ಹಬ್ಬ ಅಂದ್ಮೇಲೆ ಸ್ವೀಟ್ಸ್ ಇರ್ಲೇಬೇಕು ಅಲ್ವಾ ? ಆದ್ರೆ ದೀಪಾವಳಿ ಸೆಲಬ್ರೇಶನ್ ಅಲ್ವಾ ಅಂತ ಗಿಫ್ಟ್ ಮಾಡಿದ ಅಷ್ಟೂ ಸ್ವೀಟ್ ಬಾಕ್ಸ್‌ನ್ನು ಖಾಲಿ ಮಾಡಿಬಿಡ್ಬೇಡಿ. ಆರೋಗ್ಯಕ್ಕೆ ಯಾವ ರೀತಿಯ ಸಿಹಿತಿಂಡಿ ಒಳ್ಳೇದು, ಯಾವ ರೀತಿಯ ಸ್ವೀಟ್ಸ್ ಒಳ್ಳೇದಲ್ಲ ಅನ್ನೋದನ್ನ ತಿಳ್ಕೊಳ್ಳಿ.
ದೀಪಾವಳಿ ಹಬ್ಬಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಜನರು ಎರಡು ವರ್ಷಗಳ ಕೋವಿಡ್ ನಿರ್ಬಂಧದ ನಂತರ ತಮ್ಮ ಆತ್ಮೀಯರೊಂದಿಗೆ ಹಬ್ಬವನ್ನು ಆಚರಿಸಲು ಕಾಯುತ್ತಿದ್ದಾರೆ. ಹಬ್ಬ ಅಂದ್ಮೇಲೆ ಸ್ವೀಟ್ಸ್ ಇಲ್ಲದಿದ್ರೆ ಆಗುತ್ತಾ ? ಹಬ್ಬದ ಖುಷಿ ಹಂಚಲು ವೆರೈಟಿ ಸ್ವೀಟ್ ಅಂತೂ ಬೇಕೇ ಬೇಕು. ಆದ್ರೆ ತರಹೇವಾರಿ ಸ್ವೀಟ್ಸ್ ತಿನ್ನೋ ಭರದಲ್ಲಿ ಆರೋಗ್ಯಾನೂ ಹಾಳಾಗುತ್ತೆ. ಹೆಚ್ಚು ಸಿಹಿ ತಿನ್ನುವ ಅಭ್ಯಾಸ ಹೊಟ್ಟೆನೋವು, ತೂಕ ಹೆಚ್ಚಳ ಮೊದಲಾದ ಸಮಸ್ಯೆಗೆ ಕಾರಣವಾಗುತ್ತದೆ. ಹೀಗಾಗಿ ಹಬ್ಬ ಅಂತ ಖುಷಿಯಲ್ಲಿ ಬೇಕಾಬಿಟ್ಟಿ ಸ್ವೀಟ್ಸ್ ತಿನ್ನೋ ಮೊದಲು ಎಚ್ಚರಿಕೆ ವಹಿಸಬೇಕು. ಹಾಗಿದ್ರೆ ಹಬ್ಬಕ್ಕೆ ಎಂಥಾ ಸ್ವೀಟ್ಸ್ ತಿನ್ಬೇಕು. ಇಲ್ಲಿದೆ ಮಾಹಿತಿ.
