Gold coated Dosa: ವಾವ್ಹ್..ಮಿರಿಮಿರಿ ಮಿನುಗೋ ಚಿನ್ನದ ದೋಸೆ, ಬೆಲೆ ಕೇಳಿದ್ರೆ ದಂಗಾಗ್ತೀರಾ!

By Vinutha Perla  |  First Published Feb 25, 2023, 3:52 PM IST

ಅಬ್ಬಬ್ಬಾ ಅಂದ್ರೆ ನೀವು ಒಂದ್ ದೋಸೆಗೆ ಎಷ್ಟ್‌ ರೂಪಾಯಿ ಕೊಡೋಕೆ ರೆಡಿಯಿರ್ತೀರಾ ಹೇಳಿ, ಮೂವತ್ತರಿಂದ ಐವತ್ತು ರೂಪಾಯಿ ಅಲ್ವಾ..ಇನ್ನೂ ಸ್ವಲ್ಪ ಸ್ಪೆಷಲ್ ದೋಸೆ ನೂರರಿಂದ ಇನ್ನೂರು ಕೊಡ್ಬೋದಪ್ಪಾ.. ಆದ್ರೆ ಈ ದೋಸೆಗೆ ಭರ್ತಿ ಸಾವಿರ ರೂ. ಅದ್ಯಾಕೆ ಅಂತೀರಾ? ಈ ಸ್ಟೋರಿ ಓದಿ.


ಭಾರತೀಯರು ಸ್ವಭಾತಹಃ ಆಹಾರ ಪ್ರಿಯರು. ಹಾಗಾಗಿ ಇಲ್ಲಿ ವೆರೈಟಿ ವೆರೈಟಿ ಆಹಾರವನ್ನು ನೋಡಬಹುದು. ಫುಡ್ಡೀಸ್ ಅಂತೂ ಇಂಥಾ ಆಹಾರವನ್ನು ಟೇಸ್ಟ್ ಮಾಡೋಕೆ ಕಾಯ್ತಿರ್ತಾರೆ. ರೆಸ್ಟೋರೆಂಟ್‌ಗಳು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಹೊಸ ಹೊಸ ಎಕ್ಸ್‌ಪರಿಮೆಂಟ್ ಮಾಡುತ್ತಲೇ ಇರ್ತವೆ. ಒಂದು ಫುಡ್‌ನ್ನು ಇನ್ನೊಂದರ ಜೊತೆ ಮಿಕ್ಸ್ ಮಾಡುವುದು, ವಿಚಿತ್ರ ಫುಡ್ ಕಾಂಬಿನೇಷನ್‌ಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಅದೇ ರೀತಿ ಇತ್ತೀಚಿನ ಕೆಲ ತಿಂಗಳಿನಿಂದ ಗೋಲ್ಡ್‌ ಕೋಟೆಡ್‌ ಆಹಾರಗಳು ವೈರಲ್‌ ಆಗುತ್ತಿವೆ. ಈಗಾಗ್ಲೇ ಹಲವರು ಚಿನ್ನದ ಲೇಪಿತ ಆಹಾರ ಪದಾರ್ಥಗಳ ವೀಡಿಯೊಗಳನ್ನು ನೋಡಿದ್ದೇವೆ. ಕೆಲವರು ಈ ಕಲ್ಪನೆಯನ್ನು ಆಕರ್ಷಕವಾಗಿ ಕಂಡುಕೊಂಡರೆ, ಇತರರು ಇದು ಭಕ್ಷ್ಯದ ರುಚಿ ಹಾಳು ಮಾಡುತ್ತದೆ ಎಂದು ಹೇಳುತ್ತಾರೆ.

ಚಿನ್ನದ (Gold) ಮೇಲೆ ಜನರಿಗಿರುವ ಮೋಹ ಇವತ್ತು ನಿನ್ನೆಯದ್ದಲ್ಲ. ಕಿವಿಯೋಲೆ, ಸರ, ನೆಕ್ಲೇಸ್, ಬ್ರೇಸ್ ಲೆಟ್ ಅಂತ ತರಹೇವಾರಿ ಚಿನ್ನದೊಡವೆಗಳನ್ನು ಮಾಡಿ ಹಾಕಿಕೊಳ್ತಾರೆ. ಆಗರ್ಭ ಶ್ರೀಮಂತರು ಚಿನ್ನದ ಬಟ್ಟಲು, ಲೋಟವನ್ನೂ ಬಳಸುತ್ತಾರೆ. ಮನೆಯಲ್ಲಿಯೇ ಚಿನ್ನದ ದೇವರ ಮೂರ್ತಿ, ದೇವರನ್ನೂ ಇಟ್ಟುಕೊಳ್ಳುತ್ತಾರೆ. ಮನುಷ್ಯನಿಗೂ ಹಳದಿ ಲೋಹಕ್ಕೂ ಇರುವ ನಂಟು ಅಂಥದ್ದೇ. ಆದ್ರೆ ತಿನ್ನೋ ಆಹಾರಕ್ಕೂ (Food) ಚಿನ್ನ ಸೇರಿಸೋದು ಅಂದ್ರೆ ಎಷ್ಟು ವಿಚಿತ್ರ ಅಲ್ವಾ ?

