ಕಪ್ಪು ಬೆಳ್ಳುಳ್ಳಿ ಬಗ್ಗೆ ನೀವು ಕೇಳಿದ್ದೀರಾ? ಆರೋಗ್ಯಕ್ಕೆಷ್ಟು ಒಳ್ಳೇದು ಅಂತ ನಾವು ಹೇಳ್ತೀವಿ ಕೇಳಿ

By Suvarna News  |  First Published Sep 30, 2022, 1:44 PM IST

ಬೆಳ್ಳುಳ್ಳಿ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳು ಆಗುತ್ತವೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಆದರೆ  ಕಪ್ಪು ಬೆಳ್ಳುಳ್ಳಿಯ ಬಗ್ಗೆ ಹೆಚ್ಚಿನ ಮಂದಿಗೆ ಗೊತ್ತಿರಲಿಕ್ಕಿಲ್ಲ. ಇಲ್ಲಿದೆ ಡಿಟೇಲ್ಸ್.


ಬೆಳ್ಳುಳ್ಳಿಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಮನುಷ್ಯನ ದೇಹಕ್ಕೆ ಅನೇಕ ಲಾಭಗಳಿವೆ. ಇದು ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಅನೇಕ ರೋಗಿಗಳಿಗೆ ಮನೆ ಮದ್ದು. ಇವೆಲ್ಲ ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಕಪ್ಪು ಬೆಳ್ಳುಳ್ಳಿಯ ಬಗ್ಗೆ ಅನೇಕರಿಗೆ ಮಾಹಿತಿ ಇರುವುದಿಲ್ಲ. ಬಿಳಿ ಬೆಳ್ಳುಳ್ಳಿಯನ್ನು ಹುದುಗಿಸುವ ಮೂಲಕ ಕಪ್ಪು ಬೆಳ್ಳುಳ್ಳಿಯನ್ನು ತಯಾರಿಸಲಾಗುತ್ತದೆ. ಇದು ಅನೇಕ ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳು ಮತ್ತು ಇತರ ಪ್ರಯೋಜನಕಾರಿ ಸಂಯುಕ್ತಗಳ ಹೆಚ್ಚಿನ ಸಾಂದ್ರತೆ ಹೊಂದಿದೆ. ಇದರ ಸೇವನೆಯಿಂದ ಆಗುವ ಪ್ರಯೋಜನ ಮಾಹಿತಿ ಇಲ್ಲಿದೆ.

ರಕ್ತದಲ್ಲಿನ ಸಕ್ಕರೆ ನಿಯಂತ್ರಣ
ದೇಹದಲ್ಲಿ ಅಧಿಕ ರಕ್ತದ ಸಕ್ಕರೆ (sugar) ಮಟ್ಟವು ಹೃದ್ರೋಗ, ಮೂತ್ರಪಿಂಡ ವೈಫಲ್ಯ ಮತ್ತು ನರಗಳ ಹಾನಿಯಂತಹ ತೀವ್ರ ತೊಡಕುಗಳನ್ನು ಉಂಟುಮಾಡಬಹುದು, ಕಡಿಮೆ ರಕ್ತದ ಸಕ್ಕರೆ ಮಟ್ಟವು ಮೂರ್ಛೆ ಮತ್ತು ಸಾವಿಗೆ ಕಾರಣವಾಗಬಹುದು. ಅದಲ್ಲದೆ ಅನಿಯಮಿತ ರಕ್ತದಲ್ಲಿನ ಸಕ್ಕರೆ ಮಟ್ಟವು ಮಧುಮೇಹಕ್ಕೆ (diabetes) ಕಾರಣವಾಗಬಹುದು. ಈ ಎಲ್ಲಾ ಸಮಸ್ಯೆಗಳಿಂದ ಪರಿಹಾರವನ್ನು ಕಂಡುಕೊಳ್ಳಲು ಕಪ್ಪು ಬೆಳ್ಳುಳ್ಳಿ ಸೇವಿಸಬೇಕು. ಸಾಮಾನ್ಯ  ಬೆಳ್ಳುಳ್ಳಿಯಂತೆ, ಕಪ್ಪು ಬೆಳ್ಳುಳ್ಳಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.  ಇದರಲ್ಲಿನ ಹೆಚ್ಚಿನ ಉತ್ಕರ್ಷಣ ನಿರೋಧಕ ಮಟ್ಟವು ಮಧುಮೇಹಕ್ಕೆ ಸಂಬಂಧಿಸಿದ ತೊಡಕುಗಳನ್ನು ತಡೆಯಲು ಸಹಾಯ ಮಾಡುತ್ತದೆ. ಇನ್ನು ಕಪ್ಪು ಬೆಳ್ಳುಳ್ಳಿ (black garlic) ಪ್ರೋಬಯಾಟಿಕ್  ಅಂಶವನ್ನು  ಹೊಂದಿದ್ದು, ಇದು  ಗರ್ಭಾವಸ್ಥೆಯಲ್ಲಿರುವಾಗ ಮಧುಮೇಹದ ಬರುವುದನ್ನು ತಡೆಯಲು ಸಹಾಯ ಮಾಡುತ್ತದೆ.

ಮಧುಮೇಹ ನಿಯಂತ್ರಣಕ್ಕೆ ಈ ಆಹಾರ ಪದಾರ್ಥಗಳು ಸಹಕಾರಿ..

