ಖುಷಿಯಾದಾಗ ಕುಣಿದು ಕುಪ್ಪಳಿಸುವ ಆಸೆಯಾಗುತ್ತೆ. ಹಾಗೆ ಏನಾದ್ರೂ ತಿನ್ಬೇಕೆಂಬ ಮನಸ್ಸಾಗುತ್ತೆ. ಭಾರತೀಯರು ಕೂಡ ಖುಷಿಯಾದಾಗ ಬಾಯಿ ರುಚಿ ಬಯಸ್ತಾರೆ. ಅವರು ಯಾವ ತಿಂಡಿ ತಿನ್ನುತ್ತಾರೆ ಎನ್ನುವ ಬಗ್ಗೆ ಸಮೀಕ್ಷೆಯ ವರದಿಯೊಂದು ಹೊರಬಿದ್ದಿದೆ.
ಮೂಡ್ ಸರಿ ಇಲ್ಲ, ಇವತ್ತು ನನಗೆ ಏನೂ ಬೇಡ, ಏನನ್ನೂ ತಿನ್ನುವ ಮನಸ್ಸಿಲ್ಲ ಅಂತ ಹೇಳ್ತೀವಿ. ಅದೇ ಮೂಡ್ ಫ್ರೆಶ್ ಆಗಿದ್ದಾಗ, ಖುಷಿಯಿಂದ ಇದ್ದಾಗ ಇವತ್ತು ನಾನು ಫುಲ್ ಖುಷಿಯಾಗಿದೀನಿ. ಈ ಖುಷಿಗೆ ಏನಾದರೂ ತಿನ್ಬೇಕು ಅಂತ ಹೇಳ್ತೀವಿ. ಹೆಚ್ಚಿನ ಭಾರತೀಯರು ಹೀಗೆ ಸಂತೋಷವಾಗಿದ್ದಾಗ ಸ್ನ್ಯಾಕ್ಸ್ ಐಟಮ್ ಅನ್ನೇ ತಿನ್ನಲು ಬಯಸುತ್ತಾರೆ ಅನ್ನೋದು ತಿಳಿದುಬಂದಿದೆ. ಗ್ರಾಹಕರ ಮೇಲೆ ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ಹೊರಬಿದ್ದಿದೆ. ಶೇಕಡಾ 72ರಷ್ಟು ಭಾರತೀಯರು ತಾವು ಖುಷಿಯಾಗಿದ್ದಾಗ ಸ್ನ್ಯಾಕ್ಸ್ ಅನ್ನೇ ತಿನ್ನಲು ಇಷ್ಟಪಡುವುದಾಗಿ ಹೇಳಿದ್ದಾರೆ.
ಸ್ನ್ಯಾಕ್ಸ್ (Snacks)ಎನ್ನುವುದು ಇತ್ತೀಚೆಗೆ ಎಲ್ಲರ ಜೀವನದಲ್ಲೂ ಹಾಸುಹೊಕ್ಕಾಗಿದೆ. ನಮ್ಮ ಮನಸ್ಥಿತಿಗೆ ಅನುಗುಣವಾಗಿ ನಮ್ಮ ಆಹಾರ (Food ) ಪದ್ಧತಿ ಇರುತ್ತದೆ. ಮನುಷ್ಯನ ಅಭ್ಯಾಸಗಳ ಮೇಲೆ ನಡೆಸಲಾದ ಒಂದು ಅಧ್ಯಯನ (Study) ದ ಪ್ರಕಾರ, ಮನಸ್ಸಿನ ಸ್ಥಿತಿ ಮತ್ತು ಸ್ನ್ಯಾಕ್ಸ್ ಸೇವಿಸುವುದರ ನಡುವೆ ಅವಿನಾಭಾವ ಸಂಬಂಧವಿದೆ. ಬಹುಪಾಲು ಭಾರತೀಯರು ಇದನ್ನು ಒಪ್ಪಿಕೊಂಡಿದ್ದಾರೆ. ಮಹಿಳೆಯರು ಹಾಗೂ ಪುರುಷರು ಇಬ್ಬರೂ ಖುಷಿಯಾದಾಗ ಸ್ನ್ಯಾಕ್ಸ್ ತಿನ್ನುತ್ತಾರೆಂಬುದು ತಿಳಿದುಬಂದಿದೆ. ಪ್ರತಿಶತ 70ರಷ್ಟು ಮಂದಿ ಸ್ನ್ಯಾಕ್ಸ್ ತಿಂದ ನಂತರ ಬಹಳ ಉತ್ಸಾಹದಿಂದಿರುತ್ತಾರೆ ಎಂಬುದು ಅಧ್ಯಯನದಿಂದ ತಿಳಿದಿದೆ. ಈ ಅಧ್ಯಯನವನ್ನು ಉತ್ತರ, ದಕ್ಷಿಣ, ಪಶ್ಚಿಮ ಮತ್ತು ಪೂರ್ವ ಹೀಗೆ ಎಲ್ಲ ಕಡೆ ನಡೆಸಲಾಗಿತ್ತು. ಇವುಗಳಲ್ಲಿ ಮುಂಬೈ, ಪುಣಾ, ಅಹಮದಾಬಾದ್, ಜೈಪುರ, ದಿಲ್ಲಿ, ಕಲ್ಕತ್ತ, ಚೆನ್ನೈ ಮತ್ತು ಬೆಂಗಳೂರು ಮುಂತಾದ 10 ನಗರಗಳನ್ನು ಸೇರಿಸಲಾಗಿತ್ತು.
