ಮಕ್ಕಳಿಗೆ ಇಂಥಾ ಆಹಾರ ಕೊಟ್ರೆ ಸಿಕ್ಕಾಪಟ್ಟೆ ಬ್ರಿಲಿಯೆಂಟ್ ಆಗ್ತಾರೆ

By Suvarna News  |  First Published Jul 13, 2022, 10:31 AM IST

ಮಕ್ಕಳು ಬ್ರಿಲಿಯೆಂಟ್ ಆಗಬೇಕೆಂದು ಪ್ರತಿಯೊಬ್ಬ ಪೋಷಕರೂ ಬಯಸ್ತಾರೆ. ಇದಕ್ಕಾಗಿ ದಿನವಿಡೀ ಟ್ಯೂಷನ್ ಕ್ಲಾಸ್‌ಗೆ ಹಾಕುವ ಬದಲು ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರ ನೀಡುವತ್ತ ಗಮನ ಹರಿಸಿ. ಇದ್ರಿಂದ ಮಕ್ಕಳು ಬೇಗನೇ ಬುದ್ಧಿವಂತರಾಗ್ತಾರೆ.
 


ಮಕ್ಕಳ ಲಾಲನೆ-ಪಾಲನೆ ಬಹಳ ಕಷ್ಟದ ಕೆಲಸ. ಮಕ್ಕಳ ಆರೋಗ್ಯ, ಆಹಾರ ಎಲ್ಲದರ ಬಗ್ಗೆಯೂ ಗಮನಹರಿಸಬೇಕಾಗುತ್ತದೆ.  ಮಕ್ಕಳು ಬುದ್ಧಿವಂತರಾಗಲು ಮಕ್ಕಳ ಮೆದುಳಿಗೆ ಪೂರಕವಾದ ಪೋಷಕಾಂಶದ ಆಹಾರ ನೀಡ್ಬೇಕಾಗುತ್ತದೆ. ಮಗುವಿನ ಮೆದುಳಿನ ಬೆಳವಣಿಗೆಯಲ್ಲಿ ಪೌಷ್ಠಿಕಾಂಶವು ಪ್ರಮುಖ ಪಾತ್ರ ವಹಿಸುತ್ತದೆ. ಪೌಷ್ಟಿಕ ಆಹಾರವು ಮೆದುಳಿನ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ. ಮಕ್ಕಳು ಶ್ರದ್ಧೆಯಿಂದ ಕಲಿಯಲು, ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ. ಮಕ್ಕಳಲ್ಲಿ ಪ್ರಚೋದನೆಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಸುಧಾರಿಸುತ್ತದೆ.

ಸಂಪೂರ್ಣ ಮತ್ತು ಆರೋಗ್ಯಕರ ಆಹಾರವು ಖನಿಜಗಳು, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುತ್ತದೆ, ಇದು ಮೆದುಳಿಗೆ ಪೋಷಣೆಯನ್ನು ಒದಗಿಸುತ್ತದೆ ಮತ್ತು ಒತ್ತಡ ಅಥವಾ ಆತಂಕದಿಂದ ರಕ್ಷಿಸುತ್ತದೆ. ಆದ್ದರಿಂದ, ಪೋಷಕರು ತಮ್ಮ ಮಕ್ಕಳ ಒಟ್ಟಾರೆ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಉತ್ತಮ ಆಹಾರವನ್ನು ನೀಡಬೇಕು.

Tap to resize

Latest Videos

Child Care: ಮಕ್ಕಳಿಗೆ ನಾನ್ ವೆಜ್ ಕೊಡಬಹುದಾ? ಯಾವಾಗ ಏಕೆ?

