ಸೌತ್ ಇಂಡಿಯನ್ ಫುಡ್ ಅಂದ್ರೆ ತಕ್ಷಣಕ್ಕೆ ನೆನಪಾಗೋದೆ ಇಡ್ಲಿ-ಸಾಂಬಾರ್. ಸಾಮಾನ್ಯವಾಗಿ ಎರಡು ಇಡ್ಲಿಗೆ 30 ರೂ.ನಿಂದ 50 ರೂ. ವರೆಗೂ ಇರುತ್ತೆ. ಆದ್ರೆ ಎರಡು ಇಡ್ಲಿಗೆ ಭರ್ತಿ 1200 ರೂ. ಅಂದ್ರೆ ನೀವ್ ನಂಬ್ತೀರಾ. ನಂಬೋಕೆ ಕಷ್ಟವಾದ್ರೂ ಇದು ನಿಜ. ಹೈದರಾಬಾದ್‌ನಲ್ಲಿ ಈ ಸ್ಪೆಷಲ್ ಇಡ್ಲಿ ಸಿಗ್ತಿದೆ.
ಇಡ್ಲಿ-ಸಾಂಬಾರ್ ಅಂದ್ರೆ ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಮೆತ್ತಗೆ ಹೂವಿನಂತಿರುವ ಇಡ್ಲಿಯನ್ನು ಸಾಂಬಾರ್‌ಗೆ ಮುಳುಗಿಸಿಕೊಂಡು ತಿನ್ನುವುದೇ ಚೆಂದ. ಆರೋಗ್ಯ ಹದಗೆಡೋ ಚಿಂತೆನೂ ಇಲ್ಲ. ಬ್ಯಾಚುಲರ್ಸ್, ಟ್ರಾವೆಲ್ ಮಾಡೋರಿಗೆ ಇಡ್ಲಿ ಫಸ್ಟ್ ಚಾಯ್ಸ್. ಸೌತ್ ಇಂಡಿಯನ್ ಫುಡ್ ಅಂದ್ರೆ ತಕ್ಷಣಕ್ಕೆ ನೆನಪಾಗೋದೆ ಇಡ್ಲಿ-ಸಾಂಬಾರ್. ಸಾಮಾನ್ಯವಾಗಿ ಎರಡು ಇಡ್ಲಿಗೆ 30 ರೂ.ನಿಂದ 50 ರೂ. ವರೆಗೂ ಇರುತ್ತೆ. ಆದ್ರೆ ಎರಡು ಇಡ್ಲಿಗೆ ಭರ್ತಿ 1200 ರೂ. ಅಂದ್ರೆ ನೀವ್ ನಂಬ್ತೀರಾ. ನಂಬೋಕೆ ಕಷ್ಟವಾದ್ರೂ ಇದು ನಿಜ. ಹೈದರಾಬಾದ್‌ನಲ್ಲಿ ಈ ಸ್ಪೆಷಲ್ ಇಡ್ಲಿ ಸಿಗ್ತಿದೆ. ಅಷ್ಟಕ್ಕೂ ಯಾಕೆ ಈ ಇಡ್ಲಿಗೆ 1200 ರೂ. ಇದೇನು ಚಿನ್ನದಲ್ಲಿ ಮಾಡಿದ್ದಾ ಅಂತ ನಿಮಗೆ ಆಶ್ಚರ್ಯವಾಗ್ಬೋದು. ಅದಕ್ಕೆ ಇಲ್ಲಿದೆ ಉತ್ತರ.
