ಸ್ವೀಟ್ ಕಾರ್ನ್ ಹೆಸರು ಕೇಳ್ತಿದ್ದಂತೆ ಬಾಯಲ್ಲಿ ನೀರು ಬರುತ್ತೆ. ಬಿಸಿ ಬಿಸಿ ಕಾರ್ನ್ ಬಜ್ಜಿ ಟೀ ಜೊತೆಗಿದ್ರೆ ಅದ್ರ ಮಜವೇ ಬೇರೆ. ಆದ್ರೆ ಕಾರ್ನ್ ಜೊತೆ ಬರುವ ರೇಷ್ಮೆಯಂತ ನಾರು ಮನೆತುಂಬ ಕಸ ಮಾಡುತ್ತೆ ಅಂತಾ ಗೊಣಗೋರಿದ್ದಾರೆ. ಅದು ಕಸವಲ್ಲ, ಔಷಧಿ ಅನ್ನೋದು ಅನೇಕರಿಗೆ ತಿಳಿದೇ ಇಲ್ಲ.
ಸ್ವೀಟ್ ಕಾರ್ನ್ ಎಲ್ಲರಿಗೂ ಇಷ್ಟವಾಗುವ ಆಹಾರ. ಮಕ್ಕಳು ತುಂಬಾ ಇಷ್ಟಪಟ್ಟು ಇದನ್ನು ತಿನ್ನುತ್ತಾರೆ. ನೀವು ಜೋಳದಲ್ಲಿ ನಾನಾ ರೀತಿಯ ಖಾದ್ಯಗಳನ್ನು ತಯಾರಿಸಬಹುದು. ಮಳೆ ಬರ್ತಿದೆ ಎಂದಾಗ ಸುಟ್ಟ ಜೋಳ ತಿನ್ನಲು ಎಲ್ಲರೂ ಇಷ್ಟಪಡ್ತಾರೆ. ಜೋಳ ಬಾಯಿಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಬಹಳ ಒಳ್ಳೆಯದು. ಅನೇಕ ಪೋಷಕಾಂಶಗಳಿಂದ ಇದು ಸಮೃದ್ಧವಾಗಿದೆ.
ಮನೆಗೆ ಸ್ವೀಟ್ ಕಾರ್ನ್ (Sweet Corn) ತರುವ ನಾವು ಅದರ ಮೇಲಿರುವ ಹೊಳೆಯುವ, ರೇಷ್ಮೆಯಂತ ನಾರನ್ನು ತೆಗೆದು ಎಸೆಯುತ್ತೇವೆ. ಇನ್ಮುಂದೆ ಈ ತಪ್ಪನ್ನು ಮಾಡ್ಬೇಡಿ. ನೀವು ಜೋಳದ ಜೊತೆ ಅದರ ನಾರನ್ನು ಕೂಡ ಸೇವನೆ ಮಾಡಿ. ಅದ್ರಿಂದ ನಾನಾ ಪ್ರಯೋಜನವಿದೆ. ನಾವಿಂದು ಅದ್ರ ಟೀ (Tea) ತಯಾರಿಸೋದು ಹೇಗೆ ಹಾಗೆ ಅದ್ರ ಪ್ರಯೋಜನವೇನು ಎಂಬುದನ್ನು ನಿಮಗೆ ಹೇಳ್ತೇವೆ.
ಹಾಲಿನ ಪುಡಿಯಿಂದ ರಸಮಲೈ ಮಾಡೋ ಸುಲಭ ವಿಧಾನ ಇಲ್ಲಿದೆ!
ಜೋಳದ ನಾರಿನ ಟೀ ತಯಾರಿಸೋದು ಹೇಗೆ? : ಇದನ್ನು ಫೀಮೇಲ್ ಪಾರ್ಟ್ ಅಂತಾ ಕರೆಯಲಾಗುತ್ತದೆ. ನೀವು ಮೊದಲು 10 ಗ್ರಾಂ ಜೋಳದ ನಾರನ್ನು ತೆಗೆದುಕೊಂಡು ಅದನ್ನು ನೀರಿಗೆ ಹಾಕಿ ಕುದಿಸಿ. ಎರಡು ಲೋಟ ನೀರು (Water) ಒಂದು ಲೋಟವಾಗುವವರೆಗೆ ಕುದಿಸಿ. ನಂತ್ರ ಸೋಸಿ ಆ ನೀರನ್ನು ಸೇವನೆ ಮಾಡಬೇಕು. ನೀವು ಈ ನಾರನ್ನು ಬಿಸಿ ಮಾಡಿ, ಅದನ್ನು ಕುಟ್ಟಿ ಸಣ್ಣ ಪುಡಿ ಮಾಡಿ ನಂತ್ರ ಅದನ್ನು ಕ್ಯಾಪ್ಸೂಲ್ ಗೆ ಹಾಕಿ ಮಾತ್ರೆಗಳ ರೂಪದಲ್ಲಿ ಅದನ್ನು ಪ್ರತಿ ದಿನ ಒಂದರಂತೆ ಸೇವನೆ ಮಾಡಬಹುದು.
