Kitchen Hacks : ಪ್ರಯೋಜನಕ್ಕಿಲ್ಲವೆಂದು ಟೀ ಬ್ಯಾಗ್ ಎಸೆಯಬೇಡಿ, ಹೀಗ್ಮಾಡಿ..

By Suvarna News  |  First Published Feb 2, 2022, 3:46 PM IST

ಆರಾಮ ಖುರ್ಚಿಯಲ್ಲಿ ಕುಳಿತು ಗ್ರೀನ್ ಟೀ ಸವಿ ಸವಿದಾಗ ಮೈಡ್ ರಿಫ್ರೆಶ್ ಆಗುತ್ತೆ. ಟೀ ಸೇವನೆ ಮಾಡಿದ ನಂತ್ರ ಬ್ಯಾಗನ್ನು ನಾವು ಕಸಕ್ಕೆ ಹಾಕ್ತೇವೆ. ಆದ್ರೆ ಇಂದಿನಿಂದಲೇ ಈ ಬ್ಯಾಗ್ ಸಂಗ್ರಹಿಸಿ. ಅದ್ರಿಂದ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳಿ. 
 


ಗ್ರೀನ್ ಟೀ (Green Tea )ಬಳಕೆದಾರರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ತೂಕ (Weight) ಇಳಿಕೆ ಹಾಗೂ ಆರೋಗ್ಯ(Health)ಕ್ಕೆ ಗ್ರೀನ್ ಟೀ ಬಹಳ ಒಳ್ಳೆಯದು. ಸಾಮಾನ್ಯವಾಗಿ ಜನರು ಗ್ರೀನ್ ಟೀ ಬ್ಯಾಗ್‌ಗಳನ್ನು ಬಳಸಿದ ನಂತರ ಅದನ್ನು ಕಸಕ್ಕೆ ಎಸೆಯುತ್ತಾರೆ. ಆದರೆ ಗ್ರೀನ್ ಟೀ ಬ್ಯಾಗ್(Bag) ನಿಂದ ಅನೇಕ ಪ್ರಯೋಜನಗಳಿವೆ. ನೀವೂ ಗ್ರೀನ್ ಟೀ ಅಥವಾ ಟೀ ಬ್ಯಾಗ್ ಬಳಸುತ್ತಿದ್ದರೆ ಇಂದಿನಿಂದ ಗ್ರೀನ್ ಟೀ ಬ್ಯಾಗ್‌ಗಳನ್ನು ಎಸೆಯಬೇಡಿ. ಬಳಸಿದ ಗ್ರೀನ್ ಟೀ ಬ್ಯಾಗ್‌ಗಳನ್ನು ಸಹ ಹಲವಾರು ರೀತಿಯಲ್ಲಿ ಬಳಸಬಹುದು. ಗ್ರೀನ್ ಟೀ ಬ್ಯಾಗ್ ಸೌಂದರ್ಯವರ್ಧಕ (Cosmetics)ವಾಗಿ ಕೆಲಸ ಮಾಡುತ್ತದೆ ಎಂಬುದು ಅನೇಕರಿಗೆ ತಿಳಿದಿದೆ. ಕಣ್ಣಿ(Eye)ನ ಸೌಂದರ್ಯಕ್ಕೆ ಗ್ರೀನ್ ಟೀ ಬ್ಯಾಗ್ ಒಳ್ಳೆಯದು. ಹಾಗೆ ಗ್ರೀನ್ ಟೀ ಸ್ಕ್ರಬ್ (Scrub) ಮುಖಕ್ಕೆ ಒಳ್ಳೆಯದು. ಸುಕ್ಕುಗಳನ್ನು ಕಡಿಮೆ ಮಾಡಲು ಮತ್ತು ಮುಖದ ಹೊಳಪಿಗೆ ಇದು ಸಹಕಾರಿ. ಗ್ರೀನ್ ಟೀ ಕೇವಲ ಸೌಂದರ್ಯಕ್ಕೆ ಮಾತ್ರವಲ್ಲ ಇದ್ರಿಂದ ಇನ್ನೂ ಅನೇಕ ಪ್ರಯೋಜನವಿದೆ. ಇಂದು ಗ್ರೀನ್ ಟೀ ಬ್ಯಾಗ್ ನ ಇತರ ಪ್ರಯೋಜನಗಳ ಬಗ್ಗೆ ಹೇಳ್ತೆವೆ.

