ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಮುಕೇಶ್ ಅಂಬಾನಿ ವಿಶ್ವದ ಅತಿದೊಡ್ಡ ಮಾವು ಬೆಳೆಗಾರ ಮಾತ್ರವಲ್ಲ ಮಾವು ರಫ್ತುಗಾರ ಕೂಡ ಹೌದು ಅದರ ಹಿಂದಿದೆ ಒಂದು ರೋಚಕ ಘಟನೆ.
ಮಾವು ಬೆಳೆಯಲ್ಲಿ ಭಾರತವು ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ. ಕೋಲಾರ ಅತಿ ಹೆಚ್ಚು ಮಾವು ಬೆಳೆಯುವ ಜಿಲ್ಲೆಯಾಗಿದ್ದು, 40,000 ಹೆಕ್ಟೇರ್ ಪ್ರದೇಶದಲ್ಲಿ ಇಲ್ಲಿ ಮಾವು ಬೆಳೆಯಲಾಗುತ್ತದೆ. ಆದರೆ ವಿಶ್ವದದಲ್ಲಿ ಅತೀ ಹೆಚ್ಚು ಮಾವು ಬೆಳೆಗಾರ ಮುಕೇಶ್ ಅಂಬಾನಿ ಎಂದರೆ ನಿಮಗೆ ಆಶ್ಚರ್ಯವಾಗದಿರದು. ಇದಕ್ಕೆ ಕಾರಣವೂ ಇದೆ.
ಪೆಟ್ರೋಲಿಯಂ, ಟೆಲಿಕಾಂ ಮತ್ತು ಚಿಲ್ಲರೆ ವ್ಯಾಪಾರಸ್ಥ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಮುಕೇಶ್ ಅಂಬಾನಿ ಈಗ ವಿಶ್ವದ ಅತಿದೊಡ್ಡ ಮಾವು ಬೆಳೆಗಾರ ಮಾತ್ರವಲ್ಲ ಮಾವು ರಫ್ತುಗಾರ ಕೂಡ ಹೌದು ಎಂಬ ಅಂಶ ಬೆಳಕಿಗೆ ಬಂದಿದೆ.
undefined
ಮೈಸೂರು ಕೆಫೆ ಓನರ್ ಗುರುತಿಸಿ ರಾಧಿಕಾಳನ್ನು ಕರೆದು ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅನಂತ್ ಅಂಬಾನಿ!
ಗುಜರಾತ್‌ನ ಜಾಮ್‌ನಗರದಲ್ಲಿ ರಿಲಯನ್ಸ್ ಮ್ಯಾಂಗೋ ಫಾರ್ಮ್ ಹೊಂದಿದ್ದಾರೆ. ಅಂಬಾನಿ 600 ಎಕರೆ ಮಾವಿನ ತೋಟವನ್ನು ಹೊಂದಿದ್ದು, ಇದಕ್ಕೆ ಧೀರೂಭಾಯಿ ಅಂಬಾನಿ ಲಖಿಬಾಗ್ ಅಮ್ರಾಯೀ ಎಂದು ಹೆಸರಿಟ್ಟಿದ್ದಾರೆ. ಈ ತೋಟದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಮಾವಿನ ಮರಗಳು ಇದೆ. ವಿವಿಧ ಬಗೆಯ ತಳಿಯ ಮಾವಿನ ಮರಗಳು ಈ ತೋಟದಲ್ಲಿ ಇದ್ದು, 200ಕ್ಕೂ ಹೆಚ್ಚು ವಿದೇಶಿ ಮಾವು ತಳಿಗಳನ್ನು ಇಲ್ಲಿ ಬೆಳೆಯಲಾಗಿದೆ. ಇಲ್ಲಿರುವ ಕೆಲವು ಪ್ರಭೇದಗಳು ವಿಶ್ವದ ಅತ್ಯುತ್ತಮ ಮಾವುಗಳಲ್ಲಿ ಒಂದಾಗಿದೆ.
ಇಲ್ಲಿ ಕೇಸರ್, ಅಲ್ಫೋನ್ಸೋ, ರತ್ನ, ಸಿಂಧು, ನೀಲಂ, ಆಮ್ರಪಾಲಿ ಎಂಬ ಪ್ರಮುಖ ತಳಿಯ ಜೊತೆಗೆ ಟಾಮಿ ಅಟ್ಕಿನ್ಸ್, ಅಮೆರಿಕದ ಫ್ಲೋರಿಡಾದ ಕೆಂಟ್, ಇಸ್ರೇಲ್‌ನ ಲಿಲಿ, ಕೀತ್ ಮತ್ತು ಮಾಯಾ ಪ್ರಭೇದಗಳು ಕೂಡ ಇದೆ. ಇಲ್ಲಿ ಬೆಳೆಯುವ ರಾಜಾಜು ಮಾವಿನ ಹಣ್ಣುಗಳು ನಾನಾ ದೇಶಗಳಿಗೆ ರಫ್ತಾಗುತ್ತವೆ. ಮತ್ತು ಇದಕ್ಕೆ ಹೆಚ್ಚು ಬೇಡಿಕೆ ಇದೆ.
ಮದುವೆ ಬಳಿಕ 10 ಸಾವಿರ ಅತಿಥಿಗಳನ್ನು ಗಂಟೆಗಟ್ಟಲೆ ನಿಂತೇ ಗೌರವಿಸಿದ ಅಂಬಾನಿ ಕುಟುಂಬ!
