ಬೆಳಗ್ಗೆ (Morning) ಚಿತ್ರಾನ್ನ, ಮಧ್ಯಾಹ್ನ ಮೊಸರನ್ನ, ರಾತ್ರಿಗೆ ಬಿರಿಯಾನಿ (Biriyani) ಎಂದು ಭಾರತದಲ್ಲಿ ಹೆಚ್ಚಿನವರು ಮೂರು ಹೊತ್ತು ಅನ್ನ (Rice)ವನ್ನೇ ತಿನ್ನುತ್ತಾರೆ. ಕುಕ್ಕರ್ (Cooker)ನಲ್ಲಿ ಸುಲಭವಾಗಿ ಕೆಲವೇ ನಿಮಿಷಗಳಲ್ಲಿ ಅನ್ನ ರೆಡಿಯಾಗುವ ಕಾರಣ ಯಾವುದೇ ರೆಸಿಪಿಯನ್ನು ಮಾಡುವುದು ಸುಲಭ. ಆದರೆ, ಕುಕ್ಕರ್‌ನಲ್ಲಿ ಬೇಯಿಸಿದ ಅನ್ನವನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದಾ ?
ಭಾರತೀಯ ಆಹಾರಪದ್ಧತಿಯಲ್ಲಿ ಅನ್ನಕ್ಕೆ ಹೆಚ್ಚಿನ ಮಹತ್ವವಿದೆ. ವಿದೇಶಗಳಲ್ಲಿರುವಂತೆ ಮೂರೂ ಹೊತ್ತು ಸ್ಯಾಂಡ್‌ವಿಚ್, ಬರ್ಗರ್, ರೋಟಿಯನ್ನು ತಿನ್ನದೆ ಭಾರತೀಯರು ಹೆಚ್ಚಾಗಿ ಅನ್ನವನ್ನೇ ತಿನ್ನುತ್ತಾರೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ ಹೊತ್ತು ಎಲ್ಲಾ ಮನೆಗಳಿಂದಲೂ ಕುಕ್ಕರ್ ವಿಶಲ್ ಕೇಳಿ ಬರುತ್ತವೆ. ಚಿತ್ರಾನ್ನ, ಮೊಸರನ್ನ, ವಾಂಗೀಬಾತ್, ಪುಲಾವ್ ಹೀಗೆ ಹೆಚ್ಚಿನ ರೆಸಿಪಿಗಳನ್ನು ತಯಾರಿಸಲು ಅನ್ನವೇ ಬೇಕಾಗಿರುವ ಕಾರಣ ಹೆಚ್ಚಿನ ಜನರು ಕುಕ್ಕರ್‌ನಲ್ಲಿ ಸುಲಭವಾಗಿ ಅನ್ನವನ್ನು ಬೇಯಿಸಿಕೊಳ್ಳುತ್ತಾರೆ. ಹಳ್ಳಿಗಳಲ್ಲಿ ಈಗಲೂ ಸಾಂಪ್ರದಾಯಿಕ ರೀತಿಯಲ್ಲಿ ಕಟ್ಟಿಗೆ ಒಲೆ ಉರಿಸಿ, ನೀರಿಟ್ಟು, ಅಕ್ಕಿಯನ್ನು ಹಾಕಿ ಕುದಿಸಿ ಅನ್ನವನ್ನು ತಯಾರಿಸಲಾಗುತ್ತದೆ. ಆದರೆ, ಸಿಟಿಯಲ್ಲಿ ಗ್ಯಾಸ್‌ನಲ್ಲಿ ಕುಕ್ಕರ್‌ನಲ್ಲಿ ಅಕ್ಕಿ ತೊಳೆದಿಟ್ಟು ಸುಲಭವಾಗಿ ಅನ್ನ ತಯಾರಿಸಲಾಗುತ್ತದೆ.
