ಇದು ವಿಶ್ವದ ದುಬಾರಿ ಐಸ್ ಕ್ರೀಂ, ಬೆಲೆ ಕೇಳಿದ್ರೆ ದಂಗಾಗ್ತೀರಿ

Published : Apr 17, 2025, 09:54 AM ISTUpdated : Apr 17, 2025, 10:17 AM IST
ಇದು ವಿಶ್ವದ ದುಬಾರಿ ಐಸ್ ಕ್ರೀಂ, ಬೆಲೆ ಕೇಳಿದ್ರೆ ದಂಗಾಗ್ತೀರಿ

ಸಾರಾಂಶ

ಜಪಾನ್‌ನ ಬ್ಯಾಕುಯಾ ಐಸ್‌ಕ್ರೀಂ ವಿಶ್ವದಲ್ಲೇ ಅತಿ ದುಬಾರಿಯಾಗಿದ್ದು, ₹5.28 ಲಕ್ಷ ಬೆಲೆ ಬಾಳುತ್ತದೆ. ಚಿನ್ನದ ಎಲೆ, ವಿಶೇಷ ಚೀಸ್‌ಗಳಿಂದ ತಯಾರಾದ ಈ ಐಸ್‌ಕ್ರೀಂ ಗಿನ್ನೆಸ್ ದಾಖಲೆ ಹೊಂದಿದೆ. ಜಪಾನಿನ ಸೆಲಾಟೊ ಬ್ರ್ಯಾಂಡ್ ಇದನ್ನು "ವೈಟ್ ನೈಟ್" ಎಂದು ಕರೆಯುತ್ತದೆ. ಭಾರತದಲ್ಲಿ ₹1200 ಬೆಲೆಯ ಚಿನ್ನದ ಲೇಪಿತ ಅಂಬಾನಿ ಐಸ್‌ಕ್ರೀಂ ಸುದ್ದಿಯಲ್ಲಿದೆ.

ಬೇಸಿಗೆ ಬರ್ತಿದ್ದಂತೆ ಐಸ್ ಕ್ರೀಂ (Ice cream)ಗೆ ಬೇಡಿಕೆ ಹೆಚ್ಚಾಗುತ್ತೆ. ರುಚಿಯಾದ ವೆರೈಟಿ ವೆರೈಟಿ ಐಸ್ ಕ್ರೀಂ ತಿಂದು ಜನರು ಹೊಟ್ಟೆ, ಮನಸ್ಸು ತಂಪು ಮಾಡಿಕೊಳ್ತಾರೆ. ಐಸ್ ಕ್ರೀಂಗೆ 150 ರೂಪಾಯಿ ಕೊಡೋದೇ ಕಷ್ಟ. 15 -20 ರೂಪಾಯಿಗೆ ಐಸ್ ಕ್ರೀಂ ಸಿಕ್ಕಿದ್ರೆ ಬೆಸ್ಟ್ ಎನ್ನುವ ಜನರೇ ಹೆಚ್ಚು. ಹಾಗಿರುವಾಗ ಜಗತ್ತಿನ ಅತಿ ದುಬಾರಿ ಐಸ್ ಕ್ರೀಂ ಕೊಂಡು ತಿನ್ನೋರು ಯಾರು? ಆ ಐಸ್ ಕ್ರೀಂ ಬೆಲೆಗೆ  ಹತ್ತು ವರ್ಷಗಳ ಕಾಲ  ಅತ್ಯುತ್ತಮ ಐಸ್ ಕ್ರೀಂ ತಿನ್ನಬಹುದು. ಹಾಗಿದ್ರೆ ದುಬಾರಿ ಐಸ್ ಕ್ರೀಂ ಯಾವ್ದು, ಅದ್ರ ಬೆಲೆ ಎಷ್ಟು, ಅದಕ್ಕೆ ಏನೆಲ್ಲ ಹಾಕ್ತಾರೆ, ಒಮ್ಮೆ ನೀವು ಟ್ರೈ ಮಾಡ್ಬಹುದು ಅನ್ನೋದನ್ನು ತಿಳ್ಕೊಳ್ಳಿ.

ದುಬಾರಿ ಐಸ್ ಕ್ರೀಂ ಯಾವ್ದು? : ವಿಶ್ವದ ದುಬಾರಿ ಐಸ್ ಕ್ರೀಂ ಜಪಾನ್ ನಲ್ಲಿ ಸಿದ್ಧವಾಗುತ್ತೆ. ಇದ್ರ ಹೆಸರು ಬ್ಯಾಕುಯಾ (BYAKUYA). ಇದನ್ನು ವಿಶ್ವದ ಅತ್ಯಂತ ದುಬಾರಿ ಐಸ್ ಕ್ರೀಂ ಎಂದೇ ಹೇಳಲಾಗುತ್ತದೆ. ಜಪಾನ್ನಲ್ಲಿ ಇದರ ಬೆಲೆ ಸುಮಾರು 880,000 ಯೆನ್ ಆಗಿದ್ದು, ಇದು 6,380 ಅಮೆರಿಕನ್ ಡಾಲರ್ಗಳಿಗೆ ಸಮ. ಭಾರತೀಯ ರೂಪಾಯಿಗಳಿಗೆ ಬದಲಿಸಿದ್ರೆ ಅದ್ರ ಬೆಲೆ  5,28,409.46 ರೂಪಾಯಿಗಳಾಗುತ್ತದೆ. ಐದು ಲಕ್ಷಕ್ಕೆ ಒಂದು ಐಸ್ ಕ್ರೀಂ ತಿನ್ನೊ ಬದಲು ಹತ್ತು ವರ್ಷಗಳ ಕಾಲ ರುಚಿಕರವಾದ ಐಸ್ ಕ್ರೀಮ್ಗಳನ್ನು ಈ ಬೆಲೆಯಲ್ಲಿ ತಿನ್ನಬಹುದು. ಅಷ್ಟೇ ಅಲ್ಲ ಇದೇ ಬೆಲೆಗೆ ನೀವು ಬಂಗಾರ, ಬೆಳ್ಳಿ ಸೇರಿದಂತೆ ದುಬಾರಿ ಆಭರಣ, ಬೈಕ್ – ಕಾರುಗಳನ್ನು ಕೂಡ ಖರೀದಿ ಮಾಡ್ಬಹುದು. 

