Wah Beautiful... ಬಾಯಿ ಚಪ್ಪರಿಸಿಕೊಂಡು ಮೊದಲ ಬಾರಿ ಪಾಸ್ತಾ ತಿಂದ ಅಜ್ಜಿ... ವಿಡಿಯೋ ವೈರಲ್

By Suvarna News  |  First Published Feb 17, 2022, 6:46 PM IST
  • ಮೊದಲ ಬಾರಿ ಪಾಸ್ತಾ ತಿಂದ ಅಜ್ಜಿ
  • ಅಜ್ಜಿಯ ವಿಡಿಯೋ ವೈರಲ್‌
  • ಅಜ್ಜಿಗೆ ಪಾಸ್ತಾ ಮಾಡಿಕೊಟ್ಟ ಮೊಮ್ಮಗಳು

ವಯಸ್ಸಾದವರು ಕೂಡ ಮಕ್ಕಳಂತೆ ಎಂಬ ಮಾತಿದೆ. ಹಾಗೆಯೇ ಇಲ್ಲೊಬ್ಬರು ಅಜ್ಜಿ ತಮ್ಮ ಇಳಿವಯಸ್ಸಿನಲ್ಲಿ ತಮ್ಮ ಮೊಮ್ಮಕ್ಕಳ ಕಾಲದ ಫಾಸ್ಟ್‌ಪುಡ್‌ ಆಗಿರುವಂತಹ ಪಾಸ್ತಾವನ್ನು ಖುಷಿ ಖುಷಿಯಾಗಿ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ನಮ್ಮಲ್ಲಿ ಹಿರಿಯರು ಈಗಿನ ಫಾಸ್ಟ್‌ಫುಡ್‌ ಎಂದರೆ ಇಷ್ಟ ಪಡುವುದಕ್ಕಿಂತ ಮೂಗು ಮುರಿಯುವುದೇ ಹೆಚ್ಚು. ಮಾಮೂಲಿ ಸಂಪ್ರದಾಯಿಕವಾದ ಆಹಾರಗಳನ್ನೇ ಮನೆಯ ಹಿರಿಯರು ತಿನ್ನುವುದು ಸಾಮಾನ್ಯ. ಹೊಸ ಬಗೆಯ ಆಹಾರವನ್ನು ಅವರು ತಿನ್ನಲು ನಿರಾಕರಿಸುವುದೇ ಹೆಚ್ಚು. ಆದರೆ ಇಲ್ಲಿರುವ ಅಜ್ಜಿ ಫುಲ್‌ ಡಿಫರೆಂಟ್‌ ಅವರು ಫಾಸ್ಟ್‌ಫುಡ್‌ ಎನಿಸಿರುವ ಪಾಸ್ತಾವನ್ನು ಬಾಯಿ  ಚಪ್ಪರಿಸಿ ತಿನ್ನುತ್ತಿದ್ದು, ಬಹಳ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

 
 
 
 
 
 
 
 
 
 
 
 
 
 
 

Latest Videos

undefined

A post shared by Sonakshi (@dash.of.delish_17)

 

@dash.ofdelish_17 ಎಂಬ ಇನ್ಸ್ಟಾಗ್ರಾಮ್‌ ಖಾತೆದಾರರು ಈ ವಿಡಿಯೋವನ್ನು ಅಪ್‌ಲೋಡ್ ಮಾಡಿ್ದಾರೆ.  ವೀಡಿಯೊದಲ್ಲಿ ಅವರ ಅಜ್ಜಿ ಮೊದಲ ಬಾರಿಗೆ ಪಾಸ್ತಾವನ್ನು ಸೇವಿಸುವುದನ್ನು ನಾವು ನೋಡಬಹುದು. ವೀಡಿಯೊದಲ್ಲಿ, ಅಜ್ಜಿ 'ಕಿತ್ನಾ ಆಚಾ ಬನಾಯಾ ಹೈ, ವಾಹ್ ವಾಹ್. (ಎಷ್ಟು ರುಚಿಯಾಗಿ ಮಾಡಿದ್ದೀರಿ ವಾಹ್‌) ಎಂದು ಉದ್ಘರಿಸುತ್ತಾ ತಿನ್ನುವುದನ್ನು ನೋಡಬಹುದು. ಅಜ್ಜಿಯ ಮೊಮ್ಮಗಳು 'ಅಚಾ ಲಗಾ ನಾನಿ? (ನಿಮಗೆ ಇಷ್ಟವಾಯಿತೇ ಅಜ್ಜಿ) ಎಂದು ಆಕೆಯನ್ನು ಅಜ್ಜಿಯನ್ನು ಕೇಳುತ್ತಾಳೆ ಅದಕ್ಕೆ ಅಜ್ಜಿ ಉತ್ತರಿಸುತ್ತ 'ಬೋಹೊತ್ ಅಚ್ಚಾ ಹೈ, ಬ್ಯೂಟಿಫುಲ್‌ ಎಂದು . (ತುಂಬಾ ಚೆನ್ನಾಗಿದೆ. ಸುಂದರವಾಗಿದೆ ಎಂದು ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು ಹೆಲ್ತಿ ಟೇಸ್ಟಿ ಪಿಜ್ಜಾ ಸಾಸ್‌!

