ಮಟನ್ ಬೇಗ ಬೇಯಲ್ಲ ಅಂತ ಚಿಂತೆನಾ? ಬೇಯಿಸುವಾಗ ಈ ತಪ್ಪುಗಳನ್ನ ಮಾಡಬೇಡಿ!

Published : May 27, 2024, 07:09 PM IST
ಮಟನ್ ಬೇಗ ಬೇಯಲ್ಲ ಅಂತ ಚಿಂತೆನಾ? ಬೇಯಿಸುವಾಗ ಈ ತಪ್ಪುಗಳನ್ನ ಮಾಡಬೇಡಿ!

ಸಾರಾಂಶ

Mutton Recipe Hacks: ಮಟನ್ ಬೇಯಿಸುವಾಗ ಕೆಲವೊಂದು ತಪ್ಪುಗಳನ್ನು ಮಾಡಬಾರದು. ಈ ತಪ್ಪುಗಳಿಂದ ಮಟನ್ ಕುದಿಯೋದು ಲೇಟ್ ಮತ್ತು ಅದರ ರುಚಿಯೂ ಹಾಳಾಗುತ್ತದೆ.

ಚಿಕನ್ ಅಥವಾ ಮಟನ್ ನಲ್ಲಿ ಯಾವುದು ಇಷ್ಟ ಅಂತ ಕೇಳದ್ರೆ ಬಹುತೇಕರು ಹೇಳುವುದು ಮಟನ್ ರೆಸಿಪಿ (Mutton Recipe). ಆದ್ರೆ ಮಟನ್ ಅಡುಗೆ ಮಾಡೋದು ಅಷ್ಟು ಸುಲಭದ ಮಾತಲ್ಲ. ಮಟನ್ ಖರೀದಿ (Mutton Purchase) ಮಾಡಲು ಜೇಬು ತುಂಬಾ ಹಣ ಇರಬೇಕು ಮತ್ತು ಅದನ್ನು ಬೇಯಿಸಲು ತಾಳ್ಮೆ ಇರಬೇಕು. ಕಾರಣ ಮಟನ್ ಬೇಗ ಬೇಯಲ್ಲ. ಚಿಕನ್ (Chicken Recipe) ಆದ್ರೆ ಐದರಿಂದ ಹತ್ತು ನಿಮಿಷದಲ್ಲಿ ಬೇಯಿಸಿ, ಅದಕ್ಕೆ ಉಪ್ಪು-ಹುಳಿ-ಖಾರ ಸೇರಿಸಿ ತಿನ್ನಬಹುದು. ಆದ್ರೆ ಮಟನ್ (Mutton Cooking) ಹಾಗಲ್ಲ, ಅದಕ್ಕೆ ಬೇಯಿಸಲು ಕೊಂಚ ಸಮಯ ಬೇಕಾಗುತ್ತದೆ. ನುರಿತರಾಗಿದ್ದರೆ 30 ರಿಂದ 45 ನಿಮಿಷ ಸಾಕು. ಒಂದು ವೇಳೆ ನೀವು ಫಸ್ಟ್ ಟೈಮ್ ಮಟನ್ ಮಾಡುತ್ತಿದ್ರೆ ಒಂದು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ.

ಮಟನ್ ಬೇಯಿಸುವಾಗ ಕೆಲವೊಂದು ತಪ್ಪುಗಳನ್ನು ಮಾಡಬಾರದು. ಈ ತಪ್ಪುಗಳಿಂದ ಮಟನ್ ಕುದಿಯೋದು ಲೇಟ್ ಮತ್ತು ಅದರ ರುಚಿಯೂ ಹಾಳಾಗುತ್ತದೆ. ಇಂದು ನಾವು ಸರಿಯಾಗಿ ಮಟನ್ ಹೇಗೆ ಬೇಯಿಸಬೇಕು ಎಂಬುದರ ಬಗ್ಗೆ ಹೇಳುತ್ತಿದ್ದೇವೆ. 

ಮಟನ್ ಬೇಯಿಸೋದು ಹೇಗೆ? 

1.ಮೊದಲಿಗೆ ಮಟನ್ ಖರೀದಿಸಿದ ನಂತರ ಅಲ್ಲಿಯೇ ಚಿಕ್ಕ ಚಿಕ್ಕ ಪೀಸ್‌ಗಳನ್ನಾಗಿ ಕತ್ತರಿಸಿಕೊಂಡು ತೆಗೆದುಕೊಂಡು ಬನ್ನಿ. ಮಟನ್ ಮೂಳೆ ತುಂಬಾ ಗಟ್ಟಿಯಾಗಿರೋ ಕಾರಣ ಮನೆಯಲ್ಲಿ ತುಂಡರಿಸಲು ಸಾಧ್ಯವಾಗಲ್ಲ. 

