ಹೆಚ್ಚು ಕಿಕ್ ಕೊಡುತ್ತೆಂದು ಎಕ್ಸ್‌ಪೈರಿ ಡೇಟ್‌ ಆಗಿರೋ ಓಲ್ಡ್ ಬೀಯರ್ ಕುಡಿಬೇಡಿ, ಸಾಯ್ತೀರಿ ಅಷ್ಟೇ!

By Roopa Hegde  |  First Published May 25, 2024, 1:11 PM IST

ಮದ್ಯಪಾನ ಮಾಡೋರಿಗೆ ಪ್ರತಿಯೊಂದು ಬ್ರ್ಯಾಂಡ್ ರುಚಿಗೊತ್ತಿರುತ್ತದೆ, ವೈನ್, ಬಿಯರ್ ಬೆಲೆ ಕೂಡ ಗೊತ್ತಿರುತ್ತೆ. ಬಾಟಲಿ ಮೇಲಿರೋ ಹೆಸರು ಮಾತ್ರ ನೋಡೋ ಜನ, ಡೇಟ್ ನೋಡ್ದೆ ಖರೀದಿ ಮಾಡ್ತಾರೆ. ವೈನ್ ಹೀಗೆ ಖರೀದಿ ಮಾಡಿದ್ರೆ ಓಕೆ, ಬಿಯರ್ ವಿಷ್ಯದಲ್ಲಿ ಸ್ವಲ್ಪ ಎಚ್ಚರದಿಂದಿರಿ.
 


ವೈನ್ ಹಳೆಯದಾದಷ್ಟು ಅದ್ರ ರುಚಿ ಹೆಚ್ಚು. ಹಾಗಾಗಿಯೇ ಹಳೆ ವೈನ್ ಗೆ ಬೆಲೆ ಕೂಡ ಹೆಚ್ಚಾಗುತ್ತದೆ. ಜನರು ವೈನ್ ಖರೀದಿ ಮಾಡಿ ವರ್ಷಾನುಗಟ್ಟಲೆ  ಮನೆಯಲ್ಲಿಟ್ಟುಕೊಳ್ಳುವಂತೆ ಬಿಯರ್ ಖರೀದಿ ಮಾಡಿಯೂ ಅದನ್ನು ಮನೆಯಲ್ಲಿಟ್ಟುಕೊಳ್ಳಬೇಡಿ. ವೈನ್ ಎಕ್ಸ್ಪೈರ್ ಆಗೋದಿಲ್ಲ. ಆದ್ರೆ ಬಿಯರ್ ಎಕ್ಸ್ಪೈರ್ ಆಗುತ್ತೆ. ಬಿಯರ್ ಖರೀದಿ ವೇಳೆ ನೀವು ಎಕ್ಸ್ಪೈರ್ ಡೇಟ್ ನೋಡ್ಬೇಕು ಜೊತೆಗೆ ಮನೆಯಲ್ಲಿರುವ ಬಿಯರ್ ಸೇವನೆ ಮಾಡುವಾಗ ಕೂಡ ಎಕ್ಸ್ಪೈರ್ ಡೇಟ್ ಪರೀಕ್ಷೆ ಮಾಡಿಕೊಳ್ಳಿ. ದಿನಾಂಕ ಮುಗಿದ ಬಿಯರ್ ಸೇವನೆ ಮಾಡೋದು ಒಳ್ಳೆಯದಲ್ಲ. ಇದ್ರಿಂದ ನಾನಾ ಸಮಸ್ಯೆ ನಿಮ್ಮನ್ನು ಕಾಡಬಹುದು.

