ಒತ್ತಡದ ಲೈಫ್ ಸ್ಟೈಲ್ ಈಗ ಮಾಮೂಲಿ ಎನ್ನುವಂತಾಗಿದೆ. ಇಡೀ ದಿನ ಜನ ಸ್ಟ್ರೆಸ್ ನಲ್ಲಿ ಇರ್ತಾರೆ. ಅದ್ರಿಂದ ಹೊರಗೆ ಬರಲು ಕೆಲ ಆಹಾರ ತಿನ್ನುತ್ತಾರೆ. ಆದ್ರೆ ಆ ಆಹಾರ ಆರೋಗ್ಯ ಸರಿ ಮಾಡೋ ಬದಲು ಹಾಳು ಮಾಡುತ್ತೆ.
ಕುಳಿತ್ರೆ ಟೆನ್ಷನ್, ನಿಂತ್ರೆ ಟೆನ್ಷನ್. ಈಗಿನ ಕಾಲದಲ್ಲಿ ಉದ್ವೇಗ, ಒತ್ತಡ ಯಾರಿಗಿಲ್ಲ ಹೇಳಿ. ಮಕ್ಕಳು ಕೂಡ ಒತ್ತಡದಲ್ಲಿಯೇ ಜೀವನ ನಡೆಸ್ತಿರುತ್ತಾರೆ. ಟೆನ್ಷನ್ ನಲ್ಲಿದ್ದಾಗ ಜನರು ಅದ್ರಿಂದ ಹೊರಬರಲು ತಮ್ಮಿಷ್ಟದ ಕೆಲಸ ಮಾಡ್ತಾರೆ. ಕೆಲವರು ಹಾಡು ಕೇಳಿದ್ರೆ ಮತ್ತೆ ಕೆಲವರು ಹಾಡು ಹೇಳ್ತಾರೆ. ಕೆಲವರಿಗೆ ಡಾನ್ಸ್ ಮಾಡಿದ್ರೆ ರಿಲ್ಯಾಕ್ಸ್ ಸಿಗುತ್ತೆ. ಇನ್ನು ಕೆಲವರಿಗೆ ಟಿವಿ ನೋಡಿದ್ರೆ ಆರಾಮವೆನ್ನಿಸುತ್ತದೆ. ಇನ್ನೊಂದಿಷ್ಟು ಜನ ಸ್ನೇಹಿತರ ಜೊತೆ ಸುತ್ತಾಡೋಕೆ ಹೋದ್ರೆ ಮತ್ತೆ ಕೆಲವರು ಮಾಲ್ ಗಳಿಗೆ ಹೋಗಿ ಖರೀದಿ ಮಾಡ್ತಾರೆ. ಕೆಲವರು ಟೆನ್ಷನ್ ಜಾಸ್ತಿಯಾದ್ರೆ ತಿಂಡಿಗೆ ಕೈ ಹಾಕ್ತಾರೆ.
ಒತ್ತಡ (Stress) ಹೆಚ್ಚಾಗಿದೆ ಅಂತಾ ಆಹಾರ (Food) ಸೇವನೆ ಮಾಡೋರಲ್ಲಿ ನೀವೂ ಒಬ್ಬರಾಗಿದ್ದರೆ ಇದನ್ನು ತಿಳಿದುಕೊಳ್ಳಿ. ಆಹಾರ ಸೇವನೆ ಮಾಡೋದು ತಪ್ಪಲ್ಲ. ಆದ್ರೆ ಕೆಲ ಆಹಾರ ಸೇವನೆ ಮಾಡಲೇಬಾರದು. ಅದು ನಿಮ್ಮ ಒತ್ತಡ ಕಡಿಮೆ ಮಾಡುವ ಬದಲು ಹೆಚ್ಚು ಮಾಡುತ್ತದೆ. ಇದ್ರಿಂದ ಹಾನಿಯಾಗೋದು ನಿಮಗೆ. ನಾವಿಂದು ಟೆನ್ಷನ್ ಹೆಚ್ಚಾದಾಗ ಯಾವ ಆಹಾರ ತಿನ್ಬಾರದು ಎಂಬುದನ್ನು ನಿಮಗೆ ಹೇಳ್ತೇವೆ.
