10 ಅಡಿ ಉದ್ದದ ಮಸಾಲೆ ದೋಸೆ.... ಪೂರ್ತಿ ತಿನ್ನಿ 71,000 ಗೆಲ್ಲಿ

By Suvarna News  |  First Published Feb 2, 2022, 3:33 PM IST
  • 10 ಅಡಿ ಉದ್ದದ ಮಸಾಲೆ ದೋಸೆ ತಯಾರಿಸಿದ ದೆಹಲಿಯ ಹೊಟೇಲ್
  • ಇನ್ಸ್ಟಾಗ್ರಾಮ್‌ನಲ್ಲಿ ದೋಸೆ ತಯಾರಿಸುವ ವಿಡಿಯೋ ವೈರಲ್
  • ಈ ದೋಸೆ ಪೂರ್ತಿ ಖಾಲಿ ಮಾಡಿ 71,000  ಗೆಲ್ಲಬಹುದು

ಗರಿಗರಿಯಾದ ಪೇಪರ್‌ನಂತಿರುವ ದೋಸೆ. ಒಳಗೆ ವೆರೈಟಿಯಾದ ಮಸಾಲೆ  ಎಲ್ಲಾ ಸೇರಿ ಮಸಾಲೆ ದೋಸೆ ಯಾರಿಗೆ ಇಷ್ಟ ಇಲ್ಲ ಹೇಳಿ. ಬಹುತೇಕರು ಈ ಮಸಾಲೆ ದೋಸೆಯನ್ನು ಇಷ್ಟ ಪಟ್ಟು ತಿನ್ನುತ್ತಾರೆ. ಸಾಮಾನ್ಯವಾಗಿ ಮಸಾಲೆ ದೋಸೆ ಎಷ್ಟು ಉದ್ದವಿರಬಹುದು ಹೆಚ್ಚೆಂದರೆ ಒಂದು ಅಡಿ. ಆದರೆ ನಾವು ನಿಮಗೆ ತೋರಿಸಲು ಹೊರಟಿರುವ ಮಸಾಲೆ ದೋಸೆ ಉದ್ದ ಎಷ್ಟು ಗೊತ್ತೆ. ಬರೋಬರಿ 10 ಅಡಿ. ಹೌದು ಕೇಳಲು ವಿಚಿತ್ರವೆಸನಿಸಿದರು ಇದು ಸತ್ಯ. ಇದನ್ನು ನಂಬಲಾಗದಿದ್ದರು ನೀವು ನಂಬಲೇಬೇಕು ಏಕೆಂದರೆ ಅಷ್ಟುದ್ದದ ಮಸಾಲೆ ದೋಸೆಯ ವಿಡಿಯೋ ನಮ್ಮ ಬಳಿ ಇದೆ. ಅಲ್ಲದೇ ಈ ಮಸಾಲೆ ದೋಸೆಯನ್ನು ತಿಂದರೆ 71,000 ರೂಪಾಯಿಯನ್ನು ನಿಮ್ಮದಾಗಿಸಿಕೊಳ್ಳಬಹುದು. 

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಡೆಲ್ಲಿ ಟಮ್ಮಿ(@delhi_tummy) ಎಂಬ ಖಾತೆಯಿಂದ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋದಲ್ಲಿ ನಾವು 10 ಅಡಿ ಉದ್ದದ ದೋಸೆ ತಯಾರಿಸುತ್ತಿರುವುದನ್ನು ನೋಡಬಹುದು. ಇದರಲ್ಲಿ ದೊಸೆ ತಯಾರಕ 10 ಅಡಿ ಉದ್ದದ ದೋಸೆ ಕಾವಲಿಯಲ್ಲಿ  ದೋಸೆ ಹಿಟ್ಟನ್ನು ಹಾಕುತ್ತಾ ಅದನ್ನು 10 ಅಡಿ ಉದ್ದದ ದೋಸೆಯಾಗಿ ಮಾಡುತ್ತಾನೆ. ನಂತರ ಅದರ ಮೇಲೆ ಎಣ್ಣೆ ಹಾಕಿ ಕಾಯಿಸುತ್ತಾನೆ.  ದೋಸೆ ಬೇಯುತ್ತಿದ್ದಂತೆ ಅದರ ಮೇಲೆ ದೋಸೆ ಮೇಲೆ ಅಲ್ಲುಗಡೆ ಪಲ್ಯ ಹಾಗೂ ಕೆಲ ಮಸಾಲೆಯನ್ನು ಹಾಕುತ್ತಾನೆ. ನಂತರ ಅದನ್ನು ಸುರುಳಿಯಂತೆ ಮಡಚಿ ಅಷ್ಟೆ ಉದ್ದದ ಪ್ಲೇಟ್‌ನಲ್ಲಿ ಹತ್ತಾರು ಬಗೆಯ ಚಟ್ನಿಯ ಜೊತೆ ಸರ್ವ್‌ ಮಾಡುತ್ತಾರೆ. ಕೊನೆಯಲ್ಲಿ ದೋಸೆಯ ಮೇಲೆ ಚೀಸ್‌ನ್ನು ಹಾಕುತ್ತಾರೆ. 

