Food Tips : ಮೊಸರು ತಯಾರಿಸೋಕೆ ಹಾಲಿದ್ರೆ ಸಾಲಲ್ಲ.. ಈ ಟಿಪ್ಸ್ ನೆನಪಿರಲಿ

By Suvarna News  |  First Published Feb 25, 2023, 3:42 PM IST

ಸಿಹಿಯಾದ, ದಪ್ಪ ಮೊಸರನ್ನು ಯಾರು ಬಿಡ್ತಾರೆ? ಮಕ್ಕಳಿಂದ ಹಿರಿಯರವರೆಗೆ ಎಲ್ಲರಿಗೂ ಮೊಸರಿಷ್ಟ. ಆದ್ರೆ ಎಷ್ಟೇ ಪ್ರಯತ್ನಪಟ್ಟರೂ ಮೊಸರು ಸಹಿಯಾಗೋದಿಲ್ಲ, ಸರಿ ಹೆಪ್ಪಾಗೋದಿಲ್ಲ ಎಂಬುದನ್ನು ನೀವು ಕೇಳಿರ್ಬಹುದು. ಅದಕ್ಕೆ ಪರಿಹಾರ ಇಲ್ಲಿದೆ. 
 


ಬೇಸಿಗೆ ಶುರುವಾಗ್ತಿದೆ. ತಣ್ಣನೆ ಆಹಾರ ಸೇವಿಸಲು ಮನಸ್ಸಾಗ್ತಿರುತ್ತದೆ. ಇದ್ರಲ್ಲಿ ಮೊಸರು ಕೂಡ ಒಂದು. ಸ್ವಲ್ಪ ಮೊಸರು ಹೊಟ್ಟೆಗೆ ಹೋದ್ರೂ ತಣ್ಣನೆಯ ಅನುಭವ. ಕುದಿಯುತ್ತಿರುವ ದೇಹ ರಿಲ್ಯಾಕ್ಸ್ ಆಗುತ್ತದೆ. ಮೊಸರು ಆರೋಗ್ಯಕ್ಕೆ ಒಳ್ಳೆಯದು. ಮೊಸರಿನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೊಟೀನ್ ಸಮೃದ್ಧವಾಗಿದೆ. ಮೊಸರು (Curd) ಮಾಡೋದು ತುಂಬಾ ಸುಲಭ. ಆದ್ರೆ ಕೆಲವರಿಗೆ ಮೊಸರು ತಯಾರಿಸುವ ಸರಿಯಾದ ವಿಧಾನ ಗೊತ್ತಿರೋದಿಲ್ಲ. ಹಾಗಾಗಿ ಸರಿಯಾಗಿ ಹಾಲ (Milk) ನ್ನು ಹೆಪ್ಪು ಹಾಕದೆ ಹಾಳು ಮಾಡ್ತಾರೆ. ಇನ್ನು ಕೆಲವರು ಆ ಗೋಜೆ ಬೇಡ ಎಂದು ಮಾರುಕಟ್ಟೆಯಲ್ಲಿ ಸಿಗುವ ಪಾಕೆಟ್ (Pocket) ಮೊಸರು ಖರೀದಿ ಮಾಡ್ತಾರೆ. ಈ ಮೊಸರು ನೀವು ಮನೆಯಲ್ಲಿ ತಯಾರಿಸಿದಷ್ಟು ರುಚಿ ಇರೋದಿಲ್ಲ. ನೀವು ಮನೆಯಲ್ಲಿಯೇ ಸುಲಭವಾಗಿ ಮೊಸರು ತಯಾರಿಸಬಹುದು. 