ಸಿಕ್ಕಾಪಟ್ಟೆ ಸ್ವೀಟ್ಸ್ ತಿನ್ತೀರಾ, ಹಾರ್ಟ್ ಅಟ್ಯಾಕ್ ಸಾಧ್ಯತೆ ಹೆಚ್ಚಾಗುತ್ತೆ ಅಂತಿದೆ ಅಧ್ಯಯನ
ಟೆನ್ಷನ್ ಆದಾಗ ಈ ಆಹಾರ ಸೇವಿಸೋಕೆ ಹೋಗ್ಬೇಡಿ :
ಸಿಹಿ (Sweet) ಆಹಾರ : ಸಕ್ಕರೆ ಆಹಾರ ಯಾವಾಗ್ಲೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಝೀರೋ ಶುಗರ್ ಡಯಟ್ ಪಾಲನೆ ಮಾಡಿ ಅಂತಾ ತಜ್ಞರು ಹೇಳ್ತಿರುತ್ತಾರೆ. ಅದ್ರಲ್ಲೂ ಟೆನ್ಷನ್ ಹೆಚ್ಚಾದಾಗ ಹೆಚ್ಚಿನ ಸಕ್ಕರೆ ಆಹಾರವನ್ನು ತಿನ್ನುವುದು ಆತಂಕವನ್ನು ಹೆಚ್ಚಿಸುತ್ತದೆ. ಕೇಕ್, ಪೇಸ್ಟ್ರಿಗಳಂತಹ ಅತಿಯಾದ ಸಿಹಿ ಪದಾರ್ಥಗಳನ್ನು ತಿನ್ನುವುದರಿಂದ ರಕ್ತ (Blood) ದಲ್ಲಿನ ಸಕ್ಕರೆ ಪ್ರಮಾಣ ವೇಗದಲ್ಲಿ ಏರಿಳಿತವಾಗುತ್ತದೆ. ಇದರೊಂದಿಗೆ ನಮ್ಮ ದೇಹ (Body) ದ ಶಕ್ತಿಯ ಮಟ್ಟದಲ್ಲಿ ಏರುಪೇರನ್ನು ನಾವು ನೋಡ್ಬಹುದು. ರಕ್ತದಲ್ಲಿನ ಸಕ್ಕರೆಯು ತ್ವರಿತವಾಗಿ ಸಾಮಾನ್ಯ ಸ್ಥಿತಿಗೆ ಮರಳಿದಾಗ ಮನಸ್ಥಿತಿ ಬದಲಾಗುತ್ತದೆ. ಆತಂಕ ಹೆಚ್ಚಾಗುತ್ತದೆ.
ಫ್ರೈಡ್ (Fried) ಫುಡ್ ಹಾಗೂ ಸಂಸ್ಕರಿಸಿದ ಕಾರ್ಬ್ಸ್ (Carbs) ಸುದ್ದಿಗೆ ಹೋಗ್ಬೇಡಿ : ನೀವು ಒತ್ತಡದಲ್ಲಿರುವ ಸಂದರ್ಭದಲ್ಲಿ ಸಂಸ್ಕರಿಸಿದ ಕಾರ್ಬ್ಸ್ ಸೇವನೆ ಮಾಡಿದ್ರೆ ಉರಿಯೂತ ಹೆಚ್ಚಾಗುತ್ತದೆ. ದೇಹದ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇದ್ರಿಂದ ಒತ್ತಡ ಹೆಚ್ಚಾಗಿ, ಮನಸ್ಸು (Mind ) ಚಂಚಲಗೊಳ್ಳುತ್ತದೆ. ಹಾಗೆ ಕರಿದ ಆಹಾರ ಸೇವನೆ ಮಾಡೋದ್ರಿಂದ ಅದ್ರಲ್ಲಿರುವ ಟ್ರಾನ್ಸ್ ಕೊಬ್ಬು ನಿಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ಇದ್ರಿಂದಾಗಿ ಒತ್ತಡ ಮತ್ತಷ್ಟು ಹೆಚ್ಚಾಗುತ್ತದೆ.
