Health Tips: ಈ ಸಮಸ್ಯೆ ಇರೋರು ಬದನೆಕಾಯಿ ತಿನ್ಬೇಡಿ

By Suvarna News  |  First Published Aug 22, 2023, 3:44 PM IST

ತರಕಾರಿ, ಹಣ್ಣುಗಳಲ್ಲಿ ಸಾಕಷ್ಟು ಪೌಷ್ಟಿಕಾಂಶಗಳಿರುತ್ತವೆ. ನಿತ್ಯ ಅವುಗಳ ಸೇವನೆ ಮಾಡುವಂತೆ ವೈದ್ಯರು ಸಲಹೆ ನೀಡ್ತಾರೆ. ಆದ್ರೆ ಎಲ್ಲ ಹಣ್ಣು, ತರಕಾರಿ ಎಲ್ಲರಿಗೂ ಆಗಿ ಬರೋದಿಲ್ಲ. ನಿಮ್ಮ ದೇಹ ಪ್ರಕೃತಿ ನೋಡಿ ನೀವು ಸೇವನೆ ಮಾಡ್ಬೇಕು.
 


ಬದನೆಕಾಯಿ ಕೆಲವರ ಇಷ್ಟದ ತರಕಾರಿಗಳಲ್ಲಿ ಒಂದಾಗಿದೆ. ಅದು ಎಲ್ಲ ಋತುವಿನಲ್ಲಿ ಸಿಗುವ ತರಕಾರಿ. ಬೆಲೆ ಕೂಡ ತಕ್ಕಮಟ್ಟಿಗಿದೆ ಎನ್ನುವುದು ಒಂದು ಕಾರಣವಾದ್ರೆ ಇನ್ನೊಂದು ಅದ್ರ ರುಚಿ. ಬದನೆಕಾಯಿಯಿಂದ ನಾನಾ ಆಹಾರವನ್ನು ನೀವು ತಯಾರಿಸಬಹುದು. ಬದನೆಕಾಯಿ ಸಾಂಬಾರ್, ಬಜ್ಜಿ ಎಲ್ಲರಿಗೂ ಇಷ್ಟವಾಗುತ್ತೆ. ಇನ್ನು ಕೆಲವರು ಅದ್ರಲ್ಲಿ ಸಣ್ಣ ಸಣ್ಣ ಬೀಜ ಇರುವ ಕಾರಣ ಅದನ್ನು ತಿನ್ನಲು ಇಷ್ಟಪಡೋದಿಲ್ಲ. ಬದನೆಕಾಯಿ (Brinjal) ಸಾಕಷ್ಟು ಆರೋಗ್ಯ ಗುಣಗಳನ್ನು ಹೊಂದಿದೆ. ಚಳಿಗಾಲದಲ್ಲಿ ಬದನೆಕಾಯಿಯನ್ನು ಹೆಚ್ಚು ಹೆಚ್ಚಾಗಿ ತಿನ್ನಬೇಕು ಎನ್ನಲಾಗುತ್ತದೆ. ಬದನೆಕಾಯಿ ಸೇವನೆಯಿಂದ ಹೃದ್ರೋಗ (Heart Disease) ಸಮಸ್ಯೆ ಕಾಡೋದಿಲ್ಲ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಬದನೆಕಾಯಿ ಒಳ್ಳೆಯದು. ನೀವು ತೂಕ (Weight) ಇಳಿಸಿಕೊಳ್ಳುವ ಆಲೋಚನೆಯಲ್ಲಿದ್ದರೆ ಬದನೆಕಾಯಿಯನ್ನು ನಿಮ್ಮ ಡಯಟ್ ಪ್ಲಾನ್ ನಲ್ಲಿ ಸೇರಿಸಬಹುದು. ಕ್ಯಾನ್ಸರ್ ನಿಯಂತ್ರಣ, ಚರ್ಮದ ಆರೋಗ್ಯ ಸೇರಿದಂತೆ ಬದನೆ ಕಾಯಿ ಸೇವನೆಯಿಂದ ನಾನಾ ಲಾಭವಿದೆ. 

