Health Tips: ಡಯಾಬಿಟಿಸ್ ಇರೋರು ಈ ಪಾನೀಯ ಕುಡಿದರೆ ವಿಷದಷ್ಟೇ ಡೇಂಜರ್‌!

By Vinutha Perla  |  First Published Sep 11, 2023, 7:00 AM IST

ಮಧುಮೇಹಿಗಳು ತಮ್ಮ ಆರೋಗ್ಯದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಇಲ್ಲದಿದ್ದರೆ, ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಾಗುತ್ತದೆ ಮತ್ತು ಆರೋಗ್ಯವು ಹದಗೆಡುತ್ತದೆ. ಅದರಲ್ಲೂ ಡಯಾಬಿಟಿಸ್ ಇರುವವರು ನಿರ್ಧಿಷ್ಟವಾಗಿ ಕೆಲವು ಪಾನೀಯ ಕುಡಿದರೆ ಮಾರಣಾಂತಿಕವಾಗಿಯೂ ಪರಿಣಮಿಸಬಹುದು. ಅಂಥಾ ಪಾನೀಯಗಳು ಯಾವುವು?


ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಡಯಾಬಿಟಿಸ್‌ ದೀರ್ಘಕಾಲದ ಕಾಯಿಲೆಯಾಗಿದೆ. ಅದನ್ನು ಸಂಪೂರ್ಣವಾಗಿ ಗುಣಪಡಿಸುವ ಯಾವುದೇ ಚಿಕಿತ್ಸೆ ಇಲ್ಲ. ಈ ಕಾಯಿಲೆಯಿಂದ ಬಳಲುತ್ತಿದ್ದರೆ ಔಷಧಿಗಳನ್ನು ಕಟ್ಟುನಿಟ್ಟಾಗಿ ಬಳಸಬೇಕು. ಅಲ್ಲದೆ ಇದನ್ನು ಜೀವನದುದ್ದಕ್ಕೂ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಮಧುಮೇಹವು ಮೇದೋಜ್ಜೀರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ ಮಾಡಲು ಸಾಧ್ಯವಾಗದ ಸ್ಥಿತಿಯಾಗಿದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಹೀಗಾಗಿ ಇದನ್ನು ನಿಯಂತ್ರಣದಲ್ಲಿಡಲು ಮಧುಮೇಹಿಗಳು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಬೇಕು. ಅಲ್ಲದೆ ಹೆಚ್ಚು ಕ್ಯಾಲೊರಿಗಳುಳ್ಳ ಆಹಾರವನ್ನು ಸೇವಿಸಬಾರದು. ಹೆಚ್ಚಿನ ಕ್ಯಾಲೋರಿ ಸೇವನೆ, ದೈಹಿಕ ಚಟುವಟಿಕೆಯಲ್ಲಿ ಕಡಿಮೆ ಭಾಗವಹಿಸುವಿಕೆ ಮತ್ತು ಅನಾರೋಗ್ಯಕರ ಆಹಾರ ಸೇವನೆಯು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. 

ಉತ್ತಮ ಆಹಾರ (Food) ಸೇವನೆ ಮತ್ತು ಉತ್ತಮ ಅಭ್ಯಾಸಗಳನ್ನು ಅನುಸರಿಸುವುದರಿಂದ ಈ ರೋಗದ ಅಪಾಯವನ್ನು ಕಡಿಮೆ ಮಾಡಬಹುದು. ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Sugar level) ಸಹ ನಿಯಂತ್ರಣದಲ್ಲಿಡಬಹುದು. ಅದರಲ್ಲೂ ಡಯಾಬಿಟಿಸ್ ಇರುವವರು ನಿರ್ಧಿಷ್ಟವಾಗಿ ಕೆಲವು ಪಾನೀಯ (Drinks) ಕುಡಿದರೆ ಮಾರಣಾಂತಿಕವಾಗಿಯೂ ಪರಿಣಮಿಸಬಹುದು. ಅಂಥಾ ಪಾನೀಯಗಳು ಯಾವುವು?

Tap to resize

Latest Videos

Health Tips: ಡಯಾಬಿಟಿಸ್ ರೋಗಿಗಳು ಸಕ್ಕರೆಯ ಬದಲು ಬೆಲ್ಲ ತಿನ್ನಬಹುದಾ?
 
