Healthy Food: ಬಹುಪಯೋಗಿ ಸಾಸಿವೆ ಮಾರಣಾಂತಿಕವೂ ಹೌದು

By Suvarna News  |  First Published Apr 1, 2023, 4:34 PM IST

ಅಡುಗೆ ಎಂದಾಕ್ಷಣ ಸಾಸಿವೆ ಎಣ್ಣೆ ಕೈನಲ್ಲಿ ಹಿಡಿಯೋರು ನೀವಾಗಿದ್ರೆ ಇನ್ಮುಂದೆ ಹಿತಮಿತವಾಗಿ ಬಳಸಿ. ಯಾಕೆಂದ್ರೆ ಅತಿಯಾದ್ರೆ ಎಲ್ಲವೂ ವಿಷವೇ. ಸಾಸಿವೆ ಕೂಡ ಇದ್ರಿಂದ ಹೊರತಾಗಿಲ್ಲ. ಮಿತಿಮಿತಿ ಸಾಸಿವೆ ಎಣ್ಣೆ ಬಳಸಿದ್ರೆ ಖಾಯಿಲೆಗಳನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. 
 


ಭಾರತೀಯರ ಅಡುಗೆಯಲ್ಲಿ ಸಾಸಿವೆಗೆ ಬಹಳ ಪ್ರಮುಖ ಸ್ಥಾನವಿದೆ. ಒಗ್ಗರಣೆ ಎಂದಾಕ್ಷಣ ಅಲ್ಲಿ ಸಾಸಿವೆಯ ಚಿಟಪಟ ಸದ್ದು ಕೇಳಿಯೇ ಕೇಳಿಸುತ್ತದೆ. ಸಾಸಿವೆ ತನ್ನ ರುಚಿ, ಪೌಷ್ಠಿಕಾಂಶ ಹಾಗೂ ಆರೋಗ್ಯಕರ ಲಕ್ಷಣದಿಂದಲೇ ಹೆಸರುವಾಸಿ. ಸಾಸಿವೆ ಕಾಳು, ಸಾಸಿವೆ ಎಣ್ಣೆಯನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಉಪ್ಪಿನಕಾಯಿಯಲ್ಲಿ ಕೂಡ ಸಾಸಿವೆಗೆ ಬಹಳ ಮುಖ್ಯ ಸ್ಥಾನವಿದೆ. ಸಾಸಿವೆಯ ಎಲೆಗಳು ಕೂಡ ಹೆಲ್ದಿ ಮಿನರಲ್ಸ್ ಗಳಿಂದ ಕೂಡಿದೆ.

ಓಮೇಗಾ 3 (Omega 3) ಯ ಆಗರವಾಗಿರುವ ಸಾಸಿವೆ (Mustard) ಯಲ್ಲಿ ಆಂಟಿ ಆಕ್ಸಿಡೆಂಟ್ (Antioxidant) ಗುಣಗಳು ಕೂಡ ಇವೆ. ಇಷ್ಟೆಲ್ಲ ಆರೋಗ್ಯಕರ ಅಂಶಗಳನ್ನು ಹೊಂದಿರುವ ಸಾಸಿವೆಯನ್ನು ಅವಶ್ಯಕತೆಗಿಂತ ಹೆಚ್ಚು ತಿಂದರೆ ಅದು ಆರೋಗ್ಯ (Health) ಕ್ಕೆ ಬಹಳ ಹಾನಿಯುಂಟುಮಾಡುತ್ತದೆ. ಕೆಲವು ಸಮಯದಲ್ಲಿ ಇದು ಮಾರಣಾಂತಿಕವೂ ಆಗಬಹುದು. ಹಾಗಾಗಿ  ದೀರ್ಘಾವಧಿಯಲ್ಲಿ ಸಾಸಿವೆ ಅಥವಾ ಸಾಸಿವೆ ಎಣ್ಣೆಯನ್ನು ಬಳಸುವವರು ಅದರ ಸೈಡ್ ಇಫೆಕ್ಟ್ ಗಳ ಕುರಿತು ತಿಳಿದುಕೊಳ್ಳುವುದು ಉತ್ತಮ.

