ಮನೆಗೆ ಯಾವುದೇ ಮುನ್ಸೂಚನೆಯಿಲ್ಲದೆ ಅತಿಥಿಗಳು ಬಂದಾಗ, ಅಥವಾ ವೀಕೆಂಡ್‌ಗಳಲ್ಲಿ ಖಾರವಾದ್ದನ್ನು ತಿನ್ನಲು ಮನಸ್ಸು ಹಂಬಲಿಸುವಾಗ ರುಚಿಕರವಾದ ಸೋಯಾ ಟಿಕ್ಕಾ ಮಾಡಿ ಸವಿಯಬಹುದಾಗಿದೆ. ಇಲ್ಲಿದೆ ಸಿಂಪಲ್ ರೆಸಿಪಿ.
ತೂಕ ಇಳಿಸುವ ಪ್ರಯತ್ನದಲ್ಲಿರುವಾಗ ಆರೋಗ್ಯ ಮತ್ತು ರುಚಿ ಎರಡನ್ನೂ ಒಳಗೊಂಡಿರುವ ಯಾವುದೇ ಆಹಾರವನ್ನು ಹೇಗೆ ತಯಾರಿಸುವುದು ಎಂಬುದು ಎಲ್ಲರನ್ನೂ ಕಾಡುವ ಪ್ರಶ್ನೆ. ರುಚಿ ಮತ್ತು ಪೌಷ್ಟಿಕಾಂಶದ ಅಂಶಗಳೆರಡನ್ನೂ ಒಳಗೊಂಡಿರುವ ಆಹಾರ ಪದಾರ್ಥಗಳನ್ನು ನಾವು ಹುಡುಕುತ್ತೇವೆ. ಅನೇಕ ಬಾರಿ, ನಾವು ಅದರಲ್ಲಿ ವಿಫಲರಾಗುತ್ತೇವೆ. ಚಿಂತಿಸಬೇಡಿ. ಇಲ್ಲೊಂದು ಅಂಥಾ ಪರಿಪೂರ್ಣ ಪಾಕವಿಧಾನವಿದೆ. ಅದುವೇ ಸೋಯಾ ಟಿಕ್ಕಾ. ಮನೆಗೆ ಯಾವುದೇ ಮುನ್ಸೂಚನೆಯಿಲ್ಲದೆ ಅತಿಥಿಗಳು ಬಂದಾಗ, ಅಥವಾ ವೀಕೆಂಡ್‌ಗಳಲ್ಲಿ ಖಾರವಾದ್ದನ್ನು ತಿನ್ನಲು ಮನಸ್ಸು ಹಂಬಲಿಸುವಾಗ ರುಚಿಕರವಾದ ಸೋಯಾ ಟಿಕ್ಕಾ ಮಾಡಿ ಸವಿಯಬಹುದಾಗಿದೆ.
ಸೋಯಾ ಟಿಕ್ಕಾ ರೆಸಿಪಿ
ಬೇಕಾದ ಪದಾರ್ಥಗಳು
ಸೋಯಾ ಟಿಕ್ಕಾ 200 ಗ್ರಾಂ ಸೋಯಾ ಚಂಕ್ಸ್
2 ಸಣ್ಣ ಈರುಳ್ಳಿ
1 ಹಸಿರು ಕ್ಯಾಪ್ಸಿಕಂ
1 ಕಪ್ ಮೊಸರು
1 ಟೀಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್
1 ಟೀಸ್ಪೂನ್ ಕಪ್ಪು ಮೆಣಸು ಪುಡಿ
1 ಟೀ ಸ್ಪೂನ್ ಚಾಟ್ ಮಸಾಲಾ
ರುಚಿಗೆ ಉಪ್ಪು
1 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ
ಮಂಗಳೂರು ಸ್ಟೈಲ್ ಚಿಕನ್ ಗೀ ರೋಸ್ಟ್ ರೆಸಿಪಿ ಮಾಡೋದು ತುಂಬಾ ಈಝಿ
ಸೋಯಾ ಟಿಕ್ಕಾ ಮಾಡುವುದು ಹೇಗೆ ?
ಸೋಯಾ ಟಿಕ್ಕಾ ಪಾಕವಿಧಾನವನ್ನು ಪ್ರಾರಂಭಿಸಲು, ನೀವು ಮೊದಲು ಸೋಯಾ ತುಂಡುಗಳನ್ನು ಕನಿಷ್ಠ 5-6 ನಿಮಿಷಗಳ ಕಾಲ ಕುದಿಸಬೇಕು. ನಂತರ ಅದರಿಂದ ಎಲ್ಲಾ ನೀರು ಹರಿದು ಹೋಗಲು ಬಿಡಬೇಕು. ಮುಂದಿನ ಹಂತವೆಂದರೆ ಈ ಸೋಯಾ ತುಂಡುಗಳನ್ನು ಮ್ಯಾರಿನೇಟ್ ಮಾಡುವುದು. ಮ್ಯಾರಿನೇಡ್‌ಗಾಗಿ, ಮಿಕ್ಸಿಂಗ್ ಬೌಲ್ ಅನ್ನು ತೆಗೆದುಕೊಂಡು, ಕೆಂಪು ಮೆಣಸಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು ಮತ್ತು ಸ್ವಲ್ಪ ಮೊಸರು (Curd) ಸೇರಿಸಿ. ಈಗ ಮ್ಯಾರಿನೇಡ್ ಬಟ್ಟಲಿನಲ್ಲಿ ಸೋಯಾ ತುಂಡುಗಳನ್ನು ಸೇರಿಸಿ ಮತ್ತು ಕೆಲವು ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ.
