ಆಮ್ಲೆಟ್ (Omelette) ಅಂದ್ರೆ ಸಾಮಾನ್ಯವಾಗಿ ಎಲ್ರಿಗೂ ಇಷ್ಟ. ಚಿಕನ್ (Chicken), ಮಟನ್ ತಿನ್ನದವರು ಸಹ ಬಿಸಿ ಬಿಸಿ ಆಮ್ಲೆಟ್ ನೋಡಿದ್ರೆ ವಾವ್ ಅಂತಾರೆ. ಬಾಯಲ್ಲಿ ನೀರೂರಿಸೋ ಒಂದಿಷ್ಟು ಆಮ್ಲೆಟ್‌ಗಳ ರೆಸಿಪಿ (Recipe)ಗಳು ಇಲ್ಲಿವೆ.
ಬೆಳಗ್ಗಿನ ಉಪಾಹಾರವು ದಿನದ ಪ್ರಮುಖ ಆಹಾರ (Food) ಎಂದು ನಮಗೆಲ್ಲರಿಗೂ ತಿಳಿದಿದೆ. ಬೆಳಗ್ಗೆ ಸಂಪೂರ್ಣವಾಗಿ ಹೊಟ್ಟೆ ತುಂಬಿದಾಗಲಷ್ಟೇ ದಿನವಿಡೀ ಚಟುವಟಿಕೆಯಿಂದಿರಲು ಸಾಧ್ಯ. ಹೀಗಾಗಿ ಬೆಳಗ್ಗಿನ ಆಹಾರದಲ್ಲಿ ಪ್ರೋಟೀನ್ (Protein), ಪೋಷಕಾಂಶಗಳ ಪ್ರಮಾಣ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಆದರೆ, ಆರೋಗ್ಯಕರ ಉಪಾಹಾರದ ವಿಷಯಕ್ಕೆ ಬಂದಾಗ, ನಮ್ಮಲ್ಲಿ ಹೆಚ್ಚಿನವರು ಏನನ್ನು ಸೇವಿಸಬೇಕೆಂದು ಗೊಂದಲಕ್ಕೊಳಗಾಗುತ್ತಾರೆ. ಪ್ರೋಟೀನ್, ವಿಟಮಿನ್, ಖನಿಜಗಳು ಹೀಗೆ ಆಹಾರದಲ್ಲಿ ಎಲ್ಲವೂ ಬೇಕೆಂದಾಗ ಮೊಟ್ಟೆಯನ್ನು ಸೇವಿಸುವುದು ಉತ್ತಮ ಆಯ್ಕೆಯಾಗಿದೆ.
ಮೊಟ್ಟೆ (Egg)ಗಳಿಂದ ಯಾವುದೇ ಖಾದ್ಯವನ್ನು ತಯಾರಿಸಬಹುದು ಮತ್ತು ಅದು ಅದ್ಭುತವಾದ ರುಚಿಯನ್ನು ನೀಡುತ್ತದೆ. ಆದರೆ ಬೆಳಗ್ಗೇನೆ ಮೊಟ್ಟೆ ಯಾವ ರೀತಿ ತಿನ್ನೋದಪ್ಪಾ ಅನ್ನೋ ಗೊಂದಲದಲ್ಲಿರುವವರು ಸುಲಭವಾಗಿ ಆಮ್ಲೆಟ್ ತಯಾರಿಸಬಹುದು. ಮೊಟ್ಟೆಯ ಆಮ್ಲೆಟ್ಗೆ ಹಾಕುವ ಸಾಮಗ್ರಿಗಳಲ್ಲಿ ಸ್ಪಲ್ಪ ಬದಲಾವಣೆ ಮಾಡಿದರೂ ರುಚಿಯಲ್ಲಿ ಬದಲಾವಣೆಯಾಗುತ್ತದೆ. ಇಲ್ಲಿ ಕೆಲವೊಂದು ಆಮ್ಲೆಟ್ ರೆಸಿಪಿಯಿದೆ. ನೀವಿದನ್ನು ಬೆಳಗ್ಗಿನ ಬ್ರೇಕ್‌ಫಾಸ್ಟ್ (Breakfast)ಗೆ ಟ್ರೈ ಮಾಡ್ಬೋದು.
