ಅಹಮದಾಬಾದ್‌ಗೆ ಭಾರತ ತಂಡಕ್ಕೆ ಚಿಯರ್ಸ್ ಹೇಳಲು ಆಗಮಿಸಿದ ಕನ್ನಡಿಗರ ಜೊತೆ ಸೋಲೋ ಟ್ರಾವೆಲರ್ ಡಾ.ಬ್ರೋ ವ್ಲಾಗ್ ಮಾಡಿದ್ದಾರೆ. ವ್ಲಾಗ್‌ನಲ್ಲಿ ಗುಜರಾತ್‌ನಲ್ಲಿ ಕ್ರಿಕೆಟ್ ವೀಕ್ಷಿಸುವುದರ ಜೊತೆಗೆ ಜನರು ಸವಿಯಬಹುದಾದ ಇಲ್ಲಿನ ಫೇಮಸ್ ತಿನಿಸುಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಹಮದಾಬಾದ್: ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತ ತಂಡವು ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಒಮ್ಮೆಯೂ ಪಾಕಿಸ್ತಾನ ಎದುರು ಮುಗ್ಗರಿಸಿಲ್ಲ. 1992ರಿಂದ 2019ರ ವರೆಗೂ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ 7 ಪಂದ್ಯಗಳನ್ನಾಡಿರುವ ಭಾರತ, ಏಳೂ ಬಾರಿ ವಿಜಯಶಾಲಿಯಾಗಿ ಹೊರಹೊಮ್ಮಿದೆ. ಈ ಸಲವೂ ಭಾರತವೇ ಗೆಲ್ಲುವ ಫೇವರಿಟ್. ಭಾರತ 8ನೇ ಜಯಕ್ಕೆ ಹಪಹಪಿಸುತ್ತಿದೆ. ಅಹಮದಾಬಾದ್‌ನಲ್ಲಿ ನಡೆಯುತ್ತಿರು ಪಂದ್ಯವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ನಗರದತ್ತ ತೆರಳುತ್ತಿದ್ದಾರೆ.
ಭಾರತ ತಂಡಕ್ಕೆ ಚಿಯರ್ಸ್ ಹೇಳಲು ಆಗಮಿಸಿದ ಕನ್ನಡಿಗರ ಜೊತೆ ಸೋಲೋ ಟ್ರಾವೆಲರ್ ಡಾ.ಬ್ರೋ ವ್ಲಾಗ್ ಮಾಡಿದ್ದಾರೆ. ಡಾ.ಬ್ರೋ ತಮ್ಮ ವ್ಲಾಗ್‌ನಲ್ಲಿ ಅಹಮದಾಬಾದ್‌ನಲ್ಲಿ ಕ್ರಿಕೆಟ್ ವೀಕ್ಷಿಸುವುದರ ಜೊತೆಗೆ ಜನರು ಸವಿಯಬಹುದಾದ ಇಲ್ಲಿನ ಫೇಮಸ್ ತಿನಿಸುಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
undefined
ICC World Cup 2023: ಭಾರತ ಎದುರು ಪಾಕ್‌ಗೆ ಟಿ20 ವಿಶ್ವಕಪ್ ಆಟ ಮರುಕಳಿಸುವ ತುಡಿತ!
