ಎಣ್ಣೆ ಇಲ್ದೆ ಹಪ್ಪಳ ರೋಸ್ಟ್ ಮಾಡೋದು ಹೇಗೆ? ಪಂಕಜ್ ವಿಡಿಯೋ ವೈರಲ್

ಎಣ್ಣೆಯಲ್ಲಿ ಹಪ್ಪಳ ಫ್ರೈ ಮಾಡೋದು ಎಲ್ಲರಿಗೂ ಗೊತ್ತು. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದೂ ತಿಳಿದಿದೆ. ಹಾಗಿದ್ರೆ ಫ್ರೈ ಮಾಡದೆ ಹಪ್ಪಳ ತಿನ್ನೋದು ಹೇಗೆ? ಈ ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ.
 


ಆರೋಗ್ಯದ ಬಗ್ಗೆ ಜನರು ಹೆಚ್ಚು ಕಾಳಜಿ ವಹಿಸ್ತಿದ್ದಾರೆ. ಎಣ್ಣೆಯುಕ್ತ ಆಹಾರದಿಂದ ಜನರು ದೂರವಿರಲು ಬಯಸ್ತಿದ್ದಾರೆ. ಇಂಥ ಆಹಾರ ಸೇವಿಸದಂತೆ ವೈದ್ಯರೂೂ ಸಲಹೆ ನೀಡ್ತಾರೆ. ಎಣ್ಣೆಯುಕ್ತ ಆಹಾರ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ. ಇದ್ರಿಂದ ನಾನಾ ಆರೋಗ್ಯ ಸಮಸ್ಯೆ ನಮ್ಮನ್ನು ಕಾಡುತ್ತದೆ. ಆದ್ರೆ ಕೆಲವೊಂದು ಕರಿದ ಆಹಾರದಿಂದ ದೂರವಿರೋದು ಕಷ್ಟ. ಉಪ್ಪಿನಕಾಯಿ ಊಟದ ಜೊತೆ ಹಪ್ಪಳವಿದ್ರೆ ಊಟದ ರುಚಿ ಹೆಚ್ಚಾಗುತ್ತೆ. ಜನರು ಹಪ್ಪಳವನ್ನು ಇಷ್ಟಪಟ್ಟು ತಿನ್ನುತ್ತಾರೆ. ಆದ್ರೆ ಅದನ್ನು ಎಣ್ಣೆಯಲ್ಲಿ ಕರಿಯುವ ಕಾರಣ ಅನೇಕರು ಇಷ್ಟವಿದ್ರೂ ಅದನ್ನು ತಿನ್ನೋದಿಲ್ಲ. ನೀವೂ ಹಪ್ಪಳ ಪ್ರೇಮಿಗಳಾಗಿದ್ದು, ಎಣ್ಣೆಯಲ್ಲಿ ಕರಿದ ಹಪ್ಪಳ ಇಷ್ಟವಿಲ್ಲ ಅಂದ್ರೆ ಎಣ್ಣೆ ಇಲ್ಲದ ರುಚಿಕರ ಹಪ್ಪಳವನ್ನು ನೀವು ಸೇವನೆ ಮಾಡಬಹುದು. ನಾವಿಂದು ಕರಿದ ಹಪ್ಪಳದ ಬದಲು ಹುರಿದ ಹಪ್ಪಳ ಹೇಗೆ ತಯಾರಿಸೋದು ಅನ್ನೋದನ್ನು  ಹೇಳ್ತೇವೆ. 

ಎಣ್ಣೆ (Oil) ಯಲ್ಲಿ ಫ್ರೈ ಮಾಡದೆ ಹಪ್ಪಳ ರೋಸ್ಟ್ ಮಾಡೋಕೆ ಈಗ ಕೆಲ ವಿಧಾನ ಇದೆ. ಅದ್ರಲ್ಲಿ ಏರ್ ಫ್ರೈಯರ್‌ (Air Fryer) ಕೂಡ ಸೇರಿದೆ. ಅನೇಕರ ಮನೆಯಲ್ಲಿ ಏರ್ ಫ್ರೈಯರ್ (Air Frier) ಬಳಸ್ತಿದ್ದಾರೆ. ಏರ್ ಫ್ರೈಯರ್ ನಲ್ಲಿ ಎಣ್ಣೆ ಬಳಸೋದಿಲ್ಲವಾದ್ರೂ ಹಪ್ಪಳ (papad) ಗರಿಗರಿಯಾಗಿರುತ್ತದೆ. ಹಾಗಂತ ಎಲ್ಲರಿಗೂ ಏರ್ ಫ್ರೈಯರ್ ಖರೀದಿ ಸಾಧ್ಯವಿಲ್ಲ. ಎಣ್ಣೆ ಇಲ್ಲದೆ ಹಪ್ಪಳ ರೋಸ್ಟ್ ಮಾಡುವ ಇನ್ನೊಂದು ವಿಧಾನವೆಂದ್ರೆ ಮೈಕ್ರೋವೇವ್.(Microwave) ಇಲ್ಲಿ ಕೂಡ ನೀವು ಹಪ್ಪಳವನ್ನು ಸುಲಭವಾಗಿ ರೋಸ್ಟ್ ಮಾಡಬಹುದು. ಆದ್ರೆ ಏರ್ ಫ್ರೈಯರ್, ಮೈಕ್ರೋವೇವ್ ಖರೀದಿ ಎಲ್ಲರಿಗೂ ಸಾಧ್ಯವಿಲ್ಲ. ಅಂಥವರಿಗೆ ಶೆಫ್ ಪಂಕಜ್ ಈ ಟ್ರಿಕ್ ಹೇಳಿಕೊಟ್ಟಿದ್ದಾರೆ. ಪಂಕಜ್ ಹೇಳಿದ ಟಿಪ್ಸನ್ನು ಜನರು ಇಷ್ಟಪಟ್ಟಿದ್ದಾರೆ.  7 ಮಿಲಿಯನ್‌ಗಿಂತಲೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ.