Food Recrod: ಗಿನ್ನಿಸ್ ದಾಖಲೆಯಲ್ಲಿ ಉಗಾಂಡದ ಎಗ್ ರೋಲೆಕ್ಸ್..ಏನಿದು ?
ರಾಸ್ ಆಮ್ಲೆಟ್
ರಾಸ್ ಆಮ್ಲೆಟ್ (Omelette) ಎಂದು ಕರೆಯಲ್ಪಡುವ ಈ ಪಾಕವಿಧಾನವನ್ನು ಈರುಳ್ಳಿ, ತೆಂಗಿನ ಹಾಲು, ಕರಿಬೇವಿನ ಎಲೆಗಳು, ಸಾಸಿವೆ ಬೀಜಗಳು ಮತ್ತು ಮಸಾಲೆಗಳೊಂದಿಗೆ ಮೊಟ್ಟೆಯನ್ನು ಸೇರಿಸಿ ತಯಾರಿಸಲಾಗುತ್ತದೆ. ಗೋವಾದಲ್ಲಿ, ಈ ಪಾಕವಿಧಾನವನ್ನು ಸಾಂಪ್ರದಾಯಿಕವಾಗಿ ಕೋಳಿ ಮಾಂಸವನ್ನು ಸೇರಿಸಿ ತಯಾರಿಸಲಾಗುತ್ತದೆ.
ಕರಂಡಿ ಆಮ್ಲೆಟ್
ತಮಿಳುನಾಡಿನಾದ್ಯಂತ ಈ ಕರಂಡಿ ಆಮ್ಲೆಟ್‌ನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ. ಇಲ್ಲಿನ ಬೀದಿ ಬದಿ ಮಾರಾಟಗಾರರು ಕರಂಡಿ ಆಮ್ಲೆಟ್‌ನ್ನು ಹೆಚ್ಚಾಗಿ ಮಾರಾಟ ಮಾಡುತ್ತಾರೆ. ಕರಂಡಿ ಎಂಬುದು ತಮಿಳು ಪದವಾಗಿದ್ದು, ಇದು ತ್ವರಿತವಾಗಿ ತಯಾರಿಸುವ ಆಮ್ಲೆಟ್ ಆಗಿದೆ. ಇದನ್ನು ಸಾಮಾನ್ಯವಾಗಿ ಹದಗೊಳಿಸುವಿಕೆ ಅಥವಾ ತಡ್ಕಾಕ್ಕೆ ಬಳಸಲಾಗುವ ದೊಡ್ಡ ಲ್ಯಾಡಲ್‌ನಲ್ಲಿ ತಯಾರಿಸುತ್ತಾರೆ.
ಬಿಹಾರಿ ಮೊಟ್ಟೆಯ ಆಮ್ಲೆಟ್
ಬಿಹಾರಿ ಮೊಟ್ಟೆಯ ಆಮ್ಲೆಟ್ ಖಾದ್ಯವು ತರಕಾರಿಗಳಿಂದ ತುಂಬಿದ್ದು, ಮಸಾಲೆಯುಕ್ತವಾಗಿರುತ್ತದೆ. ಬಾಯಲ್ಲಿ ನೀರೂರಿಸುವ ಸುವಾಸನೆಯನ್ನು ಹೊಂದಿರುತ್ತದೆ. ಹೆಚ್ಚು ತರಕಾರಿ (Vegetable)ಗಳಿಂದ ತುಂಬಿರುವ ಕಾರಣ ಈ ಆಮ್ಲೆಟ್ ಪೌಷ್ಟಿಕಾಂಶದಲ್ಲಿ ಸಮೃದ್ಧವಾಗಿದೆ ಎಂದು ಹೇಳದೆ ಹೋಗುತ್ತದೆ. ಚೀಲದ ಆಕಾರದಲ್ಲಿರುವ ಆಮ್ಲೆಟ್‌ನ್ನು ಇದೇ ಕಾರಣಕ್ಕೆ ಬಿಹಾರಿ ಮೊಟ್ಟೆಯ ಚೀಲವೆಂದು ಕರೆಯುತ್ತಾರೆ.
Health Tips: ಮೊಟ್ಟೆ v/s ಪನೀರ್, ತೂಕ ನಷ್ಟಕ್ಕೆ ಯಾವುದು ಉತ್ತಮ ?
