ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸೋ ಪಾಲಕ್ ಸೊಪ್ಪಿನಿಂದ ಸಾರು, ಪಾಲಕ್ ಪನ್ನೀರು... ಹೀಗೆ ಏನೇನೋ ಮಾಡುತ್ತೇವೆ. ಆದರೆ ಇದರಿಂದ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಗಳಿವೆ ಗೊತ್ತಾ? ಪಾಲಕ್ ಸೊಪ್ಪಿನಲ್ಲಿ ಕಾರ್ಬೋಹೈಡ್ರೇಟ್, ಪ್ರೊಟೀನ್ಸ್, ಜೀವಸತ್ವ ಎ, ಸಿ, ಇ, ಕೆ, ಸೋಡಿಯಂ, ಪೊಟಾಷಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ, ಮ್ಯಾಂಗನೀಸ್, ಜಿಂಕ್, ರಿಬೋಪ್ಲೆವಿನ್ ಸೇರಿ ದೇಹಕ್ಕೆ ಅಗತ್ಯವಿರೋ ಅಂಶಗಳಿವೆ.
ಪಾಲಕ್ ಮತ್ತೇಕೆ ಬೇಕು?
ಪಾಲಕ್ ಸೊಪ್ಪಿನಲ್ಲಿ ನಾರಿನಾಂಶ ಹೆಚ್ಚಿರುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಿಸಿ, ದೇಹದ ತೂಕ ಕಡಿಮೆಮಾಡುತ್ತದೆ. ಇದರಲ್ಲಿನ ತಾಮ್ರದ ಅಂಶ ರಕ್ತದಲ್ಲಿ ಕೆಂಪು ರಕ್ತ ಕಣ ಹೆಚ್ಚಿಸುತ್ತದೆ. ಜಿಂಕ್ ಅಂಶವು ವಂಶವಾಹಿನಿಯನ್ನು ಅಭಿವೃದ್ಧಿಗೊಳಿಸುತ್ತದೆ. ಈ ಸೊಪ್ಪಿನ ಜ್ಯೂಸ್‌ನಲ್ಲಿ ಮೆಗ್ನೀಷಿಯ೦ ಅಂಶವಿದೆ. ಇದು ನರವ್ಯೂಹ ಹಾಗೂ ಮಾ೦ಸಖ೦ಡಗಳು ಕಾರ್ಯ ನಿರ್ವಹಿಸಲು ಸಹಕರಿಸುತ್ತದೆ. ಕೂದಲು ಉದುರುವುದು, ಚರ್ಮದ ಸಮಸ್ಯೆ ಇರುವವರು ಪ್ರತಿದಿನ ಮುಂಜಾನೆ ಒಂದು ಲೋಟ ಪಾಲಕ್ ಸೊಪ್ಪಿನ ಜ್ಯೂಸ್ ಕುಡಿಯುವುದರಿಂದ ಉತ್ತಮ ರಿಸಲ್ಟ್ ನಿಮ್ಮದಾಗುತ್ತದೆ. ಹಸಿಯಾಗಿ ಸೇವಿಸಿದರೆ ಜೀರ್ಣಾ೦ಗ ಶುದ್ಧವಾಗುತ್ತದೆ. ಪಾಲಕ್ ಸೊಪ್ಪಿನ ಜ್ಯೂಸ್‌ನಲ್ಲಿರುವ ಫೋಲೇಟ್ ಹಾಗೂ ಕಬ್ಬಿಣಾ೦ಶಗಳು ಗರ್ಭಿಣಿ, ತಾಯ೦ದಿರು ಮತ್ತು ಮಕ್ಕಳ ಅರೋಗ್ಯ ವರ್ಧನೆಗೆ ಉತ್ತಮ. ಮಲಬದ್ದತೆ ಸಮಸ್ಯೆ ಕಾಡುತ್ತಿದ್ದರೆ, ಬೆಳಗ್ಗೆ ಪಾಲಕ್ ಸೊಪ್ಪಿನ ಜ್ಯೂಸ್ ಕುಡಿದರೆ ಮಲಬದ್ಧತೆಯೂ ನಿವಾರಣೆಯಾಗುತ್ತದೆ. ಈ ಸೊಪ್ಪಿನಲ್ಲಿ ಕ್ಯಾನ್ಸರ್-ಪ್ರತಿಬ೦ಧಕ ವಸ್ತುಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ಇದು ದೇಹದಲ್ಲಿನ ವಿಷ ಪದಾರ್ಥ ಹೊರ ಹೋಗಿಸಿ, ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಂಟ್ರೋಲ್‌ನಲ್ಲಿಡುತ್ತದೆ. ಆ೦ಟಿ ಆಕ್ಸಿಡೆ೦ಟ್‌ಗಳು ಹಾಗೂ ಫೋಲೇಟ್‌ಗಳ ಅ೦ಶಗಳಿರುವ ಪಾಲಕ್ ಸೋಂಕುಗಳಿಂದ ಮನುಷ್ಯನನ್ನು ರಕ್ಷಿಸುತ್ತದೆ. ರಕ್ತ ವೃದ್ಧಿಗೆ ಬೇಕು ಬೀಟ್‌ರೂಟ್
Subscribe to get breaking news alertsSubscribe ಆರೋಗ್ಯ , ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್ , ಸಂಬಂಧ, ಫ್ಯಾಷನ್ , ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.