60 ವರ್ಷಗಳ ಹಿಂದೆ ಅಜ್ಜಿ ಕಾಲೆಳಿತಿದ್ದೆ ಈಗ ಆಕೆಯಂತೆ ನಾ ಆಡುವೆ: ಸುಧಾಮೂರ್ತಿ

By Anusha KbFirst Published Jul 24, 2023, 2:44 PM IST
Highlights

ಸುಧಾಮೂರ್ತಿ ಇತ್ತೀಚೆಗೆ ಖ್ಯಾತ ಆಹಾರ ಬ್ಲಾಗರ್ ಕುನಾಲ್ ವಿಜಯಂಕರ್ ನಡೆಸಿಕೊಡುವ ಶೋ ' ಖಾನೆ ಮೇ ಕೌನ್ ಹೈ?' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಆಹಾರದ ಬಗ್ಗೆ ತಮ್ಮ ನಿಲುವು ಹಾಗೂ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. 

ಬೆಂಗಳೂರು: ಲೇಖಕಿ, ಕೊಡುಗೈ ದಾನಿ ಇನ್‌ಫೋಸಿಸ್ ಪ್ರತಿಷ್ಠಾನದ ಸ್ಥಾಪಕಿ ಸುಧಾಮೂರ್ತಿ ಎಂದರೆ ಬಹಳ ಜನರಿಗೆ ಇಷ್ಟ, ಅವರ ಸರಳತೆ ಹಾಗೂ ಜೀವನದ ಅನುಭವಗಳನ್ನು ಅವರು ಹಲವು ಕಾರ್ಯಕ್ರಮಗಳಲ್ಲಿ ಸಂದರ್ಶನಗಳಲ್ಲಿ ಅನೇಕ ಬಾರಿ ಹೇಳಿದ್ದು, ಅನೇಕರ ಪಾಲಿಗೆ ಅವರು ಸ್ಪೂರ್ತಿಯಾಗಿದ್ದಾರೆ. ಅವರು ಇತ್ತೀಚೆಗೆ ಖ್ಯಾತ ಆಹಾರ ಬ್ಲಾಗರ್ ಕುನಾಲ್ ವಿಜಯಂಕರ್ ನಡೆಸಿಕೊಡುವ ಶೋ ' ಖಾನೆ ಮೇ ಕೌನ್ ಹೈ?' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಆಹಾರದ ಬಗ್ಗೆ ತಮ್ಮ ನಿಲುವು ಹಾಗೂ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. 

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸುಧಾಮೂರ್ತಿ, ತಾವು ಶುದ್ಧ ಸಸ್ಯಹಾರಿಯಾಗಿರುವ ಕಾರಣ ವಿದೇಶಗಳಿಗೆ ಪ್ರಯಾಣಿಸುವಾಗ ತಮ್ಮದೇ ಆದ ಆಹಾರವನ್ನು ತೆಗೆದುಕೊಂಡು ಹೋಗುವುದಾಗಿ ಹೇಳಿದ್ದಾರೆ. ತಾನು ಸಸ್ಯಹಾರಿಯಾಗಿರುವುದರಿಂದ ಆ ವಿಚಾರದಲ್ಲಿ ಯಾವುದೇ ತೊಂದರೆ ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ. ತಾನು ಕೆಲಸದ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳಲು ಬಯಸುವೇ ಆದರೆ ಆಹಾರದ ವಿಚಾರದಲ್ಲಿ ಇಲ್ಲವೇ ಇಲ್ಲ ಎಂದು ಹೇಳಿದ್ದಾರೆ. 

Latest Videos

43 ವರ್ಷಗಳ ಹಿಂದಾದ ಆ ಘಟನೆ ಸುಧಾಮೂರ್ತಿ, ನಾರಾಯಣ ಮೂರ್ತಿ ಬದುಕನ್ನೇ ಬದಲಿಸಿತು!

