ದಿನಾಲೂ ತಿನ್ನಿ ಬ್ಲೂ ಬೆರಿ, ಇದು ಬದಲಿಸಬಲ್ಲದು ನಮ್ಮ ದಿನಚರಿ

By Suvarna News  |  First Published Sep 29, 2022, 5:13 PM IST

ಬೆರಿ ಹಣ್ಣುಗಳು ಅನೇಕ ರೀತಿಯ ಔಷಧೀಯ ಗುಣಗಳನ್ನು ಹೊಂದಿದೆ. ಇದು ತಿನ್ನಲು ಬಹಳ ರುಚಿಕರವಾಗಿದ್ದು, ಇದರಿಂದ ಅನೇಕ ಪ್ರಯೋಜನಗಳಿವೆ.


ಮನುಷ್ಯನ ಆರೋಗ್ಯಕ್ಕೆ ಅತ್ಯಮೂಲ್ಯ ಕೊಡುಗೆ ನೀಡುವಲ್ಲಿ ತರಕಾರಿ ಮತ್ತು ಹಣ್ಣುಗಳ ಪಾತ್ರ ಮಹತ್ವದ್ದಾಗಿದೆ. ನಮ್ಮ ದಿನನಿತ್ಯದ ಆಹಾರದಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಸಮರ್ಪಕವಾಗಿ ಬಳಸಿದರೆ ಆರೋಗ್ಯವು ಸದೃಢವಾಗಿರುತ್ತದೆ. ಅವುಗಳಲ್ಲಿ ಬೆರಿಹಣ್ಣು ಅಥವಾ ಬ್ಲೂ ಬೆರಿ ಕೂಡ ಒಂದು. ಇದು ರುಚಿಕರ ಮಾತ್ರವಲ್ಲದೆ ನೋವು ನಿವಾರಕ ಗುಣಗಳನ್ನು ಹೊಂದಿವೆ. ಈ ಚಿಕ್ಕ ಹಣ್ಣುಗಳು ಸಿಹಿ ಮತ್ತು ಹುಳಿಯಿದ್ದು, ಅನೇಕ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಇವುಗಳಿಂದ ನಮ್ಮ ದೇಹ ಹಾಗೂ ಮನಸ್ಸಿಗೆ ಅನೇಕ ಪ್ರಯೋಜನಗಳಿವೆ. ಅವುಗಳ ಮಾಹಿತಿ ಇಲ್ಲಿದೆ.

ಬ್ಲೂ ಬೆರಿ ಇನ್ಸುಲಿನ್ ನಿಯಂತ್ರಕ..
ಬೆರಿ ಹಣ್ಣುಗಳು ಮಧುಮೇಹ ಹೊಂದಿರುವವರಲ್ಲಿ ಗ್ಲೂಕೋಸ್ (glucose) ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಹಾಗೇ  ಕೊಬ್ಬಿನ ಆಹಾರ ಪ್ರೇರಿತ ಸ್ಥೂಲಕಾಯತೆಯ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ. ಇನ್ನು ಇದರಲ್ಲಿನ ಆಂಥೋಸಯಾನಿನ್ ಅಂಶವು ಬೊಜ್ಜು, ಇನ್ಸುಲಿನ್ (insulin)ಸುಧಾರಿಸಲು ಸಹಾಯ ಮಾಡುತ್ತದೆ. ಹಾಗೇ ಟೈಪ್ 2 ಮಧುಮೇಹವನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ.

ಜೀರ್ಣ ಕ್ರಿಯೆಯಿಂದ, ಹೃದಯದ ಆರೋಗ್ಯದವರೆಗೆ ಬ್ಲೂ ಬೆರ್ರಿ ಬೆಸ್ಟ್..!

Tap to resize

Latest Videos

ಮೂಳೆಗಳ ಗಟ್ಟಿತನಕ್ಕೆ ಸಹಾಯಕಾರಿ..
ಬ್ಲೂ ಬೆರಿ ಹಣ್ಣಿನಲ್ಲಿ ಮ್ಯಾಂಗನೀಸ್, ಕಬ್ಬಿಣ, ಕ್ಯಾಲ್ಸಿಯಂ, ರಂಜಕ ಮತ್ತು ಸತುವುಗಳಂತಹ ಸಾಕಷ್ಟು ಪೋಷಕಾಂಶಗಳಿವೆ. ಇವು ಮೂಳೆಗಳು (bone) ಮತ್ತು ಕೀಲುಗಳ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಳ್ಳುವಲ್ಲಿ ಸಹಕರಿಸುತ್ತವೆ. ಹಾಗೆ ಬೆರಿಹಣ್ಣುಗಳು (blue berry) ಮ್ಯಾಂಗನೀಸ್'ನ ಮೂಲವಾಗಿದೆ. ಇದು ಆರೋಗ್ಯಕರ ಮೂಳೆ ಬೆಳವಣಿಗೆಯಲ್ಲಿ ಪಾತ್ರವನ್ನು ವಹಿಸುತ್ತದೆ.  ಇನ್ನು ಸಾಮಾನ್ಯವಾಗಿ ದುರ್ಬಲ ಮೂಳೆಗಳು ಸುಲಭವಾಗಿ ಮುರಿತಕ್ಕೆ ಒಳಗಾಗುತ್ತವೆ‌. ಹಾಗೆ ಗುಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಪೌಷ್ಟಿಕಾಂಶ-ಭರಿತ ಬೆರಿಹಣ್ಣುಗಳನ್ನು ತಿನ್ನುವುದರಿಂದ  ಮೂಳೆಯ ಬಲವನ್ನು ಹೆಚ್ಚಿಸಬಹುದು ಮತ್ತು ಇದರಿಲ್ಲಿನ  ವಿಟಮಿನ್ ಕೆ (vitamin k)ಸಹಾಯದಿಂದ  ಮೂಳೆ ಮುರಿತದ ಸಮಸ್ಯೆಯನ್ನು ಗುಣಪಡಿಸಬಹುದು.