ಈ ವೀಡಿಯೊ ಪೋಸ್ಟ್‌ ಮಾಡಿದ ಯುವತಿ, ತಾನು ಈ ಈರುಳ್ಳಿ ರಹಿತ, ಬೆಳ್ಳುಳ್ಳಿ ರಹಿತ ಪಾಲಕ್‌ ಅನ್ನು ಮಾಡಿದ್ದೇನೆ. ನನ್ನಜ್ಜಿಯಂತೆ ಈ ವಯಸ್ಸಿನಲ್ಲಿ ಆಹಾರದ ಬಗ್ಗೆ ಇಷ್ಟೊಂದು ಆಸಕ್ತಿ ಉತ್ಸಾಹ ಇರುವ ಇನ್ನೊಬ್ಬರನ್ನು ನಾನು ನೋಡಿಲ್ಲ. ಆಕೆ ತನ್ನ ತೊಂಬತ್ತರ ಆಸುಪಾಸಿನಲ್ಲಿದ್ದು,ತುಂಬು ಜೀವನ ನಡೆಸಿದ್ದಾಳೆ.ಆಕೆ ಹೊಸ ವಿಷಯಗಳನ್ನು ಅನ್ವೇಷಿಸಲು ಮತ್ತು ಕಲಿಯಲು ಸಿದ್ಧಳಾಗಿದ್ದಾಳೆ. ಅವಳು ಈ ದಿನಗಳಲ್ಲಿ ಇಂಗ್ಲಿಷ್ ಮಾತನಾಡಲು ಕಲಿಯುತ್ತಿದ್ದಾಳೆ. ಆಕೆ ಇಂಗ್ಲೀಷ್‌ ಪದಗಳಾದ ಬ್ಯೂಟಿಫುಲ್‌, ಯಮ್ಮಿ, ನಾಟ್‌ ಓಕೇ, ಯು ಆರ್‌ ಬ್ಯಾಡ್‌, ಶಟ್‌ ಅಪ್‌ ಮುಂತಾದ ಪದಗಳನ್ನು ಕಲಿತು ಬಳಸುತ್ತಿದ್ದಾಳೆ ಎಂದು ತಮ್ಮ ಅಜ್ಜಿಯ ಜೀವನೋತ್ಸಾಹದ ಬಗ್ಗೆ ಹೇಳಿಕೊಂಡರು.

ಪಾಸ್ತಾ ಬೇಯಿಸಿದ ನೀರನ್ನು ಚೆಲ್ಲಬೇಡಿ.... ಹೀಗೆ ಬಳಸಿ

ಈ ವಿಡಿಯೋ ಅಪ್‌ಲೋಡ್‌ ಆದಾಗಿನಿಂದ ಇನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದು, ಅಜ್ಜಿಯ ಮುದ್ದಾದ ವರ್ತನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾನು ನನ್ನ ಅಜ್ಜಿಗೆ ಒಮ್ಮೆ ಪಿಜ್ಜಾ ತಿನಿಸಿದಾಗ ಅವರೂ ಕೂಡ ಇದೇ ರೀತಿ ಪ್ರತಿಕ್ರಿಯಿಸಿದರು ಎಂದು ನೋಡುಗರೊಬ್ಬರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಈ ಮುದ್ದಾದ ಅಜ್ಜಿಗೆ ನಮ್ಮ ನಮನಗಳು, ಈ ಅಜ್ಜಿಯನ್ನು ನೋಡುತ್ತಿದ್ದರೆ ನನ್ನ ಪತಿಯ ಅಜ್ಜಿಯ ನೆನಪಾಗುತ್ತಿದೆ ನನಗೆ ಎಂದು ಮತ್ತೊಬ್ಬ ನೋಡುಗರು ಕಾಮೆಂಟ್ ಮಾಡಿದ್ದಾರೆ.

ಪಾಸ್ತಾ (Paasta) ನೀರನ್ನು ದ್ರವ ಚಿನ್ನ(liquid gold) ಎಂದು ಕರೆಯಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಪಾಸ್ತಾ ಅತ್ಯಂತ ಇಷ್ಟಪಡುವ ಇಟಾಲಿಯನ್ ಭಕ್ಷ್ಯಗಳಲ್ಲಿ(Italian Food) ಒಂದಾಗಿದೆ, ಆದರೆ ಪಾಸ್ತಾವನ್ನು ಕುದಿಸಿದ ನಂತರ ನಾವು ಆ ನೀರನ್ನು ಚೆಲ್ಲುತ್ತೇವೆ. ಇದರಿಂದ ಏನು ಪ್ರಯೋಜನವಿದೆ ಎಂದು ಅಂದುಕೊಳ್ಳುತ್ತೇವೆ. ಆದರೆ ಈ ನೀರಿನಲ್ಲೂ ಪ್ರಯೋಜನಗಳಿವೆಯಂತೆ

click me!