Latest Videos

undefined

HEALTH TIPS: ಬಾಳೆ ಹಣ್ಣು ಮಾತ್ರವಲ್ಲ ಬಾಳೆ ಎಲೆ ನೀರೂ ಆರೋಗ್ಯಕ್ಕೆ ಬೇಕು

ಸಾಸಿವೆಯ ಅತಿಯಾದ ಬಳಕೆಯಿಂದ ಶ್ವಾಸಕೋಶದ ಕ್ಯಾನ್ಸರ್ : ಸಾಸಿವೆ ಎಣ್ಣೆಯಲ್ಲಿ ಕಂಡುಬರುವ ಎರುಸಿಕ್ ಎಸಿಡ್ ಶ್ವಾಸಕೋಶವನ್ನು ಹಾನಿಗೊಳಿಸುತ್ತದೆ. ಎರುಸಿಕ್ ಎಸಿಡ್ ಸಸ್ಯಜನ್ಯ ಎಣ್ಣೆಗಳಲ್ಲಿ ಕಂಡುಬರುವ ಫ್ಯಾಟಿ ಎಸಿಡ್ ಆಗಿದೆ. ಇದು ರೆಸ್ಪರೇಟರಿ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿ ಉಸಿರಾಟ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ನ್ಯಾಶನಲ್ ಲೈಬ್ರಿ ಆಫ್ ಮೆಡಿಸಿನ್ ನಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ದೀರ್ಘಾವಧಿ ಸಾಸಿವೆ ಎಣ್ಣೆ ಸೇವನೆಯಿಂದ ಶ್ವಾಸಕೋಶದ ಕ್ಯಾನ್ಸರ್ ನ ಅಪಾಯ ಹೆಚ್ಚಿದೆ.

ಡ್ರಾಪ್ಸಿ ತೊಂದರೆ : ಡ್ರಾಪ್ಸಿ ಅಥವಾ ಎಡಿಮಾ ಒಂದು ಭಯಾನಕ ರೋಗವಾಗಿದೆ. ಇದರಿಂದ ದೇಹದ ವಿವಿಧ ಭಾಗದಲ್ಲಿ ಹೆಚ್ಚಿನ ಪ್ರಮಾಣದ ದ್ರವ ಶೇಖರಣೆಯಾಗಿ ಊತಗಳು ಉಂಟಾಗುತ್ತವೆ. ಕೆಲವರು ಪೂರಿ, ಕಚೋರಿ ಮುಂತಾದ ಖಾದ್ಯಗಳನ್ನು ತಯಾರಿಸಲು ಸಾಸಿವೆ ಎಣ್ಣೆಯನ್ನು ಬಳಸುತ್ತಾರೆ. ಸಾಸಿವೆ ಎಣ್ಣೆಯಲ್ಲಿ  ಅರ್ಗೆಮೊನ್ ಎಣ್ಣೆ, ಸೈನೈಡ್ ಮುಂತಾದವುಗಳ ಕಲಬೆರಕೆಯಿಂದ ಡ್ರಾಪ್ಸಿ ಖಾಯಿಲೆ ಉಂಟಾಗುವ ಸಾಧ್ಯತೆ ಹೆಚ್ಚಿದೆ.
ಅತಿಯಾದ ಸಾಸಿವೆ ಎಣ್ಣೆ ಬಳಕೆಯಿಂದ ಕಿಡ್ನಿ, ಹೃದಯ ಮುಂತಾದ ಅಂಗಗಳು ದುರ್ಬಲವಾಗುತ್ತದೆ. ಇದರಿಂದ ಕಲುಷಿತ ನೀರು ದೇಹದಲ್ಲಿ ಶೇಖರಣೆಯಾಗಲು ಆರಂಭವಾಗುತ್ತದೆ. ಇದರಿಂದ ಹೊಟ್ಟೆಯುಬ್ಬರ, ಕೈ ಕಾಲು ಊದಿಕೊಳ್ಳುವುದು ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

Health Tips: ಬೇಸಿಗೆಯಲ್ಲಿ ಈ ಮಸಾಲೆ ಪದಾರ್ಥಗಳಿಂದ ದೂರವಿರಿ..ಇಲ್ಲಾಂದ್ರೆ ಆರೋಗ್ಯ ಕೆಡುತ್ತೆ

ಅಲರ್ಜಿಯ ತೊಂದರೆ : ಸಾಸಿವೆ ಎಣ್ಣೆಯನ್ನು ಹೆಚ್ಚು ಹೆಚ್ಚು ಸೇವಿಸುವುದರಿಂದ ಅಲರ್ಜಿಯ ತೊಂದರೆಗಳು ಶುರುವಾಗುತ್ತೆ. ಸಾಸಿವೆ ಎಣ್ಣೆಯಿಂದ ಹಿಸ್ಟಾಮೈನ್ ಹೆಚ್ಚಳ ಮತ್ತು ಎನಾಫಿಲಾಸ್ಟಿಕ್ ಶಾಕ್ ಕೂಡ ಆಗಬಹುದು. ಇಷ್ಟೇ ಅಲ್ಲದೇ ಚರ್ಮದ ದದ್ದು, ಉಸಿರಾಟದ ತೊಂದರೆ, ತಲೆತಿರುಗುವಿಕೆ, ವಾಂತಿ, ಗಂಟಲು ಮುಖ ಮತ್ತು ಕಣ್ಣುಗಳಲ್ಲಿ ಊತ ಕಂಡುಬರುತ್ತದೆ.

