ತರಕಾರಿ ಸಿಪ್ಪೆ ತೆಗೆದು ಬಳಸೋದು ಬಹುತೇಕರ ಅಭ್ಯಾಸ. ತರಕಾರಿ ಹೊಟ್ಟೆಗೆ ಹೋದ್ರೆ ಆಯ್ತು. ತರಕಾರಿ ಯಾವ ಭಾಗ ಹೊಟ್ಟೆಗೆ ಹೋಗ್ಬೇಕು ಎಂಬುದು ಅನೇಕರಿಗೆ ತಿಳಿದೇ ಇರೋದಿಲ್ಲ. ಇದೇ ಕಾರಣಕ್ಕೆ ನಾವು ನಿತ್ಯ ವೆಜಿಟೇಬಲ್ಸ್ ತಿಂದ್ರೂ ಲಾಭ ಸಿಗೋದಿಲ್ಲ.
ಹಣ್ಣು, ತರಕಾರಿ ನಿಮ್ಮ ಡಯಟ್ ನಲ್ಲಿ ಇರಲಿ ಅಂತಾ ಆಹಾರ ತಜ್ಞರು ಸಲಹೆ ನೀಡ್ತಿರುತ್ತಾರೆ. ನಾವು ಮಾರುಕಟ್ಟೆಯಿಂದ ತರಕಾರಿ ಹಣ್ಣನ್ನು ತರ್ತೇವೆ ನಿಜ. ಕೆಲವೊಂದು ಫ್ರಿಜ್ ನಲ್ಲಿ ಕೊಳಿತಿದ್ರೆ ಮತ್ತೆ ಕೆಲವು ಬಾಡಿ ಹೋಗಿರುತ್ವೆ. ಹಾಗೂ ಸೇವನೆ ಮಾಡಿದ್ರೂ, ಹಣ್ಣು ಹಾಗೂ ತರಕಾರಿ ಬೆಳೆಯಲು ಕೆಮಿಕಲ್ ಬಳಸ್ತಾರೆ ಎನ್ನುವ ಕಾರಣಕ್ಕೆ ಅದನ್ನು ಸ್ವಚ್ಛವಾಗಿ ತೊಳೆದು, ಸಿಪ್ಪೆ ತೆಗೆದು ಸೇವನೆ ಮಾಡ್ತೇವೆ. ಹಣ್ಣು ಹಾಗೂ ತರಕಾರಿ ಸಿಪ್ಪೆಗಳು ಸಾಕಷ್ಟು ಪೌಷ್ಟಿಕಾಂಶವನ್ನು ಹೊಂದಿವೆ. ನಾವು ಸಿಪ್ಪೆ ತೆಗೆಯೋದ್ರಿಂದ ಸಿಪ್ಪೆಯಲ್ಲಿರುವ ಗುಣ ನಮ್ಮ ದೇಹ ಸೇರೋದಿಲ್ಲ. ಕೆಲವೊಂದು ತರಕಾರಿ ಹಾಗೂ ಹಣ್ಣುಗಳ ಸಿಪ್ಪೆ ತೆಗೆಯದೇ ಸೇವನೆ ಸಾಧ್ಯವಿಲ್ಲ. ಮತ್ತೆ ಕೆಲ ತರಕಾರಿಗಳ ಸಿಪ್ಪೆ ತೆಗೆದ್ರೆ ಪ್ರಯೋಜನವಿಲ್ಲ. ನಾವಿಂದು ಸಿಪ್ಪೆ ತೆಗೆಯದೇ ಬಳಸಬಹುದಾದ ತರಕಾರಿಗಳು ಯಾವುವು, ಆ ಸಿಪ್ಪೆಯಲ್ಲಿ ಏನೆಲ್ಲ ಗುಣವಿದೆ ಎಂಬುದನ್ನು ನಿಮಗೆ ಹೇಳ್ತೇವೆ.
