ಹಿಟ್ಟು ಅಂದಾಗ ನಮಗೆ ನೆನಪಾಗೋದು ಗೋಧಿ, ರಾಗಿ, ಅಕ್ಕಿ ಹಿಟ್ಟು. ಹಲಸು ಎಂದಾಗ ಹಲಸಿನ ಸಿಹಿ ಹಣ್ಣಿನ ವಾಸನೆ ಮೂಗಿಗೆ ಬಡಿದಂತಾಗುತ್ತದೆ. ಈ ಹಲಸಿನಲ್ಲೂ ಹಿಟ್ಟು ತಯಾರಿಸಬಹುದು. ಈ ಹಿಟ್ಟಿನ ಬಳಕೆಯಿಂದ ನಾನಾ ಪ್ರಯೋಜನವಿದೆ. ಅದ್ಯಾವುದು ಅಂತಾ ನಾವು ಹೇಳ್ತೇವೆ.
ಹಸಿದಾಗ ಹಲಸು ತಿನ್ನು, ಉಂಡಾಗ ಮಾವು ತಿನ್ನು ಎಂಬ ಮಾತಿದೆ. ಹಲಸಿನ ಕಾಯಿ ಮತ್ತು ಹಣ್ಣನ್ನು ಹಾಗೆ ಸೇವನೆ ಮಾಡೋದು ಮಾತ್ರವಲ್ಲ ಅದನ್ನು ವಿವಿಧ ಅಡಿಗೆಗಳಲ್ಲಿ ಬಳಸುವ ರೂಢಿ ಮೊದಲಿನಿಂದಲೂ ಇದೆ. ಹಲಸಿನ ಕಾಯಿ ಚಿಕ್ಕದಾಗಿ ಇರುವಾಗಿನಿಂದ ಬೆಳೆದು ಹಣ್ಣಾಗುವವರೆಗೂ ಅದನ್ನು ತಿನ್ನುತ್ತೇವೆ. ಅನೇಕ ಪೌಷ್ಠಿಕಾಂಶಗಳನ್ನು ಹೊಂದಿರುವ ಇದು ಆರೋಗ್ಯದ ದೃಷ್ಟಿಯಿಂದಲೂ ಬಹಳ ಒಳ್ಳೆಯದು.
ಸಾಮಾನ್ಯವಾಗಿ ಹಲಸಿನ ಕಾಯಿ (Jackfruit) ಬಳಸುವುದು ಎಲ್ಲರಿಗೂ ಗೊತ್ತು. ಆದರೆ ಹಲಸಿನ ಕಾಯಿಯ ಹಿಟ್ಟು ಬಹುತೇಕ ಮಂದಿಗೆ ತಿಳಿದಿರಲಿಕ್ಕಿಲ್ಲ. ಹಿಟ್ಟು ಎಂದಾಕ್ಷಣ ನಮಗೆ ಗೋಧಿ (Wheat) ಹಿಟ್ಟು, ಜೋಳದ ಹಿಟ್ಟು, ಅಕ್ಕಿ ಹಿಟ್ಟು, ರಾಗಿ ಹಿಟ್ಟು, ಮೈದಾ ಹಿಟ್ಟು ಮುಂತಾದವೇ ನೆನಪಿಗೆ ಬರುತ್ತದೆ. ನಾವು ನಿತ್ಯದ ಅಡುಗೆಯಲ್ಲಿ ಕೂಡ ಈ ಹಿಟ್ಟುಗಳನ್ನೇ ಹೆಚ್ಚಾಗಿ ಬಳಸುತ್ತೇವೆ. ಆದರೆ ಕೆಲವು ಸಂಶೋಧನೆ (Research) ಗಳ ಪ್ರಕಾರ ಈ ಎಲ್ಲ ಹಿಟ್ಟುಗಳಿಗಿಂತ ಹಲಸಿನಕಾಯಿಯ ಹಿಟ್ಟು ಆರೋಗ್ಯ (Health) ಕ್ಕೆ ಬಹಳ ಒಳ್ಳೆಯದು ಎಂಬುದು ತಿಳಿದುಬಂದಿದೆ.