ಖಿನ್ನತೆ (Depression) ದೂರ ಮಾಡುತ್ತದೆ.
ಬೆರಿ ಹಣ್ಣುಗಳು ದೇಹದಲ್ಲಿ ಬೂಸ್ಟರ್ (booster) ಆಗಿ ಕಾರ್ಯನಿರ್ವಹಿಸುತ್ತದೆ. ಬೆರಿಹಣ್ಣುಗಳು (blue berry) ದೇಹಕ್ಕೆ ಮಾತ್ರವಲ್ಲದೆ ಮನಸ್ಸಿಗೂ ಅದ್ಭುತವಾಗಿದ್ದು, ಖಿನ್ನತೆಯನ್ನು  ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
ಬೆರಿಹಣ್ಣುಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಪ್ರತಿದಿನ ಒಂದು ಕಪ್ ಬೆರಿಹಣ್ಣುಗಳು (blue berry) ಸೇವಿಸುವುದರಿಂದ  ಹೃದ್ರೋಗದ (heart) ಅಪಾಯವನ್ನು 15% ರಷ್ಟು ಕಡಿಮೆ ಮಾಡಬಹುದು. ಬ್ಲೂ ಬೆರಿ  ಹಣ್ಣು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಇದು ಮಾನವ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು  ಕಡಿಮೆ ಮಾಡುತ್ತದೆ. ಜೊತೆಗೆ, ಇದು ಅಪಧಮನಿಗಳಲ್ಲಿ ಸುಗಮ ರಕ್ತದ ಹರಿವನ್ನು ಹೆಚ್ಚಿಸುತ್ತದೆ.

ದೆಹಲಿಯ ಆಹಾರ ಮಳಿಗೆಯಲ್ಲಿ ಸಿಗ್ತಿದೆ ಸ್ಟ್ರಾಬೆರಿ ಮತ್ತು ಬ್ಲೂಬೆರಿ ಸಮೋಸಾ

ಮೆಮೊರಿ ಪವರ್ (Memory Power) ಹೆಚ್ಚಿಸುತ್ತೆ ಬ್ಲೂ ಬೆರಿ.
ಬ್ಲೂ ಬೆರಿ ಮೆಮೊರಿ (memory)ಮತ್ತು ಅರಿವಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.  ಮರೆವಿನ ಕಾಯಿಲೆ ಅಥವಾ ಇತರ ರೀತಿಯ ಬುದ್ಧಿಮಾಂದ್ಯತೆಯ ಸಮಸ್ಯೆಗೆ ಪರಿಹಾರವನ್ನು ಬೆರಿ ಹಣ್ಣಿನಿಂದ (blue berry) ಪಡೆದುಕೊಳ್ಳಬಹುದು. ಅದಲ್ಲದೆ  ಈ ಹಣ್ಣಿನ ಸೇವನೆ ಮಕ್ಕಳಲ್ಲಿ ಸ್ಮರಣಾ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರ ಪರಿಣಾಮವಾಗಿ ಹೆಚ್ಚಿನ ಅಂಕಗಳನ್ನು ಪರೀಕ್ಷೆಯಲ್ಲಿ ಮಕ್ಕಳು ತೆಗೆದುಕೊಳ್ಳಬಹುದು.

ಕ್ಯಾನ್ಸರ್ (Cancer) ತಡೆಗಟ್ಟುವಲ್ಲಿ ಸಹಕಾರಿ
ಬೆರಿಹಣ್ಣಿನಲ್ಲಿನ ಉತ್ಕರ್ಷಣ ನಿರೋಧಕವು ದೇಹದಲ್ಲಿನ  ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಕೆಲವು ರೀತಿಯ ಕ್ಯಾನ್ಸರ್'ಗಳ (cancer)ಬೆಳವಣಿಗೆಯನ್ನು ತಡೆಯುತ್ತದೆ. ಹಾಗೇ ಜೀವಕೋಶಗಳು ಸಾಯುವುದನ್ನು  ನಿಲ್ಲಿಸುವುದರ ಜೊತೆಗೆ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಸಹಾಯಕಾರಿಯಾಗಿದೆ. ಇನ್ನು ಬಾಯಿ, ಗಂಟಲಕುಳಿ ,  ಅನ್ನನಾಳ, ಶ್ವಾಸಕೋಶ, ಹೊಟ್ಟೆ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ಗಳಿಂದ ಬರುವ  ಅಪಾಯವನ್ನು ಕಡಿಮೆ ಮಾಡುವ ಗುಣವನ್ನು ಬೆರಿ ಹೊಂದಿದೆ.

 

 

click me!