ಜ್ಯೂಸ್‌ಗೆ ಮೂತ್ರ ಮಿಕ್ಸ್ ಮಾಡಿ ಗ್ರಾಹಕರಿಗೆ ನೀಡುತ್ತಿದ್ದ ಜ್ಯೂಸ್ ಅಂಗಡಿಯ ಮಾಲೀಕ ಹಾಗೂ 15 ವರ್ಷದ ಬಾಲಕನ್ನು ಗಾಜಿಯಾಬಾದ್‌ನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಜ್ಯೂಸ್ ಅಂಗಡಿ ಮಾಲೀಕನನ್ನು ಆಮೀರ್ ಖಾನ್ ಎಂದು ಗುರುತಿಸಲಾಗಿದೆ.
ಗಾಜಿಯಾಬಾದ್: ಜ್ಯೂಸ್‌ಗೆ ಮೂತ್ರ ಮಿಕ್ಸ್ ಮಾಡಿ ಗ್ರಾಹಕರಿಗೆ ನೀಡುತ್ತಿದ್ದ ಜ್ಯೂಸ್ ಅಂಗಡಿಯ ಮಾಲೀಕ ಹಾಗೂ 15 ವರ್ಷದ ಬಾಲಕನ್ನು ಗಾಜಿಯಾಬಾದ್‌ನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಜ್ಯೂಸ್ ಅಂಗಡಿ ಮಾಲೀಕನನ್ನು ಆಮೀರ್ ಖಾನ್ ಎಂದು ಗುರುತಿಸಲಾಗಿದೆ. ಹಣ್ಣಿನ ಜ್ಯೂಸ್‌ಗೆ ಇವರು ಮೂತ್ರ ಮಿಕ್ಸ್ ಮಾಡಿ ಗ್ರಾಹಕರಿಗೆ ನೀಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಹೇಳುವ ಪ್ರಕಾರ, ಇವರು ಜ್ಯೂಸ್‌ಗೆ ಮೂತ್ರ ಸೇರಿಸಿ ಗ್ರಾಹಕರಿಗೆ ನೀಡುತ್ತಿದ್ದಾರೆ ಎಂಬ ಸಾರ್ವಜನಿಕರ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಆಮೀರ್ ಖಾನ್ ಎಂದು ಗುರುತಿಸಲಾಗಿದೆ ಎಂದು ಅಂಕುರ್ ವಿಹಾರ್‌ನ ಎಸಿಪಿ ಭಾಸ್ಕರ್ ವರ್ಮಾ ಹೇಳಿದ್ದಾರೆ. ಕೆಲ ಗ್ರಾಹಕರು ಈತ ಫ್ರುಟ್ ಜ್ಯೂಸ್‌ಗೆ ಹಳದಿ ಬಣ್ಣದ ದ್ರವವನ್ನು ಮಿಕ್ಸ್ ಮಾಡುವುದನ್ನು ಗ್ರಾಹಕರು ನೋಡಿದ್ದಾರೆ. ಈ ವಿಚಾರ ತಿಳಿದು ಅಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಅಲ್ಲದೇ ಜ್ಯೂಸ್ ಅಂಗಡಿ ಮಾಲೀಕನನ್ನು ಥಳಿಸಲು ಆರಂಭಿಸಿದ್ದಾರೆ. ಇದಾದ ನಂತರ ಸ್ಥಳಕ್ಕೆ ಬಂದ ಪೊಲೀಸರು ಅಂಗಡಿಯಲ್ಲಿದ್ದ ಮೂತ್ರದ ಕ್ಯಾನ್ ಅನ್ನು ವಶಕ್ಕೆ ಪಡೆದಿದ್ದಾರೆ.
Viral Video: ಐಸ್‌ಕ್ರೀಮ್ ಸೆಲ್ಲರ್ ಹಸ್ತಮೈಥುನ, ಫಲೂದಾಗೆ ವೀರ್ಯ ಮಿಕ್ಸ್ ಮಾಡಿ ಮಾರಾಟ!
ಹಲವು ಬಾರಿ ಗ್ರಾಹಕರು ದೂರಿದ ಮಾಹಿತಿ ಸಿಕ್ಕ ಹಿನ್ನೆಲೆ ಜ್ಯೂಸ್ ಅಂಗಡಿಗೆ ಹೋಗಿ ನೋಡಿದಾಗ ಅಲ್ಲಿ ಪ್ಲಾಸ್ಟಿಕ್ ಕ್ಯಾನೊಂದರಲ್ಲಿ ಮನುಷ್ಯರ ಮೂತ್ರವನ್ನು ಶೇಖರಿಸಿ ಇಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಈ ಮೂತ್ರವನ್ನು ಶೇಖರಿಸಿ ಇಟ್ಟಿರುವುದು ಏಕೆ ಎಂದು ಜ್ಯೂಸ್ ಅಂಗಡಿ ಮಾಲೀಕನ ಬಳಿ ಪ್ರಶ್ನಿಸಿದಾಗ ಆತ ಯಾವುದೇ ತೃಪ್ತಿಕರವಾದ ಉತ್ತರ ನೀಡಿಲ್ಲ, ಈತನ ಜೊತೆ ಓರ್ವ ಬಾಲಾಪರಾಧಿಯನ್ನು ಕೂಡ ಬಂಧಿಸಲಾಗಿದೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
UP: In Ghaziabad, urine was being mixed in juice and given to customers. Police arrested the shop owners, About one liter of urine was recovered from the shop. The public beat up both the accused.
pic.twitter.com/2MYxLqAWYY
ನೀವು ಬಾಯಿ ಚಪ್ಪರಿಸಿ ತಿನ್ನೋ ಈ ಆಹಾರಗಳು ನಮ್ಮ ದೇಶದ್ದೇ ಅಲ್ಲ…. ಮೊಘಲರು ಭಾರತಕ್ಕೆ ತಂದಿದ್ದು
ಕೆಲ ತಿಂಗಳ ಹಿಂದಷ್ಟೇ ತೆಲಂಗಾಣದ ಐಸ್‌ಕ್ರೀಂ ವ್ಯಾಪಾರಿಯೋರ್ವ ಓರ್ವ ಹಸ್ತುಮೈಥುನ ಮಾಡಿಕೊಂಡು ವೀರ್ಯವನ್ನು ಫಾಲುಡಾ ಐಸ್‌ಕ್ರೀಂಗೆ ಮಿಕ್ಸ್ ಮಾಡಿ ಗ್ರಾಹಕರಿಗೆ ನೀಡಿದ ಘಟನೆ ನಡೆದಿತ್ತು. ಈತನ ಕೃತ್ಯ ಕ್ಯಾಮರಾದಲ್ಲಿ ಸೆರೆ ಆಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ನಂತರ ಆತನನ್ನು ಪೊಲೀಸರು ಬಂಧಿಸಿದ್ದರು.