ಗ್ರೀನ್ ಟೀ ಬ್ಯಾಗನ್ನು ಹೀಗೂ ಬಳಸಿ ನೋಡಿ 

Latest Videos

undefined

ಪಾತ್ರೆಗಳ ಗ್ರೀಸ್ ತೆಗೆದುಹಾಕಲು ಗ್ರೀನ್ ಟೀ ಬ್ಯಾಗ್ : ಪ್ಲೇಟ್‌ಗಳು,ಪಾತ್ರೆಗಳಿಗೆ ಅಂಟಿಕೊಳ್ಳುವ ಗ್ರೀಸ್ ತೆಗೆದುಹಾಕಲು ಗ್ರೀನ್ ಟೀ ಬ್ಯಾಗ್‌ಗಳು ಉತ್ತಮವಾಗಿವೆ. ಬಳಸಿದ ಗ್ರೀನ್ ಟೀ ಬ್ಯಾಗ್‌ಗಳನ್ನು ಬಿಸಿನೀರಿಗೆ ಹಾಕಿ,ಆ ನೀರಿಗೆ ಪಾತ್ರೆಗಳನ್ನು ಹಾಕಿಡಿ. ಕೆಲ ಗಂಟೆ ಅಥವಾ ರಾತ್ರಿಯಿಡಿ ಪಾತ್ರೆಯನ್ನು ನೆನೆಸಿಡಿ. ನಂತ್ರ ಪಾತ್ರೆ ತೊಳೆಯುವ ಸೋಪಿನಿಂದ ಚೆನ್ನಾಗಿ ತೊಳೆಯಿರಿ. ಗ್ರೀನ್ ಟೀ ಬ್ಯಾಗ್,ಎಣ್ಣೆಯುಕ್ತ ಗ್ರೀಸ್ ಅನ್ನು ನೈಸರ್ಗಿಕವಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ.

ಕುಕ್ಟಾಪ್ ಮತ್ತು ಮೈಕ್ರೋವೇವ್ ಸ್ವಚ್ಛತೆ : ಗ್ರೀ ಟೀ ಬ್ಯಾಗ್ ಅಥವಾ ಟೀ ಬ್ಯಾಗನ್ನು ಕುದಿಸಿದ ನೀರಿಗೆ ಹಾಕಿ ತೆಗೆದ ನಂತ್ರ ಅದನ್ನು ಹೊರಗಿಡಿ. ಅದು ರೂಮ್ ಉಷ್ಣಾಂಶವನ್ನು ಪಡೆದ ನಂತರ, ಅದನ್ನು ಸ್ಪ್ರೇ ಬಾಟಲಿಗೆ ಹಾಕಿ. ಅದಕ್ಕೆ ನಿಂಬೆ ರಸವನ್ನು ಸೇರಿಸಿ. ಈ ಮಿಶ್ರಣವನ್ನು ನೀವು ಕುಕ್ಟಾಪ್ ಅಥವಾ ಮೈಕ್ರೋವೇವ್ ಮೇಲೆ ಸ್ಪ್ರೇ ಮಾಡಿ ನಂತ್ರ ಬಟ್ಟೆ ಅಥವಾ ಕಿಚನ್ ಟವೆಲ್ ನಿಂದ ಒರೆಸಬೇಕು. ಗಾಜಿನ ಗ್ಯಾಸ್ ಸ್ಟ್ಯಾಂಡ್ ಅಥವಾ ಗ್ಲಾಸ್ ಟೇಬಲ್ ಸ್ವಚ್ಛತೆಗೂ ಇದನ್ನು ಬಳಸಬಹುದು. ಮಸುಕಾಗಿದ್ದ ಗ್ಲಾಸ್ ಸ್ಟ್ಯಾಂಡ್ ಗಳು ಗ್ರೀನ್ ಟೀ ಸ್ಪ್ರೇ ನಂತ್ರ ಹೊಳೆಯುತ್ತವೆ. 