ಬದನೆಕಾಯಿ ಉತ್ಕರ್ಷಣ ನಿರೋಧಕವಾಗಿದೆ. ಇದು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಅಸ್ತಮಾ ವಿರೋಧಿ ಸಾಮರ್ಥ್ಯವನ್ನು ಕೂಡ ಬದನೆಕಾಯಿ ಹೊಂದಿದೆ. ಸಾಕಷ್ಟು ಪ್ರಯೋಜ ಹೊಂದಿರುವ ಬದನೆಕಾಯಿಯಲ್ಲೂ ಕೆಟ್ಟ ಗುಣವಿದೆ. ಅಂದ್ರೆ ಇದನ್ನು ಎಲ್ಲರೂ ಸೇವನೆ ಮಾಡಲು ಸಾಧ್ಯವಿಲ್ಲ. ಕೆಲವರು ಬದನೆಕಾಯಿಯಿಂದ ದೂರವಿದ್ರೆ ಒಳ್ಳೆಯದು. ನಾವಿಂದು ಯಾರು ಬದನೆಕಾಯಿ ಸೇವನೆ ಮಾಡ್ಬಾರದು ಎಂಬುದನ್ನು ನಿಮಗೆ ಹೇಳ್ತೇವೆ.

Tap to resize

Latest Videos

ವ್ಹಾ ವ್ಹಾ ಮೈಸೂರು ದೋಸೆಯೇ... ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ವಿಡಿಯೋ ವೈರಲ್

ಬದನೆಕಾಯಿ ಯಾರು ತಿನ್ನಬಾರದು ಗೊತ್ತಾ? : 

ಗ್ಯಾಸ್ – ಹೊಟ್ಟೆ ಸಮಸ್ಯೆ ಹೆಚ್ಚಿಸುತ್ತೆ ಬದನೆ : ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆಯಿದ್ದರೆ ಅಥವಾ ಹೊಟ್ಟೆ ಉಬ್ಬರ, ಹೊಟ್ಟೆ ನೋವಿನಂತ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ಬದನೆಕಾಯಿ ಸೇವನೆ ಮಾಡದಿರುವುದು ಒಳ್ಳೆಯದು. ಇದು ನಿಮ್ಮ ಗ್ಯಾಸ್ಟ್ರಿಕನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ.

Health Tips: ಡಯಾಬಿಟಿಸ್ ರೋಗಿಗಳು ಸಕ್ಕರೆಯ ಬದಲು ಬೆಲ್ಲ ತಿನ್ನಬಹುದಾ?

ಅಲರ್ಜಿ ಇರೋರು ತಿನ್ಬೇಡಿ : ಚರ್ಮದ ಅಲರ್ಜಿ ನಿಮಗಿದ್ದರೆ ನೀವು ಬದನೆಕಾಯಿ ಸೇವನೆ ಮಾಡಲು ಹೋಗ್ಬೇಡಿ. ಬದನೆಕಾಯಿ ನಿಮ್ಮ ಚರ್ಮದ ಅಲರ್ಜಿಯನ್ನು ಹೆಚ್ಚಿಸುತ್ತದೆ. ಇದ್ರಿಂದ ನೀವು ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. 

ಖಿನ್ನತೆ ಉಲ್ಬಣ : ನೀವು ಖಿನ್ನತೆಗೆ ಒಳಗಾಗಿದ್ದು, ಅದಕ್ಕೆ ಸಂಬಂಧಿಸಿದ ಮಾತ್ರೆ ಅಥವಾ ಔಷಧಿ ಸೇವನೆ ಮಾಡ್ತಿದ್ದರೆ ಬದನೆಕಾಯಿ ಸೇವನೆ ಮಾಡುವ ಸಹವಾಸಕ್ಕೆ ಹೋಗ್ಬೇಡಿ. ಬದನೆಕಾಯಿ ನಿಮ್ಮ ಔಷಧಿ ಪರಿಣಾಮವನ್ನು ಕಡಿಮೆ ಮಾಡುತ್ತದೆ. ನೀವು ಖಿನ್ನತೆ ಕಡಿಮೆಯಾಗಲು ಔಷಧಿ ತೆಗೆದುಕೊಳ್ಳುತ್ತಿದ್ದು ಜೊತೆಗೆ ಬದನೆಕಾಯಿ ಸೇವನೆ ಮಾಡ್ತಿದ್ದರೆ ಖಿನ್ನತೆ ಕಡಿಮೆಯಾಗುವ ಬದಲು ಹೆಚ್ಚಾಗುವ ಅಪಾಯವಿರುತ್ತದೆ. 