ಇತ್ತೀಚಿಗೆ ಎಲ್ಲಾ ಆಹಾರದೊಂದಿಗೆ ಗೋಲ್ಡ್ ಪ್ಲೇಟೆಡ್ ಸೇರಿಸೋದು ಟ್ರೆಂಡ್ ಆಗಿದೆ. ಗೋಲ್ಡ್ ಪ್ಲೇಟೆಡ್ ಕುಲ್ಫಿ, ಗೋಲ್ಡ್ ಪ್ಲೇಟೆಡ್ ಸ್ವೀಟ್, ಗೋಲ್ಡ್ ಪ್ಲೇಟೆಡ್ ಮಸಾಲೆ ದೋಸೆ ಈ ಹಿಂದೆಯೇ ಟ್ರೆಂಡ್ ಆಗಿದೆ. ಸದ್ಯ ಇದಕ್ಕೆ ಗೋಲ್ಡ್ ಪ್ಲೇಟೆಡ್ ಇಡ್ಲಿ ಸಹ ಸೇರ್ತಿದೆ. ಹೌದು, ಆಹಾರಪ್ರಿಯರ ಸ್ವರ್ಗವಾಗಿರುವ ಹೈದರಾಬಾದ್‌ನಲ್ಲಿ ಈ ಚಿನ್ನದ ಇಡ್ಲಿ (Golden Idli) ಸಿಗ್ತಿದೆ.
undefined
ಈ ಹೊಟೇಲ್‌ನಲ್ಲಿ ಎಲ್ಲವೂ ಚಿನ್ನಮಯ! ಬಾಡಿಗೆಯೂ ಬಲು ಕಡಿಮೆ
ಹೈದರಾಬಾದ್‌ನಲ್ಲಿ ಸಿಗ್ತಿದೆ ಸ್ಪೆಷಲ್ ಚಿನ್ನದ ಇಡ್ಲಿ
ಚಿನ್ನದ ಮೇಲೆ ಜನರಿಗಿರುವ ಮೋಹ ಇವತ್ತು ನಿನ್ನೆಯದ್ದಲ್ಲ. ಕಿವಿಯೋಲೆ, ಸರ, ನೆಕ್ಲೇಸ್, ಬ್ರೇಸ್ ಲೆಟ್ ಅಂತ ತರಹೇವಾರಿ ಚಿನ್ನದೊಡವೆಗಳನ್ನು ಮಾಡಿ ಹಾಕಿಕೊಳ್ತಾರೆ. ಆಗರ್ಭ ಶ್ರೀಮಂತರು (Rich people) ಚಿನ್ನದ ಬಟ್ಟಲು, ಲೋಟವನ್ನೂ ಬಳಸುತ್ತಾರೆ. ಮನೆಯಲ್ಲಿಯೇ ಚಿನ್ನದ ದೇವರ ಮೂರ್ತಿ, ದೇವರನ್ನೂ ಇಟ್ಟುಕೊಳ್ಳುತ್ತಾರೆ. ಮನುಷ್ಯನಿಗೂ ಹಳದಿ ಲೋಹಕ್ಕೂ ಇರುವ ನಂಟು ಅಂಥದ್ದೇ. ಹಾಗೆಯೇ ಇಲ್ಲಿ ಜನರನ್ನು ಸೆಳೆಯಲೆಂದೇ ಚಿನ್ನದ ಇಡ್ಲಿ ಸಿದ್ಧಪಡಿಸಲಾಗಿದೆ.
ಹೈದರಾಬಾದ್ ಅಂದ್ರೆ ಸಾಕು ಫುಡ್ಡೀಸ್ ಬಾಯಲ್ಲಿ ನೀರೂರುತ್ತೆ. ಇಲ್ಲಿನ ಬಿರಿಯಾನಿ, ಸ್ಟ್ರೀಟ್ ಫುಡ್ ಎಲ್ಲರಿಗೂ ಅಚ್ಚುಮೆಚ್ಚು. ಹೀಗಿರುವಾಗ ಇಂಥಾ ಆಹಾರದ ಸ್ವರ್ಗವಾಗಿರುವ ನಗರದಲ್ಲೇ ಈ ಗೋಲ್ಡನ್ ಇಡ್ಲಿ ರೆಡಿಯಾಗಿದೆ. ಇದು 24 ಕ್ಯಾರಟ್ ಚಿನ್ನದ ಇಡ್ಲಿ. ಪ್ರತಿ ಪ್ಲೇಟ್‌ಗೆ (2 ಇಡ್ಲಿ) 1200 ರೂ. ಬೆಲೆ. ಇಡ್ಲಿಯನ್ನು