Ugadi 2023: ಹಬ್ಬಕ್ಕೆ ಮಾವಿನ ಕಾಯಿ ಚಿತ್ರಾನ್ನ ಮಾಡೋದನ್ನು ಮರೀಬೇಡಿ, ಇಲ್ಲಿದೆ ರೆಸಿಪಿ

By Vinutha PerlaFirst Published Mar 21, 2023, 3:03 PM IST
Highlights

ಹೊಸ ವರ್ಷ ಯುಗಾದಿ ಹಬ್ಬದ ತಯಾರಿ ಜೋರಾಗಿ ನಡೀತಿದೆ. ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗ್ತಿದೆ. ಅಡುಗೆ ಮನೆಯಲ್ಲಿ ಹಬ್ಬದಡುಗೆಯ ತಯಾರಿ ಮಾಡಿಕೊಳ್ಳಲಾಗ್ತಿದೆ. ಯುಗಾದಿ ಅಂದ್ರೆ ಮಾವಿನಕಾಯಿ ಚಿತ್ರಾನ್ನ ಇಲ್ಲದಿದ್ರೆ ಆಗುತ್ತಾ ? ಅದನ್ನು ಮಾಡೋದ್ಹೇಗೆ ತಿಳ್ಕೊಳ್ಳಿ.

ಹಬ್ಬ ಎಂದರೆ ಅಡುಗೆ ಮನೆಯಲ್ಲಿ ಭರ್ಜರಿ ತಯಾರಿ ಶುರುವಾಗುತ್ತೆ. ಅದರಲ್ಲೂ ನಾಳೆ ಯುಗಾದಿ ಹಬ್ಬ. ಹೊಸ ವರುಷವನ್ನು ಬೇವು ಬೆಲ್ಲ ಹಾಗೂ ಸಿಹಿ ಕಜ್ಜಾಯದೊಂದಿಗೆ ಸ್ವಾಗತಿಸಿ. ಯುಗಾದಿ ಹಬ್ಬದ ದಿನ ಕೆಲ ಅಡುಗೆಗಳನ್ನು ಮಾಡುವ ಮೂಲಕ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಬಹುದು. ಅದರಲ್ಲೂ ಯುಗಾದಿ ಅಂದ್ರೆ ಮಾವಿನಕಾಯಿ ಚಿತ್ರಾನ್ನ, ಕೋಸಂಬರಿ ಮಿಸ್ ಮಾಡೋಕಾಗುತ್ತಾ ? ಅದನ್ನು ಮಾಡೋದ್ಹೇಗೆ ತಿಳ್ಕೊಳ್ಳೋಣ.

ಮಾವಿನ ಕಾಯಿ ಚಿತ್ರಾನ್ನ

ಬೇಕಾಗುವ ಸಾಮಗ್ರಿಗಳು
2 ಟೇಬಲ್ ಸ್ಪೂನ್ ಎಣ್ಣೆ
1 ಟೀಸ್ಪೂನ್ ಸಾಸಿವೆ
1 ಟೀಸ್ಪೂನ್ ಉದ್ದಿನ ಬೇಳೆ
ಪಿಂಚ್ ಆಫ್ ಹಿಂಗ್
1 ಟೀಸ್ಪೂನ್ ಕಡ್ಲೆ ಬೇಳೆ
ಕೆಲವು ಕರಿಬೇವಿನ ಎಲೆಗಳು
3 ಟೇಬಲ್ಸ್ಪೂನ್ ಕಡಲೆಕಾಯಿ 
1 ಕಪ್ ಮಾವಿನಕಾಯಿ, ತುರಿದ
2 ಹಸಿರು ಮೆಣಸಿನಕಾಯಿ,
¼ ಟೀಸ್ಪೂನ್ ಅರಿಶಿನ 
2 ಕಪ್ ಬೇಯಿಸಿದ ಅನ್ನ 
ಉಪ್ಪು, ರುಚಿಗೆ ತಕ್ಕಷ್ಟು
2 ಟೇಬಲ್ ಸ್ಪೂನ್ ತುರಿದ ತೆಂಗಿನಕಾಯಿ
2 ಟೇಬಲ್ಸ್ಪೂನ್ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪ

Ugadi 2023 : ಹಬ್ಬಕ್ಕೆ ಬೇವು-ಬೆಲ್ಲ, ಸ್ಪೆಷಲ್ ಬರ್ಫಿ ಮಾಡೋದು ಹೇಗೆ ತಿಳ್ಕೊಳ್ಳಿ

ಮಾಡುವ ವಿಧಾನ: ಮೊದಲಿಗೆ ದೊಡ್ಡ ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ 1 ಟೀ ಸ್ಪೂನ್ ಸಾಸಿವೆ, 1 ಟೀಸ್ಪೂನ್ ಉದ್ದಿನ ಬೇಳೆ ಮತ್ತು 1 ಟೀಸ್ಪೂನ್ ಕಡ್ಲೆ ಬೇಳೆ, ಪಿಂಚ್ ಹಿಂಗ್ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ. ಸಾಸಿವೆ ಸಿಡಿದ ಬಳಿಕ ಇದಕ್ಕೆ 3 ಟೇಬಲ್ ಸ್ಪೂನ್ ಹುರಿದ ಕಡಲೆಕಾಯಿಯನ್ನು ಸೇರಿಸಿ ಮತ್ತೂ ಒಂದು ನಿಮಿಷ ಫ್ರೈ ಮಾಡಿ. ಬಳಿಕ 1 ಕಪ್ ಮಾವಿನಕಾಯಿ (Mango), 2 ಹಸಿರು ಮೆಣಸಿನಕಾಯಿ ಮತ್ತು ¼ ಟೀಸ್ಪೂನ್ ಅರಿಶಿನವನ್ನು (Turmeric) ಸೇರಿಸಿ. ಹಸಿ ಮಾವಿನಕಾಯಿ ಸ್ಮೆಲ್ ಹೋಗುವ ವರೆಗೂ ಫ್ರೈ ಮಾಡಿ.

ಈಗ ಇದಕ್ಕೆ 2 ಕಪ್ ಬೇಯಿಸಿದ ಅನ್ನ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ನಂತರ ನಿಧಾನವಾಗಿ ಮಿಶ್ರಣ ಮಾಡಿ. 2 ನಿಮಿಷಗಳ ಕಾಲ ಅನ್ನ ಮಸಾಲೆಯನ್ನು ಹೀರಿಕೊಳ್ಳುವವರೆಗೆ ಗ್ಯಾಸ್ ಸಣ್ಣ ಉರಿಯಲ್ಲಿರಲಿ. ನಂತರ ಇದಕ್ಕೆ 2 ಟೇಬಲ್ ಸ್ಪೂನ್ ತೆಂಗಿನಕಾಯಿ (Coconut) ಮತ್ತು ಸ್ಪಲ್ಪ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಚೆನ್ನಾಗಿ ಬೆರೆಸಿ. ಈಗ ಬಿಸಿ ಬಿಸಿಯಾದ ಮಾವಿನಕಾಯಿ ಚಿತ್ರಾನ್ನ ಸವಿಯಲು ರೆಡಿ.

Health Tips : ಸಾತ್ವಿಕ ಭೋಜನ ಆರೋಗ್ಯದ ಮೇಲೆ ಮಾಡುತ್ತೆ ಮ್ಯಾಜಿಕ್!

ಸೌತೆಕಾಯಿ ಕೋಸಂಬರಿ 

ಬೇಕಾಗುವ ಸಾಮಗ್ರಿಗಳು
2 ಸೌತೆಕಾಯಿ
2 ಟೇಬಲ್ ಸ್ಪೂನ್ ಎಣ್ಣೆ
1 ಟೀ ಸ್ಪೂನ್ ಸಾಸಿವೆ
2 ಒಣಮೆಣಸಿನಕಾಯಿ
ಅರ್ಧ ಕಪ್ ತೆಂಗಿನತುರಿ
ಸ್ಪಲ್ಪ ಕೊತ್ತಂಬರಿ ಸೊಪ್ಪು
ಸ್ಪಲ್ಪ ಉಪ್ಪು

ಮಾಡುವ ವಿಧಾನ: ಮೊದಲು ಸೌತೆಕಾಯಿಯನ್ನು (Cucumber) ಸಣ್ಣದಾಗಿ ಕೊಚ್ಚಿಕೊಳ್ಳಿ. ಈಗ ಒಂದು ಬಾಣಲೆಯನ್ನು ತೆಗೆದುಕೊಂಡು ಎಣ್ಣೆ ಹಾಕಿ ಕಾಯಿಸಿ. ಎಣ್ಣೆ ಕಾದ ನಂತರ ಸಾಸಿವೆ, ಕರಿಬೇವು, ಒಣಮೆಣಸಿನಕಾಯಿ ಹಾಕಿ ಫ್ರೈ ಮಾಡಿ. ಅದು ತಣ್ಣಗಾದ ನಂತರ ಸೌತೆಕಾಯಿ, ಕೊತ್ತಂಬರಿ ಸೊಪ್ಪು, ಹಸಿತೆಂಗಿನತುರಿ, ರುಚಿಗೆ ತಕ್ಕಷ್ಟು ಉಪ್ಪು (Salt) ಹಾಕಿ ಮಿಕ್ಸ್ ಮಾಡಿದರೆ ರುಚಿಯಾದ ಸೌತೆಕಾಯಿ ಕೋಸಂಬರಿ ರೆಡಿ

click me!