ಒಮ್ಮೊಮ್ಮೆ ಹೇಳದೆ ಕೇಳದೆ ಗೆಸ್ಟ್‌ಗಳು (Guest) ದಿಢೀರ್ ಎಂದು ಮನೆಗೆ ಬಂದಾಗ ಕಕ್ಕಾಬಿಕ್ಕಿಯಾಗುವುದು ಸಹಜ. ಕಿಚನ್ (Kitchen)ನಲ್ಲಿರೋ ಇರೋ ಪದಾರ್ಥಗಳಲ್ಲಿ ಸ್ಪೆಷಲ್ ಆಗಿ ಏನ್ ಮಾಡ್ಬೋದು ಅಂತ ಯೋಚಿಸ್ತಿವಿ. ಹೀಗಿದ್ದಾಗ ರಸಗುಲ್ಲಾ (Rasagulla) ಮಾಡೋದು ಸುಲಭ. ಮಾಡೋಕೆ ಜಸ್ಟ್ ಮೂರೇ ಪದಾರ್ಥ ಇದ್ರೂ ಸಾಕು. ಅದ್ಹೇಗೆ ನೋಡಿ.
ಸ್ವೀಟ್ಸ್ (Sweets) ಅಂದ್ರೆ ಸಾಕು ಕೆಲವರು ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಇನ್ನು ಕೆಲವೊಬ್ಬರಿಗೆ ಸ್ವೀಟ್ಸ್ ಅಂದ್ರೆ ಅಷ್ಟು ಇಷ್ಟ ಇಲ್ಲಾಂದ್ರೂ ಮಧ್ಯಾಹ್ನದ ಊಟ, ರಾತ್ರಿಯ ಊಟ ಮಾಡಿ ಸ್ವೀಟ್ಸ್ ಕೊಟ್ರೆ ಸೈ ಅಂತಾರೆ. ಕೆಲವೊಂದು ಸಾರಿ ಅದೆಷ್ಟು ಊಟ ಮಾಡಿದ್ರೂ, ಸ್ನ್ಯಾಕ್ಸ್ ತಿಂದ್ರೂ ಥಟ್ಟಂತ ಏನಾದ್ರೂ ಸ್ವೀಟ್ಸ್ ತಿನ್ನೋಣ ಅನ್ನೋ ಬಯಕೆ ಕಾಡೋದಿದೆ. ಹೀಗಿದ್ದಾಗ ಮನೆಯಲ್ಲೂ ಸಿಹಿ ತಿಂಡಿ ಏನಿಲ್ಲ, ಹೊರಗಡೆ ಹೋಗಿ ಸ್ಟಾಲ್‌ನಿಂದ ತರೋಕು ಬೇಜಾರು ಎಂದಾಗ ಏನು ಮಾಡ್ಬೋದು ? ಚಿಂತೆ ಮಾಡ್ಬೇಕಿಲ್ಲ. ಕೇವಲ 3 ಪದಾರ್ಥಗಳೊಂದಿಗೆ ಮನೆಯಲ್ಲೇ ತಯಾರಿಸಬಹುದಾದ ಈ ಸುಲಭವಾದ ಸಿಹಿ ಪಾಕವಿಧಾನವನ್ನು ಪ್ರಯತ್ನಿಸಿ.
ರಸಗುಲ್ಲಾ (Rasagulla)ಗಳು ಭಾರತೀಯ ಆಹಾರಪದ್ಧತಿಯಲ್ಲಿ ಮುಖ್ಯವಾದ ಸ್ವೀಟ್ ಆಗಿದೆ. ಮದುವೆ ಮನೆ, ಪಾರ್ಟಿ, ಹಬ್ಬ ಹರಿದಿನಗಳಲ್ಲಿ ರಸಗುಲ್ಲಾಗಳಿಗೆ ಹೆಚ್ಚಿನ ಡಿಮ್ಯಾಂಡ್ ಇರುತ್ತದೆ. ಮಧ್ಯಾಹ್ನ, ರಾತ್ರಿಯ ಊಟದ ನಂತರ ಸಿಹಿಯಾಗಿ ಏನಾದರೂ ತಿನ್ನಬೇಕೆಂದು ಹಂಬಲಿಸುವವರಿಗೆ ರಸಗುಲ್ಲಾ ಪಾಕವಿಧಾನ ಉತ್ತಮ ಆಯ್ಕೆಯಾಗಿದೆ. ಹಾಗಿದ್ರೆ ಸುಲಭವಾಗಿ ಫಟಾಫಟ್ ರಸಗುಲ್ಲಾ ರೆಸಿಪಿ (Recipe) ಮಾಡೋದು ಹೇಗೆ ತಿಳ್ಕೊಳ್ಳಿ.
