ಕೆಂಪು ಖಾರದ ಚಟ್ನಿ ಜೊತೆ ದೋಸೆ ತಿನ್ನುತ್ತಿದ್ರೆ ಎಷ್ಟು ಒಳಗೆ ಹೋಯ್ತು ಗೊತ್ತಾಗಲ್ಲ ಎನ್ನುವವರಿದ್ದಾರೆ. ಭಾರತದ ಅನೇಕ ಕಡೆ ಕೆಂಪು ಖಾರದ ಚಟ್ನಿ ಫೇಮಸ್. ಎಲ್ಲ ಕಡೆ ಹೊಗೆ ತರಿಸುವ ಈ ರೆಡ್ ಚಿಲ್ಲಿ ಸಾಕಷ್ಟು ಪ್ರಯೋಜನ ಹೊಂದಿದೆ.
ಭಾರತೀಯರ ಅಡುಗೆ ಮನೆ ಔಷಧಿಗಳ ಆಗರ ಅಂದ್ರೆ ತಪ್ಪಾಗೋದಿಲ್ಲ. ಯಾಕೆಂದ್ರೆ ನಾವು ಮಸಾಲೆ ಪದಾರ್ಥಗಳನ್ನು ಹೆಚ್ಚಾಗಿ ಬಳಕೆ ಮಾಡ್ತೇವೆ. ಈ ಪ್ರತಿಯೊಂದು ಮಸಾಲೆ ಪದಾರ್ಥದಲ್ಲೂ ಔಷಧಿ ಗುಣವಿದೆ. ಯಾವುದೇ ಮಸಾಲೆಯನ್ನು ನಿಯಮಿತವಾಗಿ ಹಾಗೂ ಮಿತಿಯಲ್ಲಿ ಬಳಕೆ ಮಾಡಿದ್ರೆ ಅದು ನಮ್ಮ ಆರೋಗ್ಯ ವೃದ್ಧಿಸಲು ನೆರವಾಗುತ್ತದೆ. ಶುಂಠಿ, ಅರಿಶಿನ, ದಾಲ್ಚಿನಿ, ಲವಂಗ ಹೀಗೆ ಪ್ರತಿಯೊಂದು ಮಸಾಲೆ ಪದಾರ್ಥ ಕೂಡ ನಮ್ಮ ಆರೋಗ್ಯವನ್ನು ವೃದ್ಧಿಸುವ ಗುಣ ಹೊಂದಿದೆ.
ಅಡುಗೆ ಮನೆ (Kitchen) ಯಲ್ಲಿ ಮೆಣಸಿನ (Chili) ಪುಡಿ ಇರ್ಲೇಬೇಕು. ಮಸಾಲೆ ಆಹಾರಕ್ಕೆ ನಾವು ಮೆಣಸಿನ ಪೌಡರ್ ಬಳಕೆ ಮಾಡ್ತೇವೆ. ಇದನ್ನು ಮಿತವಾಗಿ ಬಳಕೆ ಮಾಡೋದು ಮುಖ್ಯ. ಖಾರ ಸ್ವಲ್ಪ ಹೆಚ್ಚಾದ್ರೂ ಎಲ್ಲ ಕಡೆಯಿಂದ ನೀರು ಬರೋಕೆ ಶುರುವಾಗುತ್ತೆ. ಹಾಗಂತ ಇದನ್ನು ಪದಾರ್ಥಕ್ಕೆ ಹಾಕದೆ ಹೋದ್ರೆ ಆಹಾರ ರುಚಿಸೋದಿಲ್ಲ. ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮಸಾಲೆ (Spice) ಪದಾರ್ಥಗಳಲ್ಲಿ ಕೆಂಪು ಮೆಣಸು ಕೂಡ ಒಂದು. ಕೆಂಪು (Red) ಮೆಣಸಿನ ಪುಡಿಯಲ್ಲೂ ಆರೋಗ್ಯ ಹೆಚ್ಚಿಸುವ ಶಕ್ತಿಯಿದೆ. ಇದು ತೂಕ ಇಳಿಕೆಯಿಂದ ಹಿಡಿದು ರೋಗನಿರೋಧಕ ಶಕ್ತಿ ಹೆಚ್ಚಿಸುವವರೆಗೆ ಅನೇಕ ಲಾಭವನ್ನು ನಮ್ಮ ಶರೀರಿಕ್ಕೆ ನೀಡುತ್ತದೆ. ನಾವಿಂದು ಕೆಂಪು ಮೆಣಸಿನ ಪುಡಿಯಿಂದಾಗುವ ಲಾಭವನ್ನು ನಿಮಗೆ ತಿಳಿಸ್ತೇವೆ.
Evening Snacks: ಸಂಜೆಯ ಹಸಿವು ನೀಗಿಸಲು ಈ ಹೆಲ್ದಿ ಆಹಾರ ಸೇವಿಸಿ
ಕೆಂಪು ಮೆಣಸಿನ ಕಾಯಿ ಅಂದ್ರೇನು? : ಪ್ರಪಂಚದಾದ್ಯಂತ ವಿವಿಧ ರೀತಿಯ ಮೆಣಸಿನಕಾಯಿಗಳು ಕಂಡುಬರುತ್ತವೆ. ಅವುಗಳಲ್ಲಿ ಕೆಂಪು ಮೆಣಸಿನ ಕಾಯಿ ಒಂದು. ಕ್ಯಾಪ್ಸಿಕಂ ಆನ್ಯುಮ್ ಅದರ ವೈಜ್ಞಾನಿಕ ಹೆಸರಾಗಿದೆ. ಈ ಕೆಂಪು ಮೆಣಸಿನಕಾಯಿಯಲ್ಲೇ ನಾವು ನಾನಾ ವಿಧಗಳನ್ನು ನೋಡಬಹುದಾಗಿದೆ.