ಸಾಂಪ್ರದಾಯಿಕ ವಿಧಾನವು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ ಅನ್ನೋ ಕಾರಣಕ್ಕೆ ಹಳ್ಳಿಯಲ್ಲಿಯೂ ಇತ್ತೀಚಿಗೆ ಕುಕ್ಕರ್‌ನಲ್ಲೇ ಅನ್ನ ಮಾಡುವುದನ್ನು ರೂಢಿ ಮಾಡಿಕೊಳ್ಳುತ್ತಿದ್ದಾರೆ. ಯಾಕೆಂದರೆ ಕುಕ್ಕರ್‌ನಲ್ಲಿ ಅನ್ನ ತಯಾರಿಸುವುದು ಕಡಿಮೆ ಸಮಯ ಮತ್ತು ಶ್ರಮವನ್ನು ತೆಗೆದುಕೊಳ್ಳುತ್ತದೆ. ಆದರೆ ಈ ರೀತಿ ಬೇಯಿಸಿದ ಅನ್ನ ಆರೋಗ್ಯಕ್ಕೆ ಒಳ್ಳೆಯದೇ ಅಲ್ಲವೇ ಎಂಬ ಬಗ್ಗೆ ಹಲವರಿಗೆ ಗೊಂದಲವಿದೆ. ಕೆಲವೊಬ್ಬರು ಕುಕ್ಕರ್‌ನಲ್ಲಿ ಬೇಯಿಸಿದ ಅನ್ನ ಎಲ್ಲಾ ರೀತಿಯ ಪೌಷ್ಟಿಕಾಂಶಗಳನ್ನು ಕಳೆದುಕೊಳ್ಳುತ್ತದೆ ಎಂದು ಹೇಳುತ್ತಾರೆ. ಇನ್ನು ಹಲವರ ಪ್ರಕಾರ, ಕುಕ್ಕರ್‌ನಲ್ಲಿ ಬೇಯಿಸಿದ ಅನ್ನದಿಂದ ನೀರು ಹೊರ ಹೋಗದ ಕಾರಣ ಎಲ್ಲಾ ಪೌಷ್ಟಿಕಾಂಶಗಳು ಇದರಲ್ಲೇ ಉಳಿದುಕೊಳ್ಳುತ್ತವೆ ಎನ್ನುತ್ತಾರೆ. ಹಾಗಿದ್ರೆ, ಕುಕ್ಕರ್‌ನಲ್ಲಿ ಅನ್ನವನ್ನು ತಯಾರಿಸುವುದರ ಬಗ್ಗೆ ಆಹಾರತಜ್ಞರು ಏನು ಹೇಳುತ್ತಾರೆ ತಿಳಿಯೋಣ.
Polished Rice ತಿನ್ನೋದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಗ್ಯಾರಂಟಿ!
ಸಾಂಪ್ರದಾಯಿಕವಾಗಿ ಕಟ್ಟಿಗೆ ಒಲೆಯಲ್ಲಿ ನೀರನ್ನಿಟ್ಟು ಅನ್ನ (Rice)ವನ್ನು ತಯಾರಿಸುವುದು ಆರೋಗ್ಯಕರ ವಿಧಾನವೆಂದು ಪರಿಗಣಿಸಲಾಗಿದೆ. ಈ ರೀತಿ ಬೇಯಿಸಿದ ಅಕ್ಕಿ ಆರೋಗ್ಯಕರ ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಅಂಶವನ್ನು ಹೊಂದಿದೆ ಎಂದು ತಿಳಿದುಬರುತ್ತದೆ. ಯಾಕೆಂದರೆ ಈ ರೀತಿ ತಯಾರಿಸುವ ಅನ್ನದಿಂದ ಪಿಷ್ಟವನ್ನು ತೆಗೆದುಹಾಕಲಾಗುತ್ತದೆ. ಪಿಷ್ಟದ ಜೊತೆಗೆ ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ನಂತಹ ನೀರಿನಲ್ಲಿ ಕರಗುವ ಪೋಷಕಾಂಶಗಳ ನಷ್ಟವೂ ಇದೆ ಎಂದು ತಜ್ಞರು ವಾದಿಸುತ್ತಾರೆ.
