
ಭಾರತ ಸ್ಟ್ರೀಟ್ ಫುಡ್ (India street food) ಗೆ ಪ್ರಸಿದ್ಧಿ ಪಡೆದಿದೆ. ದಕ್ಷಿಣ ಭಾರತ, ಉತ್ತರ ಭಾರತ ಸೇರಿದಂತೆ ದೇಶದ ಒಂದೊಂದು ಪ್ರದೇಶದಲ್ಲೂ ಒಂದೊಂದು ಸ್ಟ್ರೀಟ್ ಫುಡ್ ರುಚಿ ಸವಿಯಬಹುದು. ಒಬ್ಬರಿಗೆ ಪಾನಿ ಪುರಿ (Pani Puri) ಇಷ್ಟವಾದ್ರೆ ಮತ್ತೊಬ್ಬರಿಗೆ ಕುಲ್ಚಾ. ಇನ್ನೊಬ್ಬರಿಗೆ ವಡಾ ಪಾವ್. ಹಾಗಾಗಿ ದೇಶದಲ್ಲಿ ಯಾವುದು ಬೆಸ್ಟ್ ಸ್ಟ್ರೀಟ್ ಫುಡ್ ಅಂತ ಆಯ್ಕೆ ಮಾಡೋದು ಕಷ್ಟ. ಆದ್ರೆ ಟೆಸ್ಟ್ ಅಟ್ಲಾಸ್ (Test Atlas) ತನ್ನ ಟಾಪ್ 50 ಸ್ಟ್ರೀಟ್ ಫುಡ್ ಪಟ್ಟಿಯಲ್ಲಿ ಭಾರತದ ಮೂರು ಆಹಾರಕ್ಕೆ ಸ್ಥಾನ ನೀಡಿದೆ. ನಿಮ್ಗೆ ಮಲಬಾರ್ ಪರಾಠ, ಅಮೃತಸರಿ ಕುಲ್ಚಾ ಇಷ್ಟವಾಗಿದ್ರೆ ಇನ್ಮುಂದೆ ಮತ್ತಷ್ಟು ಹೆಮ್ಮೆಯಿಂದ ಇದನ್ನು ತಿನ್ಬಹುದು. ಟೆಸ್ಟ್ ಅಟ್ಲಾಸ್ ಪಟ್ಟಿಯಲ್ಲಿ ಮಲಬಾರ್ ಪರಾಠ, ಅಮೃತಸರಿ ಕುಲ್ಚಾ ಹಾಗೂ ಚೋಲೆ ಭಾತುರೆ ಸ್ಥಾನ ಪಡೆದಿದೆ.
ಟೆಸ್ಟ್ ಅಟ್ಲಾಸ್ ಪಟ್ಟಿಯಲ್ಲಿ ದಕ್ಷಿಣ ಭಾರತದ ಪರೋಟಾ 5 ನೇ ಸ್ಥಾನವನ್ನು ಪಡೆದುಕೊಂಡಿದೆ. ಅಮೃತಸರಿ ಕುಲ್ಚಾ 7 ನೇ ಸ್ಥಾನವನ್ನು ಪಡೆದುಕೊಂಡಿದೆ. ಚೋಲೆ ಭಾತುರೆ 40ನೇ ಸ್ಥಾನ ಪಡೆದಿದೆ. ಪಟ್ಟಿಯಲ್ಲಿ ಅಲ್ಜೀರಿಯಾದ ಬೀದಿ ಆಹಾರ ಗ್ಯಾರಂಟಿಟಾ ಅಗ್ರ ಸ್ಥಾನದಲ್ಲಿದೆ. ಇದನ್ನು ಕಡಲೆ ಹಿಟ್ಟು, ಎಣ್ಣೆ, ಮಸಾಲೆಗಳು ಮತ್ತು ನೀರಿನಿಂದ ತಯಾರಿಸಲಾಗುತ್ತೆ. ನಂತರ ಅದನ್ನು ಮೊಟ್ಟೆ ಜೊತೆ ಬೇಯಿಸಲಾಗುತ್ತದೆ. ಎರಡನೇ ಸ್ಥಾನದಲ್ಲಿ ಗೌಟಿ ಇದೆ. ಮೂರನೇ ಸ್ಥಾನದಲ್ಲಿ ಸಿಯೋಮೇ ಇದ್ದು, ನಂತ್ರದ ಸ್ಥಾನವನ್ನು ಮೆಕ್ಸಿಕೋದ ಕ್ವೆಸಾಬಿರಿಯಾ ಪಡೆದಿದೆ. ಐದು ಮತ್ತು ಆರನೇ ಸ್ಥಾನ ಭಾರತದ ಸ್ಟ್ರೀಟ್ ಫುಡ್ ಪಾಲಾಗಿದೆ. ಬರ್ಮೀಸ್ ಓಹ್ ನೋ ಖಾವೊ ಸ್ವೀ ಏಳನೇ ಸ್ಥಾನದಲ್ಲಿದ್ದರೆ, ಮೆಕ್ಸಿಕನ್ ಟ್ಯಾಕೋಸ್, ಲೆಬನೀಸ್ ಶವರ್ಮಾ ಮತ್ತು ವಿಯೆಟ್ನಾಮೀಸ್ ಬಾನ್ ಮಿ ಕ್ರಮವಾಗಿ 8, 9 ಮತ್ತು 10ನೇ ಸ್ಥಾನ ಪಡೆದಿವೆ.