ಮಕ್ಕಳ ಮೆದುಳು ಚುರುಕಾಗಲು ಇಂಥಾ ಆಹಾರ ನೀಡಿ

ಮೊಟ್ಟೆ: ಪ್ರೋಟೀನ್ ಮತ್ತು ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಮೊಟ್ಟೆ (Egg) ಮಕ್ಕಳ ಏಕಾಗ್ರತೆ ಮತ್ತು ಗಮನವನ್ನು ಸುಧಾರಿಸುವ ಶಕ್ತಿಯನ್ನು ಹೊಂದಿವೆ. ಮೊಟ್ಟೆಯ ಹಳದಿ ಮೆದುಳಿನ (Brain) ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಮಕ್ಕಳಲ್ಲಿ ನೆನಪಿನ ಶಕ್ತಿಯನ್ನು ಹಾಗೂ ಸಂವಹನ ಕೌಶಲ್ಯವನ್ನು ಸುಧಾರಿಸುತ್ತದೆ. ಮೊಟ್ಟೆಗಳಲ್ಲಿರುವ ಅಂಶ ಸಂತೋಷದ ಹಾರ್ಮೋನ್ ಸೆರೊಟೋನಿನ್‌ನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಅದು ಮಕ್ಕಳು ದಿನವಿಡೀ ಖುಷಿಯಾಗಿರುವಂತೆ ಮಾಡುತ್ತದೆ. 

ಮೀನು: ಮೀನಿನಲ್ಲಿ (Fish) ಸಾಕಷ್ಟು ಪ್ರಮಾಣದಲ್ಲಿರುವ ಒಮೆಗಾ -3 ಕೊಬ್ಬುಗಳು, ಅಯೋಡಿನ್ ಮತ್ತು ಸತುವಿನ ಅಂಶ ಮೆದುಳಿನ ಕಾರ್ಯಕ್ಕೆ ಅವಶ್ಯಕವಾಗಿದೆ. ಮೀನು ಮೆದುಳಿನಲ್ಲಿರುವ ಬೂದು ದ್ರವ್ಯವನ್ನು ವೇಗಗೊಳಿಸುತ್ತದೆ ಮತ್ತು ವಯಸ್ಸಾದ ಕಾರಣ ಮೆದುಳಿನ ಕ್ಷೀಣತೆಯನ್ನು ತಡೆಯುತ್ತದೆ. ಮಗುವಿನ ಮನಸ್ಥಿತಿಯನ್ನು ನಿಯಂತ್ರಿಸುತ್ತದೆ ಮತ್ತು ಅವರ ಸ್ಮರಣ ಶಕ್ತಿ (Memory power)ಯನ್ನು ಸುಧಾರಿಸುತ್ತದೆ. ಪ್ರತಿ ವಾರ ಮೀನು ತಿನ್ನುವ ಮಕ್ಕಳು ಖಿನ್ನತೆಗೆ ಒಳಗಾಗುವ ಸಾಧ್ಯತೆ ಕಡಿಮೆ, ಏಕೆಂದರೆ ಅದರಲ್ಲಿ ಒಮೆಗಾ -3 ಕೊಬ್ಬುಗಳಿವೆ. ಮಕ್ಕಳಲ್ಲಿ ಟೈಪ್ 1 ಮಧುಮೇಹವನ್ನು ಕಡಿಮೆ ಮಾಡಲು ಮೀನು ಸೇವನೆ ಸಹಾಯ ಮಾಡುತ್ತದೆ.

ಬೆರ್ರಿ ಹಣ್ಣು: ಬೆರ್ರಿಗಳು ಮೆದುಳಿನ ಆರೋಗ್ಯಕ್ಕೆ ಉತ್ತಮವಾದ ಆಂಥೋಸಯಾನಿನ್ ಎಂಬ ಸಂಯುಕ್ತಗಳನ್ನು ಹೊಂದಿರುತ್ತವೆ. ಬೆರ್ರಿಗಳ ಸೇವನೆಯು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಉರಿಯೂತದ ಮತ್ತು ಹೊಸ ನರ ಕೋಶಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಬೆರ್ರಿಗಳ ಸೇವನೆಯು ಮಕ್ಕಳಲ್ಲಿ ಅರಿವಿನ ನಡವಳಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಮತ್ತು ಮಗುವಿನ ಮೆದುಳನ್ನು ಚುರುಕುಗೊಳಿಸುತ್ತದೆ.

ಮಕ್ಕಳಿಗೆ ಕಾಡೋ ಮಲಬದ್ಧತೆಗೆ ಪೋಷಕರಲ್ಲಿಯೇ ಇದೆ ಮದ್ದು!