ಹಣ್ಣಿನ ರಸ
ಹಣ್ಣಿನ ರಸಗಳು (Juice) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಇವು ಮಧುಮೇಹಿಗಳಿಗೆ ಒಳ್ಳೆಯದಲ್ಲ. ಅವುಗಳಿಗೆ ಹೆಚ್ಚುವರಿ ಸಕ್ಕರೆಯನ್ನು ಸೇರಿಸದಿದ್ದರೂ ಸಹ ನೈಸರ್ಗಿಕವಾಗಿ ಹಣ್ಣುಗಳಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿರುತ್ತವೆ. ಹೀಗಾಗಿ ಇಂಥಾ ಹಣ್ಣಿನ ರಸ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಇದಲ್ಲದೆ, ಹಣ್ಣುಗಳೊಂದಿಗೆ ರಸವನ್ನು ತಮ್ಮ ಫೈಬರ್ ಅಂಶವನ್ನು ಕಳೆದುಕೊಳ್ಳುತ್ತದೆ. ಇಂತಹ ಹಣ್ಣಿನ ರಸವನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. 

ಸಕ್ಕರೆ ಚಹಾ
ಸಕ್ಕರೆಯ ಟೀ ಕೂಡ ಮಧುಮೇಹಿಗಳಿಗೆ ಒಳ್ಳೆಯದಲ್ಲ. ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಮಧುಮೇಹ ಇರುವವರು ಸಕ್ಕರೆ ಇಲ್ಲದೆ ಚಹಾ (Tea) ಕುಡಿಯುವುದು ಉತ್ತಮ.
 
ಡಯಟ್ ಸೋಡಾ
ಡಯಟ್ ಅಥವಾ ಸಾಮಾನ್ಯ ಸೋಡಾದಲ್ಲಿ ಹೆಚ್ಚಿನ ಸಕ್ಕರೆ ಇರುತ್ತದೆ. ಈ ರೀತಿಯ ಪಾನೀಯವನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗಬಹುದು. ಹಾಗಾಗಿ ಮಧುಮೇಹಿಗಳು (Diabetes) ಇಂತಹ ಪದಾರ್ಥಗಳನ್ನು ಕುಡಿಯದಿರುವುದು ಒಳ್ಳೆಯದು.

ದಿನಕ್ಕೊಂದು ಈ ಕೆಂಪು ಹಣ್ಣು ತಿಂದ್ರೆ ಸಾಕು ಡಯಾಬಿಟಿಸ್ ಬೇಗ ಕಡಿಮೆಯಾಗುತ್ತೆ
 
ಫ್ಲೇವರ್ಡ್  ಕಾಫಿ
ಫ್ಲೇವರ್ಡ್ ಕಾಫಿ ಕೂಡ ಮಧುಮೇಹಿಗಳ ಆರೋಗ್ಯಕ್ಕೆ (Health) ಒಳ್ಳೆಯದಲ್ಲ. ಏಕೆಂದರೆ ಇವುಗಳಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ. ಮಧುಮೇಹ ಇದ್ದರೆ ಮನೆಯಲ್ಲಿ ಸಕ್ಕರೆ ಮುಕ್ತ ಕಾಫಿ ಕುಡಿಯುವುದು ಉತ್ತಮ. 

ಎನರ್ಜಿ ಡ್ರಿಂಕ್ಸ್‌
ದಿನನಿತ್ಯ ಎನರ್ಜಿ ಡ್ರಿಂಕ್ಸ್ ಕುಡಿಯುವವರೂ ಇದ್ದಾರೆ. ಆದರೆ ಇವು ಇತರರಿಗೆ ಮಾತ್ರವಲ್ಲ ಮಧುಮೇಹಿಗಳಿಗೂ ಒಳ್ಳೆಯದಲ್ಲ. ಏಕೆಂದರೆ ಅವುಗಳಲ್ಲಿ ಕಾರ್ಬೋಹೈಡ್ರೇಟ್ ಮತ್ತು ಕೆಫೀನ್ ಅಧಿಕವಾಗಿರುತ್ತದೆ. ಇವುಗಳನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಇದು ಇನ್ಸುಲಿನ್ ಪ್ರತಿರೋಧವನ್ನು ಸಹ ಉಂಟುಮಾಡುತ್ತದೆ. ಅದಕ್ಕಾಗಿಯೇ ನಿಮಗೆ ಮಧುಮೇಹ ಇದ್ದರೆ, ಇಂಥಾ ಪಾನೀಯಗಳನ್ನು ಕುಡಿಯಬೇಡಿ.

ಮದ್ಯ
ಮಧುಮೇಹಿಗಳು ಮದ್ಯಪಾನ ಮಾಡಬಾರದು. ಮಧುಮೇಹಿಗಳು ಆಲ್ಕೋಹಾಲ್ ಸೇವಿಸುವುದರಿಂದ ಕೆಲವೇ ಗಂಟೆಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ. ಅದರಲ್ಲೂ ಮಧುಮೇಹ ನಿಯಂತ್ರಣಕ್ಕೆ ಔಷಧಿ ತೆಗೆದುಕೊಳ್ಳುವಾಗ ಮದ್ಯಪಾನ ಮಾಡಬಾರದು ಎನ್ನುತ್ತಾರೆ ಆರೋಗ್ಯ ತಜ್ಞರು. 

click me!