ಹಬ್ಬ ಖುಷಿಯಾಗಿ ಸಮಯ ಕಳೆಯಲು ಪರಿಪೂರ್ಣ ಅವಕಾಶವಾಗಿದ್ದರೂ, ಆರೋಗ್ಯ ಸಮಸ್ಯೆಗಳು (Health problems) ಮತ್ತು ಹಠಾತ್ ತೂಕ ಹೆಚ್ಚಾಗುವುದನ್ನು ತಪ್ಪಿಸಲು ಬಯಸಿದರೆ ಹಬ್ಬದ ಆಹಾರವನ್ನು ಜಾಗರೂಕತೆಯಿಂದ ಆಯ್ಕೆ ಮಾಡುವುದು ಸಹ ಮುಖ್ಯವಾಗಿದೆ. ಸ್ವೀಟ್ಸ್‌ನಲ್ಲಿ ಹಲವಾರು ವಿಧಗಳಿವೆ, ಹಾಗೆಯೇ ಹೆಲ್ದೀ ಸ್ವೀಟ್ಸ್ ಮತ್ತು ಅನ್‌ಹೆಲ್ದೀ ಸ್ವೀಟ್ಸ್ ಸಹ ಇವೆ. ಅವುಗಳನ್ನು ಎಚ್ಚರಿಕೆಯಿಂದ ಆಯ್ದುಕೊಳ್ಳಬೇಕು. ಯಾವುದೇ ಚಿಂತೆಯಿಲ್ಲದೆ ಸೇವಿಸಬಹುದಾದ ಆರೋಗ್ಯಕರ ಭಾರತೀಯ ಸಿಹಿತಿಂಡಿಗಳ (Sweets) ಕೊರತೆಯಿಲ್ಲ. ಸಕ್ಕರೆ ಮತ್ತು ಮೈದಾ ದೇಹದಲ್ಲಿ ಉರಿಯೂತವನ್ನು ಉಂಟುಮಾಡುವ ಎರಡು ಪದಾರ್ಥಗಳಾಗಿವೆ. ಇದು ನಿಮ್ಮ ದೀರ್ಘಕಾಲದ ಕಾಯಿಲೆಗಳ (Disease) ಗಳೊಂದಿಗೆ ದೀಪಾವಳಿ ಸಂತೋಷವನ್ನು ಸಿಹಿಗೊಳಿಸಿ.
undefined
Diwali 2022: ಹಬ್ಬಕ್ಕೆ ಕಡಲೇಕಾಯಿ ಬರ್ಫಿ ಮಾಡಿ, ಗ್ಯಾಸ್ ಸಮಸ್ಯೆ ಕಾಡಲ್ಲ
ಯಾವ ರೀತಿಯ ಸ್ವೀಟ್ಸ್ ಆರೋಗ್ಯಕ್ಕೆ ಒಳ್ಳೆಯದು ?
ಹೆಚ್ಚಿನ ಸಿಹಿತಿಂಡಿಗಳು ಅತಿಯಾದ ಸಕ್ಕರೆ (Sugar) ಮತ್ತು ಮೈದಾವನ್ನು ಹೊಂದಿರುತ್ತವೆ. ಮಾತ್ರವಲ್ಲ ಅವುಗಳು ಸಾಮಾನ್ಯವಾಗಿ ಸರಳವಾದ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತವೆ. ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಸಹ ಹೊಂದಿರುತ್ತವೆ. ಸರಳವಾದ ಕಾರ್ಬೋಹೈಡ್ರೇಟ್‌ಗಳ ಪರಿಣಾಮವನ್ನು ಕಡಿಮೆ ಮಾಡಲು ನಾವು ಪ್ರಯತ್ನಿಸಬೇಕಾಗಿದೆ. ಇದಕ್ಕಾಗಿ ನಾವೇನು ಮಾಡಬಹುದು ಎಂಬ ಕುರಿತಾದ ಮಾಹಿತಿ ಇಲ್ಲಿದೆ.
ಹಾಲಿನ ಬೇಸ್‌ನೊಂದಿಗೆ ತಯಾರಿಸಿದ ಸಿಹಿತಿಂಡಿ ಆರಿಸಿ: ಹಾಲು ಪ್ರೋಟೀನ್ ಮತ್ತು ಕೊಬ್ಬನ್ನು ಹೊಂದಿರುತ್ತದೆ. ಸಿಹಿತಿಂಡಿಗಳು ಕೆನೆ ಆಧಾರಿತವಾಗಿದ್ದರೂ ಸಹ, ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುತ್ತದೆ. ಆದ್ದರಿಂದ, ರಸಮಲೈ (ಹಾಲಿನ ಕೊಬ್ಬು) ಮತ್ತು ಸಕ್ಕರೆ ಮತ್ತು ಮೈದಾ ಎರಡನ್ನೂ ಹೊಂದಿರುವ ಬಿಸ್ಕತ್ತುಗಳು ಅಥವಾ ಕೇಕ್‌ಗಳಿಗಿಂತ ಹಾಲಿನ ಪ್ರೋಟೀನ್‌ನ್ನು ಆರಿಸಿ.