Tap to resize

Latest Videos

ಹೃದಯ ರಕ್ಷಣೆಗೆ ಮಾಡುತ್ತದೆ
ಕಪ್ಪು ಬೆಳ್ಳುಳ್ಳಿಯು ಹೃದಯದ (heart) ಆರೋಗ್ಯ ಸುಧಾರಿಸಲು ಸಹಾಯ ಮಾಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಇದು ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ಗಳ ಮಟ್ಟವನ್ನು ಕಡಿಮೆ ಮಾಡಿ, ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಇನ್ನು ಕಪ್ಪು ಬೆಳ್ಳುಳ್ಳಿ "ಕೆಟ್ಟ" ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ನಮ್ಮ ದೇಹದಲ್ಲಿ  "ಉತ್ತಮ" ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ, ಇದು ರಕ್ತದ (blood) ಹರಿವನ್ನು ಹೆಚ್ಚಿಸುವಾಗ ನಿಮ್ಮ ಹೃದಯ ಮತ್ತು ಅಪಧಮನಿಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ.
ಕಪ್ಪು ಬೆಳ್ಳುಳ್ಳಿಯಲ್ಲಿನ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಕ್ಯಾನ್ಸರ್ (cancer)ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇನ್ನು ಕರುಳಿನ ಕ್ಯಾನ್ಸರ್  ಬೆಳವಣಿಗೆಯನ್ನು ಕಡಿಮೆ ಮಾಡಲು ಸಹಾಯ ಮಾಡಿ, ಜೀವಕೋಶದ (cells) ಹಾನಿಯನ್ನು ಕಡಿಮೆ ಮಾಡುತ್ತದೆ. ಅದಲ್ಲದೆ ದೇಹದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆ ಮತ್ತು ಸಂಭಾವ್ಯ ಹರಡುವಿಕೆಯನ್ನು ಮಿತಿಗೊಳಿಸಲು ಸಹಾಯ ಮಾಡುತ್ತದೆ.

ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತೆ
ಕಪ್ಪು ಬೆಳ್ಳುಳ್ಳಿ ನೈಸರ್ಗಿಕ ಉರಿಯೂತ ನಿವಾರಕವಾಗಿದೆ,  ಕಪ್ಪು ಬೆಳ್ಳುಳ್ಳಿ  ಸೇವಿಸುವುದರಿಂದ ಮೆದುಳಿನಲ್ಲಿನ ಉರಿಯೂತದಿಂದ  ಸ್ಮರಣೆಯನ್ನು ದುರ್ಬಲಗೊಳ್ಳುವುದು ಅಥವಾ ಕಾಲಾನಂತರದಲ್ಲಿ ಮೆದುಳಿನ (mind) ಕಾರ್ಯವನ್ನು ಹದಗೆಡುವುದನ್ನು ತಪ್ಪಿಸಬಹುದು.  ಕಪ್ಪು ಬೆಳ್ಳುಳ್ಳಿ ಒಟ್ಟಾರೆ ಮೆದುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.

Interesting Fact: ಬೆಳ್ಳುಳ್ಳಿಯನ್ನು ಪಾದಗಳಡಿ ಇಡೋದ್ರಿಂದ ಏನಾಗುತ್ತೆ ಗೊತ್ತಾ?

ಹೆಚ್ಚು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ.
ಕಪ್ಪು ಬೆಳ್ಳುಳ್ಳಿ ಹಸಿ ಬೆಳ್ಳುಳ್ಳಿಗಿಂತ ಎರಡರಿಂದ ಮೂರು ಪಟ್ಟು ಹೆಚ್ಚು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ.  ದೇಹವು ಹೆಚ್ಚು  ಉತ್ಕರ್ಷಣ ನಿರೋಧಕಗಳನ್ನು  ಹೊಂದಿದಾಗ, ದೇಹದಲ್ಲಿನ  ಆಂಟಿಆಕ್ಸಿಡೆಂಟ್ಗಳು  ಜೀವಕೋಯಕೃತ್(cells) ಹಾನಿಗೊಳಗಾಗುವಿಕೆಯಿಂದ  ರಕ್ಷಿಸುತ್ತದೆ. ಅದಲ್ಲದೆ ಯಕೃತ್ (liver) ಹಾನಿಗೊಳಗಾಗುವುಕೆಯಿಂದಲು  ರಕ್ಷಿಸುತ್ತದೆ.

ಕಪ್ಪು ಬೆಳ್ಳುಳ್ಳಿಯ ಎಲ್ಲಾ ಗುಣಗಳು ಬಿಳಿ ಬೆಳ್ಳುಳ್ಳಿಯಂತೆ ಇವೆ. ಆದರೆ ಹುದುಗುವಿಕೆಯಿಂದಾಗಿ ಕಪ್ಪು ಬೆಳ್ಳುಳ್ಳಿಯಲ್ಲಿ ಉತ್ಪತ್ತಿಯಾಗುವ ಉತ್ಕರ್ಷಣ ನಿರೋಧಕಗಳು ಅದನ್ನು ಬಿಳಿ ಬೆಳ್ಳುಳ್ಳಿಯಿಂದ ಭಿನ್ನವಾಗಿಸುತ್ತದೆ. ಅದರ ಪ್ರಯೋಜನಗಳನ್ನು ಹಲವು ಪಟ್ಟು ಹೆಚ್ಚಿಸುತ್ತವೆ.

click me!