ವಿದೇಶಗಳಲ್ಲಿ ಬಹುತೇಕ ಮಾಂಸಹಾರವೇ ಹೆಚ್ಚು ಎಲ್ಲೂ ಸಸ್ಯಹಾರಕ್ಕೆ ಅವಕಾಶ ಇಲ್ಲ,  ಸಸ್ಯಾಹಾರದ ಆಯ್ಕೆಗಳು ವಿದೇಶದಲ್ಲಿ ತೀರಾ ಕಡಿಮೆ ಹೀಗಾಗಿ ಸುಧಾಮೂರ್ತಿಯವರಿಗೆ ವಿದೇಶಕ್ಕೆ ಭೇಟಿ ನೀಡಿದಾಗ ಆಹಾರದ ಶೈಲಿ ಯಾವ ರೀತಿಯದ್ದು ಎಂದು ಫುಡ್ ಬ್ಲಾಗರ್ ಕೇಳಿದ್ದು, ಈ ವೇಳೆ ಪ್ರತಿಕ್ರಿಯಿಸಿದ ಸುಧಾಮೂರ್ತಿ ತಾನು ಶುದ್ಧ ಸಸ್ಯಾಹಾರಿಯಾಗಿರುವುದರಿಂದ ವಿದೇಶಕ್ಕೆ ತೆರಳುವಾಗ ನನ್ನದೇ ಆಹಾರದ ಚೀಲವನ್ನು ತೆಗೆದುಕೊಂಡು ಹೋಗುತ್ತೇನೆ.  ನಾನು ಆಹಾರದ ವಿಷಯದಲ್ಲಿ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ, ಮಾಂಸಹಾರಕ್ಕೆ ಬಳಸಿದ ಸೌಟ್‌(Spoon) ಗಳನ್ನೇ ಸಸ್ಯಾಹಾರಿ ತಿನಿಸುಗಳ ತಯಾರಿಗೆ ಅಥವಾ ಬಡಿಸಲು ಬಳಸುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ ಇದೇ ಕಾರಣಕ್ಕೆ ತಾನು ಈ ವಿಚಾರದಲ್ಲಿ ಯಾವುದೇ ತೊಂದರೆ ತೆಗೆದುಕೊಳ್ಳಲು ಹೋಗುವುದಿಲ್ಲ ಎಂದು ಹೇಳಿದ್ದಾರೆ. 

ನಾನು ನನ್ನ ಕೆಲಸ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳುವೆ ಆದರೆ ಆಹಾರದ ವಿಚಾರದಲ್ಲಿ ಸಾಧ್ಯವೇ ಇಲ್ಲ, ನಾನು ವಾಸ್ತವವಾಗಿ ವಿದೇಶದಲ್ಲಿ ಆಹಾರ ಪ್ರಯತ್ನಿಸುವ ಬಗ್ಗೆ ಹೆದರುತ್ತಿದ್ದೇನೆ. ನಾನು ಶುದ್ಧ ಸಸ್ಯಾಹಾರಿ, ನಾನು ಮೊಟ್ಟೆ ಅಥವಾ ಬೆಳ್ಳುಳ್ಳಿಯನ್ನು ಸಹ ತಿನ್ನುವುದಿಲ್ಲ. ವಿದೇಶದಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರ ಎರಡಕ್ಕೂ ಒಂದೇ ಚಮಚವನ್ನು ಬಳಸುವ ಸಾಧ್ಯತೆ ಇರುತ್ತದೆ.  ಇದು ನನ್ನ ಮನಸ್ಸಿನ ಮೇಲೆ ತುಂಬಾ ಪ್ರಭಾವ ಬೀರಿದೆ. ಆದ್ದರಿಂದ ನಾವು ಹೊರಗೆ ಅಥವಾ ವಿದೇಶಕ್ಕೆ ಹೋದಾಗ, ಸಸ್ಯಹಾರಿ ರೆಸ್ಟೋರೆಂಟ್‌ಗಳನ್ನೇ ಹುಡುಕುತ್ತೇನೆ. ಅಥವಾ ನಾನು ಒಂದು ಚೀಲ ತುಂಬ ತಿನ್ನಬಹುದಾದಂತಹ ಪದಾರ್ಥಗಳನ್ನೇ ಒಯ್ಯುತ್ತೇನೆ. ಅಥವಾ ತಿನ್ನಲು ರೆಡಿ ಇರುವಂತಹ ಪೋಹಾ ಮುಂತಾದ ಗೆಟ್ ರೆಡಿ ತಿನಿಸುಗಳನ್ನು ಒಯ್ಯುತ್ತೇನೆ. ಇವುಗಳಿಗೆ ಕೇವಲ ನೀರು ಬಿಸಿ ಮಾಡಿದರೆ ಸಾಕಾಗುತ್ತದೆ ಎಂದು ಸುಧಾಮೂರ್ತಿ ಅಳಲು ತೋಡಿಕೊಂಡಿದ್ದಾರೆ. 