HEALTH TIPS: ಆಗಾಗ ಆರೋಗ್ಯ ಹದಗೆಡ್ತಿದ್ಯಾ? ಅಡುಗೆಗೆ ಬಳಸೋ ಎಣ್ಣೆ ಸರಿಯಿದ್ಯಾ ಚೆಕ್ ಮಾಡ್ಕೊಳ್ಳಿ
ಸಮೀಕ್ಷೆ ಪ್ರಕಾರ, ಶೇಕಡ 72ರಷ್ಟು ಭಾರತೀಯರು ಖುಷಿಯಾದಾಗ ಸ್ನ್ಯಾಕ್ಸ್ ತಿನ್ನಲು ಇಷ್ಟಪಡುತ್ತಾರೆ. ಶೇಕಡಾ 56ರಷ್ಟು ಮಂದಿ ಬೇಸರವಾದಾಗ ಹೆಚ್ಚು ತಿಂಡಿ ತಿನ್ನುತ್ತೇವೆಂದು ಒಪ್ಪಿದ್ದಾರೆ. ಶೇಕಡಾ 40 ರಷ್ಟು ಭಾರತೀಯರು ಸ್ನ್ಯಾಕ್ಸ್ ಬೇಸರದಿಂದ ಹೊರಬರಲು ಮತ್ತು ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತೆ ಎಂದಿದ್ದಾರೆ. ದೆಹಲಿಯಲ್ಲಿ ಶೇಕಡಾ 81ರಷ್ಟು ಮಂದಿ ಖುಷಿಯಾದಾಗ ಹೆಚ್ಚು ಸ್ನ್ಯಾಕ್ಸ್ ತಿನ್ನುತ್ತಾರೆ. ಅನ್ಯ ನಗರಗಳಾದ ಹೈದರಾಬಾದ್ ನಲ್ಲಿ ಶೇಕಡಾ 77, ಚೆನ್ನೈನಲ್ಲಿ ಶೇಕಡಾ 77 ಮತ್ತು ಕಲ್ಕತ್ತಾದಲ್ಲಿ ಶೇಕಡಾ 75, ಮುಂಬೈ ನಲ್ಲಿ ಶೇಕಡಾ 68, ಅಹಮದಾಬಾದ್ ನಲ್ಲಿ ಶೇಕಡಾ 68, ಪುಣೆಯಲ್ಲಿ ಶೇಕಡಾ 66, ಬೆಂಗಳೂರಿನಲ್ಲಿ ಶೇಕಡಾ 66, ಲಖನೌನಲ್ಲಿ ಶೇಕಡಾ 62, ಜೈಪುರದಲ್ಲಿ ಶೇಕಡಾ 61 ಮಂದಿ ಖುಷಿಯಾಗಿದ್ದಾಗ ಸ್ನ್ಯಾಕ್ಸ್ ತಿನ್ನುತ್ತಾರಂತೆ. ದೆಹಲಿ, ಲಖನೌ, ಕಲ್ಕತ್ತಾ, ಚೆನ್ನೈ ನಲ್ಲಿ ಇರುವ ಶೇಕಡಾ 60ಕ್ಕಿಂತ ಹೆಚ್ಚು ಮಂದಿ ದುಃಖವಾದಾಗ ಸ್ನ್ಯಾಕ್ಸ್ ಸೇವಿಸುತ್ತಾರಂತೆ. ಈ ಅಂಕಪಟ್ಟಿಯಲ್ಲಿ ರಾಜಸ್ಥಾನದ ಜೈಪುರವು ಕೊನೆಯ ಸ್ಥಾನದಲ್ಲಿದೆ.