ಬಿಯರ್ (Beer) ತಯಾರಿಸಿ ಅದನ್ನು ಎಷ್ಟು ದಿನ ಬಳಸಬಹುದು? : ಬಿಯರ್ ತಯಾರಿಸಿದ ನಂತ್ರ ಅದನ್ನು ಎಷ್ಟು ದಿನ ಕುಡಿಯಬಹುದು ಎಂದು ಸ್ವಷ್ಟವಾಗಿ ಹೇಳಲು ಸಾಧ್ಯವಿಲ್ಲ. ಒಂದೊಂದು ಬಿಯರ್ ಎಕ್ಸ್ಪೈರ್ ಡೇಟ್ (Expiry Date) ಒಂದೊಂದು ರೀತಿ ಇರುತ್ತದೆ. ಸಾಮಾನ್ಯವಾಗಿ ತಯಾರಿಸಿದ ಆರು ತಿಂಗಳು ಬಿಯರ್ ಬಳಸಬಹುದು. ಬಿಯರ್ ಬಾಟಲಿಯಿಂದ ಬಿಯರ್ ಸೋರಿಕೆಯಾಗ್ತಿದೆ ಎಂದಾದ್ರೂ ನೀವು ಅದನ್ನು ಖರೀದಿ ಮಾಡ್ಬೇಡಿ. ಇಂಥ ಬಾಟಲಿಯಲ್ಲಿರುವ ಬಿಯರ್ ಸೇವನೆ ಕೂಡ ಮಾಡ್ಬೇಡಿ. ಬಿಯರ್ ಬಾಟಲಿ ಎಕ್ಸ್ಪೈರ್ ಡೇಟ್ ಹತ್ತಿರ ಬರ್ತಿದೆ ಎಂದಾಗ ಬಿಯರ್ ಮಾರಾಟಗಾರರು ಅದಕ್ಕೆ ಆಫರ್ ಇಡ್ತಾರೆ. ಕಡಿಮೆ ಬೆಲೆಗೆ ಬಿಯರ್ ಮಾರಾಟ ಮಾಡಲು ಶುರು ಮಾಡ್ತಾರೆ. ಬಹುತೇಕ ಗ್ರಾಹಕರು ಕಡಿಮೆ ಬೆಲೆಗೆ ಬಿಯರ್ ಸಿಗ್ತಿದೆ ಎಂಬ ಖುಷಿಯಲ್ಲಿರ್ತಾರೆಯೇ ವಿನಃ ಬಿಯರ್ ಲಾಸ್ಟ್ ಡೇಟ್ ನೋಡೋದಿಲ್ಲ. ವೈನ್ ನಂತೆ ಅದು ಹಳೆಯದಾದ್ರೆ ಬೆಸ್ಟ್ ಅನ್ನುವ ನಂಬಿಕೆಯಲ್ಲಿ ಅದನ್ನು ಖರೀದಿ ಮಾಡೋರೂ ಇದ್ದಾರೆ.

Latest Videos

ಈ ರಸ್ತೆ ಬದಿಯ ಮಾರಾಟಗಾರ 1 ಪ್ಲೇಟ್ ಮ್ಯಾಗಿಗೆ ತೆಗೆದುಕೊಳ್ಳೋದು 1100 ರೂ.! ಏನಂಥಾ ವಿಶೇಷ? 

ಬಿಯರ್ ಮತ್ತು ವೈನ್ (Wine) ಹೇಗೆ ಭಿನ್ನ? : ಮೊದಲೇ ಹೇಳಿದಂತೆ ನೀವು ವೈನ್ ಎಷ್ಟು ಹಳೆಯದಾದ್ರೂ ಕುಡಿಯಬಹುದು. ಹಳೆಯದಾದಂತೆ ಅದಕ್ಕೆ ಬೇಡಿಕೆ ಹೆಚ್ಚು. ಬಿಯರ್ ಹಾಗಲ್ಲ. ಹಳೆಯದಾದ್ರೆ ಅದ್ರ ಬೆಲೆ ಕಡಿಮೆ ಆಗುತ್ತೆ. ಇದಕ್ಕೆ ಕಾರಣ ಆಲ್ಕೋಹಾಲ್. ವೈನ್ ತಯಾರಿಸುವ ಸಮಯದಲ್ಲಿ ಅತಿ ಹೆಚ್ಚು ಆಲ್ಕೋಹಾಲ್ ಬಳಕೆ ಮಾಡಲಾಗುತ್ತದೆ. ಹಾಗಾಗಿ ವೈನ್ ಹಾಳಾಗೋದಿಲ್ಲ. ಆದ್ರೆ ಬಿಯರ್ ತಯಾರಿಸುವ ಸಮಯದಲ್ಲಿ ಶೇಕಡಾ 6ರಿಂದ ಶೇಕಡಾ 8ರಷ್ಟು ಆಲ್ಕೋಹಾಲ್ ಮಾತ್ರ ಹಾಕಲಾಗುತ್ತದೆ. ಅಲ್ಲದೆ ಅದಕ್ಕೆ ಧಾನ್ಯವನ್ನು ಬಳಸಲಾಗುತ್ತದೆ. ಇದ್ರಿಂದ ಬಿಯರ್ ಬೇಗ ಹಾಳಾಗುತ್ತದೆ. 