ಸಿಪ್ಪೆ (Peel) ತೆಗೆಯದೆ ಈ ತರಕಾರಿ (Vegetable) ತಿಂದುನೋಡಿ :
ಟರ್ನಿಪ್ (Turnip) : ಇದನ್ನು ಅನೇಕರು ಮೂಲಂಗಿ ಎಂದು ಭಾವಿಸ್ತಾರೆ. ಆದ್ರೆ ಮೂಲಂಗಿ ಬೇರೆ, ಟರ್ನಿಪ್ ಬೇರೆ. ಟರ್ನಿಪ್ ಸಾಕಷ್ಟು ಆರೋಗ್ಯ ಗುಣವನ್ನು ಹೊಂದಿದೆ. ನೀವು ಇದನ್ನು ಸಿಪ್ಪೆ ತೆಗೆಯದೆ ಬಳಸಿದ್ರೆ ಒಳ್ಳೆಯದು. ಇದರಲ್ಲಿರುವ ನಾರಿನಂಶವು ದೇಹಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನ ನೀಡುತ್ತದೆ. ನೀವು ಟರ್ನಿಪ್ ಸಿಪ್ಪೆ ತೆಗೆದು ಸೇವನೆ ಮಾಡಿದ್ರೆ ಅದ್ರಿಂದ ಹೆಚ್ಚಿನ ಪೋಷಕಾಂಶ ನಿಮಗೆ ಲಭಿಸೋದಿಲ್ಲ.
STRESSನಲ್ಲಿದ್ದಾಗ ಈ ಫುಡ್ ಅಪ್ಪಿ ತಪ್ಪಿಯೂ ತಿನ್ನಬೇಡಿ!
ಬೀಟ್ರೋಟ್ : ಈ ತರಕಾರಿ ಕೂಡ ನೆಲದ ಅಡಿ ಬೆಳೆಯುವ ಗಡ್ಡೆ. ಸಿಪ್ಪೆಗೆ ಮಣ್ಣು ಅಂಟಿಕೊಂಡಿರುವ ಸಾಧ್ಯತೆ ಹೆಚ್ಚಿರುತ್ತದೆ. ಇದೇ ಕಾರಣಕ್ಕೆ ಜನರು ಬೀಟ್ರೋಟ್ ಸಿಪ್ಪೆಯನ್ನು ನೀಟಾಗಿ ತೆಗೆದು ಬಳಕೆ ಮಾಡ್ತಾರೆ. ದೇಹಕ್ಕೆ ರಕ್ತವನ್ನು ನೀಡುವ ಈ ಬೀಟ್ರೋಟ್ ಬಳಕೆ ವೇಳೆ ನೀವು ಸಿಪ್ಪೆ ತೆಗೆಯಬಾರದು ಎನ್ನುತ್ತಾರೆ ತಜ್ಞರು. ಬೀಟ್ರೋಟ್ ನಲ್ಲಿ ಪೊಟ್ಯಾಸಿಯಮ್, ಕಬ್ಬಿಣ ಮತ್ತು ವಿಟಮಿನ್ ಸಿ ನಂತಹ ಪೋಷಕಾಂಶಗಳು ಕಂಡುಬರುತ್ತವೆ. ಆದ್ರೆ ನೀವು ಅದ್ರ ಸಿಪ್ಪೆ ತೆಗೆದ್ರೆ ಅರ್ಧದಷ್ಟು ಪೋಷಕಾಂಶ ಹೋಗುತ್ತೆ ಎನ್ನುತ್ತಾರೆ ತಜ್ಞರು. ಇನ್ಮುಂದೆ ನೀವು ಬೀಟ್ರೋಟನ್ನು ಚೆನ್ನಾಗಿ ಕ್ಲೀನ್ ಮಾಡಿ ನಂತ್ರ ಸಿಪ್ಪೆ ಸಮೇತ ಬಳಕೆ ಮಾಡಲು ಮರೆಯದಿರಿ.
ಮೂಲಂಗಿ : ಮೂಲಂಗಿಯನ್ನು ನೀವು ಹಸಿಯಾಗಿ ಹಾಗೂ ಬೇಯಿಸಿ ಎರಡೂ ರೀತಿಯಲ್ಲಿ ಸೇವನೆ ಮಾಡಬಹುದು. ಮೂಲಂಗಿಯನ್ನು ಮೂಲವ್ಯಾಧಿಗೆ ಬೆಸ್ಟ್ ಎನ್ನಲಾಗುತ್ತದೆ. ಅದನ್ನು ಹಸಿಯಾಗಿ ತಿನ್ನುವಂತೆಯೂ ಸಲಹೆ ನೀಡಲಾಗುತ್ತದೆ. ನೀವು ಯಾವುದೇ ರೀತಿ ಬಳಸಿ, ಆದ್ರೆ ಬಳಸುವಾಗ ಸಿಪ್ಪೆ ತೆಗೆಯಬೇಡಿ. ಇದ್ರಲ್ಲಿ ಜೀವಸತ್ವ ಹಾಗೂ ಖನಿಜ ಹೇರಳವಾಗಿದ್ದು, ಅವು ನಿಮಗೆ ಸಿಗೋದಿಲ್ಲ.
