Pineapple Health Benefits: ಅನಾನಸ್ ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟು ಲಾಭವಿದೆ ಗೊತ್ತಾ ?

By Suvarna NewsFirst Published Jan 16, 2022, 8:50 PM IST
Highlights

ಆರೋಗ್ಯ (Health)ಕ್ಕೆ ಹಣ್ಣುಗಳ ಸೇವನೆ ಅತ್ಯುತ್ತಮ. ಅದರಲ್ಲೂ ಕೆಲವೊಂದು ಹಣ್ಣುಗಳು (Fruites) ವಿಶೇಷ ಗುಣಗಳನ್ನು ಹೊಂದಿದ್ದು, ವರ್ಷಗಳಿಂದ ಕಾಡುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಹೊಡೆದೋಡಿಸುತ್ತವೆ. ಅಂಥಹಾ ಹಣ್ಣುಗಳಲ್ಲೊಂದು ಅನಾನಸ್ (Pineapple). ಅನಾನಸ್ ತಿನ್ನೋದ್ರಿಂದ ಅದೆಷ್ಟು ಲಾಭಗಳಿವೆ ಗೊತ್ತಾ ?

ಸಿಹಿ, ಹುಳಿ ಮಿಶ್ರಿತ ಅನಾನಸ್ ಹಣ್ಣನ್ನು ಇಷ್ಟಪಡದವರು ವಿರಳ. ಅನಾನಸ್ ಹಣ್ಣನ್ನು ರುಚಿಕರವಾದ ಉಷ್ಣವಲಯದ ಹಣ್ಣು (Fruit) ಎಂದು ಕರೆಯಲಾಗುತ್ತದೆ. ಸೌತ್ ಅಮೇರಿಕಾದಲ್ಲಿ ಈ ಹಣ್ಣನ್ನು ಮೊದಲ ಬಾರಿ ಬೆಳೆಯಲಾಯಿತು. ಮೊದಲು ಇದನ್ನು ಪೈನ್ ಆಪಲ್ ಎಂದು ಕರೆಯಲಾಗುತ್ತಿತ್ತು. ಆ ನಂತರ ಅನಾನಸ್ ಎಂಬ ಹೆಸರು ಬಳಕೆಗೆ ಬಂತು. ಹಳದಿ ಬಣ್ಣದ ಈ ರುಚಿಕರ ಹಣ್ಣಿನಿಂದ ಜ್ಯೂಸ್, ಸಾರು, ಜ್ಯಾಮ್, ಸಲಾಡ್. ಸ್ಮೂತಿ, ಐಸ್ ಕ್ರೀಂ, ಕೇಕ್ (Cake) ಸೇರಿದಂತೆ ಹಲವು ರೆಸಿಪಿಗಳನ್ನು ತಯಾರಿಸಬಹುದು. ಅಷ್ಟೇ ಅಲ್ಲ, ಅನಾನಸು ಆರೋಗ್ಯ (Health)ಕರ ಗುಣಗಳನ್ನು ಸಹ ಹೊಂದಿದೆ. ಅನಾನಸು ಹಣ್ಣು ಒಂದು ರುಚಿಕರವಾದ ಹಣ್ಣು ಮಾತ್ರವಲ್ಲದೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ ಎಂದು ನಿಮಗೆ ತಿಳಿದಿದೆಯೇ? ಸ್ವಾಸ್ಥ್ಯ ತರಬೇತುದಾರ ಮತ್ತು ಲೇಖಕಿ ಡೀನ್ನೆ ಪಾಂಡೆ, ಅನಾನಸ್ ಹಣ್ಣಿನ ಪ್ರಯೋಜನಗಳ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಅನಾನಸ್‌ನಂತೆ ಸಂಪೂರ್ಣವಾಗಿರಿ. ಒಳಭಾಗದಲ್ಲಿ ಸಿಹಿಯಾಗಿರಿ ಆದರೆ ಹೊರಗಿನಿಂದ ಮೊನಚಾದ ರಕ್ಷಣೆಯನ್ನು ಹೊಂದಿರಿ’ ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಈ ರಸಭರಿತವಾದ ಹಳದಿ ಹಣ್ಣನ್ನು ಆನಂದಿಸಲು ಸಾಕಷ್ಟು ಮಾರ್ಗಗಳಿವೆ. ನೀವು ಅದರ ಚೂರುಗಳನ್ನು ಗ್ರಿಲ್ ಮಾಡಬಹುದು ಮತ್ತು ಅವುಗಳನ್ನು ಮಾಂಸದೊಂದಿಗೆ ಅಥವಾ ಟೇಸ್ಟಿ ಸೈಡ್ ಆಗಿ ಬಡಿಸಬಹುದು, ಅಥವಾ ನೀವು ರುಚಿಕರವಾದ ಅನಾನಸು ತುಂಡುಗಳನ್ನು ಸ್ಮೂಥಿ ಮಾಡಲು ಮಾಡಬಹುದು. ಎಂದು ತಿಳಿಸಿದ್ದಾರೆ.