ಮೊಸರು ತಯಾರಿಸಲು ಬೇಕಾಗಿರೋದು ಹಾಲು, ಸ್ವಲ್ಪ ಮೊಸರು ಹಾಗೂ ಪಾತ್ರೆ. ಆದ್ರೆ ನೀವು ಹಾಲನ್ನು ಎಷ್ಟು ಕುದಿಸುತ್ತೀರಿ, ಯಾವ ಪಾತ್ರೆಯಲ್ಲಿ ಹಾಲನ್ನು ಹೆಪ್ಪಾಗಲು ಇಡ್ತೀರಿ ಎಂಬುದು ಮುಖ್ಯವಾಗುತ್ತದೆ. ಕೆಲ ವಿಧಾನಗಳನ್ನು ನೀವು ಅನುಸರಿಸಿ ಹಾಲು ಹಪ್ಪು ಹಾಕಿದ್ರೆ ಮೊಸರು ಎರಡು ಮೂರು ದಿನ ಹುಳಿಯಾಗೋದಿಲ್ಲ. ನಾವಿಂದು ರುಚಿಯಾದ ಮೊಸರು ತಯಾರಿಸಲು ಕೆಲ ವಿಧಾನಗಳನ್ನು ನಿಮಗೆ ಹೇಳ್ತೆವೆ.

Tap to resize

Latest Videos

ವಡಾ ಪಾವ್‌ ಪಿಜ್ಜಾ ಮಾಡೋ ವೀಡಿಯೋ ವೈರಲ್, ಯಾಕ್ರಪ್ಪಾ ಹೀಗೆಲ್ಲಾ ಅಸಹ್ಯ ಮಾಡ್ತೀರಿ!

ಸಿಹಿ ಸಿಹಿ ಮೊಸರು ತಯಾರಿಸಲು ಈ ವಿಧಾನ ಬಳಸಿ : 
ಹಾಲು ಕುದಿಸೋದು ಮುಖ್ಯ :
ಹಾಲು ತೆಳುವಾಗಿದ್ದರೆ ಸರಿಯಾಗಿ ಹೆಪ್ಪಾಗೋದಿಲ್ಲ. ನೀವು ಹಾಲನ್ನು ಕುದಿಸಬೇಕು. ಹಾಲನ್ನು 20 ನಿಮಿಷ ಕುದಿಸಿದ್ರೆ ಅದು ದಪ್ಪಾಗುತ್ತದೆ. ಆ ನಂತ್ರ ನೀವು ಹಾಲನ್ನು ಹೆಪ್ಪಾಕಿದ್ರೆ ಮೊಸರು ದಪ್ಪಗಾಗುತ್ತದೆ ಹಾಗೆಯೇ ಸಿಹಿಯಾಗಿರುತ್ತದೆ.

ಮೊಸರಿನ ಪ್ರಮಾಣ ಮುಖ್ಯ : ನೀವು ಹಾಲಿಗೆ ಸ್ವಲ್ಪ ಮೊಸರನ್ನು ಸೇರಿಸಿ ಹೆಪ್ಪು ಹಾಕಬೇಕು. ಅನೇಕರು ಎಷ್ಟು ಮೊಸರು ಹಾಕ್ಬೇಕು ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದ್ರೆ ಹಾಲಿಗೆ ನೀವು ಹಾಕುವ ಹುಳಿ ಮೊಸರು ಕೂಡ ಇಲ್ಲಿ ಮಹತ್ವ ಪಡೆಯುತ್ತದೆ. ದೊಡ್ಡ ಪಾತ್ರೆ ತುಂಬ ಹಾಲು ಹಾಕಿ ಅದಕ್ಕೆ ಒಂದು ಚಮಚ ಮೊಸರು ಹಾಕಿದ್ರೆ ಆಗ ಹಾಲು ಮೊಸರಾಗೋದಿಲ್ಲ.