ನೀವು ಬಿಯರ್ ಖರೀದಿ ಮಾಡಿದ ಸಮಯದಲ್ಲಿ ಅದ್ರ ಡೇಟ್ ಪರಿಶೀಲನೆ ಮಾಡಬೇಕು. ದಿನಾಂಕ ಮುಕ್ತಾಯವಾಗಿದ್ದರೆ ಅದನ್ನು ಮಾರಾಟಗಾರರಿಗೆ ತಿಳಿಸಿ. ಅವರು ನಿರ್ಲಕ್ಷ್ಯ ಮಾಡಿದ್ರೆ ಅಬಕಾರಿ ಇಲಾಖೆಗೆ ಮಾಹಿತಿ ನೀಡಿ ಎನ್ನುತ್ತಾರೆ ತಜ್ಞರು. 

ಬಿಯರ್ ಸೇವನೆಯಿಂದಾಗುವ ಲಾಭ – ನಷ್ಟ : 
• ಬಿಯರ್ ಕುಡಿಯುವುದರಿಂದ ಮೂಳೆಗಳಿಗೆ ಬಲಬರುತ್ತದೆ. ಬಿಯರ್ ಮೂಳೆಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಸಿಲಿಕಾನ್ ಎಂಬ ಅಂಶವನ್ನು ಹೊಂದಿರುತ್ತದೆ. ದಿನಕ್ಕೆ ಒಂದರಿಂದ ಎರಡು ಗ್ಲಾಸ್ ಬಿಯರ್ ಸೇವಿಸಬಹುದು.
• ಬಿಯರ್ ದೇಹದಲ್ಲಿ ಇನ್ಸುಲಿನ್ ಸಂವೇದನೆಯನ್ನು (Insulin Sensitivity) ಹೆಚ್ಚಿಸುತ್ತದೆ. ಇದು ಟೈಪ್ 2 ಮಧುಮೇಹದ ಅಪಾಯವನ್ನು ಶೇಕಡಾ 25 ರಷ್ಟು ಕಡಿಮೆ ಮಾಡುತ್ತದೆ.

ಈ ರಸ್ತೆ ಬದಿಯ ಮಾರಾಟಗಾರ 1 ಪ್ಲೇಟ್ ಮ್ಯಾಗಿಗೆ ತೆಗೆದುಕೊಳ್ಳೋದು 1100 ರೂ.! ಏನಂಥಾ ವಿಶೇಷ?

• ನಿದ್ರಾಹೀನತೆಯಿಂದ (Sleeplessness) ಬಳಲುವ ಜನರು ಬಿಯರ್ ಸೇವನೆ ಮಾಡ್ಬಹುದು.  ಬಿಯರ್ ಮೆದುಳಿನಲ್ಲಿ ಡೋಪಮೈನ್ ಹರಿವನ್ನು ಹೆಚ್ಚಿಸುತ್ತದೆ. ದೇಹಕ್ಕೆ ವಿಶ್ರಾಂತಿಯನ್ನು ನೀಡುತ್ತದೆ.
• ಬಿಯರ್ ಸೇವನೆಯಿಂದ ನಷ್ಟವೂ ಇದೆ. ಅದ್ರಲ್ಲಿ ಆಲ್ಕೋಹಾಲ್ (Alchohol) ಇರುವ ಕಾರಣ ಅತಿಯಾದ ಬಿಯರ್ ಸೇವನೆ ಒಳ್ಳೆಯದಲ್ಲ. ಇದ್ರಿಂದ ಬೇಗ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಔಷಧಿ ರೀತಿಯಲ್ಲಿ ಬಿಯರ್ ಸೇವನೆ ಮಾಡೋದು ಒಳ್ಳೆಯದು. 

click me!