Work From Home Snacks: ಕೆಲ್ಸದ ಮಧ್ಯೆ ಏನೇನೋ ತಿನ್ಬೇಡಿ. ಹೆಲ್ದಿ ಫುಡ್ ಲಿಸ್ಟ್ ಇಲ್ಲಿದೆ

By Suvarna News  |  First Published Feb 10, 2022, 4:12 PM IST

ಊಟ, ತಿಂಡಿಯ ಮಧ್ಯೆ ಆಗಾಗ ಹಸಿವಾಗೋದು ಹಲವರಲ್ಲಿ ಕಂಡುಬರುವ ಸಮಸ್ಯೆ. ಅದರಲ್ಲೂ ವರ್ಕ್ ಫ್ರಂ ಹೋಮ್‌  (Work From Home) ಶುರುವಾದ ಮೇಲೆ ಮಿಡ್ ಮೀಲ್ ಕ್ರೇವಿಂಗ್ಸ್  (Cravings) ಹಲವರಲ್ಲಿ ಹೆಚ್ಚಾಗಿದೆ. ಆದ್ರೆ ಹಸಿವಾಗುತ್ತೆ ಅಂತ ಏನೇನೋ ತಿಂದ್ರೆ ತೂಕ (Weight) ಹೆಚ್ಚಳವಾಗೋದು ಖಂಡಿತ. ಹೀಗಾಗಿ ಏನು ತಿನ್ನೋದು ಒಳ್ಳೇದು ಅನ್ನೋದನ್ನು ಮೊದಲು ತಿಳ್ಕೊಳ್ಳೋದು ಒಳಿತು.


ಕೊರೋನಾ (Corona) ಬಂದಾಗಿನಿಂದಲೂ ವರ್ಕ್ ಫ್ರಂ ಹೋಮ್‌   (Work From Home)  ಸಾಮಾನ್ಯವಾಗಿ ಎಲ್ಲರಿಗೂ ಅಭ್ಯಾಸವಾಗಿಬಿಟ್ಟಿದೆ. ಕೆಲಸದ ಮನೆಯ ನಡುವಿನ ಸಂಬಂಧವನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಹಲವರು ಸಮರ್ಥರಾಗಿದ್ದಾರೆ. ದೈಹಿಕ, ಮಾನಸಿಕ ಆರೋಗ್ಯ (Health)ದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಮನೆಯಿಂದ ಕೆಲಸ ಮಾಡುವುದು ಮುಂಬರುವ ವರ್ಷಗಳಲ್ಲಿ ಸಾಮಾನ್ಯವಾಗಿಬಿಡುವ ಸಾಧ್ಯತೆಯೂ ಇದೆ. ಹೀಗಾಗಿ ತಿನ್ನುವ ಆಹಾರ (Food)ದ ಬಗ್ಗೆಯೂ ಪ್ರತ್ಯೇಕವಾಗಿ ಕಾಳಜಿ ವಹಿಸಬೇಕಾದುದು ಅಗತ್ಯವಾಗಿದೆ. ಅದರಲ್ಲೂ ಕೋವಿಡ್ ಕಾಲದಲ್ಲಿ ಜನರು ಆರೋಗ್ಯಕರ ಆಹಾರದ ಮಹತ್ವದ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದಾರೆ. ಆದರೆ ನಮ್ಮಲ್ಲಿ ಅನೇಕರು ವರ್ಕ್ ಫ್ರಂ ಹೋಮ್ ಮಧ್ಯೆ ಊಟ, ತಿಂಡಿಯ ಮಧ್ಯೆ ಹಸಿವಾದಾಗ ಏನನ್ನು ತಿನ್ನುವುದು ಉತ್ತಮ ಎಂಬುದನ್ನೂ ಇನ್ನೂ ಸ್ಪಷ್ಟವಾಗಿ ತಿಳಿದುಕೊಂಡಿಲ್ಲ..
ಪೌಷ್ಟಿಕತಜ್ಞ ಮತ್ತು ಮಧುಮೇಹ ಶಿಕ್ಷಣತಜ್ಞರಾದ ಹರ್ಷಿತಾ ದಿಲಾವ್ರಿ, ವರ್ಕ್ ಫ್ರಂ ಹೋಮ್ ಬಿಡುವಿನ ಮಧ್ಯೆ ತಿನ್ನಬಹುದಾದ ಕೆಲವು ಆರೋಗ್ಯಕರ ತಿಂಡಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. 