Tap to resize

Latest Videos

ಈ ಆಹಾರಗಳ ಬೆಲೆ ಕೇಳಿದ್ರೆ ತಿನ್ನೋದಾ? ಲಾಕರ್ ನಲ್ಲಿಡೋದ? ಅನ್ಸೋದು ಗ್ಯಾರಂಟಿ

24 ಕ್ಯಾರೆಟ್ ಚಿನ್ನದಿಂದ ತಯಾರಿಸಿರುವ ಗೋಲ್ಡನ್ ದೋಸೆ
ಸದ್ಯ ತೆಲಂಗಾಣದ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ಹೌಸ್ ಆಫ್ ದೋಸಾಸ್ ಹೆಸರಿನ ರೆಸ್ಟೋರೆಂಟ್ ಅತ್ಯಂತ ದುಬಾರಿ (Costly) ದೋಸೆಯನ್ನು ನೀಡುತ್ತಿದೆ. ದೋಸೆಯನ್ನು 24 ಕ್ಯಾರೆಟ್ ಚಿನ್ನದಿಂದ ಲೇಪಿಸಲಾಗಿದೆ. ಕೇವಲ 30ರಿಂದ 150 ರೂಪಾಯಿ ಬೆಲೆಯ ದೋಸೆ ಬೆಲೆ ಇಲ್ಲಿ ಸಿಕ್ಕಾಪಟ್ಟೆ ಕಾಸ್ಟ್ಲೀ. ಯಾಕೆಂದರೆ ಇದು ಗೋಲ್ಡನ್ ದೋಸೆ. ಬೆಲೆ ಭರ್ತಿ 1000 ರೂ.

ಈ ದೋಸೆಯನ್ನು ತಯಾರಿಸುವ ರೀತಿಯೂ ತುಂಬಾ ವಿಶಿಷ್ಟವಾಗಿದೆ. ದೋಸೆಯ ಮೇಲೆ ತುಪ್ಪದಂತೆ ಶುದ್ಧ ಚಿನ್ನವನ್ನು ಲೇಪಿಸಲಾಗುತ್ತದೆ. ಚಿನ್ನದ ಲೇಪಿತ ದೋಸೆಯನ್ನು ಹುರಿದ ಗೋಡಂಬಿ, ಬಾದಾಮಿ, ಶುದ್ಧ ತುಪ್ಪ, ಹುರಿದ ಕಡಲೆಕಾಯಿ ಮತ್ತು ಹುರಿದ ಚನ್ನಾ ದಾಲ್‌ನಿಂದ ಮಾಡಿದ ಚಟ್ನಿಗಳ ಜೊತೆ ಸರ್ವ್ ಮಾಡಲಾಗುತ್ತದೆ. ದೋಸೆ ದುಬಾರಿಯಾಗಿದ್ದರೂ, ಗ್ರಾಹಕರು (Customers) ಚಿನ್ನದ ಲೇಪಿತ ವಿಶಿಷ್ಟ ದೋಸೆಯನ್ನು ಟ್ರೈ ಮಾಡಲು ಉತ್ಸುಕರಾಗಿದ್ದಾರೆ. ಈ ರೆಸ್ಟೋರೆಂಟ್ ದಿನಕ್ಕೆ ಕನಿಷ್ಠ ಆರರಿಂದ ಎಂಟು ದೋಸೆಗಳನ್ನು ಮಾರಾಟ (Sale) ಮಾಡುತ್ತದೆ ಎಂದು ತಿಳಿದುಬಂದಿದೆ.