ಸ್ಟಾರ್ ಹೊಟೇಲಲ್ಲಿ ಬರ್ತ್ ಡೇ ಪಾರ್ಟಿ ಮಾಡಬೇಕೆಂದ ಮಗನಿಗೆ ಸುಧಾಮೂರ್ತಿ ಹೇಳಿದ ಪಾಠ!

ಅಲ್ಲದೇ ತನ್ನ ಬಳಿ ಅಡುಗೆ ಉಪಕರಣಗಳ ಬ್ಯಾಗ್ ಇದ್ದು, ಅದರಲ್ಲಿ ಸಣ್ಣ ಕುಕ್ಕರ್ ಜೊತೆಗೆ ಇರುತ್ತದೆ ಎಂದು ಸುಧಾ ಮೂರ್ತಿ ಹೇಳಿದ್ದಾರೆ.  ಆದರೆ ಒಂದು ಕಾಲದಲ್ಲಿ ಹೊರಗಡೆ ಆಹಾರ ತಿನ್ನಲು ಹೇಸುತ್ತಿದ್ದ ತನ್ನಜ್ಜಿಯ ಬಗ್ಗೆ ಸದಾ ಕಾಲೆಳೆಯುತ್ತಿದ್ದಿದ್ದನ್ನು ಪ್ರಸ್ತುತ ನೆನಪಿಸಿಕೊಂಡ ಸುಧಾಮೂರ್ತಿ, ಈಗ ತಾನು ಆಕೆಯಂತೆಯೇ ಮಾಡಲು ಶುರು ಮಾಡಿದ್ದು ಮಾತ್ರ ವಿಪರ್ಯಾಸವೆಂದು ಹೇಳಿಕೊಂಡಿದ್ದಾರೆ. 

60 ವರ್ಷಗಳ ಹಿಂದೆ ನನ್ನ ಅಜ್ಜಿದೂರ ಪ್ರಯಾಣ ಮಾಡುವ ವೇಳೆ ಆಕೆ ಜೊತೆಯಲ್ಲಿ ಆಹಾರವನ್ನು ತೆಗೆದುಕೊಂಡು ಹೋಗುತ್ತಿದ್ದಳು. ಆಗ ಯಾಕಜ್ಜಿ ನೀ ಹೊರಗೆ ಆಹಾರ ತಿನ್ನಂಗಿಲ್ಲ ಏನು ಎಂದು ಆಕೆಯನ್ನು ರೇಗಿಸುತ್ತಿದ್ದೆ. ಆದರೆ ತನಗೆ ಹೊರಗೆ ತಿಂದು ಅಭ್ಯಾಸವಿಲ್ಲ ಎಂದು ಅಜ್ಜಿ ಹೇಳುತ್ತಿದ್ದಳು. ಆದರೆ ವಿಪರ್ಯಾಸವೆಂದರೆ ಇಂದು ನಾನು ಆಕೆಯಂತೇ ಮಾಡುತ್ತಿದ್ದೇನೆ. ನಾನು ಬೇರೆ ದೇಶಕ್ಕೆ ಹೋಗುವುದಿದ್ದರೂ ಸರಿ ನನ್ನದೇ ಆಹಾರದ ಚೀಲವನ್ನು ತೆಗೆದುಕೊಂಡು ಹೋಗುವೆ ಎಂದು ಸುಧಾಮೂರ್ತಿ ಹೇಳಿಕೊಂಡಿದ್ದಾರೆ. 

click me!