ಹುರಿದ ಕಡಲೆ
ಕೆಲಸದ ಮಧ್ಯೆ ಬೋರಿಂಗ್ ಅನಿಸುವಾಗ ಆಗಾಗ ಏನಾದರೂ ತಿನ್ನಬೇಕೆಂದೆನಿಸಿದರೆ ಹುರಿದ ಕಡಲೆಯನ್ನು ತಿನ್ನುವುದು ಅತ್ಯುತ್ತಮ. ಯಾಕೆಂದರೆ ಇದು ಬಾಯಿಗೆ ರುಚಿಗೆ ಮಾತ್ರವಲ್ಲ ಪೋಷಕಾಂಶಗಳಿಂದಲೂ ಸಮೃದ್ಧವಾಗಿದೆ. ಹುರಿದ ಕಡಲೆಯು ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್, ಫೈಬರ್ ಮತ್ತು ಹಲವಾರು ಜೀವಸತ್ವಗಳಿವೆ. ಹೀಗಾಗಿ ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿ ಎಂಬ ಚಿಂತೆಯಿಲ್ಲ. ಕೆಲಸದ ಬಿಡುವಿನ ವೇಳೆಯಲ್ಲಿ, ರಜಾ ದಿನದಲ್ಲಿ ತಯಾರಿಸಿ ತಿನ್ನಬಹುದು.

Tap to resize

Latest Videos

undefined

1/2 ಕಪ್ (125 ಗ್ರಾಂ) ಕಡಲೆಯಲ್ಲಿ 5 ಗ್ರಾಂ ಫೈಬರ್ ಮತ್ತು 10 ಗ್ರಾಂ ಪ್ರೋಟೀನ್ ಇರುತ್ತದೆ. ಅದಕ್ಕಿಂತ ಹೆಚ್ಚಾಗಿ, ಅವು ನಿಮ್ಮ ದೇಹಕ್ಕೆ ಅಗತ್ಯವಿರುವ ಹೆಚ್ಚಿನ ಅಮೈನೋ ಆಮ್ಲಗಳನ್ನು ಹೊಂದಿರುತ್ತವೆ. ಕಡಲೆಯಲ್ಲಿರುವ ಪ್ರೋಟೀನ್ ಇತರ ದ್ವಿದಳ ಧಾನ್ಯಗಳಿಗಿಂತ ಉತ್ತಮ ಗುಣಮಟ್ಟದ್ದಾಗಿದೆ. ಕಡಲೆಯನ್ನು ತೊಳೆದು ಒಣಗಿಸಿ, ಎಣ್ಣೆಯಲ್ಲಿ ಹುರಿದು, ಅಗತ್ಯಕ್ಕೆ ತಕ್ಕಷ್ಟು ಉಪ್ಪು, ಖಾರ ಇತರ ಮಸಾಲೆಗಳನ್ನು ಬಳಸಿ ಇದನ್ನು ತಿನ್ನಬಹುದು.