ಇದ್ರ ವಿಶೇಷತೆ ಏನು? : ಬ್ಯಾಕುಯಾ ಐಸ್ ಕ್ರೀಂ ಗಿನ್ನೀಸ್ ರೆಕಾರ್ಡ್ ಸೇರಿದೆ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಪ್ರಕಟವಾದ ವರದಿ ಪ್ರಕಾರ, ಐಸ್ ಕ್ರೀಂನ ಮೇಲ್ಭಾಗದಲ್ಲಿ ಚಿನ್ನದ ಎಲೆ ಇರುತ್ತೆ. ಈ ಐಸ್ ಕ್ರೀಮ್ ತಯಾರಿಸಲು ಎರಡು ರೀತಿಯ ಚೀಸ್ ಬಳಸಲಾಗುತ್ತದೆ. ಅದರಲ್ಲಿ ಒಂದು Sakekasu.  ಇದು ತುಂಬಾ ವಿಶೇಷವಾಗಿದ್ದು, ಇದನ್ನು ತಯಾರಿಸಲು   1.5 ವರ್ಷಗಳು ಬೇಕಾಗುತ್ತದೆ. ನಿಮಗೆ ಒಂದು ಕಿಲೋ ಐಸ್ ಕ್ರೀಂ ಬೇಕು ಅಂದ್ರೆ 12 ಲಕ್ಷ ರೂಪಾಯಿಯನ್ನು ಪಾವತಿಸಬೇಕಾಗುತ್ತದೆ.

ಐಸ್ ಕ್ರೀಂ ಯಾರು ತಯಾರಿಸಿದ್ದಾರೆ? : ಈ ಐಸ್ ಕ್ರೀಮನ್ನು  ಜಪಾನಿನ ಐಸ್ ಕ್ರೀಮ್ ಬ್ರ್ಯಾಂಡ್ ಸೆಲಾಟೊ ತಯಾರಿಸಿದೆ. ತನ್ನ ವೆಬ್ಸೈಟ್ನಲ್ಲಿ, ಸೆಲಾಟೊ ಈ ಐಸ್ ಕ್ರೀಮ್ಗೆ ವೈಟ್ ನೈಟ್ ಎಂದು ಹೆಸರಿಸಿದೆ.  ಈ ಐಸ್ ಕ್ರೀಮ್ ತಯಾರಿಸಲು ಜಪಾನೀಸ್ ಮತ್ತು ಯುರೋಪಿಯನ್ ಪದಾರ್ಥಗಳನ್ನು ಬಳಸಲಾಗಿದೆ.  ಈ ಐಸ್ ಕ್ರೀಮ್  ರುಚಿ ದುಪ್ಪಟ್ಟು ಮಾಡಲು ಒಸಾಕಾ ಮೂಲದ ರಿವಿ ರೆಸ್ಟೋರೆಂಟ್ನ ಮುಖ್ಯ ಬಾಣಸಿಗ ತಡಯೋಶಿ ಯಮಡಾ ಅವರ ಸಹಾಯ ಪಡೆಯಲಾಗಿದೆ. ಪ್ರಸ್ತುತ ಈ ಐಸ್ ಕ್ರೀಮ್ ಜಪಾನ್ನಲ್ಲಿ ಮಾತ್ರ ಲಭ್ಯವಿದೆ. ಆನ್ಲೈನ್ ನಲ್ಲಿ ಆರ್ಡರ್ ಮಾಡಿದ್ರೆ ಈ ಐಸ್ ಕ್ರೀಂ ನಿಮ್ಮ ಮನೆ ತಲುಪುತ್ತದೆ. 

ಭಾರತದಲ್ಲಿ ಸುದ್ದಿ ಮಾಡ್ತಿದೆ ಈ ಐಸ್ ಕ್ರೀಂ : ಭಾರತದಲ್ಲಿ ಸದ್ಯ ಅಂಬಾನಿ ಐಸ್ ಕ್ರೀಮ್ ಚರ್ಚೆಯಲ್ಲಿದೆ. ಈ ಐಸ್ ಕ್ರೀಂಗೂ ಚಿನ್ನದ ಲೇಪನ ಇದ್ದು, ಇದ್ರ ಬೆಲೆ 1200 ರೂಪಾಯಿ. ಸೋಶಿಯಲ್ ಮೀಡಿಯಾದಲ್ಲಿ ಈ ಐಸ್ ಕ್ರೀಂ ತಯಾರಿಕೆ ವಿಧಾನ ವೈರಲ್ ಆಗಿದ್ದು, ಬೆಲೆ ನೋಡಿದ ಜನರು ಇದು ಭಾರತದ ದುಬಾರಿ ಐಸ್ ಕ್ರೀಂ ಎನ್ನುತ್ತಿದ್ದಾರೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ
ನಿಂಬೆಯಿಂದ ಮೊಟ್ಟೆ ಸಿಪ್ಪೆ ತೆಗೆಯೋದು, ಎಣ್ಣೆ ರಹಿತ ಕ್ರಿಸ್ಪಿ ಪೂರಿ.. 2025ರಲ್ಲಿ ಜನ ಮೆಚ್ಚಿದ Food Hacks