ನಂತರ ಇದನ್ನು ಗ್ರಿಲ್ ಮಾಡಲು ಎರಡು ಸೋಯಾ ತುಂಡುಗಳನ್ನು ಸೇರಿಸಿ ಮತ್ತು ನಂತರ ಒಂದು ತುಂಡು ಈರುಳ್ಳಿ (Onion) ಸೇರಿಸಿ ನಂತರ ಎರಡು ಸೋಯಾ ತುಂಡುಗಳನ್ನು ಸೇರಿಸಿ ಮತ್ತು ಕ್ಯಾಪ್ಸಿಕಂನ ಪೀಸ್ ಸೇರಿಸಿ. ಇದನ್ನು ಪುನರಾವರ್ತಿಸಿ. ಗ್ರಿಲ್ ಪ್ಯಾನ್‌ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಬಾಣಲೆಗಳನ್ನು ಇರಿಸಿ ಮತ್ತು ಸೋಯಾ ತುಂಡುಗಳನ್ನು ಬೇಯಲು ಬಿಡಿ. ಸೋಯಾವನ್ನು ಎಲ್ಲಾ ಕಡೆಯಿಂದ ಚೆನ್ನಾಗಿ ಬೇಯಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಬೆಂದ ಬಳಿಕ ಅದನ್ನು ಹೊರತೆಗೆಯಿರಿ, ಸ್ವಲ್ಪ ಚಾಟ್ ಮಸಾಲವನ್ನು ಸಿಂಪಡಿಸಿ ಮತ್ತು ಸವಿಯಿರಿ.
ಆರೋಗ್ಯಕ್ಕೆ ಸೋಯಾ ಬೀನ್
ಸಸ್ಯಾಹಾರಿಗಳಿಗೆ ಅತೀವ ಪ್ರೊಟೀನ್ ಒದಗಿಸೋ ಪದಾರ್ಥವೆಂದರೆ ಸೊಯಾ ಬೀನ್. ಫಿಟ್‌ನೆಸ್ ಕಾಳಜಿ ಹೆಚ್ಚಿರುವವರು ಇದನ್ನು ವಿಧವಿಧವಾಗಿ ಸೇವಿಸಿದರೆ ಆರೋಗ್ಯಕ್ಕೂ ಒಳ್ಳೆಯದು, ದೇಹ (Body)ವನ್ನೂ ಫಿಟ್ ಆಗಿಡಬಹುದು.ಸಾಮಾನ್ಯವಾಗಿ ಎಲ್ಲರೂ ಬಳಸದ ಸೋಯಾಬಿನ್‌ನಲ್ಲಿ ವಿವಿಧ ಪೋಷಕಾಂಶಗಳು ಹೇರಳವಾಗಿರುತ್ತದೆ. ಇದರಿಂದ ರುಚಿಕರವಾದ ಅಡುಗೆ ಮಾಡಬಹುದು. ಗೋಧಿ (Wheat) ಹಿಟ್ಟಿನೊಂದಿಗೆ ಸೋಯಾವನ್ನು ಹಿಟ್ಟು ಮಾಡಿಸಿ, ಮಿಕ್ಸ್ ಮಾಡಿಕೊಂಡರೆ ಒಳಿತು. ಇದು ಚಪಾತಿಯ ರುಚಿ ಹೆಚ್ಚಿಸುವುದಲ್ಲದೇ, ಅಗತ್ಯ ಪೋಷಕಾಂಶಗಳನ್ನು ಪೂರೈಸುವುದರಲ್ಲಿ ಸಫಲವಾಗುತ್ತದೆ. ಸೊಯಾಬೀನ್ ಬಳಸಿ ಅಡುಗೆ ಮಾತ್ರವಲ್ಲದೆ, ಬಿಸ್ಕೆತ್ ಅಥವಾ ಓಟ್ಸ್ ರೀತಿಯಲ್ಲಿಯೂ ಹಾಲಿಗೆ ಬೆರೆಸಿ ಸೇವಿಸಬಹುದು.
ಚಪಾತಿ ಜೊತೆ ಸವಿಯಲು ಸೂಪರ್ ಕೆನೆ ಮೊಟ್ಟೆ ಕರಿ ಮಾಡಿ
ಕೆಲವೊಂದು ಸಂಶೋಧನೆಯ ಪ್ರಕಾರ ಹೆಚ್ಚಾಗಿ ಸೊಯಾ ಬಳಕೆಯಿಂದ ಹೆಣ್ಣುಮಕ್ಕಳಿಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಗಂಡಸರಲ್ಲಿ ಟೀಸ್ಟೋಸ್ಟೇರಾನ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಸೋಯಾವನ್ನು ಪ್ರೋಟಿನ್ ರೀತಿಯಲ್ಲಿ ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯಬೇಕು. ಅಗತ್ಯಕ್ಕಿಂತ ಹೆಚ್ಚಿಗೆ ಸೇವಿಸಬಾರದು.ಈ ಪೌಡರ್ ಅನ್ನು ಬಹಳ ಕಾಲ ಇಡಬಾರದು. ಪುಡಿ ಮಾಡಿದ ತಿಂಗಳಲ್ಲಿಯೇ ಬಳಸಿದರೆ ಒಳಿತು. ಮಾಂಸದಲ್ಲಿ ಸಿಗುವಷ್ಟು ಪ್ರೋಟಿನ್ ಸೊಯಾಬೀನ್‌ನಲ್ಲಿ ಸಿಗುತ್ತದೆ.