ಕೆಂಪು ಮೆಣಸಿನ ಪೌಡರ್ ಲಾಭಗಳು :
ಉಸಿರಾಟದ ತೊಂದರೆ ದೂರ ಮಾಡುತ್ತೆ : ಕೆಲವು ಕಾರಣಗಳಿಂದ ಉಸಿರಾಟದ ತೊಂದರೆ ಉಂಟಾದರೆ, ತಕ್ಷಣ ಪರಿಹಾರಕ್ಕೆ ಕೆಂಪು ಮೆಣಸಿನಕಾಯಿಯನ್ನು ನೀವು ಸೇವನೆ ಮಾಡ್ಬೇಕು. ಕೆಂಪು ಮೆಣಸಿನಕಾಯಿ ಪೌಡರ್ ಉಸಿರಾಟದ ಕಾಯಿಲೆಯ ತೊಂದರೆಯನ್ನು ಕಡಿಮೆ ಮಾಡುತ್ತದೆ. ಕೆಲವೊಮ್ಮೆ ಕೆಮ್ಮು ವಿಪರೀತವಾದಾಗ ಗಂಟಲಿನಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆ ವೇಳೆ ಸ್ವಲ್ಪ ಕೆಂಪು ಮೆಣಸಿನಕಾಯಿ ಪುಡಿಯನ್ನು ಸಕ್ಕರೆ ಮತ್ತು ಬಾದಾಮಿಯೊಂದಿಗೆ ಬೆರೆಸಿ, 125 ಮಿಗ್ರಾಂ ಮಾತ್ರೆ ತಯಾರಿಸಿ ಅದನ್ನು ಸೇವನೆ ಮಾಡ್ಬೇಕು.
ರಕ್ತದೊತ್ತಡ ನಿಯಂತ್ರಣ : ಕೆಂಪು ಮೆಣಸಿನ ಕಾಯಿ ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ. ಅದ್ರಲ್ಲಿ ಪೊಟ್ಯಾಸಿಯಮ್ ಗುಣವಿದ್ದು, ಇದು ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುತ್ತದೆ.
ಹೊಟ್ಟೆ ನೋವಿಗೆ ಪರಿಹಾರ : ಸಾಮಾನ್ಯವಾಗಿ ಮಸಾಲೆಯುಕ್ತ ಆಹಾರ ಸೇವನೆಯಿಂದ ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗಿ ಹೊಟ್ಟೆ ನೋವು ಕಾಡುತ್ತದೆ. ಆಗ 100 ಗ್ರಾಂ ಬೆಲ್ಲದಲ್ಲಿ 1 ಗ್ರಾಂ ಕೆಂಪು ಮೆಣಸಿನ ಪುಡಿಯನ್ನು ಬೆರೆಸಿ, 1-2 ಗ್ರಾಂ ಮಾತ್ರೆ ತಯಾರಿಸಿ ಸೇವಿಸಿದರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ.
ತೂಕ ಇಳಿಕೆಗೆ ಸಹಕಾರಿ : ನಿಮ್ಮ ಆಹಾರದಲ್ಲಿ ನೀವು ಕೆಂಪು ಮೆಣಸಿನಕಾಯಿ ಪುಡಿ ಬಳಕೆ ಮಾಡೋದ್ರಿಂದ ತೂಕ ಇಳಿಸಬಹುದು. ಕೆಂಪು ಮೆಣಸಿನಕಾಯಿಯಲ್ಲಿ ಕ್ಯಾಪ್ಸೈಸಿನ್ ಎಂಬ ವಸ್ತುವಿದ್ದು, ಇದು ದೇಹದ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ಇದ್ರಿಂದ ಕ್ಯಾಲೋರಿ ಬರ್ನ್ ಆಗುತ್ತದೆ.
ಮೂತ್ರದ ಸಮಸ್ಯೆಗೆ ಮದ್ದು : ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು ಅಥವಾ ಉರಿ, ಮಧ್ಯಂತರ ಮೂತ್ರ, ಕಡಿಮೆ ಮೂತ್ರ, ಇತ್ಯಾದಿ ಮೂತ್ರದ ಕಾಯಿಲೆಗೆ ಇದು ಪರಿಣಾಮಕಾರಿಯಾಗಿದೆ.
ಚರ್ಮ – ಕೂದಲು ಆರೋಗ್ಯ : ಕೆಂಪು ಮೆಣಸಿನಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಹೆಚ್ಚಿನ ಪ್ರಮಾಣದಲ್ಲಿದೆ. ಇದು ಚರ್ಮ ಹಾಗೂ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.
Icecream Panipuri ಟೇಸ್ಟ್ ಮಾಡಿದ್ದೀರಾ ಯಾವತ್ತಾದರೂ? ಇಲ್ಲಿ ಸಿಗುತ್ತೆ ನೋಡಿ!
ಅತಿಯಾಗಿ ತಿಂದ್ರೆ ಹಾನಿ : ಸಾಕಷ್ಟು ಪ್ರಯೋಜನವನ್ನು ಹೊಂದಿರುವ ಕೆಂಪು ಮೆಣಸಿನ ಕಾಯಿಯನ್ನು ಅತಿಯಾಗಿ ಸೇವನೆ ಮಾಡಬಾರದು.