ಸಮಯದ ಬಗ್ಗೆ ಇರಲಿ ಗಮನ : ಹಾಲನ್ನು ಹೆಪ್ಪು ಹಾಕಿ ಒಂದು ಗಂಟೆ ನಂತ್ರ ಮೊಸರಾಗಿದ್ಯಾ ಎಂದು ಪರೀಕ್ಷೆ ಮಾಡಿದ್ರೆ ಪ್ರಯೋಜನವಿಲ್ಲ. ಸುಮಾರು 7 ಗಂಟೆಗಳನ್ನು ಇದು ತೆಗೆದುಕೊಳ್ಳುತ್ತದೆ. ಬೇಸಿಗೆ ಕಾಲದಲ್ಲಿ ಇದಕ್ಕೆ ಸ್ವಲ್ಪ ಕಡಿಮೆ ಸಮಯ ಸಾಕು. ಬೇಸಿಗೆ ಸಮಯದಲ್ಲಿ ನೀವು ಮೊಸರನ್ನು  ಫ್ರಿಡ್ಜ್ ನಿಂದ ಹೊರಗೆ ಇಟ್ರೆ ಬೇಗ ಹುಳಿಯಾಗುತ್ತದೆ ಎಂಬುದು ನೆನಪಿರಲಿ. 

ನೀರನ್ನು ಫಿಲ್ಟರ್ ಮಾಡಿ : ಹಾಲು ಮೊಸರಾದ್ಮೇಲೆ ಪಾತ್ರೆಯ ಮೇಲ್ಭಾಗದಲ್ಲಿ ನೀರು ನಿಲ್ಲುತ್ತದೆ. ಆ ನೀರನ್ನು ನೀವು ತೆಗೆಯಬೇಕು. ಹತ್ತಿ ಬಟ್ಟೆಯನ್ನು ಬಳಸಿ ಆ ನೀರನ್ನು ಸೋಸಬೇಕು. ನೀರು ತೆಗೆದಿಟ್ಟರೆ ಮೊಸರು ದಪ್ಪಾಗುವ ಜೊತೆಗೆ ಹುಳಿಯಾಗೋದಿಲ್ಲ.

ಈ ಆಹಾರಗಳ ಬೆಲೆ ಕೇಳಿದ್ರೆ ತಿನ್ನೋದಾ? ಲಾಕರ್ ನಲ್ಲಿಡೋದ? ಅನ್ಸೋದು ಗ್ಯಾರಂಟಿ

ಪಾತ್ರೆ ಇಡವು ಜಾಗದ ಬಗ್ಗೆ ಗಮನವಿರಲಿ : ಅತಿಯಾದ ಶಾಖವಿರುವ ಅಥವಾ ಅತಿಯಾದ ಶೀತವಿರುವ ಜಾಗದಲ್ಲಿ ನೀವು ಹಾಲು ಹೆಪ್ಪು ಹಾಕಿದ ಪಾತ್ರೆಯನ್ನು ಇಡಬಾರದು. ಹೀಗೆ ಮಾಡಿದ್ರೆ ಹಾಲು ಬೇಗ ಮೊಸರಾಗೋದಿಲ್ಲ. ಹಾಳಾಗುವ ಅಪಾಯವೂ ಇರುತ್ತದೆ. ಹಾಗಾಗಿ ಸಾಮಾನ್ಯ ತಾಪಮಾನದಲ್ಲಿ ಪಾತ್ರೆಯನ್ನು ಇಡಿ.

ಹಾಲು ಹೆಪ್ಪು ಹಾಕುವ ಮುನ್ನ ಇದನ್ನು ತಿಳ್ಕೊಳ್ಳಿ : ನೀವು ಹಾಲನ್ನು ಮಣ್ಣಿನ ಪಾತ್ರೆಯಲ್ಲಿ ಹೆಪ್ಪು ಹಾಕಿದ್ರೆ ಮೊಸರು ದಪ್ಪಗೆ ಹಾಗೂ ಸಿಹಿಯಾಗಿರುತ್ತದೆ. ಅಲ್ಲದೆ ಹಾಲನ್ನು ಬಿಸಿ ಮಾಡಿದ ತಕ್ಷಣ ಬಿಸಿ ಹಾಲಿಗೆ ನೀವು ಮೊಸರು ಸೇರಿಸಬಾರದು. ಹಾಲು ಉಗುರು ಬೆಚ್ಚಗಿರುವಾಗ ಅದಕ್ಕೆ ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.  
 

click me!