ಆಲೂಗಡ್ಡೆ ಸಿಪ್ಪೆ : ದೋಸೆ ಮಾಡಿದ್ರೆ, ಚಪಾತಿ ಮಾಡಿದ್ರೆ ಆಲೂಗಡ್ಡೆ ಪಲ್ಯ ಇಲ್ಲದೆ ಹೋದ್ರೆ ಹೇಗೆ ಎನ್ನುವವರಿದ್ದಾರೆ. ಆಲೂಗಡ್ಡೆಯಿದ್ರೆ ಸಾಕು ಸಾಂಬಾರ್ ಸುಲಭವಾಗಿ ಮಾಡಬಹುದು ಎನ್ನುವವರಿದ್ದಾರೆ. ಮನೆ ಮನೆಯಲ್ಲೂ ಈ ಆಲೂಗಡ್ಡೆಗೊಂದು ಜಾಗವಿರುತ್ತದೆ. ಹಾಗೆ ಅದರ ಸಿಪ್ಪೆ ತೆಗೆಯಲು ಚಾಕೂ ಸಿದ್ಧವಿರುತ್ತದೆ. ನೀವು ಆಲೂಗಡ್ಡೆಯನ್ನು ಸಿಪ್ಪೆ ತೆಗೆಯದೇ ತಿಂದ್ರೆ ನಿಮ್ಮ ಹೊಟ್ಟೆ ಜೊತೆ ಹೃದಯವೂ ಆರೋಗ್ಯವಾಗಿರುತ್ತದೆ ನೆನಪಿರಲಿ.
ಕುಂಬಳಕಾಯಿ ಸಿಪ್ಪೆ ತೆಗಿಬೇಡಿ : ಕುಂಬಳಕಾಯಿ ಅಡುಗೆ ಬಾಯಿಗೆ ರುಚಿ. ಅದ್ರ ಸಿಪ್ಪೆ ಕೂಡ ನಿಮ್ಮ ದೇಹಕ್ಕೆ ಒಳ್ಳೆಯದು. ನೀವು ಕುಂಬಳಕಾಯಿಯನ್ನು ಸಿಪ್ಪೆ ಸಮೇತ ಸೇವನೆ ಮಾಡಿದ್ರೆ ಪೊಟ್ಯಾಸಿಯಮ್ ಮತ್ತು ಕಬ್ಬಿಣ ನಿಮಗೆ ಸಿಗುತ್ತದೆ. ಈ ಎರಡೂ ಪೋಷಕಾಂಶಗಳು ದೇಹವನ್ನು ರೋಗದಿಂದ ರಕ್ಷಿಸುತ್ತವೆ. ಹೃದಯದ ಆರೋಗ್ಯವನ್ನು ಕಾಪಾಡುತ್ತವೆ.
ಸಿಕ್ಕಾಪಟ್ಟೆ ಸ್ವೀಟ್ಸ್ ತಿನ್ತೀರಾ, ಹಾರ್ಟ್ ಅಟ್ಯಾಕ್ ಸಾಧ್ಯತೆ ಹೆಚ್ಚಾಗುತ್ತೆ ಅಂತಿದೆ ಅಧ್ಯಯನ
ಸೌತೆಕಾಯಿ ಸಿಪ್ಪೆ ತೆಗೆದು ತಪ್ಪು ಮಾಡ್ಬೇಡಿ : ಸೌತೆಕಾಯಿ ಸಿಪ್ಪೆಯಲ್ಲಿ ಆಂಟಿಆಕ್ಸಿಡೆಂಟ್ ಇದೆ. ಇದ್ರಲ್ಲಿ ಕಿಣ್ವಗಳು ಕೂಡ ಕಂಡು ಬರುತ್ತವೆ. ನೀವು ಸೌತೆಕಾಯಿ ಸಿಪ್ಪೆ ತೆಗೆಯದೇ ಸೇವನೆ ಮಾಡಿ. ಒಂದ್ವೇಳೆ ಸಿಪ್ಪೆ ತೆಗೆದ್ರೆ ಆ ಸಿಪ್ಪೆಯಲ್ಲಿ ಚಟ್ನಿ ಮಾಡಿ ಆಹಾರದ ರೂಪದಲ್ಲಿ ಸೇವಿಸಿ.