ಇದು ಚಿನ್ನದ ಕರ್ಜಿಕಾಯಿ : ಬೆಲೆ ಕೇವಲ 50 ಸಾವಿರ ರೂಪಾಯಿ

ಉತ್ತರ ಪ್ರದೇಶದಲ್ಲಿ 50 ಸಾವಿರ ರೂಪಾಯಿ ಬೆಲೆಯ ಕರ್ಜಿಕಾಯಿಯನ್ನು ತಯಾರಿಸಲಾಗಿದೆ. 24 ಕ್ಯಾರೆಟ್ ಚಿನ್ನದ ಲೇಪನ ಮತ್ತು ಡ್ರೈ ಫ್ರೂಟ್ಸ್‌ನಿಂದ ತಯಾರಿಸಿದ ಈ ಸಿಹಿ ತಿನಿಸು ಸಖತ್ ವೈರಲ್ ಆಗಿದೆ.

Golden karjikayi This Indian Sweet Costs a Whopping Rs 50000 per Kg

ಸಾಮಾನ್ಯವಾಗಿ ಹೋಳಿ ಸೇರಿದಂತೆ ಬಹುತೇಕ ಶುಭ ಸಮಾರಂಭಗಳಲ್ಲಿ ದೇಶದ ಬಹುತೇಕ ಕಡೆ  ಸಿಹಿ ತಿನಿಸಾದ ಕರ್ಜಿಕಾಯಿಯನ್ನು ಮಾಡುತ್ತಾರೆ. ಆದರೆ ಕಾರ್ಜಿಕಾಯಿಗಳು ಅಂತಹ ದುಬಾರಿ ಏನಲ್ಲ, ಪ್ರತಿ ಜನಸಾಮಾನ್ಯನನ್ನು ಇದನ್ನು ಮನೆಯಲ್ಲೇ ಮಾಡುತ್ತಾರೆ. ಮತ್ತೆ ಕೆಲವರು ಅಂಗಡಿಯಲ್ಲಿ ಖರೀದಿಸುತ್ತಾರೆ. ಕೈಗೆಟುಕುವ ಬೆಲೆಯಲ್ಲಿ ಇದು ಪ್ರತಿಯೊಬ್ಬರಿಗೂ ಸಿಗುವುದು. ಆದರೆ ಈಗ ಉತ್ತರ ಪ್ರದೇಶ ಸಿಹಿ ತಿನಿಸಿನ ಅಂಗಡಿಯೊಂದು ಬರೋಬ್ಬರಿ 50 ಸಾವಿರ ರೂಪಾಯಿ ಬೆಲೆಯ ಕರ್ಜಿಕಾಯಿಯನ್ನು ತಯಾರಿಸಿ ಸುದ್ದಿಯಲ್ಲಿದೆ. ಉತ್ತರ ಭಾರತದಲ್ಲಿ ಕರ್ಜಿಕಾಯಿಗೆ ಗುಜಿಯಾ ಎಂದು ಕರೆಯುತ್ತಾರೆ. ಈಗ ಸಿಹಿ ತಿನಿಸಿನ ಅಂಗಡಿ ರೆಡಿ ಮಾಡಿರುವ ಈ ಕರ್ಜಿಕಾಯಿಯನ್ನು ಗೋಲ್ಡನ್ ಗುಜಿಯಾ ಎಂದು ಕರೆಯಲಾಗುತ್ತಿದ್ದು, ಒಂದೇ ಒಂದು ಕರ್ಜಿಕಾಯಿ ತುಂಡಿಗೆ ಬರೋಬ್ಬರಿ 1,300 ರೂಪಾಯಿ  ಬೆಲೆ ಇದೆ.  ಹಾಗೆಯೇ ಒಂದು ಕೇಜಿಗೆ 50 ಸಾವಿರ ರೂಪಾಯಿ ಬೆಲೆ ಇದೆ.