undefined
Delicious Dishes : ಹಾಲು ಒಡೆದರೆ ಏ ಕೆ ಚಿಂತೆ? ಸ್ವೀಟ್ ಮಾಡ್ಬಹುದು ನೋಡಿ
ರಸಗುಲ್ಲಾ ಮಾಡುವ ವಿಧಾನ
ಹಾಲನ್ನು ಮೊಸರು ಮಾಡಿ
ದೊಡ್ಡ ಪಾತ್ರೆಯಲ್ಲಿ ಹಾಲು (Milk) ಸೇರಿಸಿ ಮತ್ತು ಮಧ್ಯಮ ಉರಿಯಲ್ಲಿ ಇರಿಸಿ. ಹಾಲು ಕುದಿಯುತ್ತಾ ಬಂದಾಗ ಉರಿಯನ್ನು ಕಡಿಮೆ ಮಾಡಿ ಮತ್ತು ಅರ್ಧ ನಿಂಬೆಹಣ್ಣಿನ ರಸವನ್ನು ಸೇರಿಸಿ. ಲಘುವಾಗಿ ಮಿಶ್ರಣ ಮಾಡಿ ಮತ್ತು ಸುಮಾರು 2-3 ನಿಮಿಷಗಳ ಕಾಲ ಮೊಸರನ್ನು ಹಾಗೆಯೇ ಬಿಡಿ. ಗ್ಯಾಸ್ ಆಫ್ ಮಾಡಿ ಮತ್ತು ಮಿಶ್ರಣವನ್ನು ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಟ್ಟುಬಿಡಿ. ಈಗ ಮೊಸರಿನ ಭಾಗವು ಮಿಶ್ರಣದಿಂದ ಸಂಪೂರ್ಣವಾಗಿ ಬೇರ್ಪಡುತ್ತದೆ.
ಸೋಸಿಕೊಳ್ಳಿ
ದೊಡ್ಡ ಬಟ್ಟಲನ್ನು ತೆಗೆದುಕೊಂಡು ಅದರ ಮೇಲೆ ಒಂದು ಜರಡಿ ಇಟ್ಟುಕೊಳ್ಳಿ. ಜರಡಿಯನ್ನು ಬಟ್ಟೆಯಿಂದ ಸುತ್ತಿಕೊಳ್ಳಿ. ಇದಕ್ಕೆ ಈಗಾಗಲೇ ಸಿದ್ಧಪಡಿಸಿರುವ ಮಿಶ್ರಣವನ್ನು ಸುರಿಯಿರಿ ಮತ್ತು ಎಲ್ಲಾ ಹೆಚ್ಚುವರಿ ನೀರನ್ನು ಹಿಂಡಿ ತೆಗೆಯಿರಿ. ಈಗ ಈ ಮಿಶ್ರನವನ್ನು 15-20 ನಿಮಿಷಗಳ ಕಾಲ ನೀರು ಸೋಸಲು ಇಟ್ಟುಬಿಡಿ.
ಸಣ್ಣ ಉಂಡೆಗಳನ್ನಾಗಿ ಮಾಡಿ
ಒಂದು ತಟ್ಟೆಯಲ್ಲಿ ನೀರು ಸೋಸಿ ಹೋದ ಮಿಶ್ರಣವನ್ನು ತೆಗೆದುಕೊಳ್ಳಿ. ಕೆನೆ ಹಿಟ್ಟನ್ನು ತಯಾರಿಸಲು ಅದನ್ನು ನಿಮ್ಮ ಕೈಗಳಿಂದ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ನಿಮ್ಮ ಕೈಗೆ ಸ್ವಲ್ಪ ತುಪ್ಪ ಅಥವಾ ಎಣ್ಣೆಯನ್ನು ಹಚ್ಚಿಕೊಳ್ಳಿ. ಹಿಟ್ಟಿನಿಂದ ಸಣ್ಣ ಉಂಡೆಗಳನ್ನಾಗಿ ಮಾಡಿಟ್ಟುಕೊಳ್ಳಿ.