ಗುಜರಾತ್‌ನ ಫೇಮಸ್ ತಿನಿಸುಗಳು
ಪಾಪಡ್: ಗುಜರಾತ್‌ನ ತುಂಬಾ ಹೆಸರುವಾಸಿ ಆಹಾರ ಪಾಪಡ್. ಇಲ್ಲಿ ಇದನ್ನು ಬ್ರೇಕ್‌ಫಾಸ್ಟ್ ಆಗಿಯೂ ಸ್ನ್ಯಾಕ್ಸ್‌ನಂತೆಯೂ ತಿನ್ನುತ್ತಾರೆ. ಈ ಪಾಪ್ಡ ಸಿಕ್ಕಾಪಟ್ಟೆ ಖಡಕ್. ಇದು ಒಂಥರಾ ಆಲ್‌ರೌಂಡರ್ . ಹಾರ್ದಿಕ್ ಪಾಂಡ್ಯ ಇದ್ದಂತೆ. ಬ್ಯಾಟ್ ಹಿಡ್ಕೊಂಡ್ರು ಅಗ್ರೆಸಿವ್. ಬೌಲಿಂಗ್ ಮಾಡಿದ್ರೂ ಅಗ್ರೆಸಿವ್ ಎಂದು ಡಾ.ಬ್ರೋ ಹೇಳಿದ್ದಾರೆ. ಪಾಪಡ್ ಚಟ್ನಿಯೊಂದಿಗೆ ಸವಿದು ಸಿಕ್ಕಾಪಟ್ಟೆ ಟೇಸ್ಟಿಯಾಗಿದೆ ಎಂದು ತಿಳಿಸಿದ್ದಾರೆ.
ಧೋಕ್ಲಾ: ಗುಜರಾತ್‌ನ ಇನ್ನೊಂದು ಫೇವರಿಟ್ ತಿನಿಸು ಧೋಕ್ಲಾ. ಸಿಕ್ಕಾಪಟ್ಟೆ ಸಾಫ್ಟ್ ಆಗಿರುವ ಈ ತಿಂಡಿಯನ್ನು ಬೆಳಗ್ಗಿನ ಉಪಾಹಾರಕ್ಕೆ ತಿನ್ನುತ್ತಾರೆ. ಧೋಕ್ಲಾ ಸಿಕ್ಕಾಪಟ್ಟೆ ಸಾಫ್ಟ್ ರವೀಂದ್ರ ಜಡೇಜಾ ಇದ್ದಂತೆ. ರವೀಂದ್ರಾ ಜಡೇಜಾ ಕೂಲ್ ಆಗಿರ್ತಾರೆ. ಬೌಲಿಂಗ್ ಮಾಡ್ತಾರೆ ಸ್ಪಿನ್ ಹಾಕ್ಬಿಡ್ತಾರೆ ಹಾಗೇನೆ ಧೋಕ್ಲಾ ಎಂದು ಡಾ.ಬ್ರೋ ಹೇಳಿದ್ದಾರೆ. ಧೋಕ್ಲಾ ಮನೆಯಲ್ಲಿ ಮಾಡೋದಾದ್ರೂ ಜಾಸ್ತಿ ಸಮಯ ಬೇಕಾಗಲ್ಲ ಎಂದಿದ್ದಾರೆ. ಧೋಕ್ಲಾ ಸವಿದು ಬಹುತ್ ಬಡಿಯಾ (ತುಂಬಾ ಚೆನ್ನಾಗಿದೆ) ಎಂದಿದ್ದಾರೆ.
ಜಿಲೇಬಿ: ಗುಜರಾತಿಗರ ಒನ್ ಆಫ್ ಫೇವರಿಟ್ ಫುಡ್ ಜಿಲೇಬಿ. ಜಿಲೇಬಿ ನೋಡಿದ್ರೆ ಯಾರೂ ಭಯ ಬೀಳಲ್ಲ. ಆದ್ರೆ ನಮ್ಮ ಬುಮ್ರಾ ಬಾಲ್ ಎತ್ತಿಕೊಂಡು ಫೀಲ್ಡ್‌ಗೆ ಬಂದ್ರೆ ಬ್ಯಾಟ್ಸ್‌ಮ್ಯಾನ್‌ಗಳು ಗಡಗಡ ಅಂತ ನಡುಗ್ತಾರೆ. ಬುಮ್ರಾ ವಿಕೆಟ್ ಮೇಲೆ ವಿಕೆಟ್ ತೆಗೀತಾರೆ. ಗೆದ್ದು ಬೀಗಲ್ಲ. ಒಂದು ಸ್ಮೆಲ್ ಕೊಟ್ಟು ಹೋಗ್ತಿರ್ತಾರೆ. ತುಂಬಾನೆ ಸ್ವೀಟ್ ಈ ಬುಮ್ರಾ ಹಾಗೆ ಎಂದು ಡಾ.ಬ್ರೋ ಹೇಳ್ತಾರೆ.