undefined
Healthy Snack : ಸ್ವಾದಿಷ್ಟಕರ ಮಖಾನಾ ಚಾಟ್ ರುಚಿಗೂ ಸೈ ಆರೋಗ್ಯಕ್ಕೂ ಸೈ
ಹಲಸಿನಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತೆ ಮತ್ತು ಕ್ಯಾನ್ಸರ್ ಗುಣಪಡಿಸುವ ಶಕ್ತಿಯೂ ಇದಕ್ಕಿದೆ. ಹಲಸಿನ ಹಿಟ್ಟನ್ನು ಬಳಸುವುದರಿಂದ ಕಾರ್ಬೋಹೈಡ್ರೇಟ್ ಗಳು ಕಡಿಮೆ ಆಗುತ್ತವೆ. ಇದು ಕ್ಯಾಲರಿಗಳನ್ನು ಕಡಿಮೆ ಮಾಡಿ ದೇಹದ ತೂಕ ಇಳಿಕೆಮಾಡುತ್ತದೆ. ಅಕ್ಕಿ ಮತ್ತು ಗೋಧಿ ಹಿಟ್ಟಿನ ಬದಲಾಗಿ ಹಲಸಿನಕಾಯಿಯ ಹಿಟ್ಟನ್ನು ಬಳಸಿದರೆ ಶರೀರಕ್ಕೆ ಬೇಕಾಗುವ ಹೆಚ್ಚಿನ ಪ್ರೊಟೀನ್ ಗಳು ಸಿಗುತ್ತವೆ. ಹಲಸಿನ ಬೀಜದಿಂದ ರಕ್ತದೊತ್ತಡ ಮತ್ತು ಸ್ಥೂಲಕಾಯವನ್ನು ಕೂಡ ನಿಯಂತ್ರಿಸಬಹುದಾಗಿದೆ. ಹಲಸಿನಕಾಯಿಯ ಈ ಎಲ್ಲ ಗುಣಗಳನ್ನು ಪರಿಶೀಲಿಸಿದ ವೈದ್ಯರು ಡಯಾಬಿಟಿಕ್ ರೋಗಿಗಳಿಗೆ ಹಲಸಿನ ಹಿಟ್ಟನ್ನು ಸೇವಿಸಲು ಸಲಹೆ ಮಾಡಿದ್ದಾರೆ.
ಮಧುಮೇಹಿಗಳ ಆರೋಗ್ಯಕ್ಕೆ ಹಲಸಿನ ಹಿಟ್ಟು : ಹಲಸಿನಕಾಯಿಯಲ್ಲಿ ಸಕ್ಕರೆಯ ಮಟ್ಟ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವುದರಿಂದ ಇದು ಮಧುಮೇಹಿಗಳಿಗೆ ಬಹಳ ಒಳ್ಳೆಯದು. ಮಧುಮೇಹಿಗಳಿ ತಮ್ಮ ಡಯಟ್ ನಲ್ಲಿ ಹಲಸಿನ ಹಿಟ್ಟನ್ನು ಬಳಕೆ ಮಾಡಿದಲ್ಲಿ ಇದು ಕೊಬ್ಬಿನ ಯಕೃತ್ತಿನ ಸಮಸ್ಯೆಯನ್ನು ಸುಧಾರಿಸುತ್ತದೆ ಮತ್ತು ರೋಗಿಗಳಲ್ಲಿ ಹಿಮೋಗ್ಲೋಬಿನ್ A1c ಮಟ್ಟವನ್ನು ಸುಧಾರಿಸುತ್ತದೆ. ಸಕ್ಕರೆ ಖಾಯಿಲೆ ಹೊಂದಿರುವ ರೋಗಿಗಳು ತಮ್ಮ ಆರೋಗ್ಯದ ಮೇಲೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಏಕೆಂದರೆ ಅವರು ಸ್ವಲ್ಪ ನಿಷ್ಕಾಳಜಿ ಮಾಡಿದರೂ ಕೂಡ ಅದರಿಂದ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಮಧುಮೇಹಿಗಳು ತಮ್ಮ ಆಹಾರದಲ್ಲಿ ಕೇವಲ 30 ಗ್ರಾಂ ಹಲಸಿನಕಾಯಿಯ ಹಿಟ್ಟನ್ನು ಸೇವಿಸುವುದರಿಂದ ಅವರ ಶರೀರದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ.