ಕುಕ್ಕರ್ ಅನ್ನ ಸೇವಿಸುವುದರಿಂದ ಇರುವ ಪ್ರಯೋಜನಗಳು
ಹಾಗೆಯೇ ಪ್ರೆಶರ್ ಕುಕ್ಕರ್ (Pressure cooker)ನಲ್ಲಿ ಅನ್ನ ಮಾಡುವುದರಿಂದ ಸಹ ಪ್ರಯೋಜನಗಳಿವೆ. ಕುಕ್ಕರ್‌ನಲ್ಲಿ ಹೆಚ್ಚಿನ ಒತ್ತಡ ಮತ್ತು ಶಾಖದಲ್ಲಿ ಅಕ್ಕಿ ಬೇಯುವುದರಿಂದ ಬಹಳಷ್ಟು ಪ್ರಯೋಜನಗಳಾಗುತ್ತವೆ. ಒತ್ತಡದಲ್ಲಿ ಬೇಯಿಸಿದ ಅನ್ನವು ಜೀರ್ಣಕ್ರಿಯೆಗೆ ಒಳ್ಳೆಯದು ಮತ್ತು ಉತ್ತಮ ಪೌಷ್ಟಿಕಾಂಶದ ಪ್ರಯೋಜನಗಳನ್ನು ಹೊಂದಿದೆ. ಪ್ರೋಟೀನ್ (Protein), ಪಿಷ್ಟ ಮತ್ತು ಫೈಬರ್‌ನಂತಹ ಮ್ಯಾಕ್ರೋನ್ಯೂಟ್ರಿಯೆಂಟ್‌ಗಳು ಶಾಖದಿಂದ ವರ್ಧಿಸಲ್ಪಡುತ್ತವೆ ಎಂದು ತಿಳಿದುಬಂದಿದೆ. ಒತ್ತಡದಲ್ಲಿ ಬೇಯಿಸಿದ ಅನ್ನದಿಂದ ನೀವು ಹೆಚ್ಚು ಪೌಷ್ಟಿಕಾಂಶದ ಪ್ರಯೋಜನಗಳನ್ನು ಪಡೆಯುತ್ತೀರಿ. ಅಲ್ಲದೆ ಈ ರೀತಿ ಕುಕ್ಕರ್ ನಲ್ಲಿ ಅನ್ನ ಮಾಡುವುದರಿಂದ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳು ಇದ್ದರೆ, ನಾಶವಾಗುತ್ತವೆ. ಅಂಕಿಅಂಶಗಳ ಪ್ರಕಾರ, ಕುಕ್ಕರ್‌ನಲ್ಲಿ ಅನ್ನ ಬೇಯಿಸುವುದು ಹೆಚ್ಚಿನ ಪ್ರಯೋಜನಗಳನ್ನು ಹೊಂದಿದೆ ಮತ್ತು ಇದು ಬಹಳಷ್ಟು ಸಮಯವನ್ನು ಉಳಿಸುತ್ತದೆ.
Kitchen Tips: ಅನ್ನ ಮಾಡುವಾಗ ಅಕ್ಕಿ ಹೆಚ್ಚು ಬೆಂದರೆ ಏನು ಮಾಡೋದು?
ಕುಕ್ಕರ್ ಅನ್ನ ಸೇವಿಸುವುದರಿಂದ ಉಂಟಾಗುವ ತೊಂದರೆಗಳು
ಇನ್ನು ಕುಕ್ಕರ್ ಅನ್ನ ಸೇವಿಸುವುದರಿಂದ ತೊಂದರೆಯೂ ಇದೆ. ಅಧ್ಯಯನಗಳಲ್ಲಿ ಹೇಳುವಂತೆ ಒತ್ತಡದಲ್ಲಿ ಬೇಯುವ ಯಾವುದೇ ಆಹಾರಗಳಲ್ಲಿ ಲೆಕ್ಟಿನ್ ಅಂಶ ಕಡಿಮೆಯಾಗುತ್ತಾ ಬರುತ್ತದೆ. ಲೆಕ್ಟಿನ್ ಎಂಬುದು ದೇಹಕ್ಕೆ ಅಗತ್ಯವಾದ ಪ್ರೋಟೀನ್ ಅಂಶವಾಗಿದೆ. ಅಲ್ಲದೆ ಕೆಲವೊಂದು ಪದಾರ್ಥಗಳನ್ನು ಹೆಚ್ಚಿನ ತಾಪಮಾನದಲ್ಲಿ ಕುಕ್ಕರ್‌ನಲ್ಲಿ ಬೇಯಿಸಿದಾಗ ಅದರಿಂದ ಆಕ್ರಿಲಮೈಡ್ ಎಂಬ ರಾಸಾಯನಿಕ ಅಂಶ ಬಿಡುಗಡೆಯಾಗುತ್ತದೆ.ಇದು ದೇಹಕ್ಕೆ ಅತ್ಯಂತ ಹಾನಿಕರವಾಗಿದ್ದು, ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಅಲ್ಲದೆ, ಕುಕ್ಕರ್‌ಗಳನ್ನು ಅಲ್ಯುಮಿನಿಯಂನಿಂದ ತಯಾರು ಮಾಡುವುದರಿಂದ ಆಹಾರ ಪದಾರ್ಥಗಳನ್ನು ಹೆಚ್ಚಿನ ತಾಪಮಾನದಲ್ಲಿ ಬೇಯಿಸಿದಾಗ ಈ ಆಹಾರ ಪದಾರ್ಥದಲ್ಲಿ ದೇಹಕ್ಕೆ ಹಾನಿಕರವಾದ ಅಲ್ಯುಮಿನಿಯಮ್ ಅಂಶ ಸೇರಿಕೊಳ್ಳುವ ಸಾಧ್ಯತೆಯೂ ಇದೆ.