Weight Loss Tips: ಸಣ್ಣಗಾಗ್ಬೇಕಾ ? ಪ್ರತಿದಿನ ಈ ದೇಸಿ ಸ್ವೀಟ್ ತಿನ್ನಿ ಸಾಕು
ಸಕ್ಕರೆ ಮಿಶ್ರಣ ತಯಾರಿಕೆ
ಒಂದು ಪಾತ್ರೆಯಲ್ಲಿ 1 ಕಪ್ ಸಕ್ಕರೆ (Sugear)ಮತ್ತು 2 ಕಪ್ ನೀರು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಸಕ್ಕರೆ ಸಂಪೂರ್ಣವಾಗಿ ಕರಗಲು ಬಿಡಿ. ನಾವು ದಪ್ಪವಾದ ಸಕ್ಕರೆ ಪಾಕವನ್ನು ತಯಾರಿಸಬೇಕಾಗಿಲ್ಲದ ಕಾರಣ ಸಕ್ಕರೆ ಮಿಶ್ರಣವನ್ನು ದೀರ್ಘಕಾಲದವರೆಗೆ ಬೇಯಿಸಬೇಡಿ. ಸಕ್ಕರೆ ಕರಗಿದ ನಂತರ ಮತ್ತು ಮಿಶ್ರಣವು ಹದಕ್ಕೆ ಬಂದಾಗ, ಅದು ಬಳಸಲು ಸಿದ್ಧವಾಗಿದೆ ಎಂದರ್ಥ. ನೀವು ಸುವಾಸನೆಗಾಗಿ ಏಲಕ್ಕಿ ಪುಡಿಯನ್ನು ಕೂಡ ಸೇರಿಸಬಹುದು
ಅಂತಿಮ ಹಂತ
ಸಕ್ಕರೆ ಮಿಶ್ರಣವು ಕುದಿ ಬಂದ ನಂತರ, ಅದರಲ್ಲಿ ಎಲ್ಲಾ ಹಿಟ್ಟಿನ ಉಂಡೆಗಳನ್ನು ಬಿಡಿ. ಉಂಡೆಗಳು ಸಂಪೂರ್ಣವಾಗಿ ಸಕ್ಕರೆ ಮಿಶ್ರಣದಲ್ಲಿ ಮುಳುಗಿವೆ ಎಂದು ಖಚಿತಪಡಿಸಿಕೊಳ್ಳಿ. ಉರಿಯನ್ನು ಮಧ್ಯಮದಲ್ಲಿಡಿ ಮತ್ತು ಉಂಡೆಗಳು ದಪ್ಪ ಆಗುವ ವರೆಗೆ ಬೇಯಿಸಿ. ಚೆಂಡುಗಳು ಮೃದುವಾಗಿ, ಸ್ಪಂಜಿನಂತಾದ ಕೂಡಲೇ, ನಿಮ್ಮ ರಸಗುಲ್ಲಾಗಳು ಸಿದ್ಧವಾಗಿವೆ.
ಬಡಿಸಲು ಸಿದ್ಧವಾಗಿದೆ
ರಸಗುಲ್ಲಾಗಳನ್ನು ಸ್ವಲ್ಪ ತಣ್ಣಗಾಗಲು ಬಿಡಿ ಮತ್ತು ನಂತರ ಅವುಗಳನ್ನು ಫ್ರಿಜ್‌ನಲ್ಲಿ ಇರಿಸಿ. ಸ್ಪಲ್ಪ ಹೊತ್ತಿನ ಇದನ್ನು ಸರ್ವ್ ಮಾಡಬಹುದು. ತಣ್ಣಗಾದಾಗ ರಸಗುಲ್ಲಾಗಳು ಅತ್ಯುತ್ತಮವಾದ ರುಚಿಯನ್ನು ನೀಡುತ್ತವೆ.