Viral Menu : ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದ್ವು ಈ ಎಲ್ಲ ಮೆನು

By Suvarna NewsFirst Published Feb 20, 2023, 4:42 PM IST
Highlights

ಹೋಟೆಲ್ ನಲ್ಲಿ ಆಹಾರದ ರುಚಿ ಹೇಗಿದೆ ಅನ್ನೋದು ಮಾತ್ರವಲ್ಲ ಹೋಟೆಲ್ ಹೇಗಿದೆ, ಅಲ್ಲಿ ಏನು ಆಕರ್ಷಣೆ ಎಂಬುದನ್ನೆಲ್ಲ ನಾವು ನೋಡ್ತೇವೆ. ಕೆಲವೊಂದು ಹೋಟೆಲ್ ಮೆನು ಆಕಾರ ಭಿನ್ನವಾಗಿದ್ರೆ ಕೆಲವೊಂದು ಹೋಟೆಲ್ ಮೆನುವಿನಲ್ಲಿರುವ ಆಹಾರದ ಹೆಸರು ವಿಚಿತ್ರವಾಗಿರುತ್ತದೆ.
 

ಮನೆಯಲ್ಲಿ ಎಂಥ ರುಚಿಯಾದ ಆಹಾರ ಸಿದ್ಧವಾಗಿದ್ರೂ ಹೋಟೆಲ್ ತಿಂಡಿಗಳು ಎಲ್ಲರನ್ನು ಸೆಳೆಯುತ್ತವೆ. ಹುಟ್ಟುಹಬ್ಬದ ಪಾರ್ಟಿ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಮಾತ್ರವಲ್ಲ ವೀಕೆಂಡ್ ಬಂದ್ರೆ ಸಾಕು ಹೋಟೆಲ್ ಗೆ ಹೋಗೋರು ಹೆಚ್ಚು. ದಿನಕ್ಕೊಂದು ಹೊಸ ಹೋಟೆಲ್ ಇದೇ ಕಾರಣಕ್ಕೆ ತಲೆ ಎತ್ತುತ್ತಿದೆ. ಗ್ರಾಹಕರ ರುಚಿ ಕೂಡ ಬದಲಾಗಿದೆ. ಹಿಂದೆ ಅದೇ ಹಳೆ ಮೆನ್ಯು ನೋಡಿ ಫುಡ್ ಆರ್ಡರ್ ಮಾಡ್ತಿದ್ದವರು ಈಗ ಹೊಸ ಫುಡ್ ಹುಡುಕಾಡ್ತಾರೆ. ಯಾವ ಹೋಟೆಲ್ ನಲ್ಲಿ ಸ್ಪೇಷಲ್ ರೆಸಿಪಿ ಸಿಗುತ್ತೆ ಅಂತಾ ಗೂಗಲ್ ನಲ್ಲಿ ಸರ್ಚ್ ಮಾಡಿ ಅಲ್ಲಿಗೆ ಹೋಗ್ತಾರೆ. ಜನರ ಟೇಸ್ಟ್ ಬದಲಾದಂತೆ ಗ್ರಾಹಕರನ್ನು ಆಕರ್ಷಿಸಲು ಹೋಟೆಲ್ ಗಳು ಮೆನುದಲ್ಲಿ ಚಿತ್ರವಿಚಿತ್ರ ಹೆಸರಿನ ಫುಡ್ ಹಾಕಿವೆ. ಕೆಲವೊಂದು ಆಹಾರದ ಹೆಸರು ಹೇಳಲು ವಿಚಿತ್ರವಾಗಿದ್ದರೆ ಮತ್ತೆ ಕೆಲವುದರ ರುಚಿ ಭಿನ್ನವಾಗಿದೆ. ಅಷ್ಟೇ ಅಲ್ಲ ಗ್ರಾಹಕರನ್ನು ಸೆಳೆಯಲು ಮೆನು ಕಾರ್ಡ್ ಕೂಡ ಬದಲಾಗಿದೆ. ನಾವಿಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೆಲ ಹೋಟೆಲ್ ಮೆನು ಹಾಗೂ ಮೆನುವಿನಲ್ಲಿದ್ದ ಆಹಾರದ ಹೆಸರನ್ನು ನಿಮಗೆ ಹೇಳ್ತೇವೆ. 

ವ್ಯಾಲೆಂಟೈನ್ಸ್ (Valentines) ವಿಶೇಷ ಮೆನು : ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಪ್ರೇಮಿ (Lover) ಗಳನ್ನು ಆಕರ್ಷಿಸಲು ನಾನಾ ಕಸರತ್ತು ನಡೆಯುತ್ತದೆ. ವಿಶೇಷ ಕೇಕ್ (Cake) ಗಳು ಸಿದ್ಧವಾಗುತ್ತವೆ. ನಾವು ಚಾಕೋಲೇಟ್ ಕೇಕ್, ರೆಡ್ ವೆಲ್ವೆಟ್ ಕೇಕ್ ಹೀಗೆ ನಾನಾ ಹೆಸರಿನ ಕೇಕ್ ಬಗ್ಗೆ ಕೇಳಿದ್ದೇವೆ. ಆದ್ರೆ ಗರ್ಲ್ ಫ್ರೆಂಡ್ (Girlfriend) ಕೇಕ್ ಹೆಸರು ಕೇಳಿರಲಿಲ್ಲ. ಹೋಟೆಲ್ ಒಂದು ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಮೆನುವಿನಲ್ಲಿ ಗರ್ಲ್ ಫ್ರೆಂಡ್ ಕೇಕ್ ಸೇರಿಸಿದೆ. ಇದಲ್ಲದೆ ಆ ಮೆನುವಿನಲ್ಲಿ ಪೆಹಲಾ ಪ್ಯಾರ್ ಕೇಕ್, ಪ್ಯಾರ್ ಮೇ ದೋಖಾ ಕೇಕ್, ಹರಾಮಿ ದೋಸ್ತಿ ಕೇಕ್, ಸಿಂಗಲ್ ಕೇಕ್, ಬಾಯ್ ಫ್ರೆಂಡ್ ಕೇಕ್ ಹೀಗೆ ಚಿತ್ರ ವಿಚಿತ್ರ ಕೇಕ್ ಹೆಸರಿತ್ತು.