ಇದು ವಿಶ್ವದ ದುಬಾರಿ ಐಸ್ ಕ್ರೀಂ, ಬೆಲೆ ಕೇಳಿದ್ರೆ ದಂಗಾಗ್ತೀರಿ
ದಕ್ಷಿಣ ಭಾರತೀಯ ಪರೋಟಾ : ದಕ್ಷಿಣ ಭಾರತದ ಪರೋಟ 5 ನೇ ಸ್ಥಾನವನ್ನು ಪಡೆದುಕೊಂಡಿದೆ. ಪರೋಟಾವು ಅದರ ಚಪ್ಪಟೆಯಾದ ರಚನೆ ಮತ್ತು ವಿಶಿಷ್ಟ ರುಚಿಗೆ ಹೆಸರುವಾಸಿಯಾಗಿದೆ. ವಿಶೇಷವಾಗಿ ತಮಿಳುನಾಡು ಮತ್ತು ಕೇರಳದ ಬೀದಿಗಳಲ್ಲಿ ಮಸಾಲೆಯುಕ್ತ ಮೇಲೋಗರಗಳೊಂದಿಗೆ ಈ ಪರೋಟಾವನ್ನು ಬಡಿಸಲಾಗುತ್ತದೆ. ಮೈದಾ ಹಿಟ್ಟಿನಿಂದ ತಯಾರಿಸಿದ ಹಿಟ್ಟನ್ನು ತೆಳ್ಳಗೆ ಲಟ್ಟಿಸಿ, ಪದೇ ಪದೇ ಮಡಿಸಿ, ತುಪ್ಪ ಅಥವಾ ಎಣ್ಣೆ ಬಳಸಿ ಬಾಣಲೆಯಲ್ಲಿ ಬೇಯಿಸಲಾಗುತ್ತದೆ. ಗರಿಗರಿಯಾದ ಆದ್ರೆ ಮೃದುವಾದ ಪರಾಟ ಸಿದ್ಧವಾಗುತ್ತದೆ. ವಸಾಹತುಶಾಹಿ ಯುಗದಲ್ಲಿ ಪರೋಟಾಗಳು ಜನಪ್ರಿಯತೆ ಗಳಿಸಿವೆ ಎಂದು ನಂಬಲಾಗಿದೆ. ಮಲೇಷಿಯನ್ ಮತ್ತು ಶ್ರೀಲಂಕಾದ ಪಾಕಪದ್ಧತಿಯಿಂದ ಇದು ಪ್ರಭಾವಿತವಾಗಿದೆ.
ಅಮೃತಸರಿ ಕುಲ್ಚಾ : ಅಮೃತಸರಿ ಕುಲ್ಚಾ 7ನೇ ಸ್ಥಾನ ಪಡೆದಿದೆ. ಅಮೃತಸರಿ ಕುಲ್ಚಾ ಸಾಮಾನ್ಯವಾಗಿ ಆಲೂಗಡ್ಡೆ, ಈರುಳ್ಳಿ ಮತ್ತು ಚೀಸ್ನಿಂದ ತುಂಬಿದ ಸ್ಟಫ್ಡ್ ಬ್ರೆಡ್. ಇದನ್ನು ಬೆಣ್ಣೆಯಲ್ಲಿ ಬೇಯಿಸಿ ಮಸಾಲೆಯುಕ್ತ ಕಡಲೆಹಿಟ್ಟಿನೊಂದಿಗೆ ಸರ್ವ್ ಮಾಡಲಾಗುತ್ತದೆ. ಇದು ಉತ್ತರ ಭಾರತದ, ವಿಶೇಷವಾಗಿ ಅಮೃತಸರದ ಹೆಮ್ಮೆ. ಅಮೃತಸರ ಕುಲ್ಚಾಗಳನ್ನು ಮೂಲತಃ ಸ್ವರ್ಣ ದೇವಾಲಯದ ಲಂಗರ್ ನಲ್ಲಿ ತಯಾರಿಸಲಾಗುತ್ತಿತ್ತು. ಇಂದು ಪಂಜಾಬಿ ಪಾಕಪದ್ಧತಿಯ ಪರಂಪರೆಯನ್ನು ಪ್ರತಿನಿಧಿಸುತ್ತವೆ.
300 ಕಾಯಿಲೆಗೆ ಔಷಧವಾದ್ರೂ ಅಪ್ಪಿತಪ್ಪಿಯೂ ಇವ್ರು ನುಗ್ಗೆಕಾಯಿ
ಚೋಲೆ ಭಾತುರೆ : ಇದು ಪಟ್ಟಿಯಲ್ಲಿ 40ನೇ ಸ್ಥಾನ ಪಡೆದಿದೆ. ಇದು ಉತ್ತರ ಭಾರತದ ಸರ್ವೋತ್ಕೃಷ್ಟ ಖಾದ್ಯ. ದೆಹಲಿಯಲ್ಲಿ ಇದು ಹೆಚ್ಚು ಪ್ರಸಿದ್ಧಿ ಪಡೆದಿದ್ದು, ಪಂಜಾಬ್ ನಿಂದ ಬಂದ ಖಾದ್ಯ ಎನ್ನಲಾಗುತ್ತದೆ. ಟೇಸ್ಟ್ ಅಟ್ಲಾಸ್ , ಈ ಹಿಂದೆ ಭಾತುರಾವನ್ನು ವಿಶ್ವದ 26 ನೇ ಅತ್ಯುತ್ತಮ ಬ್ರೆಡ್ ಎಂದಿತ್ತು. ಉಪ್ಪಿನಕಾಯಿ ಈರುಳ್ಳಿ ಮತ್ತು ಚಟ್ನಿಯೊಂದಿಗೆ ಚೋಲೆ ಭಾತುರಾವನ್ನು ಸರ್ವ್ ಮಾಡಲಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.