 
 
 
 
 
 
 
 
 
 
 
 
 
 
 

Tap to resize

Latest Videos

A post shared by Bhawna 💫 (@delhi_tummy)

 

ಇನ್ಸ್ಟಾಗ್ರಾಮ್‌ನಲ್ಲಿ  ಈ ವಿಡಿಯೋವನ್ನು ಪೋಸ್ಟ್ ಮಾಡಿ ದೆಹಲಿಯ ಉತ್ತಮ ನಗರದ ಸ್ವಾಮಿ ಶಕ್ತಿಸಾಗರ್ ಎಂಬಲ್ಲಿ ಈ 10 ಅಡಿ ಉದ್ದದ ದೋಸೆ ದೊರೆಯುವುದು ಎಂದು ಬರೆಯಲಾಗಿದೆ. ಈ ವಿಡಿಯೋ ಪೋಸ್ಟ್‌ ಆದಾಗಿನಿಂದ 4.2 ಮಿಲಿಯನ್ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 338 ಸಾವಿರ ಲೈಕ್ಸ್ ಬಂದಿದ್ದು, ಸಾವಿರಕ್ಕೂ ಹೆಚ್ಚು ಕಾಮೆಂಟ್ ಬಂದಿದೆ. ವಿಡಿಯೋ ನೋಡಿದ ಅನೇಕರು ದೋಸೆ ನೋಡಲು ಭಾರಿ ರುಚಿ ಇರುವಂತೆ ಕಾಣಿಸುತ್ತಿದೆ. ನಾವು ಒಮ್ಮೆ ಇದನ್ನು ತಿಂದು ನೋಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಈ ದೋಸೆಯ ಬೆಲೆ ಎಷ್ಟು. ಕೊನೆಯಲ್ಲಿ  ದೋಸೆಯ ಮೇಲೆ ಚೀಸ್‌ ಏಕೆ ಹಾಕಿದ್ದಾರೆ ಎಂದು ದೋಸೆಯ ಬಗ್ಗೆ ಕುತೂಹಲದಿಂದ ಪ್ರಶ್ನೆಗಳನ್ನು ಕೇಳಿದ್ದಾರೆ. 

ಇಡ್ಲಿ, ದೋಸೆ ಮಾಡೋ ಉದ್ದಿನ ಬೇಳೆ ಮಲಬದ್ಧತೆಗೂ ಮದ್ದು

ನೀವು ಈ ದೋಸೆ ತಿನ್ನಲು ಬಯಸುವುದಾದರೆ ರಾಷ್ಟ್ರ ರಾಜಧಾನಿಗೆ ಹೋಗಲೇಬೇಕಾಗುತ್ತದೆ. ಸಾಮಾನ್ಯವಾಗಿ ಎಲ್ಲಾದರೂ ಹೊರಗೆ ಹೋದಾಗ ಜನರು ಇಡ್ಲಿ, ದೋಸೆ ತಿನ್ನಲು ಇಷ್ಟಪಡುತ್ತಾರೆ. ದಕ್ಷಿಣ ಭಾರತದ ಆಹಾರಗಳು ವಿವಿಧ ವಿಷಯಗಳನ್ನು ಒಳಗೊಂಡಿವೆ, ಅವುಗಳು  ಸಾಕಷ್ಟು ಆರೋಗ್ಯಕರವಾಗಿವೆ. ಅಂತಹ ಆರೋಗ್ಯಕರ ಆಹಾರಗಳಲ್ಲಿ ದೋಸೆ ಕೂಡ ಒಂದು. ದೋಸೆ ದಕ್ಷಿಣದ ಪ್ರಸಿದ್ಧ ಆಹಾರಗಳಲ್ಲಿ ಒಂದಾಗಿದೆ. 

Vastu Tips : ಲಕ್ಷಾಧಿಪತಿಯನ್ನು ಭಿಕ್ಷಾಧಿಪತಿ ಮಾಡ್ಬಹುದು ದೋಸೆ ಬೇಯಿಸುವ ತವಾ

ದೋಸೆ(Dosa)ಯಲ್ಲಿ ಹಲವು ವಿಧಗಳಿವೆ.  ಬೇರೆ ಬೇರೆ ರೀತಿಯ ದವಸ ಧಾನ್ಯಗಳಿಂದ ದೋಸೆ ಮಾಡಿ ತಿನ್ನುವುದು ಆರೋಗ್ಯಕರ. ದೋಸೆ ತಿನ್ನಲು ರುಚಿಕರವಾಗಿರುವುದು ಮಾತ್ರವಲ್ಲ ಇದು ಆರೋಗ್ಯಕ್ಕೂ ಕೂಡ ಹೆಚ್ಚು ಪ್ರಯೋಜನಕಾರಿ ಆಗಿದೆ. ದೋಸೆ ಹಿಟ್ಟನ್ನು ತಯಾರಿಸಲು ಅಕ್ಕಿ ಮತ್ತು ಉದ್ದಿನಬೇಳೆಯನ್ನು ಬಳಸಲಾಗುತ್ತದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಹೊಟ್ಟೆ ಭಾರವಾಗುವುದಿಲ್ಲ.

click me!