ಅನಾನಸ್ (Pineapple)ನಲ್ಲಿ ವಿಟಮಿನ್ ಎ, ಬಿ, ಸಿ ಸಮೃದ್ಧವಾಗಿದೆ. ಮಾತ್ರವಲ್ಲ ಪೊಟ್ಯಾಶಿಯಂ, ಮ್ಯಾಂಗನೀಸ್ ಸೇರಿದಂತೆ ದೇಹಕ್ಕೆ ಅಗತ್ಯವಾದ ಹಲವು ಪೋಷಕಾಂಶಗಳು ಅನಾನಸ್‌ನಲ್ಲಿದೆ. ಹೃದಯ ಸಂಬಂಧಿತ ಕಾಯಿಲೆ, ಸಂಧಿವಾತ ಮೊದಲಾದ ಸಮಸ್ಯೆಗಳಿಗೆ ಅನಾನಸ್ ಸೇವನೆ ಉತ್ತಮವಾಗಿದೆ. ಪೌಷ್ಟಿಕತಜ್ಞರ ಪ್ರಕಾರ, ಒಂದು ಕಪ್ ಅನಾನಸ್ 79 ಮಿಗ್ರಾಂ ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ಇದು ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿದೆ. ಅನಾನಸ್‌ನಲ್ಲಿ ವಿಟಮಿನ್ ಸಿ ಇರುವುದರಿಂದ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 

ಮಲಬದ್ಧತೆಯಿಂದ ಬಳಲುತ್ತಿದ್ದೀರಾ? ಈ ರುಚಿಕಯಾದ ಜ್ಯೂಸ್ ಕುಡೀರಿ

ಇದಲ್ಲದೆ, ಅನಾನಸ್ ರಸವು ದೇಹದಲ್ಲಿ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಕೊಬ್ಬಿನ ವಿಭಜನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಡೀನ್ನೆ ಪಾಂಡೆ ಹೇಳಿದ್ದಾರೆ. ಈ ಹಿಂದೆ, ಸೆಲೆಬ್ರಿಟಿ ಪೌಷ್ಟಿಕತಜ್ಞ ಕಿನಿತಾ ಕಡಕಿಯಾ ಪಟೇಲ್ ಅವರು ಅನಾನಸ್‌ನಲ್ಲಿ ಬ್ರೋಮೆಲಿನ್ ಕಿಣ್ವದ ಉಪಸ್ಥಿತಿಯು ಬಹಳಷ್ಟು ಜೀರ್ಣಕಾರಿ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ ಎಂದು ಮಾಹಿತಿ ಹಂಚಿಕೊಂಡಿದ್ದರು.

ಅನಾನಸ್ ಬ್ರೋಮೆಲಿನ್ ಎಂಬ ಅಂಶವನ್ನು ಹೊಂದಿರುತ್ತದೆ, ಇದು ಕಿಣ್ವಗಳ ಮಿಶ್ರಣವಾಗಿದೆ, ಇದು ಉರಿಯೂತ ಮತ್ತು ಮೂಗಿನ ಊತವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಈ ಕಿಣ್ವದ ಉಪಸ್ಥಿತಿಯಿಂದಾಗಿ ಗಾಯಗಳು ಮತ್ತು ಸುಟ್ಟಗಾಯಗಳ ಗುಣಪಡಿಸುವ ಪ್ರಕ್ರಿಯೆಯನ್ನು ಇದು ವೇಗಗೊಳಿಸುತ್ತದೆ ಎಂದು ಡೀನ್ನೆ ಪಾಂಡೆ ಹೇಳಿದ್ದಾರೆ.

ಅನಾನಸ್ ಮಿಲ್ಕ್ ಶೇಕ್ ಯಾವತ್ತಾದರೂ ಕುಡಿದಿದ್ದೀರಾ? ಅಷ್ಟೇ ಕಥೆ!

ಸಿಹಿಯಾಗಿ ಏನನ್ನಾದರೂ ತಿನ್ನಬೇಕು ಎಂದು ಅನಿಸುತ್ತಿದೆಯಾ ಆದರೆ ತೂಕ (Weight) ಹೆಚ್ಚಾಗುತ್ತಿದೆ ಎಂಬ ಭಯವಿದೆಯೇ ? ಹಾಗಿದ್ದಾಗ ಅನಾನಸ್ ಸೇವಿಸಿ. ಯಾಕೆಂದರೆ ಡೀನ್ನೆ ಪಾಂಡೆ ಪ್ರಕಾರ, ಅನಾನಸ್ ಇತರ ಸಿಹಿ ತಿನಿಸುಗಳಿಗಿಂತ ಕಡಿಮೆ ಕ್ಯಾಲೋರಿ ಹೊಂದಿದೆ. ಅನಾನಸ್‌ನಿಂದ ಮಾಡಿದ ಐಸ್ ಕ್ರೀಂ, ಕೇಕ್ ಮೊದಲಾದವುಗಳನ್ನು ತಿನ್ನುವುದರಿಂದ ನೀವು ಕಡಿಮೆ ಕ್ಯಾಲೊರಿಗಳನ್ನು ಸೇವಿಸಿದಂತಾಗುತ್ತದೆ. ಇದು ತೂಕ ಕಳೆದುಕೊಳ್ಳಲು ನೆರವಾಗುತ್ತದೆ.ಅಲ್ಲದೆ, ಅನಾನಸ್ ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಟ್ರಾನ್ಸ್ ಕೊಬ್ಬುಗಳನ್ನು ಒಳಗೊಂಡಿರುವುದಿಲ್ಲ, ಅಲ್ಲದೆ ಈ ಹಣ್ಣು ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಮೂಲವಾಗಿರುವುದರಿಂದ, ಫೀನಾಲಿಕ್ ಆಮ್ಲಗಳು ಮತ್ತು ಫ್ಲೇವನಾಯ್ಡ್‌ಗಳಂತಹ ಉತ್ಕರ್ಷಣ ನಿರೋಧಕಗಳನ್ನು ಸಹ ಒಳಗೊಂಡಿದೆ.

click me!