ದೇಸಿ ಸ್ಟೈಲ್ ಆಮ್ಲೆಟ್
ಇದು ಸಾಮಾನ್ಯವಾಗಿ ನಗರಗಳಲ್ಲಿ ಎಲ್ಲಾ ಸ್ಟ್ರೀಟ್‌ಗಳಲ್ಲಿ ಮಾಡುವ ಆಮ್ಲೆಟ್ ಆಗಿದೆ. ಮೊಟ್ಟೆಯನ್ನು ಒಡೆದು ಹಾಕಿ, ಹಸಿಮೆಣಸು, ಈರುಳ್ಳಿ ಸೇರಿಸಿ ಈ ದೇಸಿ ಸ್ಟೈಲ್‌ನ ಆಮ್ಲೆಟ್‌ನ್ನು ತಯಾರಿಸುತ್ತಾರೆ. ಮೇಲಿನಿಂದ ಖಾರದಪುಡಿ, ಗರಂ ಮಸಾಲ ಪುಡಿಯನ್ನು ಸೇರಿಸಲಾಗುತ್ತದೆ. ಹಗುರವಾಗಿರುವ ಈ ಆಮ್ಲೆಟ್ ತಿನ್ನಲು ರುಚಿಕರವಾಗಿರುತ್ತದೆ.
ಮಸಾಲಾ ಆಮ್ಲೆಟ್
ಮಸಾಲ ಆಮ್ಲೆಟ್ ವಿಶೇಷತೆಯೆಂದರೆ ಇದಕ್ಕೆ ಸಾಮಾನ್ಯವಾಗಿ ಆಮ್ಲೆಟ್ ತಯಾರಿಸುವ ವಿಧಾನಕ್ಕಿಂತ ವಿಭಿನ್ನವಾಗಿ ಚಿಕನ್, ಟೋಮೆಟೋ, ತರಕಾರಿಗಳು ಮತ್ತು ಇತರ ಮಸಾಲೆಗಳನ್ನು ಸೇರಿಸುತ್ತಾರೆ. ಚೆನ್ನಾಗಿ ರೋಸ್ಟ್ ಮಾಡುವ ಈ ಆಮ್ಲೆಟ್‌ನ್ನು ಊಟದ ಜತೆಗೂ ಸವಿಯಬಹುದಾಗಿದೆ.
ಚೀಸ್ ಆಮ್ಲೆಟ್
ಮೊಟ್ಟೆಯ ಜತೆಗೆ ಚೀಸ್ ಸೇರಿಸಿಯೂ ರುಚಿಕರವಾದ ಆಮ್ಲೆಟ್‌ನ್ನು ತಯಾರಿಸಬಹುದು. ಇದನ್ನು ತಯಾರಿಸಲು ಮೊದಲಿಗೆ ಮೊಟ್ಟೆಯನ್ನು ಒಡೆದು ಒಂದು ಪಾತ್ರೆಗೆ ಹಾಕಿಕೊಳ್ಳಬೇಕು. ನಂತರ ಕಟ್ ಮಾಡಿಕೊಂಡ ತರಕಾರಿ ಹಾಗೂ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ತವಾವನ್ನು ಬಿಸಿ ಮಾಡಿ ಅದಕ್ಕೆ 1 ಚಮಚ ಎಣ್ಣೆಯನ್ನು ಮೊಟ್ಟೆಯ ಮಿಕ್ಸ್‌ನ್ನು ಹಾಕಿಕೊಳ್ಳಬೇಕು. ಇದರ ಮೇಲೆ ಚೀಸ್ (Cheese) ಹಾಕಬೇಕು. ಮೊಟ್ಟೆ ಸ್ಪಲ್ಪ ಬೇಯುವಾಗ ಮೇಲಿನಿಂದ ಅಚ್ಚ ಖಾರದ ಪುಡಿ, ಕರಿಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು ಕಾಕಿಕೊಂಡರೆ ಚೀಸ್ ಆಮ್ಲೆಟ್ ಸವಿಯಲು ಸಿದ್ಧ. ಇನ್ಯಾಕೆ ತಡ, ರುಚಿಕರವಾದ ಈ ಆಮ್ಲೆಟ್ ಪಾಕವಿಧಾನಗಳನ್ನು ಪ್ರಯತ್ನಿಸಿ, ಸವಿಯಿರಿ.