ಫೈಬರ್ ಭರಿತ ಸಿಹಿತಿಂಡಿಗಳು ಒಳ್ಳೆಯದು: ಬೇಸನ್‌ನಲ್ಲಿ ನಾರಿನಂಶ ಅಧಿಕವಾಗಿದೆ. ಇದರಲ್ಲಿ ರಾಗಿಗಳು ಎರಡನೇ ಸ್ಥಾನದಲ್ಲಿವೆ. ರಾಗಿ ಸಿಹಿತಿಂಡಿಗಳು ಮತ್ತು ಗೋಧಿ ಲಾಡು, ಬೇಸನ್ ಲಾಡು ಆರೋಗ್ಯಕ್ಕೆ (Health) ತುಂಬಾ ಒಳ್ಳೇದು. ರಾಗಿ ಮತ್ತು ಅಟ್ಟಾ ನಂತರದ ಅತಿ ಹೆಚ್ಚು ನಾರಿನಂಶವನ್ನು ಬೇಸನ್ ಹೊಂದಿಗೆ ಎಂದು ತಜ್ಞರು ತಿಳಿಸುತ್ತಾರೆ.
ಹಬ್ಬಕ್ಕೆ ಸೀರೆ ರೆಡಿ ಓಕೆ, ಸ್ಕಿನ್ ಕೇರ್ ಮಾಡಿಕೊಳ್ಳೋದನ್ನು ಮರೆತ್ ಬಿಟ್ರಾ
ಕೃತಕ ಸಿಹಿಕಾರಕ ಸೇರಿಸಿದ ಸಿಹಿತಿಂಡಿ ಅವಾಯ್ಡ್ ಮಾಡಿ: ಕೃತಕ ಸಿಹಿಕಾರಕಗಳನ್ನು ಸೇರಿಸದ ಸಿಹಿತಿಂಡಿಗಳನ್ನು ಆರಿಸಿಕೊಳ್ಳಿ.ಕೃತಕ ಸಿಹಿಕಾರಕಗಳಿಗಿಂತ ಹೆಚ್ಚು ಆರೋಗ್ಯಕರವಾದ ಫ್ರಕ್ಟೋಸ್ ಮತ್ತು ಫೈಬರ್ ಹೊಂದಿರುವ ತಾಜಾ ಖರ್ಜೂರಗಳನ್ನು (Dates) ಮಿತವಾಗಿ ಸೇವಿಸುವುದು ಸುರಕ್ಷಿತವಾಗಿದೆ.
ಹಿತಮಿತವಾದ ಸೇವನೆ ಮುಖ್ಯ: ಕಡಿಮೆ ಪ್ರಮಾಣದಲ್ಲಿ ತಿನ್ನುವ ಅಭ್ಯಾಸ (Habit) ಒಳ್ಳೆಯದು. ಸ್ವೀಟ್ ನಿಮಗೆ ಎಷ್ಟೇ ಇಷ್ಟವಾಗಿದ್ದರೂ ಕಡಿಮೆ ಪ್ರಮಾಣದಲ್ಲಿ ತಿನ್ನಿ. ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು ತಪ್ಪುತ್ತದೆ. ನೀವು ಈ ಮೂಲಭೂತ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ, ಈ ಹಬ್ಬದ ಋತುವಿನಲ್ಲಿ ನಿಮ್ಮ ಫಿಟ್ನೆಸ್ ಗುರಿಗಳಲ್ಲಿ ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ. ಆರೋಗ್ಯ ಸಹ ಚೆನ್ನಾಗಿರುತ್ತದೆ.