2.ಮಟನ್ ತಂದ ಕೂಡಲೇ ಅದನ್ನು ಎರಡರಿಂದ ಮೂರು ಬಾರಿ ತೊಳೆದುಕೊಳ್ಳಬೇಕು. ತೊಳೆಯೋದರಿಂದ ಮಾಂಸದಲ್ಲಿನ ರಕ್ತದ ಕಲೆಗಳು ಹೋಗುತ್ತವೆ. ಯಾವುದೇ ಕಾರಣಕ್ಕೂ ಮಾಂಸವನ್ನು ತಣ್ಣೀರಿನಿಂದ ಮಾತ್ರ ತೊಳೆಯಬಾರದು. ಮಟನ್ ತೊಳೆಯಲು ಉಗುರು ಬೆಚ್ಚಗಿನ ನೀರನ್ನೇ ಬಳಸಬೇಕು. ಬಿಸಿನೀರು ಮಾಂಸವನ್ನು ಸಾಫ್ಟ್ ಮಾಡುತ್ತದೆ.

ರಾತ್ರಿ ಮಲಗಿಕೊಂಡೇ ತೂಕ ಇಳಿಸಬಹುದು? ಹೇಗೆ ಗೊತ್ತಾ?

3.ಮಟನ್ ಕುದಿಸುವ ಮೊದಲು ಒಲೆ ಮೇಲೆ ದೊಡ್ಡದಾದ ಪಾತ್ರೆಯನ್ನು ಇರಿಸಿಕೊಳ್ಳಿ. ಪಾತ್ರೆಗೆ ಒಂದು ಟೀ ಸ್ಪೂನ್ ಅಡುಗೆ ಎಣ್ಣೆ ಹಾಕಿ. ಎಣ್ಣೆ ಬಿಸಿ ಆಗುತ್ತಿದ್ದಂತೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಮಟನ್ ತುಂಡುಗಳನ್ನು ಹಾಕಿಕೊಳ್ಳಬೇಕು. ನಂತರ ಇದಕ್ಕೆ ಚಿಟಿಕೆಯಷ್ಟು ಅರಿಶಿನ ಸೇರಿಸಿ. ಅಡುಗೆ ಎಣ್ಣೆ ಮತ್ತು ಅರಿಶಿನ ಮಟನ್ ಬೇಗ ಬೇಯಲು ಸಹಾಯ ಮಾಡುತ್ತವೆ. 

4.ನಂತರ ಇದಕ್ಕೂ ಬಿಸಿ ನೀರು ಹಾಕಿ ಮಟನ್ ಬೇಯಿಸಬೇಕು. ಒಂದು ವೇಳೆ ನೀರು ಕಡಿಮೆಯಾದ್ರೆ ಯಾವುದೇ ಕಾರಣಕ್ಕೂ ತಣ್ಣೀರು ಬಳಸಬಾರದು. ಮಟನ್ ಅಡುಗೆ ಮುಗಿಯವರೆಗೂ ಬಿಸಿನೀರನ್ನೇ ಬಳಸುತ್ತಿರಬೇಕು.

ರಾತ್ರಿ ಮಲಗುವ ಮುನ್ನ ಒಂದು ಬೆಳ್ಳುಳ್ಳಿ ಎಸಳು ತಿಂದ್ರೆ ದೇಹದಲ್ಲಾಗುವ ಬದಲಾವಣೆಗಳೇನು ಗೊತ್ತಾ?

5.ಮಟನ್ ಒಂದು ಹಂತಕ್ಕೆ ಬೇಯುತ್ತಿದ್ದಂತೆ ಮಾಂಸವನ್ನು ಕುಕ್ಕರ್‌ಗೆ ಹಾಕಿ ಬೇಕಾಗುವಷ್ಟು ಬಿಸಿನೀರು ಸೇರಿಸಿ ಮುಚ್ಚಳ ಮುಚ್ಚಿ ಐದರಿಂದ ಆರು ಕೂಗು ಕೂಗಿಸಿಕೊಂಡರೆ ಮಟನ್ ಹದವಾಗಿ ಬೆಂದಿರುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

52ರ ಹರೆಯದಲ್ಲೂ 25ರ ತರುಣಿಯಂತೆ ಕಾಣುವ ಐಶ್ವರ್ಯಾ ರೈ.. ಸೌಂದರ್ಯದ ಖನಿ ಅಸಲಿ ರಹಸ್ಯವೇನು?
ಚಳಿಗಾಲಕ್ಕಾಗಿಯೇ ವಿಶೇಷ ಬ್ರೇಕ್‌ಫಾಸ್ಟ್‌ ರೆಸಿಪಿ ತಿಳಿಸಿದ ಬಾಬಾ ರಾಮ್‌ದೇವ್‌, ಇದರಿಂದ ಇದೆ ಸಾಕಷ್ಟು ಪ್ರಯೋಜನ!