ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಅವರು, ಮಿಕ್ಕಿರೋ ಇಡ್ಲಿಯಿಂದ ಮಸಾಲಾ ಇಡ್ಲಿ ಮಾಡೋದನ್ನು ಹಾಗೂ ಟೇಸ್ಟಿಯಾಗಿರೋ ಟೊಮ್ಯಾಟೊ ಚಟ್ನಿ ಮಾಡುವುದನ್ನು ಹೇಳಿಕೊಟ್ಟಿದ್ದಾರೆ.
ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ್ (Aditi Prabhudev) ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ, ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಸಿನಿಮಾ ಜೊತೆಗೆ ವೈವಾಹಿಕ ಬದುಕನ್ನು ಬ್ಯಾಲೆನ್ಸ್ ಮಾಡ್ತಿದ್ದಾರೆ. ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಅದಿತಿ ಪ್ರಭುದೇವ ಅವರು ಸದ್ಯ ಗೃಹಿಣಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ, ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದವರು. ಇದರ ಹೊರತಾಗಿಯೂ ಅಡುಗೆಯಲ್ಲಿಯೂ ಇವರದ್ದು ಎತ್ತಿದ ಕೈ. ಅಡುಗೆ, ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು ಟಿಪ್ಸ್ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಇದೀಗ ನಟಿ, ಉಳಿದಿರೋ ಇಡ್ಲಿಯಿಂದ ಟೇಸ್ಟಿ ಟೇಸ್ಟಿ ಮಸಾಲಾ ಇಡ್ಲಿ (Masala Idli) ಮಾಡಿ ಅದಕ್ಕೆ ಸೂಪರ್ ಟೇಸ್ಟಿ ಟೊಮ್ಯಾಟೋ ಚಟ್ನಿ ಮಾಡುವುದು ಹೇಗೆ ಎಂದು ಹೇಳಿಕೊಟ್ಟಿದ್ದಾರೆ. ಇದಕ್ಕೂ ಮುನ್ನ ತಾವು ಬೆಳಿಗ್ಗೆ ವಾಯುವಿಹಾರಕ್ಕೆ ಹೋಗುವ ಸಮಯದಲ್ಲಿ ಕುಡಿಯುವ ಪಾನೀಯದ ಕುರಿತು ತಿಳಿಸಿಕೊಟ್ಟಿದ್ದಾರೆ. ನಸುಕಿನಲ್ಲಿ ದಿನವೂ ಬಿಸಿನೀರು ಮತ್ತು ಬಾಳೆಹಣ್ಣು ತಿಂದು ಹೋಗುತ್ತೇನೆ. ಆದರೆ ಈಗ ಸ್ವಲ್ಪ ಡಿಫರೆಂಟ್ ಆಗಿರೋ ಪಾನೀಯ ಕುಡಿಯುತ್ತೇನೆ ಎಂದಿರೋ ಅದಿತಿ, ಆ ಪಾನೀಯವನ್ನು ಸಕ್ಕರೆ, ಬೆಲ್ಲ ಬಳಸದೇ ಮಾಡುವುದು ಹೇಗೆ ಎಂದು ಹೇಳಿಕೊಟ್ಟಿದ್ದಾರೆ.
undefined
ಎರಡೇ ಎರಡು ದೊಡ್ಡಪತ್ರೆ- ಹತ್ತಾರು ಮಾತ್ರೆಗಳು ಮನೆಯಿಂದ ಔಟ್: ನಟಿ ಅದಿತಿ ಅಮ್ಮನ ಟಿಪ್ಸ್
ಕುದಿಯುವ ನೀರಿಗೆ ಸ್ವಲ್ಪ ಚಹದ ಪುಡಿ ಹಾಕಿ. ಸಕ್ಕರೆ ಬದಲು ಸ್ಟಿವಿಯಾ ಲೀವ್ಸ್ (stevia leaves) ಹಾಕಿದ್ದಾರೆ. ಇದು ಎಲ್ಲಾ ಅಂಗಡಿಗಳಲ್ಲಿಯೂ ಲಭ್ಯ ಎಂದಿದ್ದಾರೆ ನಟಿ. ಸ್ಟಿವಿಯಾ ಎಲೆಗಳು ಸಕ್ಕರೆಗಿಂತಲೂ ರುಚಿ ಇರುತ್ತದೆ ಎಂದಿರು ನಟಿ, ಈ ಪಾನೀಯಕ್ಕೆ ಸ್ವಲ್ಪ ಪುದಿನಾ ಎಲೆ ಹಾಕಿದರೆ ಇನ್ನೂ ಟೇಸ್ಟ್ ಬರುತ್ತದೆ ಎಂದಿದ್ದಾರೆ. ಇದಾದ ಬಳಿಕ ಎಲ್ಲವನ್ನೂ ಒಮ್ಮೆ ಚೆನ್ನಾಗಿ ಕುದಿಸಿ ಸೋಸಿದರೆ ಮಾರ್ನಿಂಗ್ ಡ್ರಿಂಕ್ಸ್ ರೆಡಿ ಎಂದಿದ್ದಾರೆ. ಬೆಳಿಗ್ಗೆ ವಾಕಿಂಗ್ಗೆ ಹೋದಾಗ ಪಾರ್ಕ್ನಲ್ಲಿರೋ ದೊಡ್ಡಪತ್ರೆ ಎಲೆಯನ್ನು ತಿನ್ನುವುದಾಗಿ ತಮ್ಮ ಫಿಟ್‌ನೆಸ್ ಗುಟ್ಟು ಹೇಳಿದ್ದಾರೆ.