24 ಕ್ಯಾರೆಟ್ ಚಿನ್ನದಿಂದ ಮಾಡಿದ ಕರ್ಜಿಕಾಯಿ

Latest Videos

24 ಕ್ಯಾರೆಟ್ ಚಿನ್ನದ ಪದರ ಮತ್ತು ಪ್ರೀಮಿಯಂ ಡ್ರೈ ಫ್ರೂಟ್ಸ್‌ನಿಂದ ಇದನ್ನು ತಯಾರಿಸಲಾಗಿದೆಯಂತೆ. ಅಂದಹಾಗೆಯ ಈ ದುಬಾರಿ ಸಿಹಿತಿನಿಸನ್ನು ತಯಾರಿಸಿದ್ದು ಉತ್ತರಪ್ರದೇಶದ ಗೊಂಡಾದಲ್ಲಿರುವ ಗೌರಿ ಸ್ವೀಟ್ಸ್‌, ಈ ಬಗ್ಗೆ ಎಎನ್‌ಐ ಸುದ್ದಿ ಸಂಸ್ಥೆ ವೀಡಿಯೋ ಶೇರ್ ಮಾಡಿದ್ದು, ಈ ವೀಡಿಯೋದಲ್ಲಿ  ಗೌರಿ ಸ್ವೀಟ್ಸ್‌ನ ಮಾಲೀಕ ನಮ್ಮ ಗೋಲ್ಡನ್ ಗುಜಿಯಾದಲ್ಲಿ24 ಕ್ಯಾರೆಟ್‌ನ ತಿನ್ನಬಹುದಾದ ಚಿನ್ನ ಇದೆ. ಇದರೊಳಗೆ ಒಣಗಿದ ಡ್ರೈಪ್ರೂಟ್ ಇದೆ. ಪ್ರತಿ ಡ್ರೈ ಪ್ರೂಟ್‌ಗೆ 1,300 ರೂಪಾಯಿ ಬೆಲೆ ಇದೆ ಎಂದು ಅವರು ಹೇಳಿಕೊಂಡಿದ್ದಾರೆ. 

ರುಚಿ ರುಚಿಯಾದ ಕರ್ಜಿಕಾಯಿ ಮಾಡೋದು ಹೇಗೆ? ಇಲ್ಲಿದೆ ಪಾಕ ವಿಧಾನ

ನೆಟ್ಟಿಗರ ರಿಯಾಕ್ಷನ್ ಹೇಗಿದೆ ನೋಡಿ

(ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರನ್ನು ಅಚ್ಚರಿಗೊಳಿಸಿದೆ. ಪ್ರತಿ ತುಂಡಿಗೆ ರೂ 1300/-, ಸುನ್ ಕೆ ಜಿಯಾ ಜಲ ಗಯಾ. ಮೈದಾ ಔರ್ ಖೋವಾ ವಾಲಾ ಹೈ ಸಹಿ ಹೈ. ಘರ್ ಮೇ ಬನಾವೋ, ಸಬ್ಕೇ ಸಾಥ್ ಹೋಲಿ ಮೇ ಖಾವೋ. )ಪ್ರತಿ ತುಂಡಿಗೆ ರೂ 13,000! ಈ ವಿಚಾರ ಕೇಳಿ ಉರಿದು ಹೋಯ್ತು, ಮೈದಾ ಹಾಗೂ ಕೋವಾದಿಂದ ತಯಾರಿಸಿದ ಸಾಮಾನ್ಯ ಕರ್ಜಿಕಾಯಿ ಚೆನ್ನಾಗಿದೆ. ಮನೆಯಲ್ಲೇ ಮಾಡಿ, ನಿಮ್ಮ ಕುಟುಂಬದೊಂದಿಗೆ ಅದನ್ನು ಆನಂದಿಸಿ ಎಂದು  ಒಬ್ಬರು ಬಳಕೆದಾರರು  ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, {ಗುಜಿಯಾ ಭಿ ಗೋಲ್ಡ್ ಕೆ ಭಾವ್ ಮೇ ಮಿಲ್ನೆ ಲಗಾ ಹೈ )ಈಗ ಕರ್ಜಿಕಾಯನ್ನು ಕೂಡ ಚಿನ್ನದ ಬೆಲೆಗೆ ಮಾರಾಟ ಮಾಡಲು ಪ್ರಾರಂಭಿಸಲಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಗಣಪನಿಗೆ ಪ್ರಿಯವಾದ ಕರ್ಜಿಕಾಯಿ ತಯಾರಿಸುವುದು ಹೇಗೆ?

ಅತೀ ದೊಡ್ಡ ಕರ್ಜಿಕಾಯಿ ಮಾಡಿ ದಾಖಲೆ
ಈ ನಡುವೆ ಲಕ್ನೋದ ಒಂದು ಸ್ವೀಟ್ ಅಂಗಡಿಯೂ ಬೆಲೆಯ ಬದಲು ಭಾರಿ ಗಾತ್ರದ ಕರ್ಜಿಕಾಯಿ ಮಾಡಿ ಮಾರಾಟ ಮಾಡಿದೆ. ಇದು ಭಾರತದ ಅತಿದೊಡ್ಡ ಕರ್ಜಿಕಾಯಿಯಾಗಿದ್ದು,  ಆಗಿದ್ದು, ಇದು 25 ಇಂಚುಗಳಷ್ಟು ಉದ್ದ ಮತ್ತು 6 ಕೆಜಿ ತೂಕವಿತ್ತು. ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದಂತೆ ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿದೆ. 

| Uttar Pradesh | A sweets shop in Gonda is selling special 'Golden Gujiya' for Rs 50,000 per kg on Holi festival pic.twitter.com/eSPSsVtpv0

— ANI (@ANI)

 

click me!