Work From Home: ಬೋರಿಂಗ್ ಅನಿಸ್ತಿದ್ಯಾ ? ಹ್ಯಾಪಿಯಾಗಿರಲು ಹೀಗೆ ಮಾಡಿ

ಕಾಟೇಜ್ ಚೀಸ್ ಮತ್ತು ಹಣ್ಣು
ಪ್ರೋಟೀನ್ ಭರಿತ ಕಾಟೇಜ್ ಚೀಸ್ (Cheese) ಮತ್ತು ಹಣ್ಣುಗಳು ಆರೋಗ್ಯಕರ ತಿಂಡಿಯಾಗಿದ್ದು, ಇದು ಕೆಲಸದ ಬಿಡುವಿನ ಸಮಯದಲ್ಲಿ ತಿನ್ನಲು ಸೂಕ್ತವಾಗಿದೆ. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಆದರೆ ಪೋಷಕಾಂಶಗಳಿಂದ ತುಂಬಿರುತ್ತದೆ. 1/2 ಕಪ್ ಕಡಿಮೆ ಕೊಬ್ಬಿನ ಕಾಟೇಜ್ ಚೀಸ್ 12 ಗ್ರಾಂ ಪ್ರೋಟೀನ್ ಮತ್ತು 10% ಡಿವಿ ಕ್ಯಾಲ್ಸಿಯಂಗೆ ಕೇವಲ 80 ಕ್ಯಾಲೊರಿಗಳನ್ನು ಹೊಂದಿರುತ್ತದೆ.

ಮನೆಯಲ್ಲಿ ತಯಾರಿಸಿದ ಎನರ್ಜಿ ಬಾಲ್ಸ್
ಎನರ್ಜಿ ಬಾಲ್‌ಗಳನ್ನು ಸಾಮಾನ್ಯವಾಗಿ ಓಟ್ಸ್, ಬಟರ್ (Butter), ಸಕ್ಕರೆ ಮತ್ತು ಒಣಗಿದ ಹಣ್ಣು ಮತ್ತು ತೆಂಗಿನಕಾಯಿಯನ್ನು ಬಳಸಿ ತಯಾರಿಸಲಾಗುತ್ತದೆ. ಇವುಗಳು ಫೈಬರ್, ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ ಮತ್ತು ಹಲವಾರು ಜೀವಸತ್ವಗಳು ಮತ್ತು ಖನಿಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಎನರ್ಜಿ ಬಾಲ್ಸ್ ತಯಾರಿಸಲು 1 ಕಪ್ ರೋಲ್ಡ್ ಓಟ್ಸ್ ಅನ್ನು 1/2 ಕಪ್ ಕಡಲೆಕಾಯಿ ಬೆಣ್ಣೆ, 2 ಟೇಬಲ್ ಸ್ಪೂನ್ ಅಗಸೆ ಬೀಜಗಳು, ಬೇಕಾದಷ್ಟು ಒಣಹಣ್ಣುಗಳು, 1/4 ಕಪ್ ಜೇನುತುಪ್ಪದೊಂದಿಗೆ ಮಿಕ್ಸ್ ಮಾಡಿಕೊಳ್ಳಿ. ತೆಂಗಿನಕಾಯಿಯನ್ನು ಸೇರಿಸಿ ಉಂಡೆ ಕಟ್ಟಿಕೊಳ್ಳಿ. ಬೇಕಾದಾಗ ಸವಿಯಲು ಎನರ್ಜಿ ಬಾಲ್ಸ್ ಸಿದ್ಧ.

