ಬಾಲಿವುಡ್ ನಟಿ ರಖುಲ್ ಪ್ರೀತಿ ಸಿಂಘ್ ಅವರು ವರ್ಕೌಟ್ ಮಾಡಿದ ಬಳಿಕ ಯಾವ ರೀತಿಯ ಸ್ಮೂತಿಯನ್ನು ಸೇವಿಸಬೇಕು, ಹಾಗೂ ಯಾವ ಬ್ರೇಕ್ಫಾಸ್ಟ್ ಸೇವನೆ ಮಾಡಬೇಕು ಎಂಬುದರ ಬಗ್ಗೆ ಹಂಚಿಕೊಡಿದ್ದಾರೆ..
ಪ್ರತಿ ದಿನ ವ್ಯಾಯಾಮ (Exercise) ಮಾಡುವ ಅಭ್ಯಾಸವನ್ನು ಎಷ್ಟೋ ಜನರು ರೂಢಿಸಿಕೊಂಡಿದ್ದಾರೆ. ಆದರೆ, ಬರೀ ವ್ಯಾಯಾಮ ಒಂದರಿಂದಲೇ ದೇಹದ ಫಿಟ್ನೆಸ್ ಕಾಪಾಡಿಕೊಳ್ಳುವುದು ಹಾಗೂ ಆರೋಗ್ಯಕರ ಜೀವನ ಸಾಗಿಸುವುದು ಸ್ವಲ್ಪ ದೂರದ ಮಾತು. ದೇಹವನ್ನು ಫಿಟ್ (Fit) ಆಗಿ ಇರಿಸಲು ಕಟ್ಟುನಿಟ್ಟಿನ ವ್ಯಾಯಾಮದ ಜೊತೆಗೆ ಪೌಷ್ಟಿಕ ಆಹಾರಗಳ ಸೇವನೆ ಕೂಡ ಅತ್ಯಗತ್ಯ. ಪ್ರತಿದಿನ ವ್ಯಾಯಾಮದ ಬಳಿಕ ಸ್ಮೂತಿ ಕುಡಿಯುವುದು ಹಾಗೂ ಆರೋಗ್ಯಕರ ಬ್ರೇಕ್ ಫಾಸ್ಟ್ ಸೇವನೆ ಮಾಡುವುದು ಹೇಗೆ ಎಂಬುದರ ಕುರಿತಾಗಿ ರಕುಲ್ ಪ್ರೀತಿ ಸಿಂಗ್ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಈ ವಿಶೇಷ ಸ್ಮೂತಿಯನ್ನು (Smoothie) ತಯಾರಿಸಲು ಬೇಕಾಗುವ ಸಾಮಗ್ರಿಗಳು..
ತಯಾರಿಸುವ ವಿಧಾನ ಹೀಗಿದೆ ನೋಡಿ
ಮೊದಲಿಗೆ ಮಿಕ್ಸಿ ಜಾರಿಗೆ, ಸಕ್ಕರೆಯ ಅಂಶ ಇಲ್ಲದಿರುವ ಅಥವಾ ಸಿಹಿ ಇಲ್ಲದಿರುವ (Unsweetened) ತಾಜಾ ಬಾದಾಮಿ ಹಾಲಿಗೆ ನೀರು ಹಾಗೂ ಹಾಲೊಡಕು ಪ್ರತ್ಯೇಕ ಪುಡಿಯನ್ನು ಹಾಕಿ, ಇವುಗಳ ಜೊತೆಗೆ ಪೂರ್ಣವಾಗಿರುವ ಅಗಸೆ ಬೀಜಗಳನ್ನು (Flaxseed) ಹಾಕಿ, ಹಾಗೂ ಕೊನೆಯಲ್ಲಿ ಮತ್ತು ಮುಖ್ಯವಾಗಿ ಬಾಳೆಹಣ್ಣುಗಳನ್ನು (Banana) ಸೇರಿಸಬೇಕು ಬಾಳೆಹಣ್ಣು ಸಣ್ಣ ಗಾತ್ರದಲ್ಲಿದ್ದರೆ ಒಳ್ಳೆಯದು.
ಈ ಎಲ್ಲ ಪದಾರ್ಥಗಳನ್ನು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಪ್ರತಿಯೊಂದು ಪದಾರ್ಥಗಳು ಕೂಡ ಒಂದಕ್ಕೊಂದು ಸರಿಯಾಗಿ ಹೊಂದಿಕೊಳ್ಳಬೇಕು. ಈ ಪದಾರ್ಥಗಳನ್ನು ರುಬ್ಬಿಕೊಂಡು ಆದ ಬಳಿಕ ಚಿಟಿಕೆ ದಾಲ್ಚಿನ್ನಿ ಪುಡಿ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಿದರೆ ಸ್ಮೂತಿಯ ರುಚಿಯು ಈಗ ಘಮದಿಂದಾಗಿ (Smell) ಇನ್ನೂ ಹೆಚ್ಚಾಗುತ್ತದೆ. ಇನ್ನು ನೀವು ಸಿಹಿ ಪ್ರಿಯರಾಗಿದ್ದರೆ ಮಿಶ್ರಣದ ಜೊತೆಗೆ ಜೇನುತುಪ್ಪವನ್ನು (Honey) ಕೂಡ ಸೇರಿಸಿಕೊಳ್ಳಬಹುದು. ಅಲ್ಲಿಗೆ ಸ್ಮೂತಿ ಕುಡಿಯಲು ಸಿದ್ಧವಾಗುತ್ತದೆ.
Coffee addiction ಆರೋಗ್ಯಕ್ಕೆ ಒಳ್ಳೇದೋ, ಕೆಟ್ಟದ್ದೋ?
ಈ ಪಾನೀಯದ ಬಗ್ಗೆ ಹಂಚಿಕೊಂಡಿರುವ ಇವರು, ಈ ಪಾನೀಯ ಅಥವಾ ಸ್ಮೂತಿಯು ಹಾಲೊಡಕು (Whey isolate powder), ಹಣ್ಣುಗಳು, ಬೀಜಗಳು ಹಾಗೂ ಮಸಾಲೆಗಳ ಮಿಶ್ರಣದಿಂದ ತಯಾರಿಸಿರುವ ಕಾರಣದಿಂದಾಗಿ, ಇದರಲ್ಲಿ ಪೌಷ್ಟಿಕಾಂಶ (Protins) ಹೆಚ್ಚಿರುತ್ತದೆ ಎಂದಿದ್ದಾರೆ. ಈ ಪಾನೀಯವನ್ನು ಬೆಳಗ್ಗೆ ವ್ಯಾಯಾಮ ಆದ ಬಳಿಕ ಸೇವನೆ ಮಾಡಬಹುದು. ಹಾಗೂ ಸಂಜೆಯ (Evening) ಸಮಯದಲ್ಲಿಯೂ ಕೂಡ ಸೇವನೆ ಮಾಡಬಹುದಾಗಿದೆ. ಹಾಗಂದ ಮಾತ್ರಕ್ಕೆ ವರ್ಕೌಟ್ ಮಾಡಿದ ದಿನ ಮಾತ್ರ ಇದನ್ನು ಸೇವನೆ ಮಾಡಬೇಕು ಎಂಬ ನಿಯಮ ಇಲ್ಲ. ವರ್ಕೌಟ್ ಮಾಡದೆ ಇರುವ ದಿನದಲ್ಲಿ ಕೂಡ ಸೇವಿಸಬಹುದು. ಮಕ್ಕಳು, ಮಹಿಳೆಯರಿಗೂ ಉತ್ತಮ ಪೌಷ್ಠಿಕಾಂಶಯುಕ್ತ ಆಹಾರ ಇದಾಗಿದೆ.
ಈ ಪಾನೀಯವನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಚಯಾಪಚಯ ಕ್ರಿಯೆ ಸರಾಗವಾಗಿ ನಡೆಯುತ್ತದೆ ಹಾಗೂ ಇದರಿಂದಾಗಿ ಕರುಳಿನ ಆರೋಗ್ಯ ವೃದ್ಧಿಸುತ್ತದೆ. ರೋಗನಿರೋಧಕ ಶಕ್ತಿಯನ್ನು (Immunity) ಕೂಡ ಹೆಚ್ಚಿಸುತ್ತದೆ. ಇವುಗಳ ಜೊತೆಗೆ ಮಾನಸಿಕ ಆರೋಗ್ಯ ಹಾಗೂ ನಿಮ್ಮ ದೇಹದ ಒಟ್ಟಾರೆ ಯೋಗಕ್ಷೇಮವನ್ನು ಸರಿ ಹೊಂದಿಸಲು ಈ ಪಾನೀಯ ಸಹಕಾರಿಯಾಗಿದೆ.