ಜೋಳದ ನಾರಿನಿಂದಾಗುವ ಲಾಭವೇನು? : ಜೋಳದ ನಾರಿನಲ್ಲಿ ವಿಟಮಿನ್ ಎ, ವಿಟಮಿನ್ ಬಿ 2, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ, ಕಬ್ಬಿಣ, ಫೈಬರ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಖನಿಜಗಳು ಸಮೃದ್ಧವಾಗಿವೆ.
Healthy Food: ಬಹುಪಯೋಗಿ ಸಾಸಿವೆ ಮಾರಣಾಂತಿಕವೂ ಹೌದು
ಮೂತ್ರನಾಳದ ಸೋಂಕಿಗೆ ಪರಿಹಾರ : ದೀರ್ಘಕಾಲದಿಂದ ಮೂತ್ರನಾಳದ ಸೋಂಕಿನಿಂದ ಅಥವಾ ಮೂತ್ರ ವಿಸರ್ಜನೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಿಂದ ಬಳಲುತ್ತಿದ್ದರೆ ನೀವು ಜೋಳದ ನಾರಿನ ಟೀ ಸೇವನೆ ಮಾಡಿ. ಕಾರ್ನ್ ನಾರು ಉರಿಯೂತವನ್ನು ಕಡಿಮೆ ಮಾಡುತ್ತದೆ. ಮೂತ್ರಕೋಶ ಮತ್ತು ಮೂತ್ರನಾಳದ ಉರಿಯೂತವನ್ನು ಶಮನಗೊಳಿಸುತ್ತದೆ. ಜೋಳದ ನಾರಿನ ಭಾಗವನ್ನು ನೆರಳಿನಲ್ಲಿ ಒಣಗಿಸಿ. ನಂತ್ರ ಅದರಲ್ಲಿ 50 ಗ್ರಾಂ ನಾರನ್ನು ತೆಗೆದುಕೊಂಡು ಎರಡು ಲೋಟ ನೀರಿಗೆ ಹಾಕಿ ಕುದಿಸಿ. ನೀರು ಅರ್ಧವಾದ್ಮೇಲೆ ಗ್ಯಾಸ್ ಬಂದ್ ಮಾಡಿ, ಅದನ್ನು ಸೋಸಿ ನೀವು ಸೇವನೆ ಮಾಡಿ. ಈ ಟೀಗೆ ನೀವು ನಿಂಬೆ ರಸ, ಉಪ್ಪು ಅಥವಾ ಸ್ವಲ್ಪ ಸಕ್ಕರೆಯನ್ನು ಸೇರಿಸಬಹುದು. ಈ ಪಾನೀಯವನ್ನು ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಸೇವಿಸಬಹುದು. ಇದರ ಸೇವನೆ ದಿನ ಅತಿಯಾದ ಸಿಹಿ, ಮದ್ಯ, ಮಾಂಸ ಸೇವನೆ ಮಾಡಬೇಡಿ.
ಬೊಜ್ಜಿಗೆ ಒಳ್ಳೆಯ ಔಷಧ : ಸ್ಥೂಲಕಾಯ ಅನೇಕ ರೋಗಕ್ಕೆ ಎಡೆಮಾಡಿಕೊಡುತ್ತದೆ. ತೂಕ ನಿಯಂತ್ರಣದಲ್ಲಿದ್ದರೆ ವ್ಯಕ್ತಿ ಆರೋಗ್ಯವಾಗಿರಬಲ್ಲ. ನೀವು ತೂಕ ಕಡಿಮೆ ಮಾಡಿಕೊಳ್ಳಬೇಕೆಂದ್ರೆ ಜೋಳದ ನಾರಿನ ಟೀ ಸೇವನೆ ಮಾಡಿ. ಕೊಬ್ಬು ಕರಗಿಸುವುದಲ್ಲದೆ, ದೇಹದಲ್ಲಿರುವ ವಿಷವನ್ನು ಹೊರಗೆ ಹಾಕುತ್ತದೆ.