 
 
 
 
 
 
 
 
 
 
 
 
 
 
 

A post shared by @positive_mantra8

ಈ ಹಿಂದೆ, ನ್ಯೂಯಾರ್ಕ್‌ನ ರೆಸ್ಟೋರೆಂಟ್ ವಿಶ್ವದ ಅತ್ಯಂತ ದುಬಾರಿ ಫ್ರೆಂಚ್ ಫ್ರೈಗಳೊಂದಿಗೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರಿತ್ತು. ಡೊಮ್ ಪೆರಿಗ್ನಾನ್ ಶಾಂಪೇನ್, ಫ್ರಾನ್ಸ್‌ನ ಶುದ್ಧ ಕೇಜ್-ಫ್ರೀ ಗೂಸ್ ಕೊಬ್ಬು ಮತ್ತು ಜೆ. ಲೆಬ್ಲಾಂಕ್ ಫ್ರೆಂಚ್ ಶಾಂಪೇನ್ ಆರ್ಡೆನ್ನೆ ವಿನೆಗರ್‌ನಂತಹ ದುಬಾರಿ ಪದಾರ್ಥಗಳನ್ನು ಬಳಸಿ ಭಕ್ಷ್ಯವನ್ನು ತಯಾರಿಸಲಾಗಿತ್ತು. ಇದನ್ನು ಚಿನ್ನದ ಧೂಳಿನಿಂದ ಅಲಂಕರಿಸಿದ್ದು ಖಾದ್ಯದ ಬೆಲೆ ರೂ 16.5k ಆಗಿದ್ದು, ಎಲ್ಲರಲ್ಲಿ ಅಚ್ಚರಿ ಮೂಡಿಸಿತ್ತು.

ಗೋಲ್ಡ್‌ ಪ್ಲೇಟೆಡ್‌ ಮಿಠಾಯಿ, ಒಂದು ಕೆಜಿ ಸ್ವೀಟ್ಸ್ ಬೆಲೆ ಬರೋಬ್ಬರಿ 16,000 ರೂ. !
ಸ್ವೀಟ್ಸ್ ಗೆ ಕೆಜಿಗೆ 500 ರೂ, 1000 ರೂ. ಇರೋದು ನೀವು ಕೇಳಿರ್ಬೋದು. ಆದ್ರೆ ದೆಹಲಿಯಲ್ಲಿ ಸಿಗ್ತಿರೋ ಈ ಸ್ಪೆಷಲ್ ಸ್ವೀಟ್ಸ್ ಬೆಲೆ ಕೆಜಿಗೆ ಭರ್ತಿ 16,000 ರೂ. ನಂಬೋಕೆ ಕಷ್ಟ ಆದ್ರೂ ಇದು ನಿಜ. ದೆಹಲಿಯ ಮೌಜ್‌ಪುರದ ಶಗುನ್ ಸ್ವೀಟ್ಸ್ ಸ್ಟಾಲ್‌ನಲ್ಲಿ ಈ ಸಿಹಿ ಮಿಠಾಯಿಗಳು ಸಿಗುತ್ತವೆ. .ಇನ್‌ಸ್ಟಾಗ್ರಾಮ್‌ನಲ್ಲಿ ದೆಹಲಿಯ ಮೌಜ್‌ಪುರದ ಶಗುನ್ ಸ್ವೀಟ್ಸ್ ಅನ್ನು ಉಲ್ಲೇಖಿಸಿ ಮಾಡಿರುವ ವೀಡಿಯೋದಲ್ಲಿ ಈ ಸ್ಪೆಷಲ್ ಸ್ವೀಟ್ಸ್ ಬಗ್ಗೆ ಹೇಳಲಾಗಿದೆ. ಶಗುನ್ ಸ್ವೀಟ್ಸ್ ಸ್ಟಾಲ್‌ನಲ್ಲಿ ಚಿನ್ನದ ಲೇಪಿತ ಮಿಠಾಯಿಯನ್ನು ಕೆಜಿಗೆ 16000 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಫುಡ್ ಬ್ಲಾಗರ್ (Food Blogger) ಅರ್ಜುನ್ ಚೌಹಾಣ್ ಇನ್ ಸ್ಟಾಗ್ರಾಂನಲ್ಲಿ ಈ ಪೋಸ್ಟ್ ಮಾಡಿದ್ದು, ಕಾಸ್ಟ್ಲೀ ಸ್ವೀಟ್ಸ್ ವೀಡಿಯೋಗೆ 11 ಮಿಲಿಯನ್ ವೀಕ್ಷಣೆಗಳು, 5 ಲಕ್ಷ ಲೈಕ್‌ಗಳು ಮತ್ತು ಸಾವಿರಾರು ಕಾಮೆಂಟ್‌ಗಳನ್ನು ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಬೆಲೆಬಾಳುವ ಸ್ವೀಟ್ಸ್ ವೀಡಿಯೋ ಫುಲ್ ವೈರಲ್ ಆಗುತ್ತಿದೆ.

click me!