ಕೈಗಾರಿಕೋದ್ಯಮಿಯಾಗಿರುವ ಮುಕೇಶ್ ಅಂಬಾನಿಗೆ ಮಾವಿನ ಹಣ್ಣಿನ ವ್ಯಾಪಾರ ಮಾಡಬೇಕು ಎಂಬ ಯಾವ ಯೋಚನೆಯೂ ಇರಲಿಲ್ಲ. ಆದರೆ ಅವರು ಮಾವಿನ ಕೃಷಿ ಮಾಡಲು ಮುಂದಾಗಿದ್ದು ಅನಿವಾರ್ಯ ಕಾರಣದಿಂದ, ಕೈಗಾರಿಕೆಗೆ ಕುತ್ತು ಬರುತ್ತೆ ಎಂಬ ಕಾರಣಕ್ಕೆ ಮಾವು ಬೆಳೆದರು. ಅದರ ಹಿಂದೆ ಒಂದು ದೊಡ್ಡ ಕಥೆಯೇ ಇದೆ.
ವಾಸ್ತವವಾಗಿ ಗುಜರಾತ್‌ನ ಜಾಮ್ ನಗರದಲ್ಲಿ ಅಂಬಾನಿಗೆ ಸಂಬಂಧಿಸಿದ ಬಹುತೇಕ ಎಲ್ಲಾ ಕೈಗಾರಿಕೆಗಳಿವೆ. 5000 ಹೆಕ್ಕೇರ್ ಪ್ರದೇಶದಲ್ಲಿರುವ ವ್ಯಾಪಿಸಿರುವ ಕೈಗಾರಿಕೆಗಳಿಂದ ಬರುವ ಹೊಗೆಯಿಂದ ಸ್ಥಳೀಯರು ಮತ್ತು ಕಂಪನಿಯು ಮಾಲಿನ್ಯ ನಿಯಂತ್ರಣ ಮಂಡಳಿಗಳಿಂದ ಹಲವಾರು ಎಚ್ಚರಿಕೆ ಮತ್ತು ವಿರೋಧಗಳು ವ್ಯಕ್ತವಾದವು. ಇದಕ್ಕಾಗಿ ರಿಲಾಯನ್ಸ್ ಶಬ್ಧ ಮಾಲಿನ್ಯ, ವಾಯು ಮಾಲಿನ್ಯವನ್ನು ತಡೆಗಟ್ಟಲು ವಿಶೇಷ ಹೆಜ್ಜೆ ಇಟ್ಟಿತು. ತನ್ನ ಕೈಗಾರಿಕೆಗಳ ಸುತ್ತ ಕೃಷಿಗಾಗಿ ಮತ್ತು ಉತ್ತಮ ಪರಿಸರಕ್ಕಾಗಿ 7,500 ಎಕರೆಗಳನ್ನು ಮೀಸಲಿಟ್ಟಿತು. ಇಲ್ಲಿ ಹೈನುಗಾರಿಗೆ, ಕೃಷಿ ಸೇರಿ ವಿವಿಧ ಪರಿಸರ ಸ್ನೇಹಿ ಚಟುವಟಿಗಳಿಗೆ ಇದನ್ನು ಮೀಸಲಿಡಲಾಗಿದೆ.
ಈ ಜಾಗದಲ್ಲ್ಲಿ 600 ಎಕರೆಯಲ್ಲಿ ಮಾವಿನ ಕೃಷಿಯನ್ನು ಮಾಡಲಾಗುತ್ತದೆ. ಪ್ರಸ್ತುತ ಇದು ವಿಶ್ವದ ಅತಿದೊಡ್ಡ ಮಾವಿನ ತೋಟ ಎನಿಸಿಕೊಂಡಿದೆ. ಇಲ್ಲಿ ಸಮುದ್ರದ ನೀರನ್ನು ಶುದ್ಧೀಕರಿಸಿ ಮಾವಿನ ತೋಟಗಳಿಗೆ ಹಾಯಿಸಲಾಗುತ್ತದೆ. ಹನಿ ನೀರಾವರಿ ಪದ್ದತಿಯನ್ನು ಇಲ್ಲಿ ಅಳವಡಿಸಲಾಗಿದೆ. ತನ್ನ ತೋಟದಲ್ಲಿ ಬೆಳೆದ ಹಣ್ಣುಗಳನ್ನು ಮಾರಾಟ ಮಾಡಲು ಜಾಮ್‌ನಗರ ಫಾರ್ಮ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಪ್ರತ್ಯೇಕ ಕಂಪನಿಯನ್ನು ಕೂಡ ಅಂಬಾನಿ ತೆರೆದಿದ್ದು, ಕಂಪನಿಯು ಆರ್‌ಐಎಲ್ ಮ್ಯಾಂಗೋ ಬ್ರಾಂಡ್ ಹೆಸರಿನಲ್ಲಿ ಮಾವುಗಳನ್ನು ಮಾರಾಟ ಮಾಡುತ್ತದೆ. ಮಾತ್ರವಲ್ಲದೆ ತನ್ನದೇ ಆದ ವಿಶ್ವದ ಅತೀ ದೊಡ್ಡ ಮಾವು ಸಂಸ್ಕರಣಾ ಘಟಕವನ್ನು ಕೂಡ ರಿಲಾಯನ್ಸ್ ಹೊಂದಿದೆ.