Evening Snacks: ಸಂಜೆಯ ಹಸಿವು ನೀಗಿಸಲು ಈ ಹೆಲ್ದಿ ಆಹಾರ ಸೇವಿಸಿ

ಮೆನು (Menu) ವಿನಲ್ಲಿದೆ ಗೈಡ್ ಲೈನ್ಸ್ : ಹೋಟೆಲ್ (Hotel) ಗೆ ಹೋಗಿ ಮೆನು ನೋಡೋದೇಕೆ, ಯಾವ ಯಾವ ತಿಂಡಿ ಅಲ್ಲಿದೆ ಅಂತಾ ನೋಡೋಕೆ. ಆದ್ರೆ ಇದೊಂದು ಹೋಟೆಲ್ ಮೆನುವಿನಲ್ಲಿ ಆಹಾರದ ಲೀಸ್ಟ್ ಜೊತೆ ಒಂದಿಷ್ಟು ಮಾರ್ಗದರ್ಶನವಿದೆ. ಮೆನುವಿನಲ್ಲಿ, ನೀವು ಇಲ್ಲಿ ಲ್ಯಾಪ್ ಟಾಪ್ ಬಳಸಬೇಡಿ,  ಧೂಮಪಾನ ಮಾಡಬೇಡಿ, ಚಿಲ್ಲರೆ ನೀಡಿ ಸಹಕರಿಸಿ, ದೊಡ್ಡದಾಗಿ ಮಾತನಾಡ್ಬೇಡಿ, ಚಿಲ್ಲರೆಯನ್ನು ಕೇಳ್ಬೇಡಿ, ಜೂಜಿನ ಬಗ್ಗೆ ಚರ್ಚೆ ಬೇಡ, ಟೇಬಲ್ ಕೆಳಗೆ ಗಮ್ ಅಂಟಿಸಬೇಡಿ, ಚೇರ್ ಮೇಲೆ ಕಾಲು ಹಾಕ್ಬೇಡಿ, ನಿದ್ರೆ ಮಾಡ್ಬೇಡಿ ಹೀಗೆ 10ಕ್ಕೂ ಹೆಚ್ಚು ಗೈಡ್ಲೈನ್ಸ್ ನೀಡಲಾಗಿದೆ. 

ವಿಚಿತ್ರವಾಗಿದೆ ಈ ಮೆನುವಿನಲ್ಲಿರುವ ಆಹಾರ (Food) ದ ಹೆಸರು : ಇಡ್ಲಿ, ವಡಾ, ಮಸಾಲೆ ದೋಸೆ ಹೀಗೆ ನಮಗೆ ಪರಿಚಿತ ಹೆಸರಿನ ಆಹಾರವೇ ಮೆನುವಿನಲ್ಲಿ ಸಾಮಾನ್ಯವಾಗಿ ಇರುತ್ತದೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಮೆನುವಿನಲ್ಲಿರುವ ಆಹಾರದ ಹೆಸರು ವಿಚಿತ್ರವಾಗಿದೆ. ಒಂದರ ಹೆಸರು ಬೈಕಾಟ್ (Boycott) ಅಂತಿದ್ರೆ ಮತ್ತೊಂದರ ಹೆಸರು ಟು ಫೀಲ್ ಇಟ್ ಅಂತಿದೆ. 

ಆಹಾರವನ್ನು ಸ್ಟೀಮ್ ಮಾಡೋವಾಗ ಈ ತಪ್ಪು ಮಾಡಬೇಡಿ

ಗಮನ ಸೆಳೆದಿತ್ತು ಆಧಾರ್ ಕಾರ್ಡ್ ಮೆನು : ಸಾಮಾಜಿಕ ಜಾಲತಾಣದಲ್ಲಿ ಆಧಾರ್ ಕಾರ್ಡ್ ಮೆನು ಕೂಡ ಗಮನ ಸೆಳೆದಿದೆ. ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆದ ಮದುವೆಯೊಂದರಲ್ಲಿ ಜೋಡಿ ಆಧಾರ್ ಕಾರ್ಡ್ ಮೆನು ಮಾಡಿಸಿದ್ರು.  ಹೆಸರು, ವಿಳಾಸವಿರುವ ಜಾಗದಲ್ಲಿ ಆಹಾರದ ಹೆಸರಿತ್ತು. ಹಾಗೆ ಈ ಕಾರ್ಡ್ ಇವತ್ತಿಗೆ ಮಾತ್ರ ಎಂದು ಬರೆಯಲಾಗಿತ್ತು. 
 

click me!