FOOD TIPS: ಹಸಿವಾಗುತ್ತೆ ಅಂತ ಆಗಾಗ ತಿನ್ಬೇಡಿ..ಊಟದ ಮಧ್ಯೆ ಇಷ್ಟು ಗಂಟೆ ಗ್ಯಾಪ್ ಇರ್ಲೇಬೇಕು

ಮಾಂಸವನ್ನು ಮೃದುಗೊಳಿಸಲು ಗ್ರೀನ್ ಟೀ ಬ್ಯಾಗ್ : ಮಾಂಸದ ಅಡುಗೆ ಮಾಡುವವರಿಗೆ ಬಳಸಿದ ಗ್ರೀನ್ ಬ್ಯಾಗ್ ಸಹಕಾರಿಯಾಗಲಿದೆ. ಮಾಂಸ,ಮೃದುವಾಗಿ ಬೇಯಬೇಕೆಂದ್ರೆ, ಗ್ರೀ ಟೀ ಬ್ಯಾಂಗ್ ನಲ್ಲಿ ಮಾಂಸವನ್ನು ಮ್ಯಾರಿನೇಟ್ ಮಾಡಿ. ಚಹಾದಲ್ಲಿ ಟ್ಯಾನಿಸ್ ಇರುವಿಕೆಯು ಮಾಂಸವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ.  ಅಡುಗೆಗೆ ನಿಮ್ಮ ಸಮಯವನ್ನು ಉಳಿಸುತ್ತದೆ. ಒಂದು ದೊಡ್ಡ ಬಟ್ಟಲಿಗೆ ಸ್ವಲ್ಪ ಬಿಸಿನೀರನ್ನು ಸೇರಿಸಿ, ಬಳಸಿದ ಟೀ ಬ್ಯಾಗ್‌ಗಳನ್ನು ಹಾಕಿ. ಪರಿಮಳ ಬಂದ ನಂತ್ರ ಮಾಂಸವನ್ನು ಮ್ಯಾರಿನೇಟ್ ಮಾಡಿ.

Food Tips: ಮೊಸರು ಮತ್ತು ಯೋಗರ್ಟ್ ಒಂದೇನಾ ? ಬೇರೆ ಬೇರೆನಾ ?

ಸುವಾಸನೆಗೆ ಬಳಸಿ : ಗ್ರೀನ್ ಟೀ ಕುದಿಸಿದ ತಕ್ಷಣ, ಟೀ ಬ್ಯಾಗ್‌ಗಳನ್ನು ಕತ್ತರಿಸಿ ಬಿಸಿಲಿಗೆ ಒಣಗಿಸಿ.ಮನೆಯ ಸುತ್ತ ಕೆಟ್ಟ ವಾಸನೆ ಇದ್ದರೆ ಅಥವಾ ಮನೆ ಸುಹಾಸನೆಯಿಂದ ಕೂಡಿರಬೇಕೆಂದ್ರೆ ಗ್ರೀನ್ ಟೀ ಈ ಮಿಶ್ರಣ ಸಹಕಾರಿ. ಪುಡಿಮಾಡಿ ಒಣಗಿಸಿದ ಈ ಮಿಶ್ರಣವನ್ನು ಪರಿಮಳ ತೈಲಗಳಿಗೆ ಸೇರಿಸಬಹುದು. ಪುದೀನ,ದಾಲ್ಚಿನಿ, ಟೀ ಎಲೆಗಳು ಅಡುಗೆಮನೆ ಮತ್ತು ಮನೆಯ ಸುತ್ತ ಬರುವ ಕೆಟ್ಟ ವಾಸನೆಯನ್ನು ತಡೆಯುತ್ತವೆ.

click me!