Weight Loss: ವರ್ಕ್ ಫ್ರಂ ಹೋಮ್‌ನಿಂದ ತೂಕ ಹೆಚ್ಚಾಗ್ತಾ ಇದ್ಯಾ? ಯೋಚಿಸ್ಬೇಡಿ

ಬೇಯಿಸಿದ ಮೊಟ್ಟೆಗಳು
ಬೇಯಿಸಿದ ಮೊಟ್ಟೆಗಳು ಪೌಷ್ಟಿಕ ತಿಂಡಿಗಳಲ್ಲಿ ಒಂದಾಗಿದೆ. ಮೊಟ್ಟೆ (Egg)ಗಳು ದೇಹಕ್ಕೆ ಅಗತ್ಯವಿರುವ ಪ್ರತಿಯೊಂದು ಪೋಷಕಾಂಶಗಳ ಸಣ್ಣ ಪ್ರಮಾಣವನ್ನು ಹೊಂದಿರುತ್ತವೆ. ಒಂದು ದೊಡ್ಡ ಮೊಟ್ಟೆ (50 ಗ್ರಾಂ) ಕಬ್ಬಿಣ, ಕ್ಯಾಲ್ಸಿಯಂ, ಕೋಲೀನ್ ಮತ್ತು ವಿಟಮಿನ್ (Vitamin) ಎ, ಬಿ6, ಬಿ12 ಮತ್ತು ಡಿ ಜೊತೆಗೆ ಇತರ ಪೋಷಕಾಂಶಗಳ ಜೊತೆಗೆ 6 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ. ಹೀಗಾಗಿ ಪ್ರತಿ ದಿನ ಒಂದು ಮೊಟ್ಟೆ ತಿಂದರೂ ಸಾಕು ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳು ಲಭಿಸುತ್ತವೆ.

ಪಾಪ್ ಕಾರ್ನ್
ಪಾಪ್‌ಕಾರ್ನ್ ಹೆಚ್ಚಿನ ಫೈಬರ್ ಮತ್ತು ಕಡಿಮೆ ಕ್ಯಾಲೋರಿ ಹೊಂದಿರುವ ತಿಂಡಿಯಾಗಿದೆ. ಎರಡು ಕಪ್ ಪಾಪ್‌ಕಾರ್ನ್ 62 ಕ್ಯಾಲೋರಿಗಳು, 12 ಗ್ರಾಂ ಕಾರ್ಬೋ ಹೈಡ್ರೇಟ್‌ಗಳು, 2 ಗ್ರಾಂ ಫೈಬರ್ ಮತ್ತು ಹಲವಾರು ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುತ್ತದೆ.ಇದಕ್ಕಿಂತ ಹೆಚ್ಚಾಗಿ, ಇದು ಪಾಲಿಫಿನಾಲ್ಸ್ ಎಂಬ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ಹೃದ್ರೋಗದಂತಹ ದೀರ್ಘಕಾಲದ ಪರಿಸ್ಥಿತಿಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಸೇಬು ಮತ್ತು ಕಡಲೆಕಾಯಿ ಬೆಣ್ಣೆ
ನೈಸರ್ಗಿಕ ಕಡಲೆಕಾಯಿ ಬೆಣ್ಣೆಯೊಂದಿಗೆ ಆಪಲ್ ಚೂರುಗಳನ್ನು ತಿನ್ನುವುದು ರುಚಿಕರವಾಗಿರುತ್ತದೆ. ಕಡಲೆಕಾಯಿ ಬೆಣ್ಣೆಯು ಪ್ರೋಟೀನ್ (Protein) ಮತ್ತು ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ. ಸೇಬುಗಳಲ್ಲಿ ಫೈಬರ್ ಮತ್ತು ನೀರಿನಾಂಶ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. 1 ಮಧ್ಯಮ ಗಾತ್ರದ ಸೇಬು 85% ಕ್ಕಿಂತ ಹೆಚ್ಚು ನೀರು ಮತ್ತು 4 ಗ್ರಾಂಗಿಂತ ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತದೆ. ಇನ್ಯಾಕೆ ತಡ, ಊಟ-ತಿಂಡಿಯ ನಂತರ ಹಸಿವಾದಾಗಲ್ಲೆಲ್ಲಾ ಜಂಕ್ಪುಡ್, ಪಿಜ್ಜಾ, ಬರ್ಗರ್ ತಿನ್ನೋ ಬದಲು ಇಂಥಹಾ ಪ್ರೋಟೀನ್ ಭರಿತ ತಿನಿಸುಗಳನ್ನು ತಿನ್ನಿ.

click me!