ಇದರ ಜೊತೆ ಮಿಕ್ಕಿರೋ ಇಡ್ಲಿಯಿಂದ ಟೇಸ್ಟಿಯಾಗಿರೋ ಮಸಾಲಾ ಇಡ್ಲಿಯನ್ನು ಹೇಗೆ ತಯಾರಿಸುವುದು ಎಂದು ತಿಳಿಸಿದ್ದಾರೆ. ಜೊತೆಗೆ ಮೂರೇ ಐಟಂ ಬಳಸಿ ಟೊಮ್ಯಾಟೋ ಚಟ್ನಿ ಮಾಡುವುದು ಹೇಗೆ ಎಂದೂ ಹೇಳಿದ್ದಾರೆ. ಮಸಾಲೆ ಇಡ್ಲಿ ತಯಾರಿಸುವುದು ಹೀಗೆ: ಮೊದಲಿಗೆ ಉಳಿದ ಇಡ್ಲಿ ಕಟ್ ಮಾಡಿಕೊಳ್ಳಬೇಕು. ಬಾಣಲೆಗೆ ತುಪ್ಪ ಅಥವಾ ಬೆಣ್ಣೆ ಹಾಕಬೇಕು. ಅದು ಸ್ವಲ್ಪ ಕಾದ ಬಳಿಕ ಜೀರಿಗೆ, ಸಾಸಿವೆ, ಇಂಗು ಹಾಕಿ ಕೈಯಾಡಿಸಬೇಕು. ಇದಕ್ಕೆ ಸ್ವಲ್ಪ ಚಿಲ್ಲಿ ಫ್ಲೇಕ್ಸ್, ಧನಿಯಾ ಪುಡಿ, ಗರಂ ಪುಡಿ ಇಲ್ಲವೇ ಬಿರಿಯಾನಿ ಪುಡಿ ಹಾಕಬೇಕು. ಇಷ್ಟು ಮಾಡಿದ ಮೇಲೆ ಸ್ಟವ್ ಕಡಿಮೆ ಉರಿಯಲ್ಲಿ ಇಡಬೇಕು. ಬಳಿಕ ತುಂಡು ಮಾಡಿದ ಇಡ್ಲಿಯನ್ನು ಹಾಕಿ 2-3 ನಿಮಿಷ ಬಿಡದೇ ಕೈಯಾಡಬೇಕು. ಸ್ವಲ್ಪ ಅರಿಶಿಣ ಪುಡಿ ಹಾಕಿ 2-3 ನಿಮಿಷ ಪುನಃ ಬಾಡಿಸಿಕೊಳ್ಳಬೇಕು. ಇಷ್ಟಾದರೆ ಮಸಾಲಾ ಇಡ್ಲಿ ರೆಡಿ.
ಫೇಸ್ಮಾಸ್ಕ್, ಸ್ಕ್ರಬ್, ಹೇರ್ ಆಯಿಲ್ ಮಾಡೋದು ಇಷ್ಟು ಸುಲಭನಾ? ನಟಿ ಅದಿತಿ ಪ್ರಭುದೇವ ಟಿಪ್ಸ್!
ಇನ್ನು ಟೊಮ್ಯಾಟೋ ಚಟ್ನಿಯ (Tomato Chutney) ಸುಲಭ ವಿಧಾನವನ್ನೂ ನಟಿ ಹೇಳಿಕೊಟ್ಟಿದ್ದಾರೆ. ಇದಕ್ಕೆ ಬೇಕಿರೋದು 2 ಟೊಮ್ಯಾಟೊ, 2 ಈರುಳ್ಳಿ ಹಾಗೂ ಅರ್ಧ ಹಸಿ ಮೆಣಸಿನ ಕಾಯಿ. ಇವುಗಳನ್ನು ಮಿಕ್ಸಿಯಲ್ಲಿ ಹಾಕಿ ಸ್ವಲ್ಪ ಧನಿಯಾ ಪುಡಿ, ಗರಂ ಮಸಾಲೆ ಪುಡಿ ಸೇರಿಸಿ ನೈಸ್ ಆಗಿ ರುಬ್ಬಿಕೊಳ್ಳಬೇಕು. ಬಾಣಲೆಯಲ್ಲಿ ಕೊಬ್ಬರಿ ಎಣ್ಣೆ ಎರಡು ಚಮಚ ಬಿಸಿ ಮಾಡಿಕೊಂಡು ಅದಕ್ಕೆ ಸಾಸಿವೆ, ಕರಿಬೇವಿನ ಸೊಪ್ಪು, ಕೆಂಪು ಒಣಮೆಣಸಿನ ಕಾಯಿ ಹಾಕಬೇಕು. ಅದಕ್ಕೆ ರುಬ್ಬಿಕೊಂಡು ಮಿಶ್ರಣ ಹಾಕಿ, ನಿಧಾನ ಉರಿಯಲ್ಲಿ ಕುದಿಸಬೇಕು. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ 10 ನಿಮಿಷ ರುಚಿಯಾದ ಚಟ್ನಿ ರೆಡಿ ಇರುತ್ತೆ,. ಇದನ್ನು ಚಪಾತಿ, ಇಡ್ಲಿ, ದೋಸೆ ಹಾಗೂ ಅನ್ನದ ಜೊತೆಗೂ ಬಡಿಸಿಕೊಳ್ಳಬಹುದು.