮೆಲ್ ಬದಲು ತಂಬಾಕಿನ ಅಲಂಕಾರ ಮಾಡ್ಬೇಕಿತ್ತು ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ಇದು ವಿಶ್ವದ ಅಂತ್ಯವೆಂದು ಇನ್ನೊಬ್ಬ ಬಳಕೆದಾರ ಹೇಳಿದ್ರೆ, ಇಂಥ ವ್ಯಕ್ತಿಗಳನ್ನು ಪೊಲೀಸರು ಅರೆಸ್ಟ್ ಮಾಡ್ಬೇಕು ಅಂತಾ ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.