ಹಸಿರೆಲೆ ತರಕಾರಿಗಳು: ಹಸಿರು ತರಕಾರಿಗಳು (Green Leafy Vegetables) ಮಗುವಿನ ಮೆದುಳಿಗೆ ಅತ್ಯಗತ್ಯವಾದ ಅಂಶವಾಗಿದೆ. ಪಾಲಕ್, ಮೆಂತೆ ಸೊಪ್ಪು, ಹರಿವೆ ಮೊದಲಾದ ತರಕಾರಿಗಳು ಫ್ಲೇವನಾಯ್ಡ್‌ಗಳು, ವಿಟಮಿನ್ ಇ ಮತ್ತು ಕೆ 1ನಂತಹ ಸಂಯುಕ್ತಗಳನ್ನು ಹೊಂದಿರುತ್ತವೆ. ಇದು ಮಗುವಿನ ಮೆದುಳನ್ನು ರಕ್ಷಿಸುತ್ತದೆ. ಉತ್ತಮ ಪ್ರಮಾಣದ ಎಲೆಗಳ ತರಕಾರಿಗಳನ್ನು ತಿನ್ನುವ ಮಕ್ಕಳು ಉತ್ತಮ ನೆನಪಿನ ಶಕ್ತಿಯನ್ನು ಹೊಂದಿರುತ್ತಾರೆ. ಈ ಸೊಪ್ಪಿನಲ್ಲಿ ನಾರಿನಂಶವೂ ಹೇರಳವಾಗಿದ್ದು ಮೆದುಳು ಮತ್ತು ಕರುಳಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.

ಮೊಸರು: ಪ್ರೋಟೀನ್ ಹೊಂದಿರುವ ಸಿಹಿಗೊಳಿಸದ ಮೊಸರು (Curd) ಮೆದುಳಿನ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಮೊಸರು ಅಯೋಡಿನ್ ಅನ್ನು ಹೊಂದಿದ್ದು ಅದು ಮೆದುಳಿನ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.  ಮಕ್ಕಳಲ್ಲಿ ಅರಿವಿನ ಕೌಶಲ್ಯಗಳನ್ನು ಸುಧಾರಿಸುತ್ತದೆ. ಮೊಸರು ಪ್ರೋಟೀನ್, ಸತು, ಬಿ 12 ಮತ್ತು ಸೆಲೆನಿಯಮ್‌ಗಳಿಂದ ಕೂಡಿದೆ. ಇದು ಮೆದುಳಿನ ಬೆಳವಣಿಗೆಗೆ ಬೇಕಾಗುವ ಪ್ರಮುಖ ಪೋಷಕಾಂಶವಾಗಿದೆ. ಬೆಳಗಿನ ಉಪಾಹಾರಕ್ಕಾಗಿ ಹಣ್ಣುಗಳು ಮತ್ತು ಕಾಳುಗಳ ಜೊತೆಗೆ ಮೊಸರನ್ನು ನಿಮ್ಮ ಮಗುವಿಗೆ ನೀಡುವುದು ಉತ್ತಮ ಅಭ್ಯಾಸವಾಗಿದೆ. 

ಕಾಳುಗಳು: ಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಇ, ಸತು, ಫೋಲೇಟ್, ಕಬ್ಬಿಣ ಮತ್ತು ಪ್ರೋಟೀನ್ ಇದೆ. ಬೀಜಗಳುಮಕ್ಕಳಲ್ಲಿ ಶೈಕ್ಷಣಿಕ ಕಾರ್ಯಕ್ಷಮತೆ ಮತ್ತು ಅರಿವಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇವುಗಳು ಮಗುವಿನ ಮೆದುಳನ್ನು ಚುರುಕುಗೊಳಿಸಿ, ಜ್ಞಾಪಕಶಕ್ತಿಯನ್ನು ಸುಧಾರಿಸಲು ಮತ್ತು ಮಕ್ಕಳಲ್ಲಿ ಚಿತ್ತಸ್ಥಿತಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೀಜಗಳು ಫೈಬರ್ ಮತ್ತು ಪ್ರೋಟೀನ್‌ನಲ್ಲಿಯೂ ಸಮೃದ್ಧವಾಗಿವೆ.

click me!