ಗ್ರಾಹಕರ ಅಧ್ಯಯನದಲ್ಲಿ ಬಹಿರಂಗವಾಯ್ತು ವಿಷಯ : ಸ್ನ್ಯಾಕ್ಸ್ ಈಗ ಎಲ್ಲರ ಮನೆಮಾತಾಗಿರುವುದಂತೂ ನಿಜ. ಭಾರತದಲ್ಲಿ ಅರ್ಧಕ್ಕಿಂತ ಹೆಚ್ಚು ತಂದೆ-ತಾಯಿಯರು ಸ್ನ್ಯಾಕ್ಸ್ ಅನ್ನು ಮಿನಿ ಮೀಲ್ ಎಂದು ಭಾವಿಸುತ್ತಾರೆ. ಇಷ್ಟೇ ಅಲ್ಲ ಭಾರತದಲ್ಲಿ ಮೂರನೇ ಒಂದು ಭಾಗದಷ್ಟು ಪೋಷಕರು ಇದನ್ನೇ ಫುಲ್ ಮೀಲ್ ಅಥವಾ ಸಂಪೂರ್ಣ ಊಟದಂತೆಯೇ ಪರಿಗಣಿಸಲು ಶುರುಮಾಡಿದ್ದಾರೆ. ಪ್ರತಿಶತ 34ರಷ್ಟು ಮಂದಿ ಪುರುಷರು ಮತ್ತು ಶೇಕಡಾ 35ರಷ್ಟು ಮಂದಿ ಮಹಿಳೆಯರು ಇದನ್ನು ಒಪ್ಪಿಕೊಂಡಿದ್ದಾರೆ.
ಒಣಗಿದ ತರಕಾರಿಯನ್ನು ಫ್ರೆಶ್ ಮಾಡುವ ಕೆಮಿಕಲ್: ವೈರಲ್ ವಿಡಿಯೋ ನೋಡಿ ಆಘಾತಗೊಂಡ ಜನ
ಪ್ರತಿಶತ 44ರಷ್ಟು ಭಾರತೀಯರು, ಯಾರ ಮನೆಯಲ್ಲಿ ಕೆಲಸದವಳು ಅಥವಾ ಅಡುಗೆಯವಳು ಇಲ್ಲವೋ ಅಂತಹ ಜನರಿಗೆ ಸ್ನ್ಯಾಕ್ಸ ಒಳ್ಳೆಯ ಪರಿಹಾರ ಹಾಗೂ ಸುಲಭ ವಿಧಾನವಾಗಿದೆ. ಪ್ರತಿಶತ 60ರಷ್ಟು ಮಂದಿ ಸ್ನ್ಯಾಕ್ಸ್ ಅನ್ನು ಕೇವಲ ಯುವಕರು ಮತ್ತು ಅವಿವಾಹಿತರು ಮಾತ್ರ ಉಪಯೋಗಿಸುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಗ್ರಾಹಕರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಒಟ್ಟೂ 2815 ಮಂದಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಅದರಲ್ಲಿ ಉತ್ತರ ಭಾರತದ ಪ್ರತಿಶತ 25, ದಕ್ಷಿಣ ಭಾರತದ 36, ದೇಶದ ಪಶ್ಚಿಮ ಭಾಗದಿಂದ 25, ಪೂರ್ವದಿಂದ 14ರಷ್ಟು ಮಂದಿ ಭಾಗಿಯಾಗಿದ್ದರು. ಅಖಿಲ ಭಾರತೀಯ ಮಾದರಿಯಲ್ಲಿ ಪ್ರತಿಶತ 42ರಷ್ಟು ಅವಿವಾಹಿತರು ಮತ್ತು ಪ್ರತಿಶತ 52ರಷ್ಟು ವಿವಾಹಿತರು ಭಾಗಿಯಾಗಿದ್ದರು.