ಹೊಟ್ಟೆ ಉರಿ, ಕಜ್ಜಿ, ಕೆಮ್ಮು, ಜ್ವರದಂಥ ರೋಗಗಳಿಗೂ ತೀತಾಫಲ ಉತ್ತಮ ಮದ್ದು. ಇದರ ಹಣ್ಣು, ಎಲೆ, ತೊಗಟೆಯನ್ನು ಯಾವ ರೋಗಕ್ಕೆ, ಹೇಗೆ ಬಳಸೋದು?
ಮೃದು, ರುಚಿಕರವಾದ ಸೀತಾಫಲ ಹಣ್ಣು ಬಹುಜನರಿಗಿಷ್ಟ. ಇದು ಆರೋಗ್ಯಕ್ಕೆ ಮದ್ದು. ಕೇವಲ ಹಣ್ಣು ಮಾತ್ರವಲ್ಲ, ಅಡ್ಡರ ಬೀಜ, ಎಲೆ, ತೊಗಟೆ ಎಲ್ಲವೂ ಒಂದಲ್ಲ ಒಂದು ವಿಧಾನದ ಮೂಲಕ ಆರೋಗ್ಯಕ್ಕೆ ಉತ್ತಮ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ? ಇಲ್ಲಿದೆ ಪುಟ್ಟ ಮಾಹಿತಿ..
ಹೊಟ್ಟೆ ಉರಿ ಸಮಸ್ಯೆ ಕಂಡು ಬಂದರೆ ಸೀತಾಫಲ ಜ್ಯೂಸ್ ಸೇವಿಸಿ.
ಸೀತಾಫಲದ ಎಲೆಗಳನ್ನು ಚೆನ್ನಾಗಿ ರುಬ್ಬಿ ಕುರು, ಕಜ್ಜಿಗಳಿಗೆ ಹಚ್ಚಿದರೆ ಬೇಗ ಗುಣವಾಗುತ್ತದೆ.
ಹಿಮೋಗ್ಲೋಬಿನ್ ಹೆಚ್ಚಾಗಲು ಸೀತಾಫಲ ಸೇವಿಸಿ.
ಈ ಗಿಡದ ತೊಗಟೆಯನ್ನು ಜಜ್ಜಿ ಆ ರಸವನ್ನು ಸ್ವಲ್ಪ ನೀರಿನೊಂದಿಗೆ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಈ ನೀರಿಗೆ ಜೇನು ತುಪ್ಪ ಬೆರೆಸಿ ಕುಡಿದರೆ ಜ್ವರ, ಕೆಮ್ಮು ಕಡಿಮೆಯಾಗುತ್ತದೆ.
ಇದರ ಎಲೆ ಒಣಗಿಸಿ ಬಾಣಲೆಯಲ್ಲಿ ಹಾಕಿ ಅದನ್ನು ಚೆನ್ನಾಗಿ ಹುರಿಯಿರಿ. ನಂತರ ಪುಡಿಮಾಡಿಕೊಂಡು ತೆಂಗಿನೆಣ್ಣೆಯಲ್ಲಿ ಕಲಸಿ ಹುಣ್ಣಿಗೆ ಹಚ್ಚಿದರೆ ಬೇಗ ಗುಣವಾತ್ತದೆ.
ಸೀತಾಫಲ ತೊಗಟೆ ಕಷಾಯ ಮಾಡಿ ಕುಡಿದರೆ ಬೇಧಿ, ಆಮಶಂಕೆ ಸಮಸ್ಯೆಗೆ ರಾಮಬಾಣ.
ಹಣ್ಣಿನ ಸಿಪ್ಪೆಯಿಂದ ಕಷಾಯ ತಯಾರಿಸಿ, ಸೇವಿಸಿದರೆ ಮೂತ್ರ ಸಮಸ್ಯೆ ನಿವಾರಣೆಯಾಗುತ್ತದೆ.
ಈ ಕಷಾಯ ಸೇವಿಸಿದರೆ ಮಹಿಳೆಯರ ಋತುಸ್ರಾವ ಸಮಸ್ಯೆಗೂ ಮದ್ದು.
ನಿರಂತರವಾಗಿ ಈ ಹಣ್ಣನ್ನು ಸೇವಿಸದರೆ ಹಲ್ಲು ಮತ್ತು ದವಡೆ ಸಮಸ್ಯೆ ನಿವಾರಣೆಯಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.