Latest Videos

ಉಪ್ಪನ್ನು ಬಳಸಿ ಹಪ್ಪಳ ಮಾಡಿ : ಹಪ್ಪಳ ಫ್ರೈ ಮಾಡ್ಬಾರದು, ರೋಸ್ಟ್ ಮಾಡ್ಬೇಕು ಎನ್ನುವವರು ಗ್ಯಾಸ್ ಮೇಲೆ ಪ್ಯಾನ್ ಇಟ್ಟು, ಗ್ಯಾಸ್ ಹಚ್ಚಿ. ಪ್ಯಾನ್ ಗೆ ಎಣ್ಣೆಯನ್ನು ಸೇರಿಸುವ ಬದಲು, ಅದರಲ್ಲಿ ಸಾಕಷ್ಟು ಉಪ್ಪನ್ನು ಸೇರಿಸಿ. ಇದರ ನಂತರ ಪ್ಯಾನ್ ಗೆ ಎಣ್ಣೆ ಹಾಕುವ ಬದಲು ಉಪ್ಪನ್ನು ಹಾಕಿ. ಈ ಉಪ್ಪನ್ನು ಕೈ ಆಡಿಸ್ತಾ ಸ್ವಲ್ಪ ಬಿಸಿ ಮಾಡಿ. ನಂತರ ಅದರ ಒಳಗೆ ಹಪ್ಪಳ ಹಾಕಿ, ಉಪ್ಪಿನಲ್ಲಿ ಹಪ್ಪಳ ಮುಚ್ಚಿ. ಸ್ವಲ್ಪ ಸಮಯದಲ್ಲಿಯೇ ಹಪ್ಪಳ ರೋಸ್ಟ್ ಆಗುತ್ತೆ. ಬರೀ ಹಪ್ಪಳವನ್ನು ಮಾತ್ರವಲ್ಲ ನೀವು ಬೋಟಿ ಸೇರಿದಂತೆ ಎಲ್ಲ ಡ್ರೈ ಹಪ್ಪಳವನ್ನು ರೋಸ್ಟ್ ಮಾಡಬಹುದು. ಪಂಕಜ್ ತಮ್ಮ ವಿಡಿಯೋದಲ್ಲಿ ಹೇಗೆ ಮಾಡ್ಬೇಕು ಎಂಬುದನ್ನು ವಿವರಿಸಿದ್ದಾರೆ. 

ಮುದ್ದೆ ಉಪ್ಸಾರು ಮಾಡೋದು ಹೇಗೆ? ಡ್ರೋನ್ ಪ್ರತಾಪ್ ರೆಸಿಪಿ ಹೇಳಿದ್ದಾರೆ ಕೇಳಿಸಿಕೊಂಡು ಟ್ರೈ ಮಾಡಿ

ಪಂಕಜ್ ಅವರ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ. ಒಂದು ಲಕ್ಷಕ್ಕೂ ಹೆಚ್ಚು ಜನರು ವಿಡಿಯೋವನ್ನು ಲೈಕ್ ಮಾಡಿದ್ದಾರೆ. ನೂರಾರು ಮಂದಿ ಕಮೆಂಟ್ ಮಾಡಿದ್ದಾರೆ. ಅನೇಕರು ಪಂಕಜ್ ಐಡಿಯಾವನ್ನು ಇಷ್ಟಪಟ್ಟಿದ್ದಾರೆ. ಮತ್ತೆ ಕೆಲವರು ಯಾಕೆ ಉಪ್ಪು, ಗ್ಯಾಸ್, ಕರೆಂಟ್ ವೇಸ್ಟ್ ಮಾಡ್ಬೇಕು, ಮೈಕ್ರೋವೇವ್ ನಲ್ಲಿ ಯಾಕೆ ಮಾಡ್ಬಾರದು ಎಂದು ಪ್ರಶ್ನಿಸಿದ್ದಾರೆ. 

ತಿನ್ನದೇ ಇರೋದ್ರಿಂದ ತೂಕ ಕಡಿಮೆಯಾಗಲ್ಲ..ವೈಟ್ ಲಾಸ್ ಬಗ್ಗೆ ನಿಮ್ಗೆ ಗೊತ್ತಿರದ ವಿಚಾರಗಳಿವು

ಮತ್ತೆ ಕೆಲವರು ಸಮೋಸಾವನ್ನು ಕೂಡ ಇದೇ ರೀತಿ ಬೇಯಿಸಬಹುದಾ ಎಂದು ಪ್ರಶ್ನೆ ಮಾಡಿದ್ದಾರೆ. ಬಿಸಿ ಮರಳಿನಲ್ಲಿ ಆಗ ಜನರು ಪಾಪ್ ಕಾರ್ನ್ ಮಾಡ್ತಿದ್ದರು. ಈಗ ಕೆಲವು ಕಡೆ ಅದನ್ನು ಅಪರೂಪಕ್ಕೆ  ನೋಡ್ಬಹುದು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಉಪ್ಪು ಬಳಸಿ ಫ್ರೈ ಮಾಡೋದ್ರಿಂದ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಉಂಟುಮಾಡುತ್ತದೆ ಎಂದು ಇನ್ನೊಬ್ಬರು ಹೇಳಿದ್ದಾರೆ. 

click me!