ಹೃದಯ ರೋಗದ ತೊಂದರೆ : ಇಂದಿಗೂ ಅನೇಕ ಮನೆಗಳಲ್ಲಿ ಸಾಸಿವೆ ಎಣ್ಣೆಯಿಂದಲೇ ಅಡುಗೆಗಳನ್ನು ಮಾಡುತ್ತಾರೆ. ಪ್ರತಿನಿತ್ಯ ಸಾಸಿವೆ ಎಣ್ಣೆಯನ್ನು ಅಡುಗೆಯಲ್ಲಿ ಉಪಯೋಗಿಸುವುದರಿಂದ ಹೃದಯಕ್ಕೆ ತೊಂದರೆಯುಂಟಾಗುತ್ತದೆ. ಸಾಸಿವೆಯಲ್ಲಿರುವ ಹೆಚ್ಚಿನ ಪ್ರಮಾಣದ ಎರುಸಿಕ್ ಎಸಿಡ್ ಹೃದಯದ ತೊಂದರೆಗಳಿಗೆ ಕಾರಣವಾಗುತ್ತದೆ. ಎದೆಯಲ್ಲಿ ಟ್ರೈಗ್ಲಿಸರೈಡ್ ರಚನೆಯಿಂದಾಗಿ ಹೃದಯದಲ್ಲಿ ಫೈಬ್ರೊಟಿಕ್ ಗಾಯಗಳು ಉಂಟಾಗುತ್ತದೆ. ಇದು ಹೃದಯದ ಸ್ನಾಯುಗಳನ್ನು ಹಾನಿಗೊಳಿಸಿ ಹೃದಯ ವೈಫಲ್ಯಕ್ಕೆ ಕಾರಣವಾಗುತ್ತದೆ. ಸಾಸಿವೆ ಎಣ್ಣೆಯನ್ನು ಸತತವಾಗಿ ಬಳಸುವುದರಿಂದ ಮಯೋಕಾರ್ಡಿಯಲ್ ಪಾಲಿಡೋಸಿಸ್ ಸಮಸ್ಯೆ ಕೂಡ ಉಂಟಾಗಬಹುದು. 

ಗರ್ಭಪಾತಕ್ಕೆ ಕಾರಣ : ಗರ್ಭವತಿಯಾದವರು ಸಾಸಿವೆ ಎಣ್ಣೆಯನ್ನು ಸೇವಿಸಬಾರದು. ಸಾಸಿವೆ ಎಣ್ಣೆಯಲ್ಲಿನ ರಾಸಾಯನಿಕ ಸಂಯುಕ್ತಗಳು ಗರ್ಭದಲ್ಲಿನ ಭ್ರೂಣಕ್ಕೆ ಹಾನಿಕರವಾಗಿದೆ. ಹಾಗಾಗಿಯೇ ವೈದ್ಯರು ಗರ್ಭಿಣಿಯರಿಗೆ ಸಾಸಿವೆ ಎಣ್ಣೆಯನ್ನು ಸೇವಿಸದಿರುವಂತೆ ಸಲಹೆ ನೀಡುತ್ತಾರೆ. ಅನೇಕ ಅಧ್ಯಯನಗಳು ಕೂಡ ಇದಕ್ಕೆ ಪುಷ್ಠಿ ನೀಡಿವೆ.

ಸಾಸಿವೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಅತಿಸಾರ ಹಾಗೂ ಹೊಟ್ಟೆನೋವು ಬರಬಹುದು. ಮಧುಮೇಹಿಗಳು ಹಾಗೂ ಶಸ್ತ್ರ ಚಿಕಿತ್ಸೆಗೆ ಒಳಗಾದವರಿಗೆ ಕೂಡ ಸಾಸಿವೆಯನ್ನು ಸೀಮಿತವಾಗಿ ಸೇವಿಸುವುದು ಒಳ್ಳೆಯದು. ಗರ್ಭಿಣಿಯ ಜೊತೆ ಹಾಲುಣಿಸುವ ಮಹಿಳೆಗೆ ಕೂಡ ಸಾಸಿವೆ ಒಳ್ಳೆಯದಲ್ಲ. 

click me!