ಡಾ.ಬ್ರೋ ಪರಿಚಯ
ಅರ್ಚಕರ ಮಗನಾಗಿ ಕುಟುಂಬದಲ್ಲಿ ಹುಟ್ಟಿ, ಪೌರೋಹಿತ್ಯ ಕಲಿತು, ಪೂಜಾ ಪುನಸ್ಕಾರ ಮಾಡುತ್ತ ಜೀವನ ಸಾಗಿಸುತ್ತಿದ್ದ ಸಾಮಾನ್ಯ ಹುಡುಗನೊಬ್ಬ ಇಂದು ಯೂಟ್ಯೂಬ್ ಮೂಲಕ ಕೋಟ್ಯಂತರ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾನೆ ಎಂದರೆ ಸುಲಭದ ಮಾತಲ್ಲ. ದೇಶ-ವಿದೇಶಗಳಲ್ಲಿ ಸುತ್ತಾಡುತ್ತಾ, ಹಲವು ಸಮಯದಲ್ಲಿ ಸಾವಿನ ಭಯವನ್ನೂ ಬಿಟ್ಟು ಸಾವಿನ ಬಾಯೊಳಗೇ ಹೋಗುವ ಧೈರ್ಯ ತೋರಿಸುತ್ತಾ ಹೋದ ಕಡೆಗಳಲ್ಲೆಲ್ಲಾ ಕನ್ನಡದಲ್ಲಿಯೇ ಮಾತನಾಡುತ್ತಾ ಕನ್ನಡಿಗರ ಕಣ್ಮಣಿಯಾದವರೇ ಡಾ. ಬ್ರೋ. ಸಾಧಿಸುವ ಛಲ ಇದ್ದರೆ ಸಾಕು, ಜೀವನವನ್ನು ಹೇಗೆ ಬೇಕಾದರೂ ಸಾಗಿಸಬಹುದು ಎನ್ನುವುದಕ್ಕೆ ಈ 22ರ ಹರೆಯದ ನಮಸ್ಕಾರ ದೇವ್ರು... ಖ್ಯಾತಿಯ ಡಾ. ಬ್ರೋನೇ ಸಾಕ್ಷಿ.
ನಮಸ್ಕಾರ ದೇವ್ರು... ಎಂದರೆ ಸಾಕು. ಮೊದಲು ನೆನಪಾಗೋದೇ ಡಾ.ಬ್ರೋ (Dr. Bro). ಕನ್ನಡದ ಯುವಕನೊಬ್ಬ ಬಹುತೇಕ ಎಲ್ಲಾ ದೇಶಗಳನ್ನೂ ಸುತ್ತಿ ಅಲ್ಲಿನ ಪರಿಚಯ ಮಾಡುವ ಪರಿ ಅಂತೂ ಅತ್ಯದ್ಭುತವಾದದ್ದೆ. ಕನ್ನಡಿಗರಿಗೇ ಅಂಗೈನಲ್ಲೆ ಇಡೀ ಜಗತ್ತನ್ನೇ (World) ತೋರಿಸ್ತಿದ್ದಾರೆ ಡಾ.ಬ್ರೋ. ಯೂಟ್ಯೂಬ್ನಲ್ಲಿ ಅಲ್ಪ ಕಾಲದಲ್ಲಿಯೇ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದಿರುವ ಡಾ.ಬ್ರೋ ವಿಶೇಷತೆ ಎಂದರೆ ಯಾವ ದೇಶಕ್ಕೆ ಹೋದರೂ ಅಲ್ಲಿ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ.