ದುಬಾರಿ ದುನಿಯಾದಲ್ಲಿ ಹಣ ಉಳಿಕೆ, ಆರೋಗ್ಯದ ಆರೈಕೆ ಎರಡೂ ಸವಾಲು. ಪ್ರತಿ ದಿನ ನಾವು ಬಳಸುವ ಅಡುಗೆ ಎಣ್ಣೆ ಬಳಕೆ ವೇಳೆಯೂ ಈ ಎರಡು ಸಮಸ್ಯೆ ನಮಗೆ ಎದುರಾಗುತ್ತದೆ. ಎಣ್ಣೆಯನ್ನು ಎಷ್ಟು ಬಾರಿ ಮರು ಬಳಕೆ ಮಾಡ್ಬಹುದು, ಯಾವ ಎಣ್ಣೆ ಬೆಸ್ಟ್ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ನವರಾತ್ರಿ, ದೀಪಾವಳಿ ಹೀಗೆ ಒಂದೊಂದೇ ಹಬ್ಬ ಬರ್ತಾ ಇದೆ. ಈ ಸಮಯದಲ್ಲಿ ಅಡುಗೆ ಎಣ್ಣೆಯ ಬಳಕೆ ಹೆಚ್ಚಾಗುತ್ತದೆ. ಎಣ್ಣೆಯಲ್ಲಿ ಫ್ರೈ ಮಾಡಿದ ಖಾದ್ಯಗಳನ್ನು ತಯಾರಿಸಿ ನಾವು ಹಬ್ಬದ ಸಂಭ್ರಮವನ್ನು ಡಬಲ್ ಮಾಡ್ತೇವೆ. ಹಬ್ಬ ಬಂತೆಂದ್ರೆ ಖುಷಿ ಜೊತೆ ಖರ್ಚು ಕೂಡ ಹೆಚ್ಚಾಗುತ್ತದೆ. ಖರ್ಚು ಕಡಿಮೆ ಮಾಡಲು ಜನರು ಅಡುಗೆ ಮಾಡುವ ವೇಳೆ ಕೆಲವೊಂದು ವಿಷ್ಯಗಳಲ್ಲಿ ಎಚ್ಚರಿಕೆ ವಹಿಸುತ್ತಾರೆ. ಅದ್ರಲ್ಲಿ ಒಮ್ಮೆ ಫ್ರೈ ಮಾಡಿದ ಎಣ್ಣೆ ಕೂಡ ಸೇರಿದೆ. ನೀವು ಒಮ್ಮೆ ಹಪ್ಪಳ ಕರಿಯಲು ಎಣ್ಣೆ ಬಳಸಿರುತ್ತೀರಿ. ಅದನ್ನು ಹಾಗೆ ಎಸೆಯಲು ಮನಸ್ಸು ಬರೋದಿಲ್ಲ. ಅದೇ ಎಣ್ಣೆಯನ್ನು ಮತ್ತೆ ಬಳಸೋದು ಎಷ್ಟು ಸರಿ ಎಂಬ ಆತಂಕವಿರುತ್ತದೆ.
ಕೆಲವರು ಒಮ್ಮೆ ಬಳಸಿದ ಎಣ್ಣೆ (Oil) ಯನ್ನು ಇನ್ನೊಮ್ಮೆ ಬಳಸೋದಿಲ್ಲ. ಇದ್ರಿಂದ ಆಹಾರದ ರುಚಿ ಹಾಳಾಗುತ್ತದೆ ಎಂಬುದು ಅವರ ಅಭಿಪ್ರಾಯ. ಮತ್ತೆ ಕೆಲವರು ಇದ್ರಿಂದ ಆರೋಗ್ಯ (health ) ಹಾಳಾಗುತ್ತದೆ ಎನ್ನುವ ಕಾರಣಕ್ಕೆ ಆ ಎಣ್ಣೆಯನ್ನು ಎಸೆಯುತ್ತಾರೆ. ಇನ್ನು ಕೆಲವರು ಒಂದೇ ಎಣ್ಣೆಯನ್ನು ಹತ್ತಾರು ಬಾರಿ ಬಳಕೆ ಮಾಡ್ತಾರೆ. ಇದ್ರಲ್ಲಿ ಯಾವುದು ಸರಿ ಎನ್ನುವ ಪ್ರಶ್ನೆ ಕಾಡೋದು ಸಹಜ. ಕರಿದ ಎಣ್ಣೆಯನ್ನು ಎಷ್ಟು ಬಾರಿ ಬಳಸಿದ್ರೆ ಸುರಕ್ಷಿತ ಹಾಗೂ ಅದರ ಮರುಬಳಕೆ ಹೇಗೆ ಎಂಬುದನ್ನು ನಾವಿಂದು ಹೇಳ್ತೇವೆ.
undefined
ಹೆಸರು ಒಂದೇ ಆದ್ರೂ ಬೇರೆ ಬೇರೆ ಟೇಸ್ಟ್ ನೀಡುವ ಬಿರಿಯಾನಿ ಸ್ಪೆಷಲ್ ಏನು?
ಎಣ್ಣೆಯ ಮರುಬಳಕೆ (Recycling) ಯಿಂದ ಆರೋಗ್ಯ ಹದಗೆಡುತ್ತಾ? : ಒಂದು ಬಾರಿ ಬಳಸಿದ ಎಣ್ಣೆಯನ್ನು ಮತ್ತೆ ಬಳಸಬಹುದಾ ಎಂಬ ನಿಮ್ಮ ಪ್ರಶ್ನೆಗೆ ತಜ್ಞರು ಹೌದು ಎನ್ನುತ್ತಾರೆ. ಎಣ್ಣೆಯಲ್ಲಿ ಕೊಬ್ಬಿರುತ್ತದೆ. ಅದನ್ನು ಅತಿಯಾಗಿ ಬಿಸಿ ಮಾಡಿದಾಗ ಅದು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ಎಣ್ಣೆಯನ್ನು ಮರುಬಳಕೆ ಮಾಡಬಾರದು ಎನ್ನುವ ತಜ್ಞರು, ಈ ನಿಯಮ ರೆಸ್ಟೋರೆಂಟ್ ಗೆ ಅನ್ವಯವಾಗುತ್ತದೆ ಎಂದಿದ್ದಾರೆ. ಹೊಟೇಲ್, ರೆಸ್ಟೋರೆಂಟ್ ಗಳಲ್ಲಿ ಎಣ್ಣೆಯನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಬಿಸಿ ಮಾಡಲಾಗುತ್ತದೆ. ಹಾಗೆ ಬಿಸಿ ಮಾಡಿದಾಗ ಮಾತ್ರ ಎಣ್ಣೆ ಆರೋಗ್ಯಕ್ಕೆ ಹಾನಿಕರ. ಆ ಎಣ್ಣೆಯನ್ನು ಮರುಬಳಕೆ ಮಾಡಿದ್ರೆ ಒಳ್ಳೆಯದಲ್ಲ. ಅದೇ ಮನೆಯಲ್ಲಿ ಎಣ್ಣೆಯನ್ನು ಕಡಿಮೆ ಪ್ರಮಾಣದಲ್ಲಿ ಬಿಸಿ ಮಾಡಲಾಗುತ್ತದೆ. ಹಾಗಾಗಿ ಆ ಎಣ್ಣೆಯನ್ನು ಮತ್ತೆ ಇನ್ನೊಮ್ಮೆ ಬಳಸಬಹುದು ಎನ್ನುತ್ತಾರೆ ತಜ್ಞರು. ಮನೆಯಲ್ಲಿ ಎಣ್ಣೆಯನ್ನು ಎಷ್ಟು ಬಾರಿ ಬಳಸಬಹುದು : ಮನೆಯಲ್ಲಿ ನೀವು ಪುರಿ, ಬಜ್ಜಿ, ಪಕೋಡಾ ಮಾಡಿದ ಎಣ್ಣೆಯನ್ನು ಮೂರರಿಂದ ನಾಲ್ಕು ಬಾರಿ ಮರುಬಳಕೆ ಮಾಡಬಹುದು. ಆದ್ರೆ ಇಲ್ಲಿ ನೀವು ಎಣ್ಣೆಯನ್ನು ಹೇಗೆ ಸಂಗ್ರಹಿಸಿದ್ದೀರಿ ಎಂಬುದು ಮುಖ್ಯವಾಗುತ್ತದೆ.
Health Tips: ಪೌಷ್ಟಿಕ ರೊಟ್ಟಿ ಆರೋಗ್ಯ ಹಾಳು ಮಾಡೋದ್ಯಾವಾಗ?
ಎಣ್ಣೆಯನ್ನು ಶೇಖರಿಸಿಡೋದು ಹೇಗೆ? : ನೀವು ಒಮ್ಮೆ ಕರಿದ ಎಣ್ಣೆಯನ್ನು ಸೋಸಿ, ಶುದ್ಧವಾದ್ರ ಪಾತ್ರೆಯಲ್ಲಿ ಹಾಕಿ ಮುಚ್ಚಿಡಬೇಕಾಗುತ್ತದೆ. ಎಣ್ಣೆ ಬಿಸಿಯಾಗಿರುವಾಗ್ಲೇ ಜಾರಿಗೆ ಹಾಕಬೇಡಿ. ಮೊದಲು ಎಣ್ಣೆ ತಣ್ಣಗಾಗಲು ಬಿಡಿ. ನಂತ್ರ ಅದನ್ನು ಚೆನ್ನಾಗಿ ಸೋಸಿ. ಯಾಕೆಂದ್ರೆ ನೀವು ಈಗಾಗಲೇ ಮಾಡಿದ ಖಾದ್ಯದ ಕಣಗಳು ಎಣ್ಣೆಯಲ್ಲಿರುತ್ತವೆ. ನೀವು ಎಣ್ಣೆಯನ್ನು ಸೋಸಲು ಶುದ್ಧವಾದ ಬಟ್ಟೆಯನ್ನು ಕೂಡ ಬಳಸಬಹುದು. ಎಣ್ಣೆಯನ್ನು ಸೋಸಿದ ಮೇಲೆ ಅದನ್ನು ಗಾಳಿಯಾಡದ ಜಾರ್ ನಲ್ಲಿ ಹಾಕಿ ಇಡಬೇಕು. ಎಣ್ಣೆಗೆ ಗಾಳಿ ಹಾಗೂ ಧೂಳು ಸೇರುವುದಿಲ್ಲ. ಆಗ ನೀವು ಎಣ್ಣೆಯ ಗುಣಮಟ್ಟವನ್ನು ಕಾಯ್ದುಕೊಳ್ಳಬಹುದು.
ಯಾವ ಎಣ್ಣೆ ಇದಕ್ಕೆ ಒಳ್ಳೆಯದು : ತಜ್ಞರ ಪ್ರಕಾರ, ಖಾದ್ಯಗಳನ್ನು ಫ್ರೈ ಮಾಡಲು, ನೀವು ಕೆನೊಲಾ, ಆವಕಾಡೊ, ಎಳ್ಳು, ಸೂರ್ಯಕಾಂತಿಗಳಂತಹ ಎಣ್ಣೆಯನ್ನು ಬಳಸುವುದು ಒಳ್ಳೆಯದು. ಆಲಿವ್ ಆಯಿಲ್ ಉತ್ತಮ ಆಯ್ಕೆಯಾಗಿದೆ.