ಕೆಂಪು, ಹಸಿರು, ಕಪ್ಪು ದ್ರಾಕ್ಷಿ, ಬೇಸಿಗೆಯಲ್ಲಿ ಯಾವ್ದನ್ನು ತಿಂದ್ರೆ ಆರೋಗ್ಯಕ್ಕೆ ಒಳ್ಳೇದು?
ಫ್ಯಾಟಿ ಲಿವರ್ ಗೆ ಇದು ಬೆಸ್ಟ್ : ನಿಯಮಿತವಾಗಿ ಹಲಸಿನ ಹಿಟ್ಟನ್ನು ಸೇವಿಸುವುದರಿಂದ ಗ್ಲೈಸೆಮಿಕ್ ವ್ಯತ್ಯಾಸ ಸೇರಿದಂತೆ ಅನೇಕ ಚಯಾಪಚಯ ಕ್ರಿಯೆಗಳಲ್ಲಿ ಸುಧಾರಣೆ ಕಂಡುಬರುತ್ತದೆ. ಕೆಲವು ಫ್ಯಾಟಿ ಲಿವರ್ ಸಮಸ್ಯೆ ಹೊಂದಿರುವವರು ಹಲಸಿನಕಾಯಿಯ ಹಿಟ್ಟನ್ನು ಸೇವಿಸಿದ ನಂತರ ನಾನ್ ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಡಿಸೀಜ್ ನಲ್ಲಿ ಸುಧಾರಣೆ ಕಂಡು ಬಂದಿದೆ ಎಂದಿದ್ದಾರೆ.
ತೂಕ ಇಳಿಸಲು ಸಹಾಯಕಾರಿ : 50 ಗ್ರಾಂ ಗೋಧಿ, ಅಕ್ಕಿ ಅಥವಾ ರಾಗಿ ಹಿಟ್ಟಿನಲ್ಲಿರುವ ಪೋಷಕಾಂಶಗಳು 30 ಗ್ರಾಂ ಹಲಸಿನ ಹಿಟ್ಟಿನಲ್ಲಿರುತ್ತೆ. ಉಳಿದ ಎಲ್ಲ ಹಿಟ್ಟುಗಳಿಗೆ ಹೋಲಿಕೆ ಮಾಡಿದಲ್ಲಿ ಹಲಸಿನ ಹಿಟ್ಟಿನಲ್ಲೇ ನಾರಿನಂಶ ಅಧಿಕವಾಗಿರುತ್ತದೆ. ಹಾಗಾಗಿ ಹಲಸಿನಕಾಯಿಯ ಹಿಟ್ಟನ್ನು ನೀವು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಖಂಡಿತವಾಗಿಯೂ ತೂಕ ಇಳಿಸಿಕೊಳ್ಳಬಹುದು. ಹಲಸಿನಕಾಯಿಯಲ್ಲಿ ಕ್ಯಾಲೋರಿ, ಕಾರ್ಬೋಹೈಡ್ರೇಟ್ ಮತ್ತು ಗ್ಲೈಸೆಮಿಕ್ ಅಕ್ಕಿ ಮತ್ತು ಗೋಧಿಗಿಂತ ಪ್ರತಿಶತ 40 ರಷ್ಟು ಕಡಿಮೆಯಿರುತ್ತದೆ. ಹಲಸಿನ ಹಿಟ್ಟಿನಿಂದ ಚಪಾತಿ, ಮೊಮೊಸ್ ಕೂಡ ತಯಾರಿಸಬಹುದಾಗಿದೆ. ಇಂತಹ ಅಡುಗೆಗಳು ತಿನ್ನಲು ಕೂಡ ರುಚಿಕರವಾಗಿರುವುದಲ್ಲದೇ ಆರೋಗ್ಯಕ್ಕೂ ಒಳ್ಳೆಯದಾಗಿದೆ.