ಕೃತಕ ಸ್ವೀಟ್ಸ್ : ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ಕಾರಣಕ್ಕೆ ಅದಕ್ಕೆ ಪರ್ಯಾಯವಾಗಿ ಕೃತಕ ಸಿಹಿಕಾರಕವನ್ನು ಬಳಸಲು ಶಿಫಾರಸು ಮಾಡಲಾಗುತ್ತದೆ. ಆದ್ರೆ ತಜ್ಞರ ಪ್ರಕಾರ ಇದು ಕೂಡ ಒಳ್ಳೆಯದಲ್ಲ. ಅಧ್ಯಯನಗಳ ಪ್ರಕಾರ ನೀವು ಕೃತಕ ಸಿಹಿಕಾರಕ ಬಳಕೆ ಮಾಡೋದ್ರಿಂದ ದೇಹದಲ್ಲಿ ಉರಿಯೂತ ಸಮಸ್ಯೆಯನ್ನು ಅನುಭವಿಸುತ್ತೀರಿ. ನಿಮ್ಮ ಒತ್ತಡ ಕೂಡ ಇದ್ರಿಂದ ಹೆಚ್ಚಾಗುತ್ತದೆ.
ಆಹಾರ ನೋಡಿದ್ರೆ ವಾಂತಿ ಬರೋ ತರ ಆಗ್ತಿದ್ಯಾ? ಹೆಪಟೈಟಿಸ್ ಲಕ್ಷಣವಿರಬಹುದು ಜೋಕೆ
ಕೆಫೀನ್ ಸೇವನೆ : ಒತ್ತಡದಲ್ಲಿದ್ದಾಗ ಕೆಫೀನ್ ಸೇವನೆ ಮಾಡೋರ ಸಂಖ್ಯೆ ಹೆಚ್ಚಿರುತ್ತದೆ. ಟೆನ್ಷನ್ ಕಡಿಮೆ ಮಾಡುತ್ತೆ ಎಂಬ ಕಾರಣಕ್ಕೆ ಅನೇಕರು ಮೂರ್ನಾಲ್ಕು ಬಾರಿ ಕಾಫಿ ಸೇವನೆ ಮಾಡ್ತಾರೆ. ಬರೀ ಕಾಫಿ ಮಾತ್ರವಲ್ಲ ಕೆಫೀನ್ ಇರುವ ಯಾವುದೇ ಆಹಾರ ನಿಮ್ಮ ಒತ್ತಡ, ಆತಂಕವನ್ನು ಕಡಿಮೆ ಮಾಡುವ ಬದಲು ಹೆಚ್ಚಿಸುತ್ತದೆ. ನಿಮಗೆ ಅದು ತಾತ್ಕಾಲಿಕ ರಿಲೀಫ್ ನೀಡಿದಂತೆ ಅನ್ನಿಸಬಹುದು. ಆದ್ರೆ ಕೆಫೀನ್ ಸೇವನೆಯಿಂದ ಮೂತ್ರಜನಕಾಂಗದ ಗ್ರಂಥಿಗಳು ಅತಿಯಾಗಿ ಪ್ರಚೋದಿಸಲ್ಪಡುತ್ತವೆ. ಇದರಿಂದಾಗಿ ನರಮಂಡಲವೂ ಅತಿಯಾಗಿ ಕ್ರಿಯಾಶೀಲವಾಗುತ್ತದೆ. ಕೆಫೀನ್ ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಇದ್ರಿಂದ ಆತಂಕದ ಮಟ್ಟ ಹೆಚ್ಚಾಗುತ್ತದೆ.