ತ್ವಚೆಗೂ, ಹೃದಯಕ್ಕೂ ಮೀನೆಂಬ ಮದ್ದು....

By Web DeskFirst Published Mar 3, 2019, 3:09 PM IST
Highlights

ಕರಾವಳಿ ಜನರ ಅತ್ಯಂತ ಫೇವರೇಟ್ ಫುಡ್‌ಗಳಲ್ಲಿ ಮೀನೂ ಒಂದು. ಬುದ್ಧಿವಂತಿಕೆ ಹೆಚ್ಚಿಸುವ ಈ ಸೀ ಫುಡ್, ತ್ವಚೆಯ ಕಾಂತಿಯನ್ನೂ ಹೆಚ್ಚಿಸುತ್ತದೆ. ಪ್ರತಿದಿನ ಇದನ್ನು ಸೇವಿಸುವುದರಿಂದೆ ಏನೆಲ್ಲಾ ಲಾಭವಿದೆ ಗೊತ್ತಾ?

ಸಮುದ್ರ ಆಹಾರ ಪ್ರಿಯರಿಗೆ ಖುಷಿಯಾಗೋ ಸುದ್ದಿ ಇದು. ಪ್ರತಿದಿನ ಮೀನು ಸೇವಿಸಿದರೆ ಆರೋಗ್ಯದಲ್ಲಿ ಧನಾತ್ಮಕ ಬದಲಾವಣೆ ಕಾಣಬಹುದು. ಕೇವಲ ರುಚಿಕರವಾಗಿರೋದು ಮಾತ್ರವಲ್ಲ, ಹೃದ್ರೋಗ, ಅಲ್ಝೆಮರ್, ಅಲ್ಲದೇ ಮಹಿಳೆಯರ ಋತುಸ್ರಾವ ಸಮಸ್ಯೆಗೂ ಮೀನು ಬೆಸ್ಟ್ ಮೆಡಿಸನ್. ಇದರಿಂದ ಏನೇನು ಬೆನಫಿಟ್ಸ್...?

  • ಹೃದಯದ ಆರೋಗ್ಯಕ್ಕೆ ನೆರವಾಗುವಂಥ ಒಮೇಗಾ-3 ಕೊಬ್ಬಿನಾಮ್ಲವು ಮೀನಿನಲ್ಲಿದೆ. ಇದು ಉರಿಯೂತ ಕಡಿಮೆ ಮಾಡುತ್ತದೆ. 
  • ಪ್ರತಿ ದಿನ ಮೀನನ್ನು ಆಹಾರದೊಂದಿಗೆ ಸೇವಿಸಿದರೆ ಹೃದಯದ ಅರೋಗ್ಯ ಚೆನ್ನಾಗಿರುತ್ತದೆ. 
  • ಒಮೆಗಾ-3 ಕೊಬ್ಬಿನಾಮ್ಲ ಮತ್ತು ಸೆಲೆನಿಯಂ ಬಂಗುಡೆ ಮೀನಿನಲ್ಲಿದೆ. ಇದನ್ನು ಸೇವಿಸಿದರೆ ಚರ್ಮ, ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ದೃಷ್ಟಿ ದೋಷಕ್ಕೂ ಮದ್ದು.
  • ಮೆದುಳಿನ ಕ್ರಿಯೆಗಳು ಸರಾಗವಾಗಿ ಸಾಗಲು ಮೀನು ಒಳ್ಳೆಯ ಆಹಾರ. ದಿನಾಲೂ ಮೀನು ಸೇವಿಸಿದರೆ ಅದರಿಂದ ಅಲ್ಜೆಮರ್ ಕಾಯಿಲೆಯ ಅಪಾಯವನ್ನೂ ತಗ್ಗಿಸಬಹುದು.
  • ಮೀನು ಮತ್ತು ಮೀನಿನ ಎಣ್ಣೆಯಿಂದ ಖಿನ್ನತೆ ದೂರವಾಗುತ್ತದೆ. ಇದರಿಂದ ಮಾನಸಿಕ ಆರೋಗ್ಯವು ಉತ್ತಮವಾಗುತ್ತದೆ. 
  • ಇದರ ಎಣ್ಣೆಯಲ್ಲಿರುವ ವಿಟಮಿನ್ ಬಿ12 ಮಹಿಳೆಯರ ಋತುಸ್ರಾವದ ಸಮಸ್ಯೆಯನ್ನು ನಿವಾರಿಸಬಲ್ಲದು. 
  • ವಿಟಮಿನ್ ಡಿ ಹೆಚ್ಚಿರುವ ಮೀನು ಮೂಳೆಗಳ ಆರೋಗ್ಯ ಮತ್ತು ಬೆಳವಣಿಗೆಗೆ ಕ್ಯಾಲ್ಸಿಯಂ ಪೂರೈಸುತ್ತದೆ. 
  • ಒಮೆಗಾ-3 ಕೊಬ್ಬಿನಾಮ್ಲ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. 
  • ಬಂಗುಡೆ ಮೀನಿನಲ್ಲಿ ಖನಿಜಾಂಶಗಳಾಗಿರುವ ಸೆಲೆನಿಯಂ, ತಾಮ್ರ, ರಂಜಕ, ಮೆಗ್ನಿಶಿಯಂ ಮತ್ತು ಕಬ್ಬಿಣಾಂಶವಿದೆ. ಇವು ದೇಹವನ್ನು ಸ್ಟ್ರಾಂಗ್ ಆಗಿಡುತ್ತವೆ. 

ಲೈಂಗಿಕ ಸಾಮರ್ಥ್ಯ ಹೆಚ್ಚಳಕ್ಕೆ ಮೀನು ಸೇವನೆ ಬೆಸ್ಟ್

click me!