ಗೋಲ್ಡನ್ ಪ್ಲೇಟೆಡ್‌ನಲ್ಲಿ ಅಲಂಕರಿಸಿ ಇರಲಾಗುತ್ತದೆ. ಮೇಲಿನಿಂದ ಗುಲಾಬಿ ದಳಗಳನ್ನು (Rose petals) ಹಾಕಿ ಅಲಂಕರಿಸಿರುತ್ತಾರೆ. ಹೈದರಾಬಾದ್ ಹೊರವಲಯದಲ್ಲಿರುವ ಭಾಗ್ಯ ನಗರದ ಹೋಟೆಲ್‌ನಲ್ಲಿ ಚಿನ್ನದ ಲೇಪಿತ ಇಡ್ಲಿಗಳನ್ನು ಮಾರಾಟ ಮಾಡಲಾಗುತ್ತದೆ. ಈ ಕೆಫೆಯಲ್ಲಿ ಇಡ್ಲಿಗಳಷ್ಟೇ ಅಲ್ಲ.. ಬಂಗಾರದ ದೋಸೆ, ಗುಲಾಬ್ ಜಾಮೂನ್ ಬಾಜಿ, ಖೋವಾ ಗುಲಾಬ್ ಜಾಮೂನ್ ಮುಂತಾದ ಬಾಯಲ್ಲಿ ನೀರೂರಿಸುವ ವಿಶೇಷ ತಿಂಡಿತಿನಿಸುಗಳೂ ಲಭ್ಯವಿದೆ.
ಸೌದಿ ರಾಜಕುಮಾರನಿಗೆ ಪಾಕ್’ನಿಂದ ಚಿನ್ನದ ರೈಫಲ್ ಉಡುಗೊರೆ..!
ಇನ್‌ಸ್ಟಾಗ್ರಾಂನಲ್ಲಿ foodnlifestyleby_poojaandkrishnaidlicafe ಎಂಬ ಖಾತೆಯಲ್ಲಿ ಗೋಲ್ಡನ್ ಇಡ್ಲಿಯ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋಗೆ 2221 ಲೈಕ್ಸ್ ಬಂದಿದೆ. ಈ ಹಿಂದೆ ದೆಹಲಿಯಲ್ಲಿ ಗೋಲ್ಡ್ ಪ್ಲೇಟೆಡ್ ಸ್ವೀಟ್ ವಿಚಾರ ವೈರಲ್ ಆಗಿತ್ತು.
ದೆಹಲಿಯಲ್ಲಿ ಸಿಗ್ತಿದ್ದ ಈ ಸ್ಪೆಷಲ್ ಸ್ವೀಟ್ಸ್ ಬೆಲೆ ಕೆಜಿಗೆ ಭರ್ತಿ 16,000 ರೂ. ಆಗಿತ್ತು. ಇಲ್ಲಿನ ಶಗುನ್ ಸ್ವೀಟ್ಸ್ ಸ್ಟಾಲ್‌ನಲ್ಲಿ ಚಿನ್ನದ ಲೇಪಿತ ಮಿಠಾಯಿಯನ್ನು ಕೆಜಿಗೆ 16000 ರೂ.ನಂತೆ ಮಾರಾಟ ಮಾಡಿತ್ತು. ಫುಡ್ ಬ್ಲಾಗರ್ ಅರ್ಜುನ್ ಚೌಹಾಣ್ ಇನ್ ಸ್ಟಾಗ್ರಾಂನಲ್ಲಿ ಈ ಪೋಸ್ಟ್ ಮಾಡಿದ್ದು, ಕಾಸ್ಟ್ಲೀ ಸ್ವೀಟ್ಸ್ ವೀಡಿಯೋಗೆ 11 ಮಿಲಿಯನ್ ವೀಕ್ಷಣೆಗಳು, 5 ಲಕ್ಷ ಲೈಕ್‌ಗಳು ಮತ್ತು ಸಾವಿರಾರು ಕಾಮೆಂಟ್‌ಗಳನ್ನು ಬಂದಿದ್ದವು. ಸೋಷಿಯಲ್ ಮೀಡಿಯಾದಲ್ಲಿ ಬೆಲೆಬಾಳುವ ಸ್ವೀಟ್ಸ್ ವೀಡಿಯೋ ಫುಲ್ ವೈರಲ್ ಆಗಿತ್ತು.