ರಕ್ತಹೀನತೆ : ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ಬದನೆಕಾಯಿ ತಿನ್ನಬೇಡಿ. ಬದನೆಕಾಯಿ ರಕ್ತವನ್ನು ಉತ್ಪಾದಿಸಲು ಅಡ್ಡಿಯುಂಟು ಮಾಡುವ ಸಾಧ್ಯತೆಯಿರುತ್ತದೆ. 

ಕಣ್ಣು ಉರಿ : ನಿಮಗೆ ಕಣ್ಣಿನಲ್ಲಿ ಉರಿ ಕಾಣಿಸಿಕೊಳ್ಳುತ್ತಿದ್ದರೆ ಇಲ್ಲವೆ ನಿಮ್ಮ ಕಣ್ಣು ಊದಿಕೊಂಡಿದ್ದರೆ ನೀವು ಬದನೆಕಾಯಿ ತಿನ್ನಲು ಹೋಗಬೇಡಿ. ಇದ್ರಿಂದ ಸಮಸ್ಯೆ ಹೆಚ್ಚಾಗುವ ಅಪಾಯವಿರುತ್ತದೆ. 

ಮೂಲವ್ಯಾಧಿ : ಹೇಳಿಕೊಳ್ಳಲಾಗದ ಭಯಾನಕ ಸಮಸ್ಯೆಗಳಲ್ಲಿ ಒಂದಾಗಿರುವ ಮೂಲವ್ಯಾಧಿ ನಿಮ್ಮನ್ನು ಬಾಧಿಸುತ್ತಿದ್ದರೆ ನೀವು ಬದನೆಕಾಯಿ ಸೇವನೆಯಿಂದ ಹಿಂದೆ ಸರಿಯಿರಿ. ನಿಮ್ಮ ಮೂಲವ್ಯಾಧಿಯನ್ನು ಬದನೆಕಾಯಿ ಹೆಚ್ಚಿಸುವ ಗುಣ ಹೊಂದಿದೆ.

ಕಿಡ್ನಿಯಲ್ಲಿ ಕಲ್ಲು : ಕಿಡ್ನಿಯಲ್ಲಿ ಅಥವಾ ದೇಹದ ಯಾವುದೇ ಭಾಗದಲ್ಲಿ ಕಲ್ಲಿರುವುದು ಪತ್ತೆಯಾಗಿದ್ದರೆ ನೀವು ಬದನೆಕಾಯಿ ತಿನ್ನಬೇಡಿ. ಬದನೆಕಾಯಿಯಲ್ಲಿ ಆಕ್ಸಲೇಟ್ ಇರುತ್ತದೆ. ಇದು ಕಲ್ಲು ಕರಗಲು ಬಿಡೋದಿಲ್ಲ.

ಬದನೆಕಾಯಿಯನ್ನು ಯಾವಾಗ ತಿನ್ನಬಾರದು : ನಿಮಗೆ ಇದ್ಯಾವುದೂ ಸಮಸ್ಯೆಯಿಲ್ಲ ಎಂದಾದ್ರೆ ನೀವು ಆರಾಮವಾಗಿ ಬದನೆಕಾಯಿ ಸೇವನೆ ಮಾಡಿ. ಆದ್ರೆ ಆದಷ್ಟು ಜೂನ್ ನಿಂದ ಆಗಸ್ಟ್ ತಿಂಗಳಲ್ಲಿ ಬದನೆಕಾಯಿ ತಿನ್ನೋದನ್ನು ತಪ್ಪಿಸಿ. ಯಾಕೆಂದ್ರೆ ಈ ಸಮಯದಲ್ಲಿ ಮಳೆ ಹೆಚ್ಚು ಬೀಳುವ ಕಾರಣ ಬದನೆಕಾಯಿಯಲ್ಲಿ ಹುಳುಗಳು ಹೆಚ್ಚಿರುತ್ತವೆ. 
 

click me!